ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫೈನಲ್‌ ಪಂದ್ಯದ ಸೋಲಿನ ಬೇಸರದಲ್ಲಿದ್ದರೂ ಆರ್‌ಸಿಬಿಗೆ ಅಭಿನಂದನೆ ಸಲ್ಲಿಸಿ ಫ್ಯಾನ್ಸ್‌ ಹೃದಯ ಗೆದ್ದ ಶುಭಮನ್‌ ಗಿಲ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಗುಜರಾತ್‌ ಟೈಟನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಅಭಿನಂದನೆ ಸಲ್ಲಿಸಿ ಆರ್‌ಸಿಬಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

ಆರ್‌ಸಿಬಿಗೆ ಅಭಿನಂದನೆ ಸಲ್ಲಿಸಿ ಫ್ಯಾನ್ಸ್‌ ಹೃದಯ ಗೆದ್ದ ಶುಭಮನ್‌ ಗಿಲ್‌!

ಆರ್‌ಸಿಬಿ ಫ್ಯಾನ್ಸ್‌ ಹೃದಯ ಗೆದ್ದ ಶುಭಮನ್‌ ಗಿಲ್‌. -

Profile
Ramesh Kote Jun 1, 2026 7:06 PM

ಅಹಮದಾಬಾದ್‌: ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನು 5 ವಿಕೆಟ್‌ಗಳಿಂದ ಮಣಿಸುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಮೂಲಕ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಸತತ ಎರಡನೇ ಐಪಿಎಲ್‌ ಗೆದ್ದು ಸಂಭ್ರಮಿಸಿತು. 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ವಿರಾಟ್‌ ಕೊಹ್ಲಿ ಅರ್ಧಶತಕದ ಬಲದಿಂದ ಗೆದ್ದು ಬೀಗಿತು. ಸೋಲಿನ ಬೇಸರದಲ್ಲಿದ್ದರೂ ಶುಭಮನ್‌ ಗಿಲ್‌ (Shubman Gill), ಆರ್‌ಸಿಬಿಗೆ ಅಭಿನಂದನೆ ಸಲ್ಲಿಸುವ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡ ಶುಭಮನ್‌ ಗಿಲ್‌, "ಧೈರ್ಯವಾಗಿ ಆಡಿದ್ದೀರಿ, ಪ್ರಶಸ್ತಿ ಗೆಲ್ಲಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅರ್ಹವಾಗಿದೆ," ಎಂದು ಬರೆದುಕೊಂಡಿದ್ದಾರೆ. ಸೋಲಿನ ಬೇಸರದಲ್ಲಿದ್ದರೂ ಆರ್‌ಸಿಬಿ ತಂಡದ ಸಾಧನೆಯನ್ನು ಗುಣಗಾನ ಮಾಡಿ ಕ್ರೀಡಾ ಸ್ಪೂರ್ತಿ ಮೆರೆದಿರುವ ಶುಭಮನ್‌ ಗಿಲ್‌ ಅವರನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

IPL 2026: ಆರ್‌ಸಿಬಿ ಎದುರು ಫೈನಲ್‌ಗೂ ಮೊದಲೇ ಸೋತಿದ್ದ ಗುಜರಾತ್ ಟೈಟನ್ಸ್!

ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಶುಭಮನ್‌ ಗಿಲ್‌

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಟೈಟನ್ಸ್‌ ತಂಡದ ಇನಿಂಗ್ಸ್‌ ಆರಂಭಿಸಿದ ನಾಯಕ ಶುಭಮನ್‌ ಗಿಲ್‌ ಅವರು ಕೇವಲ 8 ಎಸೆತಗಳಲ್ಲಿ 10 ರನ್‌ ಗಳಿಸಿದ ಬಳಿಕ ಔಟ್‌ ಆದರು. ಬಳಿಕ ಇವರ ಬೆನ್ನಲ್ಲೆ ಸಾಯಿ ಸುದರ್ಶನ್‌ ಅವರು 12 ರನ್‌ ಗಳಿಸಿದ ಬಳಿಕ ಜಾಶ್‌ ಹೇಝಲ್‌ವುಡ್‌ಗೆ ಔಟ್‌ ಆದರು. ಪವರ್‌ಪ್ಲೇನಲ್ಲಿ ಆರಂಭಿಕರನ್ನು ಔಟ್‌ ಮಾಡುವಲ್ಲಿ ಭುವನೇಶ್ವರ್‌ ಕುಮಾರ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಯಶಸ್ವಿಯಾದರು.

ಬಳಿಕ 23 ಎಸೆತಗಳಲ್ಲಿ 19 ರನ್‌ ಗಳಿಸಿ ಜಿಟಿಗೆ ಆಸರೆಯಾಗಿದ್ದ ಜೋಸ್‌ ಬಟ್ಲರ್‌ ಅವರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ವಾಷಿಂಗ್ಟನ್‌ ಸುಂದರ್‌ ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು 37 ಎಸೆತಗಳಲ್ಲಿ ಅಜೇಯ 50 ರನ್‌ ಗಳಿಸಿ ತಂಡವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.



18 ಓವರ್‌ಗಳಿಗೆ ಪಂದ್ಯವನ್ನು ಮುಗಿಸಿದ ಆರ್‌ಸಿಬಿ

ಬಳಿಕ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ ಅಯ್ಯರ್‌ ಹಾಗೂ ವಿರಾಟ್‌ ಕೊಹ್ಲಿ ಮೊದಲನೇ ವಿಕೆಟ್‌ಗೆ 62 ರನ್‌ ಗಳಿಸಿ ಭರ್ಜರಿ ಆರಂಭ ತಂದುಕೊಟಟ್ರು. ವೆಂಕಟೇಶ ಅಯ್ಯರ್‌ 16 ಎಸೆತಗಳಲ್ಲಿ 32 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟು ಔಟ್‌ ಆದರು. ಬಳಿಕ ಒಂದು ತುದಿಯಲ್ಲಿ ನಿಂತು ಕೊನೆಯವರೆಗೂ ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ, ಜಿಟಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 42 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 75 ರನ್‌ ಗಳಿಸಿದು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.