IND vs NZ: ಮೂರನೇ ಒಡಿಐಗೆ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಹೆಡ್ ಟು ಹೆಡ್ ದಾಖಲೆ ವಿವರ!
IND vs NZ 3rd ODI Match Preview: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಮೂರನೇ ಏಕದಿನ ಪಂದ್ಯ ನವೆಂಬರ್ 10 ರಂದು ಮಂಗಳವಾರ ಹ್ಯಾಮೆಲ್ಟನ್ನ ಸೆಡಾನ್ ಪಾರ್ಕ್ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ವಿವರ, ಪಿಚ್ ರಿಪೋರ್ಟ್ ಸೇರಿದಂತೆ ಪ್ರಮುಖ ಸಂಗತಿಗಳನ್ನು ಇಲ್ಲಿ ವಿವರಿಸಲಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಏಕದಿನ ಪಂದ್ಯ. -
ಹ್ಯಾಮಿಲ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ (IND vs NZ) ನವೆಂಬರ್ 10ರಂದು ಹ್ಯಾಮಿಲ್ಟನ್ನ ಸೆಡಾನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2-0 ಮುನ್ನಡೆ ಸಾಧಿಸಿರುವ ಭಾರತ ತಂಡ ಮೂರನೇ ಪಂದ್ಯವನ್ನೂ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಮತ್ತೊಂದೆಡೆ, ತವರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಸೋಲಿನ ಮುಖಭಂಗ ಅನುಭವಿಸಿರುವ ನ್ಯೂಜಿಲೆಂಡ್ ಕೊನೆಯ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.
ಮೊದಲ ಎರಡು ಪಂದ್ಯಗಳಲ್ಲೂ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ಮಳೆಯಿಂದಾಗಿ ಪಿಚ್ನ ಪರಿಸ್ಥಿತಿ ಬದಲಾಗಿದ್ದು, ಬ್ಯಾಟರ್ಗಳಿಗೆ ರನ್ ಗಳಿಸುವುದು ಕಷ್ಟಕರವಾಗಿತ್ತು. ಭಾರತೀಯ ವೇಗದ ಬೌಲರ್ಗಳು ಉತ್ತಮ ಲೈನ್ ಮತ್ತು ಲೆನ್ತ್ನಲ್ಲಿ ಬೌಲ್ ಮಾಡುವ ಮೂಲಕ ಕಿವೀಸ್ ಬ್ಯಾಟರ್ಗಳನ್ನು ಕಟ್ಟಿಹಾಕಿದ್ದರು. ಪರಿಣಾಮವಾಗಿ ನ್ಯೂಜಿಲೆಂಡ್ ಬ್ಯಾಟರ್ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೀಗ ತವರಿನ ಪ್ರೇಕ್ಷಕರ ಎದುರು ಉತ್ತಮ ಪ್ರದರ್ಶನ ನೀಡಿ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ.
ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಿಂದ ರಜತ್ ಪಾಟಿದಾರ್ ಔಟ್, ರಿಂಕು ಸಿಂಗ್ಗೆ ಉಪ ನಾಯಕತ್ವ!
ಭಾರತದ ಬೌಲಿಂಗ್ ವಿಭಾಗದ ಮೇಲೆ ನಿರೀಕ್ಷೆ
ಇತ್ತೀಚಿನ ಸರಣಿಗಳಲ್ಲಿ ದುಬಾರಿ ಬೌಲಿಂಗ್ ಪ್ರದರ್ಶನದಿಂದ ಟೀಕೆಗೆ ಒಳಗಾಗಿದ್ದ ಭಾರತದ ಬೌಲಿಂಗ್ ವಿಭಾಗ ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ವೇಗದ ಬೌಲರ್ಗಳು ನಿಖರವಾದ ಲೈನ್ ಮತ್ತು ಲೆನ್ತ್ನಲ್ಲಿ ಬೌಲಿಂಗ್ ನಡೆಸಿ ನ್ಯೂಜಿಲೆಂಡ್ ಬ್ಯಾಟರ್ಗಳಿಗೆ ದೊಡ್ಡ ಹೊಡೆತ ನೀಡಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಬೌಲರ್ಗಳ ಸಂಘಟಿತ ಪ್ರದರ್ಶನವೇ ಭಾರತದ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಇದೀಗ ಮೂರನೇ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ಮುಂದುವರಿಸಿ ಸರಣಿಯನ್ನು 3-0 ಅಂತರದಿಂದ ಗೆಲ್ಲುವುದು ಟೀಮ್ ಇಂಡಿಯಾದ ಗುರಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಸಮತೋಲನ ಕಾಯ್ದುಕೊಂಡಿರುವ ಭಾರತ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಆದರೆ ತವರಿನ ಪ್ರೇಕ್ಷಕರ ಬೆಂಬಲ ಹೊಂದಿರುವ ನ್ಯೂಜಿಲೆಂಡ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
IND vs NZ: ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಆಘಾತ, ಒಡಿಐ ಸರಣಿಯಿಂದ ಬ್
ಪಂದ್ಯದ ವಿವರ
ಭಾರತ vs ನ್ಯೂಜಿಲೆಂಡ
ಮೂರನೇ ಏಕದಿನ ಪಂದ್ಯ
ದಿನಾಂಕ: ನವೆಂಬರ್ 10, ಮಂಗಳವಾರ, 2026
ಸಮಯ: ಬೆಳಿಗ್ಗೆ 7:30 (ಭಾರತೀಯ ಕಾಲಮಾನ)
ಸ್ಥಳ: ಸೆಡಾನ್ ಪಾರ್ಕ್, ಹ್ಯಾಮಿಲ್ಟನ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಸೋನಿಲಿವ್ (ಆ್ಯಪ್ ಮತ್ತು ವೆಬ್ಸೈಟ್)
ಸೆಡಾನ್ ಪಾರ್ಕ್, ಹ್ಯಾಮಿಲ್ಟನ್: ಪಿಚ್ ವರದಿ
ನ್ಯೂಜಿಲೆಂಡ್ನ ಹ್ಯಾಮಿಲ್ಟನ್ನಲ್ಲಿರುವ ಸೆಡಾನ್ ಪಾರ್ಕ್ ಮೈದಾನದ ಪಿಚ್ ಬ್ಯಾಟರ್ಗಳು ಹಾಗೂ ಬೌಲರ್ಗಳಿಬ್ಬರಿಗೂ ಅನುಕೂಲಕರವಾದ ಸಮತೋಲಿತ ಮೇಲ್ಮೈ ಹೊಂದಿದೆ. ಪಂದ್ಯದ ಆರಂಭದಲ್ಲಿ ವೇಗದ ಬೌಲರ್ಗಳಿಗೆ ಸ್ವಲ್ಪ ಸ್ವಿಂಗ್ ಮತ್ತು ಚಲನೆ ದೊರೆಯುವ ಸಾಧ್ಯತೆಯಿದೆ. ಉತ್ತಮ ಲೈನ್ ಮತ್ತು ಲೆನ್ತ್ನಲ್ಲಿ ಬೌಲ್ ಮಾಡಿದರೆ ವಿಕೆಟ್ ಪಡೆಯಬಹುದು.
ಆರಂಭಿಕ ಓವರ್ಗಳ ಬಳಿಕ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಪೂರಕವಾಗುವ ನಿರೀಕ್ಷೆಯಿದೆ. ಚೆಂಡು ಬ್ಯಾಟ್ಗೆ ಚೆನ್ನಾಗಿ ಬರುವುದರಿಂದ ಬ್ಯಾಟರ್ಗಳು ದೊಡ್ಡ ಹೊಡೆತಗಳನ್ನು ಬಾರಿಸಲು ಅವಕಾಶವಿದೆ. ಮೈದಾನದ ಬೌಂಡರಿಗಳು ಚಿಕ್ಕದಾಗಿರುವುದರಿಂದ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೂ ನಿರೀಕ್ಷಿಸಬಹುದು.
2027ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ 627 ಕೋಟಿ ರು ನಷ್ಟ ಸಾಧ್ಯತೆ! ಇದಕ್ಕೆ ಬಲವಾದ ಕಾರಣ ಇಲ್ಲಿದೆ..
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 125
ಭಾರತದ ಗೆಲುವು: 65
ನ್ಯೂಜಿಲೆಂಡ್ ಗೆಲುವು: 52
ಫಲಿತಾಂಶವಿಲ್ಲ: 07
ಟೈ: 01
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ನ್ಯೂಜಿಲೆಂಡ್: ವಿಲ್ ಯಂಗ್, ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಹೆನ್ರಿ ನಿಕೋನ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನೇಥನ್ ಸ್ಮಿತ್, ಕೈಲ್ ಜೇಮಿಸನ್, ಜೇಕಬ್ ಡಫಿ, ಮ್ಯಾಟ್ ಫಿಷರ್
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಾಂಬೋಜ್, ಆಕಿಬ್ ನಬಿ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್