Rising Stars Asia Cup: ಅರ್ಜುನ್ ರಜಪೂತ್ ಶತಕ ವ್ಯರ್ಥ, ಪಾಕಿಸ್ತಾನ ವಿರುದ್ಧ ಭಾರತದ ಕಿರಿಯರಿಗೆ ಸೋಲು!
ಅಂಡರ್-19 ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಮೂರು ವಿಕೆಟ್ಗಳ ರೋಚಕ ಜಯ ಸಾಧಿಸಿದೆ. 61 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಹಮ್ಜಾ ಜಹೂರ್ ಅಜೇಯ ಶತಕದ ಮೂಲಕ ಆಸರೆಯಾಗಿ ಸೆಮಿಫೈನಲ್ಗೆ ಮುನ್ನಡೆಸಿದರು.
ಭಾರತ ಅಂಡರ್-19 ತಂಡಕ್ಕೆ ಪಾಕಿಸ್ತಾನ ಎದುರು ಸೋಲು. -
ನವದೆಹಲಿ: ಅಂಡರ್-19 ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026ರ ಟೂರ್ನಿಯಲ್ಲಿ (Rising Stars Asia Cup 2026) ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಮೂರು ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ. ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ (ಮಿನಿಸ್ಟ್ರಿ ಟರ್ಫ್ 2ರಲ್ಲಿ ) ನಡೆದ ಪಂದ್ಯದಲ್ಲಿ (IND U-19 vs PAK U-19) ಹಮ್ಜಾ ಜಹೂರ್ ಅವರ ಅಮೋಘ ಶತಕ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಟೂರ್ನಿಯ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಪಂದ್ಯ ಮುಗಿಯಲು ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಪಾಕಿಸ್ತಾನ ಗೆಲುವಿನ ಗುರಿ ತಲುಪಿತು.
ಟಾಸ್ ಗೆದ್ದ ಭಾರತ ತಂಡದ ನಾಯಕ ಲಕ್ಷ್ಯ ರೈಚಂದಾನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ನಿರ್ಧಾರ ತಂಡಕ್ಕೆ ಆರಂಭದಲ್ಲಿ ಹಿನ್ನಡೆಯಾಯಿತು. ಎರಡನೇ ಎಸೆತದಲ್ಲೇ ಅಲಿ ರಾಜಾ ಬೌಲಿಂಗ್ನಲ್ಲಿ ನಾಯಕ ಲಕ್ಷ್ಯ ವಿಕೆಟ್ ಒಪ್ಪಿಸಿದರು. ಇದರಿಂದ ಭಾರತ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಒಂದು ಹಂತದಲ್ಲಿ 42 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ತೀವ್ರ ಒತ್ತಡಕ್ಕೆ ಒಳಗಾಯಿತು.
ಹಿಂದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಆರ್ಯವೀರ್ ಸೆಹ್ವಾಗ್ ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 22 ರನ್ ಗಳಿಸಿದರು. ವಿಕೆ ವಿನೀತ್ ಎಂಟು ರನ್ ಗಳಿಸಿದರೆ, ಯಶವರ್ಧನ್ ಚೌಹಾಣ್ ಕೇವಲ ಒಂದು ರನ್ಗೆ ಔಟಾದರು. ಪಾಕಿಸ್ತಾನದ ಪರ ಹೊಸ ಚೆಂಡಿನಲ್ಲಿ ಅಲಿ ರಾಜಾ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಭಾರತದ ಬ್ಯಾಟರ್ಗಳಿಗೆ ರನ್ ಗಳಿಸಲು ಅವಕಾಶ ನೀಡಲಿಲ್ಲ.
ʻಇನ್ನೂ 30 ರಿಂದ 40 ವಿಕೆಟ್ ಪಡೆಯಬಹುದಿತ್ತುʼ: ಮೊಹಮ್ಮದ್ ಶಮಿ ಟೆಸ್ಟ್ ನಿವೃತ್ತಿಗೆ ರವಿಶಾಸ್ತ್ರಿ ಬೇಸರ!
ಈ ಸಂಕಷ್ಟದ ಸಮಯದಲ್ಲಿ ಅರ್ಜುನ್ ರಜ್ಪೂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 85 ಎಸೆತಗಳಲ್ಲಿ 107 ರನ್ ಸಿಡಿಸಿ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು. ಅವರ ಇನಿಂಗ್ಸ್ನಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್ಗಳು ಸೇರಿದ್ದವು. ಉಳಿದ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾದ ಕಾರಣ ಭಾರತ 46.3 ಓವರ್ಗಳಲ್ಲಿ 208 ರನ್ಗಳಿಗೆ ಆಲೌಟ್ ಆಯಿತು.
ಹಮ್ಜಾ ಶತಕಕ್ಕೆ ಮಂಕಾದ ಭಾರತದ ಬೌಲಿಂಗ್
209 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೂ ಭಾರತ ಬೌಲರ್ಗಳು ಆರಂಭದಲ್ಲೇ ಆಘಾತ ನೀಡಿದರು. ಮನಾಲ್ ಚೌಹಾಣ್ ಪರಿಣಾಮಕಾರಿ ಬೌಲಿಂಗ್ ನಡೆಸಿ ಪಾಕಿಸ್ತಾನವನ್ನು 61 ರನ್ಗಳಿಗೆ ಐದು ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು. ಈ ಹಂತದಲ್ಲಿ ಪಾಕಿಸ್ತಾನ ಸೋಲುವ ಸಾಧ್ಯತೆ ಹೆಚ್ಚಾಗಿತ್ತು.
ಆದರೆ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹಮ್ಜಾ ಜಹೂರ್ ಭಾರತದ ಬೌಲರ್ಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಅವರಿಗೆ ಹಸ್ನೈನ್ ಅಬ್ಬಾಸ್ ದಾರ್ ಉತ್ತಮ ಸಾಥ್ ನೀಡಿದರು. ಈ ಜೋಡಿ ಆರನೇ ವಿಕೆಟ್ಗೆ 107 ರನ್ಗಳ ಅಮೂಲ್ಯ ಜೊತೆಯಾಟವಾಡಿ ಪಾಕಿಸ್ತಾನವನ್ನು ಗೆಲುವಿನ ಹಾದಿಗೆ ಮರಳಿಸಿತು.
A tough result for India U19. Focus now shifts to Tuesday for their next fixture against UAE U19 in the #MensU19AsiaCup. Scorecard ▶️ https://t.co/WullKDGgH4 https://t.co/Bl5f0KSFHv
— BCCI (@BCCI) November 8, 2026
ಹಮ್ಜಾ ಯಾವುದೇ ಆತುರವಿಲ್ಲದೆ ಅತ್ಯಂತ ಪ್ರಬುದ್ಧವಾಗಿ ಬ್ಯಾಟಿಂಗ್ ನಡೆಸಿದರು. 108 ಎಸೆತಗಳನ್ನು ಎದುರಿಸಿದ ಅವರು ಶತಕ ಪೂರೈಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟಿದ್ದಲ್ಲದೆ, ತಮ್ಮ ಶತಕವನ್ನೂ ಪೂರ್ಣಗೊಳಿಸಿದರು.
ಅಂತಿಮವಾಗಿ ಪಾಕಿಸ್ತಾನ 48.1 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಮೂರು ವಿಕೆಟ್ಗಳ ಜಯ ದಾಖಲಿಸಿತು. ಭಾರತದ ಪರ ಆರಂಭಿಕ ಹಂತದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ಕಂಡುಬಂದರೂ, ಹಮ್ಜಾ ಅವರ ಅಮೋಘ ಇನಿಂಗ್ಸ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ಸೆಮಿಫೈನಲ್ಗೆ ಪ್ರವೇಶಿಸಿದ್ದು, ಭಾರತದ ಯುವ ತಂಡಕ್ಕೆ ನಿರಾಸೆಯಾಗಿದೆ.