ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಐಸಿಸಿ ನಿಯಮ ಉಲ್ಲಂಘಿಸಿದ ಮೊಹಮ್ಮದ್‌ ಸಿರಾಜ್‌ಗೆ ದಂಡ ವಿಧಿಸಿದ ಐಸಿಸಿ!

ಇಂಗ್ಲೆಂಡ್‌ ವಿರುದ್ದ ಮೂರನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಬೆನ್‌ ಡಕೆಟ್‌ಗೆ ಸಮೀಪವಾಗಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ ಭಾರತದ ಮೊಹಮ್ಮದ್‌ ಸಿರಾಜ್‌ಗೆ ಭಾರಿ ಹಿನ್ನಡೆಯಾಗಿದೆ. ಪಂದ್ಯದ ಸಂಭಾವನೆಯಲ್ಲಿ ಶೇ 15 ರಷ್ಟು ದಂಡವನ್ನು ಅವರಿಗೆ ವಿಧಿಸಲಾಗಿದೆ.

ಬೆನ್‌ ಡಕೆಟ್‌ ಬಳಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ ಸಿರಾಜ್‌ಗೆ ದಂಡ!

ಮೊಹಮ್ಮದ್‌ ಸಿರಾಜ್‌ಗೆ ದಂಡ ವಿಧಿಸಿದ ಐಸಿಸಿ.

Profile Ramesh Kote Jul 14, 2025 6:25 PM

ಲಂಡನ್‌: ಇಲ್ಲಿನ ಲಾರ್ಡ್ಸ್‌ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ (IND VS ENG) ಪಂದ್ಯದ ನಾಲ್ಕನೇ ದಿನ ಐಸಿಸಿಯ ಮೊದಲ ಹಂತದ ನಿಯಮವನ್ನು ಉಲ್ಲಂಘಿಸಿದ ಭಾರತದ ವೇಗಿ ಮೊಹಮ್ಮದ್‌ ಸಿರಾಜ್‌ಗೆ (Mohammed Siraj) ಪಂದ್ಯದ ಸಂಭಾವನೆಯಲ್ಲಿ ಶೇ 15 ರಷ್ಟು ದಂಡ ಹಾಗೂ ಒಂದು ಡಿಮೆರಿಟ್‌ ಅಂಕವನ್ನ ವಿಧಿಸಲಾಗಿದೆ. ಆ ಮೂಲಕ ಟೀಮ್‌ ಇಂಡಿಯಾ (India) ಹಿರಿಯ ವೇಗಿಗೆ ಭಾರಿ ಹಿನ್ನಡೆಯಾಗಿದೆ. ಇಂಗ್ಲೆಂಡ್‌ ತಂಡದ ದ್ವಿತೀಯ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು.

ನಾಲ್ಕನೇ ದಿನ ಮೊದಲನೇ ಸೆಷನ್‌ ವೇಳೆ ಮೊಹಮ್ಮದ್‌ ಸಿರಾಜ್‌ ಅವರು, ಇಂಗ್ಲೆಂಡ್‌ ಆರಂಭಿಕ ಬೆನ್‌ ಡಕೆಟ್‌ ಅವರನ್ನು ಔಟ್‌ ಮಾಡಿದ್ದರು. ಈ ವೇಕೆ ಸಿರಾಜ್‌, ಡಕೆಟ್‌ ಅವರ ಸನಿಹ ತೆರಳಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು ಹಾಗೂ ಇದರ ನಡುವೆ ಅವರು ಅನಿರೀಕ್ಷಿತವಾಗಿ ಡಕೆಟ್‌ಗೆ ಭುಜಕ್ಕೆ ತಾಗಿದ್ದರು.

ಇದು ಐಸಿಸಿ ಸಂಹಿತೆಯ ಆರ್ಟಿಕಲ್ 2.5 ರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. "ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಬ್ಯಾಟ್ಸ್‌ಮನ್ ಔಟ್ ಆದಾಗ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡುವ ಅಥವಾ ಅವಮಾನಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದನ್ನು ಈ ನಿಯಮ ನಿಷೇಧಿಸುತ್ತದೆ.

IND vs ENG: ರಿಷಭ್‌ ಪಂತ್‌ ಬಗ್ಗೆ ಆಸಕ್ತದಾಯಕ ಸಂಗತಿ ರಿವೀಲ್‌ ಮಾಡಿದ ಆರ್‌ ಅಶ್ವಿನ್‌!

ಈ ಆರೋಪವನ್ನು ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ರೀಫೆಲ್ ಮತ್ತು ಶರ್ಫುದ್ದೌಲಾ ಇಬ್ನೆ ಶಾಹಿದ್, ಮೂರನೇ ಅಂಪೈರ್ ಅಹ್ಸಾನ್ ರಾಜಾ ಮತ್ತು ನಾಲ್ಕನೇ ಅಂಪೈರ್ ಗ್ರಹಾಂ ಲಾಯ್ಡ್ ಜಂಟಿಯಾಗಿ ಪ್ರಕಟಿಸಿದರು. ಸಿರಾಜ್ ಈ ಪ್ರಮಾದವನ್ನು ಒಪ್ಪಿಕೊಂಡರು ಮತ್ತು ಶಿಕ್ಷೆಯನ್ನು ಸ್ವೀಕರಿಸಿದರು. ಆ ಮೂಲಕ ಔಪಚಾರಿಕ ವಿಚಾರಣೆಯನ್ನು ತಪ್ಪಿಸಿದರು.

ಮೊಹಮ್ಮದ್‌ ಸಿರಾಜ್ ಪಾಲಿಗೆ 24 ತಿಂಗಳ ಅವಧಿಯಲ್ಲಿ ಎರಡನೇ ಡಿಮೆರಿಟ್ ಪಾಯಿಂಟ್ ಇದಾಗಿದೆ. ಕಳೆದ ವರ್ಷ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದರು. ಎರಡು ವರ್ಷಗಳಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ಗಳಿಸಿದ ಆಟಗಾರರು ಅಮಾನತು ಎದುರಿಸಬೇಕಾಗುತ್ತದೆ.

IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ 4 ವಿಕೆಟ್‌ ಕಿತ್ತು ವಿಶೇಷ ದಾಖಲೆ ಬರೆದ ವಾಷಿಂಗ್ಟನ್‌ ಸುಂದರ್‌!

ಮೈದಾನದಲ್ಲಿ ವಾಷಿಂಗ್ಟನ್ ಸುಂದರ್ ಅವರ ನಾಲ್ಕು ವಿಕೆಟ್‌ಗಳ ಸಾಧನೆ ಭಾರತ ತಂಡವನ್ನು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಮುನ್ನಡೆಯನ್ನು ತಂದುಕೊಟ್ಟಿತು. ವೇಗಿಗಳು ಆರಂಭಿಕ ಹಾನಿಯನ್ನುಂಟುಮಾಡಿದ ನಂತರ ಅವರ ಆಫ್-ಸ್ಪಿನ್ ಆಟಕ್ಕೆ ಅಂಗ್ಲರಿಗೆ ಕಾಟ ನೀಡಿತು. ಸುಂದರ್ ಅವರ ಸಮಯೋಚಿತ ವಿಕೆಟ್‌ಗಳು ಭಾರತ ತಂಡ ಕೊನೆಯ ಸೆಷನ್‌ನಲ್ಲಿ ಇಂಗ್ಲೆಂಡ್ ಅನ್ನು 192 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿತು.

ಇದಕ್ಕೂ ಮುನ್ನ ಬೆಳಗಿನ ಸೆಷನ್‌ನಲ್ಲಿ ಮೊಹಮ್ಮದ್ ಸಿರಾಜ್ ಗಮನಾರ್ಹ ಪರಿಣಾಮ ಬೀರಿದ್ದರು, ಆದರೆ ಜಸ್‌ಪ್ರೀತ್‌ ಬುಮ್ರಾ ಕೂಎ ಕೊನೆಯ ಸೆಷನ್‌ನಲ್ಲಿ ಎರಡು ವಿಕೆಟ್‌ ಕಿತ್ತು ಪಾರ್ಟಿಗೆ ಮರಳಿದ್ದರು.

IND vs ENG: ವಾಷಿಂಗ್ಟನ್‌ ಸ್ಪಿನ್‌ ಮೋಡಿ, ಗೆಲುವಿನ ಸನಿಹದಲ್ಲಿ ಟೀಮ್‌ ಇಂಡಿಯಾ!

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೇಗವಾಗಿ ಕ್ಷೀಣಿಸುತ್ತಿದ್ದ ಪಿಚ್‌ನಲ್ಲಿ ಭಾರತದ 193 ರನ್‌ಗಳ ಗುರಿ ಸಾಧನೆ ಕುಂಠಿತವಾಗಿತ್ತು, ಪ್ರವಾಸಿ ತಂಡವು ನಾಲ್ಕು ವಿಕೆಟ್‌ಗಳಿಗೆ 58 ರನ್‌ಗಳೊಂದಿಗೆ ಸಂಕಷ್ಟದಲ್ಲಿತ್ತು. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ನಾಯಕ ಶುಭ್‌ಮನ್ ಗಿಲ್ ಮತ್ತು ನೈಟ್ ವಾಚ್‌ಮನ್ ಆಕಾಶ್ ದೀಪ್ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.