ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 5th Test: ಭಾರತ ವಿರುದ್ದ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌!

IND vs ENG 5th Test Toss: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯ ಕೆನಿಂಗ್ಟನ್‌ ಓವಲ್‌ನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ಹಂಗಾಮಿ ನಾಯಕ ಒಲ್ಲಿ ಪೋಪ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಭಾರತ ತಂಡ ಮೊದಲು ಬ್ಯಾಟಿಂಗ್‌ ನಡೆಸುತ್ತಿದೆ.

IND vs ENG 5th Test: ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌!

ಐದನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ.

Profile Ramesh Kote Jul 31, 2025 3:24 PM

ಲಂಡನ್‌: ಇಲ್ಲಿನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಇದೀಗ ಆರಂಭವಾದ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ (IND vs ENG) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ಹಂಗಾಮಿ ನಾಯಕ ಒಲ್ಲಿ ಪೋಪ್‌ (Ollie Pope) ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಭಾರತ ತಂಡ ಮೊದಲು ಬ್ಯಾಟ್‌ ಮಾಡುತ್ತಿದೆ. ಈ ಸರಣಿಯನ್ನು ಗೆಲ್ಲುವ ಅವಕಾಶ ಕಳೆದುಕೊಂಡಿರುವ ಟೀಮ್‌ ಇಂಡಿಯಾ, ಇದೀಗ ಈ ಪಂದ್ಯವನ್ನು ಗೆದ್ದು ಡ್ರಾ ಮಾಡಿಕೊಳ್ಳಲು ಎದುರು ನೋಡುತ್ತಿದೆ.

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ನಾಲ್ಕು ಬದಲಾವಣೆಯನ್ನು ತರಲಾಗಿದೆ. ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಕರುಣ್‌ ನಾಯರ್‌ಗೆ ಐದನೇ ಟೆಸ್ಟ್‌ ಪಂದ್ಯದಲ್ಲಿ ಮತ್ತೊಂದು ಅವಕಾಶವನ್ನು ನೀಡಲಾಗಿದೆ. ರಿಷಭ್‌ ಪಂತ್‌ ಗಾಯಕ್ಕೆ ತುತ್ತಾಗಿದ್ದರಿಂದ ಅವರ ಸ್ಥಾನಕ್ಕೆ ಕರುಣ್‌ ಬಂದಿದ್ದಾರೆ. ಶಾರ್ದುಲ್‌ ಠಾಕೂರ್‌ ಅವರನ್ನು ಹೊರಗಿಟ್ಟು ಧ್ರುವ್‌ ಜುರೆಲ್‌ ಅವರಿಗೆ ತಂಡದಲ್ಲಿ ಪೂರ್ಣ ಸ್ಥಾನವನ್ನು ನೀಡಲಾಗಿದೆ. ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಕಾರಣ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿಯನ್ನು ನೀಡಲಾಗಿದ್ದು, ಅವರ ಸ್ಥಾನಕ್ಕೆ ಮತ್ತೊರ್ವ ಕನ್ನಡಿಗ ಪ್ರಸಿಧ್‌ ಕೃಷ್ಣಗೆ ಚಾನ್ಸ್‌ ನೀಡಲಾಗಿದೆ.

IND vs ENG: ಪಿಚ್‌ ಕ್ಯುರೇಟರ್‌-ಗಂಭೀರ್‌ ಜಗಳದ ಬಗ್ಗೆ ಬೆನ್‌ ಸ್ಟೋಕ್ಸ್‌ ಹೇಳಿದ್ದಿದು!

ಇನ್ನು ಎದುರಾಳಿ ಇಂಗ್ಲೆಂಡ್‌ ತಂಡವನ್ನು ಒಲ್ಲಿ ಪೋಪ್‌ ಮುನ್ನಡೆಸಲಿದ್ದಾರೆ. ಆಂಗ್ಲರ ತಂಡದ ಪ್ಲೇಯಿಂಗ್‌ xiನಲ್ಲಿ ನಾಲ್ಕು ಬದಲಾವಣೆಯನ್ನು ತರಲಾಗಿದೆ. ಭುಜದ ಗಾಯದಿಂದಾಗಿ ಬೆನ್‌ ಸ್ಟೋಕ್ಸ್‌ ಐದನೇ ಟೆಸ್ಟ್‌ ಪಂದ್ಯದಿಂದ ಹೊರರಗುಳಿದಿದ್ದಾರೆ. ಇನ್ನು ಗಸ್‌ ಅಟ್ಕಿನ್ಸನ್‌, ಜಾಕೋಬ್‌ ಬೆಥೆಲ್‌, ಜಾಶ್‌ ಟಾಂಗ್‌ ಹಾಗೂ ಜೇಮಿ ಓವರ್ಟನ್‌ ಪ್ಲೇಯಿಂಗ್‌ XIಗೆ ಬಂದಿದ್ದಾರೆ. ಜೋಫ್ರಾ ಆರ್ಚರ್‌, ಲಿಯಾಮ್‌ ಡಾಸನ್‌ ಹಾಗೂ ಬ್ರೈಡನ್‌ ಕಾರ್ಸ್‌ ಅವರು ಹೊರಗುಳಿದಿದ್ದಾರೆ. ಕಳೆದ ಪಂದ್ಯದ ಗೆಲುವನ್ನು ಕೊನೆಯ ಹಂತದಲ್ಲಿ ಕಳೆದುಕೊಂಡಿದ್ದ ಇಂಗ್ಲೆಂಡ್‌ ತಂಡ, ಇದೀಗ ಓವಲ್‌ ಟೆಸ್ಟ್‌ ಗೆದ್ದು ಸರಣಿಯನ್ನು 3-1 ಅಂತರದಲ್ಲಿ ಗೆಲ್ಲಲು ಎದುರು ನೋಡುತ್ತಿದೆ.



ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ (ನಾಯಕ), ಕರುಣ್‌ ನಾಯರ್‌, ಧ್ರುವ್‌ ಜುರೆಲ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ಆಕಾಶ ದೀಪ್‌, ಪ್ರಸಿಧ್‌ ಕೃಷ್ಣ, ಮೊಹಮ್ಮದ್‌ ಸಿರಾಜ್‌



ಇಂಗ್ಲೆಂಡ್‌: ಝ್ಯಾಕ್‌ ಕ್ರಾವ್ಲಿ, ಬೆನ್‌ ಡಕೆಟ್‌, ಒಲ್ಲಿ ಪೋಪ್‌ (ನಾಯಕ), ಜೋ ರೂಟ್‌, ಹ್ಯಾರಿ ಬ್ರೂಕ್‌, ಜಾಕೋಬ್‌ ಬೆಥೆಲ್‌, ಜೇಮಿ ಸ್ಮಿತ್‌ (ವಿ.ಕೀ), ಕ್ರಿಸ್‌ ವೋಕ್ಸ್‌, ಗಸ್‌ ಅಟ್ಕಿನ್ಸನ್‌, ಜೇಮಿ ಓವರ್ಟನ್‌, ಜಾಶ್‌ ಟಾಂಗ್‌