ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಕ್ರಿಸ್‌ ಗೇಲ್‌-ಡು ಪ್ಲೆಸಿಸ್‌ ಓಪನರ್ಸ್‌! ಆರ್‌ಸಿಬಿಯ ಸಾರ್ವಕಾಲಿಕ ಪ್ಲೇಯಿಂಗ್‌ XI ಕಟ್ಟಿದ ದಿನೇಶ್‌ ಕಾರ್ತಿಕ್‌!

Dinesh Karthik's RCB All time Playing XI: ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ Xi ಪ್ರಕಟಿಸಿದ್ದಾರೆ. ರಜತ್‌ ಪಾಟಿದಾರ್‌ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದ್ದು, ಆರಂಭಿಕ ಬ್ಯಾಟ್ಸ್‌ಮನ್‌ಗಳಾದಿ ಕ್ರಿಸ್‌ ಗೇಲ್‌ ಹಾಗೂ ಫಾಫ್‌ ಡು ಪ್ಲೆಸಿಸ್‌ ಅವರನ್ನು ಆರಿಸಿದ್ದಾರೆ.

ಆರ್‌ಸಿಬಿಯ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ XI ಕಟ್ಟಿದ ಕಾರ್ತಿಕ್‌!

ದಿನೇಶ್‌ ಕಾರ್ತಿಕ್‌ ಆಯ್ಕೆಯ ಆರ್‌ಸಿಬಿ ಸಾರ್ವಕಾಲಿಕ ಪ್ಲೇಯಿಂಗ್‌ XI -

Profile
Ramesh Kote Mar 14, 2026 4:53 PM

ಬೆಂಗಳೂರು: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ನಿಮಿತ್ತ ಬ್ಯಾಟಿಂಗ್‌ ಕೋಚ್‌ ದಿನೇಶ್‌ ಕಾರ್ತಿಕ್‌ (Dinesh Karthik) ಅವರು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ XI ಅನ್ನು ಆರಿಸಿದ್ದಾರೆ. ಕಳೆದ ವರ್ಷ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದಿದ್ದ ಬಹುತೇಕ ಆಟಗಾರರನ್ನು ಕಾರ್ತಿಕ್‌ ಉಳಿಸಿಕೊಳ್ಳುವ ಮೂಲಕ ಕೆಲ ದಿಗ್ಗಜ ಆಟಗಾರರನ್ನು ಕೈ ಬಿಟ್ಟಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಮಾರ್ಚ್‌ 28 ರಂದು ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಣ ಪಂದ್ಯದ ಮೂಲಕ ಆರಂಭವಾಗಲಿದೆ. ಪ್ರಸ್ತುತ ದಿನೇಶ್‌ ಕಾರ್ತಿಕ್‌ ಆರ್‌ಸಿಬಿ ತಂಡದಲ್ಲಿ ಬ್ಯಾಟಿಂಗ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆರ್‌ಸಿಬಿ ಪರ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳನ್ನು ದಿನೇಶ್‌ ಕಾರ್ತಿಕ್‌ ಆಯ್ಕೆ ಮಾಡಿದ್ದಾರೆ. ಕ್ರಿಸ್‌ ಗೇಲ್‌ ಹಾಗೂ ಫಾಫ್‌ ಡು ಪ್ಲೆಸಿಸ್‌ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನಾಗಿ ಕಾರ್ತಿಕ್‌ ಆರಿಸಿದ್ದಾರೆ. ವಿರಾಟ್‌ ಕೊಹ್ಲಿಗೆ ಮೂರನೇ ಕ್ರಮಾಂಕವನ್ನು ನೀಡಲಾಗಿದೆ. ಆರ್‌ಸಿಬಿಗೆ ತಮ್ಮ ನಾಯಕತ್ವದಲ್ಲಿ ಚೊಚ್ಚಲ ಕಪ್‌ ಗೆದ್ದುಕೊಂಡಿದ್ದ ರಜತ್‌ ಪಾಟಿದಾರ್‌ಗೆ ನಾಯಕತ್ವ ಹಾಗೂ ನಾಲ್ಕನೇ ಕ್ರಮಾಂಕವನ್ನು ನೀಡಲಾಗಿದೆ.

IPL 2026: ರೋಹಿತ್‌ ಶರ್ಮಾ ಇಂಪ್ಯಾಕ್ಟ್‌ ಆಟಗಾರನಾಗಿ ಆಡಬಾರದು ಎಂದ ಆಕಾಶ್‌ ಚೋಪ್ರಾ!

“ಅವರು (ರಜತ್‌ ಪಾಟಿದಾರ್‌) ಅತ್ಯಂತ ಯಶಸ್ವಿ ನಾಯಕ, ಅವರಿಂದಲೇ ಮಾತು ಆರಂಭಿಸಬೇಕು. ಆದರೆ ಬ್ಯಾಟರ್ ಆಗಿ ಆರ್‌ಸಿಬಿ ಪರ ಅವರು ಅಲ್ಪ ಸಮಯದಲ್ಲಿ ನೀಡಿದ ಪ್ರಭಾವ ಅದ್ಭುತವಾಗಿದೆ ಮತ್ತು ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರರಾಗಿದ್ದಾರೆ. ನಿಜ ಹೇಳಬೇಕಾದರೆ, ನಾನು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ನನ್ನ ದೃಷ್ಟಿಯಲ್ಲಿ ಅವರು ತಂಡದ ನಾಯಕನಾಗಬೇಕು. ವಿರಾಟ್ ಕೊಹ್ಲಿ ಹಲವು ಸೀಸನ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದು ಯಶಸ್ಸನ್ನೂ ಕಂಡಿದ್ದಾರೆ. ಆದರೆ ನಾನು ಹೇಳುವುದೇನೆಂದರೆ, ರಜತ್ ಪಾಟಿದಾರ್ ನಾಯಕನಾಗಬೇಕು,” ಎಂದು ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿ ತಿಳಿಸಿದ್ದಾರೆ.

ಒಂದು ಆವೃತ್ತಿ ಮಾತ್ರ ಆರ್‌ಸಿಬಿ ಪರ ಆಡಿದ್ದರೂ, ನಾಯಕತ್ವ ಮತ್ತು ಬ್ಯಾಟಿಂಗ್ ಮೂಲಕ ತೋರಿಸಿದ ಪ್ರಭಾವದ ಹಿನ್ನೆಲೆಯಲ್ಲಿ ಜಿತೇಶ್ ಶರ್ಮಾರನ್ನು ಆರನೇ ಕ್ರಮಾಂಕಕ್ಕೆ ಆಯ್ಕೆ ಮಾಡಿರುವುದಾಗಿ ಕಾರ್ತಿಕ್ ಹೇಳಿದರು. ಅದೇ ಕಾರಣಕ್ಕೆ ಆಲ್‌ರೌಂಡರ್ ಕೃಣಾಲ್ ಪಾಂಡ್ಯನಿಗೂ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.

IPL 2026: ಮುಸ್ತಾಫಿಝುರ್‌ ರೆಹಮಾನ್‌ ಸ್ಥಾನಕ್ಕೆ ಬ್ಲೆಸಿಂಗ್‌ ಮುಝರಬಾನಿಗೆ ಚಾನ್ಸ್‌ ಕೊಟ್ಟ ಕೆಕೆಆರ್!

“ಇಂದು ಆರ್‌ಸಿಬಿ ಟ್ರೋಫಿ ಗೆದ್ದಿದ್ದರೆ, ಅದರ ಪ್ರಮುಖ ಕಾರಣಗಳಲ್ಲಿ ಒಂದು ಅಂತಿಮ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಮಾಡಿದ ಅದ್ಭುತ ಬೌಲಿಂಗ್. ಜೊತೆಗೆ ಸಿಎಸ್‌ಕೆ ವಿರುದ್ಧ ಪಡೆದ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯೂ ಅವರದೇ. ಕಳೆದ ವರ್ಷ ಅವರು ತಂಡಕ್ಕೆ ಅತ್ಯಂತ ಮಹತ್ವದ ಪಾತ್ರವಹಿಸಿದ್ದರು. ಆರ್‌ಸಿಬಿ ಪರ ಇಷ್ಟು ಯಶಸ್ವಿಯಾಗಿರುವ ಎಡಗೈ ಸ್ಪಿನ್ನರ್‌ಗಳು ಹೆಚ್ಚು ಇಲ್ಲ,” ಎಂದು ಕ್ರುಣಾಲ್ ಪಾಂಡ್ಯ ಬಗ್ಗೆ ದಿನೇಶ್‌ ಕಾರ್ತಿಕ್ ತಿಳಿಸಿದ್ದಾರೆ.

ಬೌಲರ್‌ಗಳಾಗಿ ಹರ್ಷಲ್ ಪಟೇಲ್ ಮತ್ತು ಯುಜ್ವೇಂದ್ರ ಚಹಲ್ ತಮ್ಮ ಎಲ್ಲಾ ಕಾಲದ ದಾಖಲೆಗಳ ಆಧಾರದ ಮೇಲೆ ಸ್ಥಾನ ಪಡೆದರು. 2025ರ ಐಪಿಎಲ್ ಟೂರ್ನಿಯಲ್ಲಿ ತೋರಿದ ಪ್ರದರ್ಶನದ ಹಿನ್ನೆಲೆಯಲ್ಲಿ ಜಾಶ್‌ ಹೇಝಲ್‌ವುಡ್‌ ಅವರನ್ನು 11ನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಜೊತೆಗೆ, ಆಸ್ಟ್ರೇಲಿಯಾದ ಬೌಲರ್‌ಗೆ ಜೊತೆಯಾಗಿ ಮೊಹಮ್ಮದ್ ಸಿರಾಜ್ ಅವರನ್ನು ಕಾರ್ತಿಕ್ ಆಯ್ಕೆ ಮಾಡಿದ್ದು, ವಿನಯ್ ಕುಮಾರ್ ಮತ್ತು ಎಸ್. ಅರವಿಂದ್ ಅವರಿಗಿಂತ ಹೆಚ್ಚು ವಿಕೆಟ್ ಪಡೆದಿರುವುದೇ ಅದರ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

IPL 2026: ಮುಸ್ತಾಫಿಝುರ್‌ ರೆಹಮಾನ್‌ ಸ್ಥಾನಕ್ಕೆ ಬ್ಲೆಸಿಂಗ್‌ ಮುಝರಬಾನಿಗೆ ಚಾನ್ಸ್‌ ಕೊಟ್ಟ ಕೆಕೆಆರ್!

ದಿನೇಶ್‌ ಕಾರ್ತಿಕ್‌ ಅವರ ಆರ್‌ಸಿಬಿಯ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ XI

1.ಕ್ರಿಸ್‌ ಗೇಲ್‌ (ಆರಂಭಿಕ ಬ್ಯಾಟ್ಸ್‌ಮನ್‌)

2.ಫಾಫ್‌ ಡು ಪ್ಲೆಸಿಸ್‌ (ಆರಂಭಿಕ ಬ್ಯಾಟ್ಸ್‌ಮನ್‌)

3.ವಿರಾಟ್‌ ಕೊಹ್ಲಿ (ಬ್ಯಾಟ್ಸ್‌ಮನ್‌)

4.ರಜತ್‌ ಪಾಟಿದಾರ್‌ (ನಾಯಕ, ಬ್ಯಾಟ್ಸ್‌ಮನ್‌)

5.ಎಬಿ ಡಿ ವಿಲಿಯರ್ಸ್‌ (ಬ್ಯಾಟ್ಸ್‌ಮನ್‌)

6.ಜಿತೇಶ್‌ ಶರ್ಮಾ ( ವಿಕೆಟ್‌ ಕೀಪರ್‌)

7.ಕೃಣಾಲ್‌ ಪಾಂಡ್ಯ (ಆಲ್‌ರೌಂಡರ್‌)

8.ಹರ್ಷಲ್‌ ಪಟೇಲ್‌ (ಆಲ್‌ರೌಂಡರ್‌)

9.ಮೊಹಮ್ಮದ್‌ ಸಿರಾಜ್‌ (ವೇಗದ ಬೌಲರ್)‌

10.ಯುಜ್ವೇಂದ್ರ ಚಹಲ್‌ (ಸ್ಪಿನ್ನರ್‌)

11.ಜಾಶ್‌ ಹೇಝಲ್‌ವುಡ್‌ (ವೇಗದ ಬೌಲರ್‌)