ENG vs SA: ಇಂಗ್ಲೆಂಡ್ ವೈಟ್‌ಬಾಲ್ ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡಗಳ ಪ್ರಕಟ!
ಇಂಗ್ಲೆಂಡ್ ವೈಟ್‌ಬಾಲ್ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡಗಳನ್ನು ಪ್ರಕಟಿಸಲಾಗಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ ಬೆನ್ನಲ್ಲೆ ಕೇಶವ್ ಮಹಾರಾಜ್ ಅವರು ಟಿ20ಐ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಲಿಝಾದ್ ವಿಲಿಯಮ್ಸನ್, ಮಾರ್ಕೊ ಯೆನ್ಸನ್, ಡೇವಿಡ್ ಮಿಲ್ಲರ್ ಹಾಗೂ ಡೊನೊವಾನ್ ಫೆರೆರಾ ಅವರು ವೈಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡಗಳ ಪ್ರಕಟ.

ನವದೆಹಲಿ: ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಟಿ20ಐ ಸರಣಿಗಳಿಗೆ (ENG vs SA) ದಕ್ಷಿಣ ಆಫ್ರಿಕಾ ತಂಡವನ್ನು (South Africa Squad) ಪ್ರಕಟಿಸಲಾಗಿದ್ದು, ಸ್ಪಿನ್ನರ್ ಕೇಶವ್ ಮಹಾರಾಜ್ (Keshav Maharaj) ಎರಡೂ ತಂಡಗಳಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದ ಬಳಿಕ ಕೇಶವ್ ಮಹಾರಾಜ್ ಅವರು ಐಸಿಸಿ ಒಡಿಐ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು. ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗಳಿಂದ ಹೊರಗೆ ಉಳಿದಿದ್ದ ಕೇಶವ್ ಮಹಾರಾಜ್ ಅವರು ಇದೀಗ ದಕ್ಷಿಣ ಆಫ್ರಿಕಾ ಟಿ20ಐ ತಂಡದಲ್ಲಿಯೂ ಸ್ಥಾನವನ್ನು ಪಡೆದಿದ್ದಾರೆ.
"ನಮ್ಮ ಇತ್ತೀಚಿನ ಟಿ20ಐ ಸರಣಿಯಲ್ಲಿ ನಾವು ಸ್ಪಿನ್-ಬೌಲಿಂಗ್ ಆಲ್‌ರೌಂಡರ್‌ಗಳೊಂದಿಗೆ ಪ್ರಯೋಗ ನಡೆಸುತ್ತಿದ್ದೆವು ಮತ್ತು ಕೇಶವ್ ಯಾವಾಗಲೂ ನಮ್ಮ ವಿಶಾಲ ಯೋಜನೆಗಳ ಭಾಗವಾಗಿದ್ದರು. ತಂಡಕ್ಕೆ ಅವರ ಮರಳುವಿಕೆಯು ನಮ್ಮ ಸ್ಪಿನ್ ಆಯ್ಕೆಗಳನ್ನು ಬಲಪಡಿಸುತ್ತದೆ. ಚೆಂಡಿನೊಂದಿಗೆ ಅವರ ಸ್ಪಷ್ಟ ಕೌಶಲವನ್ನು ಮೀರಿ, ಅವರು ಗುಂಪಿಗೆ ಶಾಂತತೆ ಮತ್ತು ನಾಯಕತ್ವವನ್ನು ತರುತ್ತಾರೆ," ಎಂದು ಕೋಚ್ ಶುಕ್ರಿ ಕಾನ್ರಾಡ್ ತಿಳಿಸಿದ್ದಾರೆ.
2024ರ ಅಕ್ಟೋಬರ್‌ನಲ್ಲಿ ಕೊನೆಯ ಪಂದ್ಯವನ್ನು ಆಡಿದ್ದ ಸೀಮರ್ ಲಿಝಾದ್ ವಿಲಿಯಮ್ಸನ್ ಮೊಣಕಾಲು ಶಸ್ತ್ರ ಚಿಕಿತ್ಸೆಯ ಬಳಿಕ ಸಂಪೂರ್ಣ ಗುಣಮುಖರಾಗಿದ್ದು ಟಿ20ಐ ತಂಡಕ್ಕೆ ಮರಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದ ಎಡಗೈ ವೇಗಿ ಮಾರ್ಕೊ ಯೆನ್ಸನ್ ಅವರು ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
AUS vs SA: ಲುಂಗಿ ಎನ್ಗಿಡಿ ಮಾರಕ ದಾಳಿಗೆ ಆಸೀಸ್ ತತ್ತರ, ಹರಿಣ ಪಡೆಗೆ ಏಕದಿನ ಸರಣಿ!
ದಿ ಹಂಡ್ರೆಡ್ ಟೂರ್ನಿಯಲ್ಲಿ ನಾರ್ಥೆರ್ನ್ ಸೂಪರ್‌ಚಾರ್ಜರ್ಸ್ ತಂಡದ ಪರ ಆಡುತ್ತಿರುವ ಡೇವಿಡ್ ಮಿಲ್ಲರ್ ಅವರು ಆಸ್ಟ್ರೇಲಿಯಾ ಸರಣಿಗೆ ಅಲಭ್ಯರಾಗಿದ್ದರು. ಇದೀಗ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಮರು ಸೇರ್ಪಡೆಯಾಗಿದ್ದಾರೆ. ಆಲ್‌ರೌಂಡರ್ ಡೊನೊವಾನ್ ಫೆರೆರಾ ಅವರು ಸದ್ಯ ಓವಲ್ ಇನ್ವಿನ್ಸಿಬಲ್ ತಂಡದ ಪರ ಆಡಿದರೂ ಈ ಟೂರ್ನಿಯ ಕೊನೆಯ ಹಂತದಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಒಡಿಐ ಸರಣಿ ಸೆಪ್ಟಂಬರ್ 2 ರಂದು ಹೆಡಿಂಗ್ಲೆಯ ಲೀಡ್ಸ್‌ನಲ್ಲಿ ಆರಂಭವಾಗಲಿದೆ. ಸೆಪ್ಟಂಬರ್ 4 ರಂದು ಲಂಡನ್‌ನ ಲಾರ್ಡ್ಸ್ ಹಾಗೂ ಸೆಪ್ಟಂಬರ್ 7 ರಂದು ಸೌಥ್‌ಹ್ಯಾಮ್ಟನ್‌ನ ರೋಸ್ ಬೌಲ್‌ನಲ್ಲಿ ಮೂರನೇ ಪಂದ್ಯದ ಮೂಲಕ ಏಕದಿನ ಸರಣಿ ಅಂತ್ಯವಾಗಲಿದೆ.
The South African Men’s selection panel has named the squads for next month’s white-ball tour against England. The tour features three One-Day Internationals (ODI) and three T20 Internationals (T20I) to be played across England and Wales from 02 - 14 September.
— Proteas Men (@ProteasMenCSA) August 23, 2025
South Africa… pic.twitter.com/OnW6YNkWGi
ನಂತರ ಟಿ20ಐ ಸರಣಿ ಸೆಪ್ಟಂಬರ್ 10 ರಂದು ಸೋಫಿಯಾ ಗಾರ್ಡನ್ಸ್‌ನಲ್ಲಿ ಮೊದಲನೇ ಪಂದ್ಯದ ಮೂಲಕ ಆರಂಭವಾದರೆ, ಎರಡನೇ ಟಿ20ಐ ಪಂದ್ಯ ಸೆಪ್ಟಂಬರ್ 12 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಹಾಗೂ ಸೆಪ್ಟಂಬರ್ 14 ರಂದು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಪಂದ್ಯದ ಮೂಲಕ ಚುಟುಕು ಸರಣಿ ಅಂತ್ಯವಾಗಲಿದೆ.
ಇಂಗ್ಲೆಂಡ್ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವೂಮ (ನಾಯಕ), ಕಾರ್ಬಿನ್ ಬಾಷ್, ಮ್ಯಾಥ್ಯೂ ಬ್ರೀಟ್ಜ್ಕೆ, ಡೆವಾಲ್ಡ್ ಬ್ರೆವಿಸ್, ನಂಡ್ರೆ ಬರ್ಗರ್, ಟೋನಿ ಟಿ ಝಾರ್ಝಿ, ಕೇಶವ್ ಮಹಾರಾಜ್, ಕ್ವೇನಾ ಎಂಫಾಕ, ಏಡೆನ್ ಮಾರ್ಕ್ರಮ್, ವಿಯಾನ್ ಮುಲ್ಡರ್, ಸೆನುರನ್ ಮುತ್ತುಸ್ವಾಮಿ, ಲುಂಗಿ ಎನ್ಗಿಡಿ, ಲೂನ್ ಡ್ರೆ ಪ್ರೆಟೋರಿಯಸ್, ಕಗಿಸೊ ರಬಾಡ, ರಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್
AUS vs SA: ಸತತ 4 ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಮ್ಯಾಥ್ಯೂ ಬ್ರೀಟ್ಜ್ಕೆ!
ಇಂಗ್ಲೆಂಡ್ ಟಿ20ಐ ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ಏಡೆನ್ ಮಾರ್ಕ್ರಮ್(ನಾಯಕ), ಕಾರ್ಬಿನ್ ಬಾಷ್, ಡೊನೊವಾನ್ ಫೆರೆರಾ, ಮಾರ್ಕೊ ಯೆನ್ಸನ್, ಕೇಶವ್ ಮಹಾರಾಜ್, ಕ್ವೇನಾ ಎಂಫಾಕ, ಡೇವಿಡ್ ಮಿಲ್ಲರ್, ಸೆನುರನ್ ಮುತ್ತುಸ್ವಾಮಿ, ಲುಂಗಿ ಎನ್ಗಿಡಿ, ಲೂನ್ ಡ್ರೆ ಪ್ರೆಟೋರಿಯಸ್, ಕಗಿಸೊ ರಬಾಡ, ರಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಲಿಝಾದ್ ವಿಲಿಯಮ್ಸ್