WPL 2026: ಹರ್ಮನ್‌ಪ್ರೀತ್ ಕೌರ್ ಅಬ್ಬರ, ಜಯಂಟ್ಸ್ ಎದುರು ಮುಂಬೈ ಇಂಡಿಯನ್ಸ್‌ಗೆ ಅಧಿಕಾರಯುತ ಜಯ!
GGTW vs MIW match Highlights: ಹರ್ಮನ್‌ಪ್ರೀತ್ ಕೌರ್ ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ, ಗುಜರಾತ್ ಜಯಂಟ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಇನ್ನು ಆಶ್ಲೆ ಗಾರ್ಡ್ನರ್ ನಾಯಕತ್ವದ ಗುಜರಾತ್ ತಂಡ ಈ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.
ಅರ್ಧಶತಕ ಬಾರಿಸಿ ಮುಂಬೈಗೆ ಗೆಲುವು ತಂದುಕೊಟ್ಟ ಹರ್ಮನ್‌ಪ್ರೀತ್ ಕೌರ್. -
ನವಿ ಮುಂಬೈ: ಹರ್ಮನ್‌ಪ್ರೀತ್ ಕೌರ್ (Harmanpreet kaur) ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯಲ್ಲಿ ತನ್ನ ಮೂರನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿತು. ಆ ಮೂಲಕ ಈ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆಯುವ ಮೂಲಕ ಮುಂಬೈ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬೌಲಿಂಗ್ ವೈಫಲ್ಯ ಹಾಗೂ ಕೆಲ ಕ್ಯಾಚ್‌ಗಳ ಕೈಚೆಲ್ಲಿದ ಪರಿಣಾಮ ಆಶ್ಲೆ ಗಾರ್ಡ್ನರ್ ನಾಯಕತ್ವದ ಗುಜರಾತ್ ತಂಡ, ಈ ಋತುವಿನಲ್ಲಿ ಮೊದಲನೇ ಸೋಲು ಅನುಭವಿಸಿತು. ಆದರೂ ಮೂರನೇ ಸ್ಥಾನದಲ್ಲಿದೆ.
ಮಂಗಳವಾರ ಇಲ್ಲಿನ ಡಿ ವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಗುಜರಾತ್ ಜಯಂಟ್ಸ್ ನೀಡಿದ್ದ 193 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ತಂಡ, ಹರ್ಮನ್‌ಪ್ರೀತ್ ಕೌರ್ ಹಾಗೂ ಅಮನ್ಜೋತ್ ಕೌರ್ ಅವರ ಬ್ಯಾಟಿಂಗ್ ಬಲದಿಂದ, 19.2 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ಗುರಿಯನ್ನು ಹಿಂಬಾಲಿಸಿದ್ದ ಮುಂಬೈಗೆ ಉತ್ತರ ಆರಂಭ ಸಿಕ್ಕಿರಲಿಲ್ಲ. ಆರಂಭಿಕ ಆಟಗಾರ್ತಿಯರಾದ ಜಿ ಕಮಲಿನಿ (13) ಹಾಗೂ ಹೇಯ್ಲೆ ಮ್ಯಾಥ್ಯೂಸ್ (22) ಅವರು ಬಹುಬೇಗ ವಿಕೆಟ್ ಒಪ್ಪಿಸಿದ್ದರು.
WPL 2026: ಹ್ಯಾಟ್ರಿಕ್ ವಿಕೆಟ್ ಸೇರಿ 5 ವಿಕೆಟ್ ಕಿತ್ತು ನೂತನ ಮೈಲುಗಲ್ಲು ತಲುಪಿದ ನಂದಿನ ಶರ್ಮಾ!
ಹರ್ಮನ್‌ಪ್ರೀತ್ ಕೌರ್ ಭರ್ಜರಿ ಅರ್ಧಶತಕ
ಮುಂಬೈ ಇಂಡಿಯನ್ಸ್ ನಾಯಕಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಗುಜರಾತ್ ಟೈಟನ್ಸ್ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು, 43 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 71 ರನ್‌ಗಳನು ಗಳಿಸಿದರು ಹಾಗೂ ಮುಂಬೈ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಇದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದಕ್ಕೂ ಮುನ್ನ ಇವರು ಅಮನ್‌ಜೋತ್ ಕೌರ್ (40) ಅವರ ಜೊತೆಗೆ 72 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಇದಾದ ಬಳಿಕ ನಿಕೋಲಾ ಕೇರಿ (38* ರನ್) ಅವರ ಜೊತೆ 84 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು.
Aces the chase in style 😎
— Women's Premier League (WPL) (@wplt20) January 13, 2026
Captain Harmanpreet Kaur leads @mipaltan to a dominating 7️⃣-wicket victory 💙
This is also #MI's highest successful run chase in #TATAWPL 🤝
Scorecard ▶️ https://t.co/Dxufu4Pisz #KhelEmotionKa | #MIvGG pic.twitter.com/IKoqVlYqhn
ಗುಜರಾತ್ ಜಯಂಟ್ಸ್ 192 ರನ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಗುಜರಾತ್ ಜಯಂಟ್ಸ್ ಮಹಿಳಾ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 192 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಮುಂಬೈ ಇಂಡಿಯನ್ಸ್‌ಗೆ 193 ರನ್‌ಗಳ ಗುರಿಯನ್ನು ನೀಡಿತ್ತು. ಗುಜರಾತ್ ಪರ ಯಾವುದೇ ಬ್ಯಾಟರ್ ಅರ್ಧಶತಕ ಗಳಿಸಿಲ್ಲವಾದರೂ ಬೆಥ್ ಮೂನಿ, ಕನಿಕಾ ಅಹುಜಾ, ಜಾರ್ಜಿಯಾ ವ್ಯಾರ್‌ಹ್ಯಾಮ್ ಹಾಗೂ ಭಾರತಿ ಫುಲ್ಮಾಲಿ 30ರ ಗಡಿ ದಾಟಿದ್ದರು.
71* off just 43 deliveries in @mipaltan's highest successful #TATAWPL chase 💙
— Women's Premier League (WPL) (@wplt20) January 13, 2026
Captain Harmanpreet Kaur is the Player of the Match 😎
Scorecard ▶️ https://t.co/Dxufu4Pisz#KhelEmotionKa | #MIvGG pic.twitter.com/ICEYjDZqzJ
ಗುಜರಾತ್ ಜಯಂಟ್ಸ್ ಪರ ಇನಿಂಗ್ಸ್ ಆರಂಭಿಸಿದ ಬೆಥ್ ಮೂನಿ ಹಾಗೂ ಸೋಫಿ ಡಿವೈನ್ ದೊಡ್ಡ ಜೊತೆಯಾಟವನ್ನು ಆಡುವಲ್ಲಿ ವಿಫಲರಾದರು. ಸೋಫಿ ಡಿವೈನ್ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಎರಡನೇ ವಿಕೆಟ್‌ಗೆ ಜೊತೆಯಾದ ಬೆಥ್ ಮೂನಿ ಹಾಗೂ ಕನಿಕಾ ಅಹುಜಾ 42 ರನ್‌ಗಳ ಜೊತೆಯಾಟವನ್ನು ಆಡಿದರು. ಉತ್ತಮ ಬ್ಯಾಟಿಂಗ್ ನಡೆಸಿದ ಬೆಥ್ ಮೂನಿ ಅವರು 26 ಎಸೆತಗಳಲ್ಲಿ 33 ರನ್‌ಗಳನ್ನು ಕಲೆ ಹಾಕಿ ವಿಕೆಟ್ ಒಪ್ಪಿಸಿದರು.
WPL 2026: ಯುಪಿ ವಾರಿಯರ್ಸ್ ಎದುರು ಗುಜರಾತ್ ಜಯಂಟ್ಸ್ ತಂಡಕ್ಕೆ 10 ರನ್ ರೋಚಕ ಜಯ!
ನಾಯಕಿ ಆಶ್ಲೆ ಗಾರ್ಡನರ್ ಅವರು 20 ರನ್‌ಗಳಿಗೆ ಸೀಮಿತರಾದರು. ಉತ್ತಮವಾಗಿ ಕನಿಕಾ ಅಹುಜಾ ಕೇವಲ 18 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 35 ರನ್‌ಗಳನ್ನು ಕಲೆ ಹಾಕಿ ಸ್ಪೋಟಕ ಆರಂಭವನ್ನು ಪಡದಿದ್ದರು. ಆದರೆ, ಅವರನ್ನು ಹೇಯ್ಲಿ ಮ್ಯಾಥ್ಯೂಸ್ ಕಟ್ಟಿ ಹಾಕಿದರು. ನಂತರ ಡೆತ್ ಓವರ್‌ಗಳಲ್ಲಿ ತಂಡದ ಜವಾಬ್ದಾರಿ ಹೊತ್ತ ಜಾರ್ಜಿಯಾ ವ್ಯಾರ್‌ಹ್ಯಾಮ್ 33 ಎಸೆತಗಳಲ್ಲಿ 43 ರನ್ ಗಳಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ಭಾರತಿ ಫುಲ್ಮಾಲಿ ಅವರುಉ ಕೇವಲ 15 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಅಷ್ಟೇ ಬೌಂಡರಿಗಳೊಂದಿಗೆ 36 ರನ್‌ಗಳನ್ನು ಚಚ್ಚಿದರು. ಈ ಇಬ್ಬರೂ ಮುರಿಯದ 56 ರನ್‌ಗಳನ್ನು ಜೊತೆಯಾಟವನ್ನು ಆಡಿದರು.