ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI: ಐದನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ ವರುಣ್‌ ಆರೋನ್‌!

ವೆಸ್ಟ್‌ ಇಂಡೀಸ್‌ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡಕ್ಕೆ ಮಾಜಿ ವೇಗದ ಬೌಲರ್‌ ವರುಣ್‌ ಆರೋನ್‌ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಏಕೆಂದರೆ ಐದನೇ ಪಂದ್ಯ ನಡೆಯುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಲೆಗ್‌ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ ಎಂಬುದು ಅವರು ಅಭಿಪ್ರಾಯ.

ಭಾರತ ತಂಡದಲ್ಲಿ ಒಂದು ಬದಲಾವಣೆ ಸೂಚಿಸಿದ ವರುಣ್‌ ಆರೋನ್!

ಕುಲ್ದೀಪ್‌ ಯಾದವ್‌ಗೆ ಪ್ಲೇಯಿಂಗ್‌ XIನಲ್ಲಿ ಚಾನ್ಸ್‌ ನೀಡಿ ಎಂದ ವರುಣ್‌ ಆರೋನ್‌. -

Profile
Ramesh Kote Oct 15, 2026 4:06 PM

ಬೆಂಗಳೂರು: ಭಾರತ ಹಾಗೂ ವೆಸ್ಟ್‌ ಇಂಡೀಸ್‌ (IND vs WI) ನಡುವಣ ಟಿ20ಐ ಸರಣಿ ತೀವ್ರ ಕುತೂಹಲವನ್ನು ಮೂಡಿಸಿದೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಟಿ20ಐ ಸರಣಿಯಲ್ಲಿ 2-2 ಸಮಬಲ ಕಾಯ್ದುಕೊಂಡಿವೆ. ಹಾಗಾಗಿ ಅಕ್ಟೋಬರ್‌ 17 ರಂದು ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐದನೇ ಪಂದ್ಯವನ್ನು ಗೆದ್ದ ತಂಡ ಟಿ20ಐ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಹಾಗಾಗಿ ಐದನೇ ಪಂದ್ಯದಲ್ಲಿ ಎರಡೂ ತಂಡಗಳಿಂದ ತೀವ್ರ ಪೈಪೋಟಿಯನ್ನು ನಿರೀಕ್ಷೆ ಮಾಡಬಹುದಾಗಿದೆ. ಇದರ ನಡುವೆ ಭಾರತದ ಮಾಜಿ ವೇಗಿ ವರುಣ್‌ ಆರೋನ್‌ (Varun Aaron) ಅವರು, ಟೀಮ್‌ ಇಂಡಿಯಾಗೆ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ್ದು, ಕುಲ್ದೀಪ್‌ ಯಾದವ್‌ ಅವರನ್ನು ಆಡಿಸಬೇಕೆಂದು ಸಲಹೆಯನ್ನು ನೀಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಶೋ ʻಫಾಲೋ ದಿ ಬ್ಲೂಸ್‌ʼನಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವರುಣ್‌ ಆರೋನ್‌, “ವಿಶೇಷವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಲ್‌ದೀಪ್ ಯಾದವ್ ಆಡಲೇಬೇಕು. ಯುಜ್ವೇಂದ್ರ ಚಹಲ್ ನಮ್ಮೊಂದಿಗೆ ಕಾಮೆಂಟರಿ ಮಾಡುತ್ತಿದ್ದರು. ಇಂತಹ ಕ್ರೀಡಾಂಗಣದಲ್ಲಿ ವಿಕೆಟ್‌ಗಳನ್ನು ಹೇಗೆ ಪಡೆಯಬೇಕು ಎಂಬುದಕ್ಕೆ ಅವರೇ ಅತ್ಯುತ್ತಮ ಉದಾಹರಣೆ. ಅವರೂ ಲೆಗ್ ಸ್ಪಿನ್ನರ್. ಚಿನ್ನಸ್ವಾಮಿ ಕ್ರೀಡಾಂಗಣವೆಂದರೆ ರಕ್ಷಣಾತ್ಮಕವಾಗಿ ಬೌಲ್‌ ಮಾಡಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸಿದರೆ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಡಬೇಕಾಗುತ್ತದೆ,” ಎಂದು ಅವರು ಪ್ರತಿಕ್ರಿಯಿಸಿದರು.

IND vs WI: ಶೇಯ್‌ ಹೋಪ್‌ ಸ್ಪೋಟಕ ಶತಕಕ್ಕೆ ಬೆದರಿದ ಭಾರತ, ವೆಸ್ಟ್‌ ಇಂಡೀಸ್‌ಗೆ ಭರ್ಜರಿ ಜಯ!

ಐವರು ಬೌಲರ್‌ಗಳನ್ನು ಶ್ರೇಯಸ್‌ ಅಯ್ಯರ್‌ ಆಡಿಸಬೇಕು

ಇದೇ ವೇಳೆ ಭಾರತ ತಂಡದ ಮಾಜಿ ವೇಗಿ ವರುಣ್‌ ಆರೋನ್‌ ಅವರು, ಐದನೇ ಪಂದ್ಯದಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ ಅವರು ಐವರು ಬೌಲರ್‌ಗಳನ್ನು ಆಡಿಸುವ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ದಾಳಿ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಸಲಹೆ ನೀಡಿದ್ದಾರೆ.

“ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಕ್ಷಣಾತ್ಮಕವಾಗಿ ಬೌಲ್‌ ಮಾಡುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಆಕ್ರಮಣಕಾರಿ ಬೌಲಿಂಗ್ ಮಾಡಿ ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುವುದು. ಹೀಗಾಗಿ ಕುಲ್‌ದೀಪ್ ಯಾದವ್ ಅವರನ್ನು ಆಡಿಸಬೇಕು ಎಂದು ನಾನು ಹೇಳುತ್ತೇನೆ. ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ತೆಗೆದುಕೊಳ್ಳಿ. ಏಳನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಬಲವನ್ನು ಹೊಂದಬಹುದು. ತಂಡದಲ್ಲಿ ಒಂದೆರಡು ಆಲ್‌ರೌಂಡರ್‌ಗಳೂ ಇದ್ದಾರೆ. ಆದ್ದರಿಂದ ಏಳನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಬಲ ಹೊಂದಿ, ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿದು ಟ್ರೋಫಿ ಗೆಲ್ಲಿ,” ಎಂದು ಆರನ್ ಅಭಿಪ್ರಾಯಪಟ್ಟರು.

IND vs WI: ಟಿ20ಐ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳ ಪೂರ್ಣಗೊಳಿಸಿದ ಸಂಜು ಸ್ಯಾಮ್ಸನ್‌!

ವೆಸ್ಟ್‌ ಇಂಡೀಸ್‌ ವಿರುದ್ಧ ಟಿ20ಐ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಡಿದ್ದ ಕುಲ್ದೀಪ್‌ ಯಾದವ್‌ ಅವರು 10.75ರ ಎಕಾನಮಿ ರೇಟ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ.‌ ಕುಲ್ದೀಪ್‌ ಬದಲು ಕಳೆದ ಎರಡು ಪಂದ್ಯಗಳಲ್ಲಿ ಪ್ರಿನ್ಸ್‌ ಯಾದವ್ ಆಡಿದ್ದರು ಹಾಗೂ ಅವರು ಒಂದೇ ಒಂದು ವಿಕೆಟ್‌ ಕಿತ್ತು, 9.13ರ ಎಕಾನಮಿ ರೇಟ್‌ನಲ್ಲಿ ರನ್‌ ನೀಡಿದ್ದಾರೆ.