ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ರೋಹಿತ್‌ ಶರ್ಮಾ!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರು ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟಪತಿ ದ್ರೌಪರಿ ಮುರ್ಮು ಅವರಿಂದ ಜೂನ್‌ 23 ರಂದು ಸ್ವೀಕರಿಸಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದ ರೋಹಿತ್‌ ಶರ್ಮಾ. -

Profile
Ramesh Kote Jun 23, 2026 7:02 PM

ನವದೆಹಲಿ: ಭಾರತೀಯ ಕ್ರಿಕೆಟ್‌ಗೆ ನೀಡಿದ ಅಸಾಧಾರಣ ಕೊಡುಗೆಯ ಫಲವಾಗಿ ಭಾರತ ಸರ್ಕಾರ, ಟೀಮ್‌ ಇಂಡಿಯಾ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ರೋಹಿತ್‌ ಶರ್ಮಾ(Rohit Sharma) ಅವರಿಗೆ ಅತ್ಯುತ್ತನ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ (Padma Shree) ನೀಡಿ ಗೌರವಿಸಿದೆ. ಜೂನ್‌ 23 ರಂದು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದಿದ್ದ ಭವ್ಯ ಸಮಾರಂಭದಲ್ಲಿ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನೀಡಿ ಗೌರವಿಸಿದರು. ಅಂದ ಹಾಗೆ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ 19ನೇ ವಾರ್ಷಿಕೋತ್ಸವದ ದಿನದಂದೇ ರೋಹಿತ್‌ ಶರ್ಮಾ ಈ ಗೌರವವನ್ನು ಸ್ವೀಕರಿಸಿರುವುದು ವಿಶೇಷವಾಗಿದೆ.

ರೋಹಿತ್ ಶರ್ಮಾ ಅವರ ಪಾಲಿಗೆ ಜೂನ್ 23 ಸ್ಮರಣೀಯವಾಗಿದೆ. ಏಕೆಂದರೆ 19 ವರ್ಷಗಳ ಹಿಂದೆ 2007ರ ಜೂನ್ 23 ರಂದು ಇದೇ ದಿನ ಅವರು ಐರ್ಲೆಂಡ್‌ನ ಬೆಲ್‌ಫಾಸ್ಟ್‌ನಲ್ಲಿ ಭಾರತದ ಪರ ಏಕದಿನ ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ಯಶಸ್ವಿ ವರ್ಷಗಳನ್ನು ಪೂರ್ಣಗೊಳಿಸಿದ ಈ ದಿನದಂದು ಅವರಿಗೆ ಭಾರತ ಸರ್ಕಾರ, ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ವಿಶೇಷ.

2027ರ ಏಕದಿನ ವಿಶ್ವಕಪ್‌ಗೆ ಕೊಹ್ಲಿ, ರೋಹಿತ್‌ ಅನುಮಾನ ಎಂದವರಿಗೆ ಕ್ಲಾಸ್‌ ತೆಗೆದುಕೊಂಡ ಆರ್‌ ಅಶ್ವಿನ್!

ರೋಹಿತ್ ಶರ್ಮಾ ಈ ಗೌರವವನ್ನು ಕೇವಲ ಬ್ಯಾಟ್ಸ್‌ಮನ್ ಆಗಿ ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್ ಅನ್ನು ಸುವರ್ಣ ಯುಗಕ್ಕೆ ಕರೆದೊಯ್ದ ನಾಯಕನಾಗಿಯೂ ಪಡೆದಿದ್ದಾರೆ. ಅವರ ಆಕ್ರಮಣಕಾರಿ ಮತ್ತು ಚಾಣಾಕ್ಷ ನಾಯಕತ್ವದಿಂದ, ಭಾರತ ತಂಡ, 2024ರ ಐಸಿಸಿ ಟಿ20 ವಿಶ್ವಕಪ್ ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಇದಲ್ಲದೆ, ಅವರ ನಾಯಕತ್ವದಲ್ಲಿಭಾರತವು ಸತತ ಹತ್ತು ಪಂದ್ಯಗಳನ್ನು ಗೆದ್ದ ನಂತರ 2023ರ ಏಕದಿನ ವಿಶ್ವಕಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು.



'ಹಿಟ್‌ಮ್ಯಾನ್' ಖ್ಯಾತಿಯ ರೋಹಿತ್‌ ಶರ್ಮಾ, ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ತಂಡದ ಭಾಗವಾಗಿ ಉಳಿದಿದ್ದಾರೆ. ತಮ್ಮ 19 ವರ್ಷಗಳ ಅದ್ಭುತ ಕ್ರಿಕೆಟ್ ವೃತ್ತಿಜೀವನದಲ್ಲಿ ರೋಹಿತ್ ದೇಶಕ್ಕಾಗಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಮೂರು ಸ್ವರೂಪಗಳಲ್ಲಿ ಒಟ್ಟು 511 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಹಾಗೂ 19,702 ರನ್‌ಗಳನ್ನು ಗಳಿಸಿದ್ದಾರೆ. ಈ ಸಮಯದಲ್ಲಿ ಅವರು ಏಕದಿನ ಇತಿಹಾಸದಲ್ಲಿ ಮೂರು ಐತಿಹಾಸಿಕ ದ್ವಿಶತಕಗಳು ಸೇರಿದಂತೆ 50 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.

IND vs IRE: ಗಾಯಾಳು ನಿತೀಶ್‌ ಕುಮಾರ್‌ ರೆಡ್ಡಿ ಸ್ಥಾನಕ್ಕೆ ಸುರ್ಯಾಂಶ್‌ ಶೆಡ್ಗೆಗೆ ಸ್ಥಾನ!

ರೋಹಿತ್‌ ಶರ್ಮಾ ಅವರು ಪದ್ಮಶ್ರೀ ಪ್ರಶಸ್ತಿ ಪಡೆದ 42 ಕ್ರಿಕೆಟಿಗರ ಪಟ್ಟಿಗೆ ಸೇರಿದ್ದಾರೆ. ಭಾರತದ 2025ರ ಮಹಿಳಾ ವಿಶ್ವಕಪ್ ವಿಜೇತ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರಿಗೂ ಈ ವರ್ಷ ಈ ಗೌರವ ಲಭಿಸಿದೆ. ಅವರು ಮೇ ತಿಂಗಳಲ್ಲಿ ನಡೆದ ಮೊದಲ ಸಮಾರಂಭದಲ್ಲಿ ರಾಷ್ಟ್ರಪತಿ ಮುರ್ಮು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ರೋಹಿತ್‌ ಶರ್ಮಾ ಅವರು 2026ರಲ್ಲಿ ಕ್ರೀಡಾ ವಿಭಾಗದಲ್ಲಿ ಪದ್ಮಶ್ರೀ ಪಡೆದ ಎಂಟು ಜನರ ಪಟ್ಟಿಯಲ್ಲಿ ಇದ್ದರು. ಈ ಪಟ್ಟಿಯಲ್ಲಿ ಹರ್ಮನ್‌ಪ್ರೀತ್ (ಕ್ರಿಕೆಟ್), ಸವಿತಾ ಪೂನಿಯಾ (ಹಾಕಿ), ಪ್ರವೀಣ್‌ ಕುಮಾರ್‌ (ಪ್ಯಾರಾ ಅಥ್ಲೆಟಿಕ್ಸ್), ಬಾಲ್ದೇವಿ ಸಿಂಗ್‌ (ಹಾಕಿ), ಭಗವಾನ್‌ದಾಸ್‌ ರಾಯ್ಕರ್‌ (ಮಲ್ಲಖಂಬ), ಕೆ ಪ್ರಜಾನಿವೇಲ್‌ (ಪಾರಂಪರಿಕ ಸಿಲಂಬಂ ಯುದ್ಧಕಲೆ), ಮತ್ತು ಮರಣೋತ್ತರವಾಗಿ ವ್ಲಾಡಿಮೆರ್‌ (ಜುಡೋ) ಸೇರಿದ್ದಾರೆ.