ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ನಾನು ಭಾರತೀಯ ಬೌಲರ್‌ಗಳನ್ನು ದ್ವೇಷಿಸುತ್ತೇನೆ': ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್‌ ಬ್ಯಾಟ್ಸ್‌ಮನ್‌!

ಪಾಕಿಸ್ತಾನ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌ ಹಸನ್‌ ನವಾಝ್‌ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಭಾರತದ ಎಲ್ಲಾ ಬೌಲರ್‌ಗಳನ್ನು ನಾನು ದ್ವೇಷಿಸುತ್ತೇನೆಂದು ಹೇಳಿದ ಅವರು, ಭಾರತದ ವಿರುದ್ಧ ಆಡುವಾಗ ಹೆಚ್ಚಿನ ರನ್‌ಗಳನ್ನು ಗಳಿಸಲು ಪ್ರಯತ್ನಿಸುತ್ತೇನೆಂದು ತಿಳಿಸಿದ್ದಾರೆ.

ನಾನು ಭಾರತೀಯ ಬೌಲರ್‌ಗಳನ್ನು ದ್ವೇಷಿಸುತ್ತೇನೆ: ಹಸನ್‌ ನವಾಝ್‌!

ಭಾರತೀಯ ಬೌಲರ್‌ಗಳನ್ನು ದ್ವೇಷಿಸುತ್ತೇನೆಂದ ಹಸನ್‌ ನವಾಝ್‌. -

Profile
Ramesh Kote Apr 28, 2026 5:13 PM

ನವದೆಹಲಿ: ಭಾರತದ (India) ಎಲ್ಲಾ ಬೌಲರ್‌ಗಳನ್ನು ನಾನು ದ್ವೇಷಿಸುತ್ತೇನೆಂದು ಹೇಳುವ ಮೂಲಕ ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ ಹಸನ್‌ ನವಾಝ್‌ (Hasan Nawaz) ವಿವಾದವನ್ನು ಹುಟ್ಟು ಹಾಕಿದ್ದಾರೆ. ಸ್ಥಳೀಯ ನ್ಯೂಸ್‌ ಚಾನೆಲ್‌ಗೆ ಸಂದರ್ಶನ ನೀಡುತ್ತಿದ್ದ ವೇಳೆ ನವಾಝ್‌ ಈ ರೀತಿಯ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ತಂಡದ (Pakistan) ಪರ 25 ಟಿ20ಐ ಪಂದ್ಯಗಳು ಹಾಗೂ 4 ಒಡಿಐ ಪಂದ್ಯಗಳನ್ನು ಆಡಿರುವ ಹಸನ್‌ಗೆ ಯಾವ ಬೌಲರ್‌ಗೆ ರನ್‌ಗಳನ್ನು ಹೊಡೆಯಲು ಇಷ್ಟಪಡುತ್ತೀರಿ ಎಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು ಭಾರತ ವಿರುದ್ಧ ಆಡುವಾಗ ನನಗೆ ಹೆಚ್ಚುವರಿ ಪ್ರೇರಣೆ ಸಿಗುತ್ತದೆ ಹಾಗೂ ಭಾರತದ ಎಲ್ಲಾ ಬೌಲರ್‌ಗಳಿಗೂ ರನ್‌ ಹೊಡೆಯಲು ಬಯಸುತ್ತೇನೆ, ಏಕೆಂದರೆ ನಾನು ಅವರನ್ನು ದ್ವೇಷಿಸುತ್ತೇನೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ಭಾರತ ತಂಡದ ವಿರುದ್ಧ ಆಡುವಾಗ ನಿಸ್ಸಂಶಯವಾಗಿ ನನಗೆ ಹೆಚ್ಚುವರಿ ಪ್ರೇರಣೆ ಸಿಗುತ್ತದೆ. ಈ ತಂಡದ ಎಲ್ಲಾ ಬೌಲರ್‌ಗಳ ಮೇಲೆ ದಾಳಿ ನಡೆಸಬೇಕೆಂಬ ಭಾವನೆ ನನಗೆ ಸ್ವಾಭವಿಕವಾಗಿ ಮೂಡುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಭಾರತೀಯ ಬೌಲರ್‌ಗಳನ್ನು ನಾನು ದ್ವೇಷಿಸುತ್ತೇನೆ. ದೇವರು ನನಗೆ ಅವಕಾಶ ನೀಡಿದರೆ, ಮುಂದೆ ನಾನು ಇದನ್ನು ಮಾಡಲು ಪ್ರಯತ್ನಿಸುತ್ತೇನೆ," ಎಂದು ಅವರು ಹೇಳಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ಮನು ಭಾಕರ್‌ ಬಳಿ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಟೀಕಿಸಿದ ನೆಟ್ಟಿಗರು!

ಮಾತು ಮುಂದುವರಿಸಿದ ಹಸನ್, ತಾನು ಬೌಲರ್‌ಗಳನ್ನು ಆಯ್ಕೆಮಾಡಿ ಆಟ ಆಡುವುದಿಲ್ಲ ಎಂದು ಹೇಳಿದ್ದಾರೆ. ಪಂದ್ಯದ ಪರಿಸ್ಥಿತಿಯಲ್ಲಿ ಅಗತ್ಯ ರನ್‌ರೇಟ್ ಸುಮಾರು 15ರಷ್ಟಿದ್ದರೆ, ಸಾಧ್ಯವಾದಷ್ಟು ಹೆಚ್ಚು ರನ್‌ಗಳನ್ನು ಗಳಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

“ಅದು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಎಲ್ಲವೂ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ, ಅಗತ್ಯ ರನ್‌ರೇಟ್ 10, 12 ಅಥವಾ 15 ರನ್ ಪ್ರತಿ ಓವರ್ ಇದ್ದರೂ, ಎದುರಾಳಿ ಬೌಲರ್ ಯಾರು ಎಂಬುದನ್ನು ಲೆಕ್ಕಿಸದೆ ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸಲು ಪ್ರಯತ್ನಿಸಬೇಕು,” ಎಂದು ತಂಡದಿಂದ ಹೊರಗುಳಿದಿರುವ ಈ ಆಟಗಾರ ಹೇಳಿದ್ದಾರೆ.



“ಈ ಹಂತದಲ್ಲಿ ಎಲ್ಲ ಆಟಗಾರರೂ ಉನ್ನತ ದರ್ಜೆಯ ಆಟಗಾರರಾಗಿರುತ್ತಾರೆ ಮತ್ತು ವಿಶ್ವ ದರ್ಜೆಯ ಬೌಲರ್‌ಗಳೇ ಆಗಿರುವುದರಿಂದ, ಪ್ರತಿಯೊಬ್ಬರಿಗೂ ಯೋಜನೆ ರೂಪಿಸಲಾಗುತ್ತದೆ. ವಿಶೇಷವಾಗಿ ಟಾರ್ಗೆಟ್ ಮಾಡುವಂತಹ ಒಬ್ಬ ಬೌಲರ್ ಎಂಬುದು ಇಲ್ಲ,” ಎಂದು ಅವರು ತಿಳಿಸಿದ್ದಾರೆ.

ಹಸನ್‌ ನವಾಝ್‌ರನ್ನು ಟೀಕಿಸಿದ ನೆಟ್ಟಿಗರು

ಹಸನ್‌ ನವಾಝ್‌ ಈ ಹೇಳಿಕೆ ನೀಡಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವರು ಆ ಪಾಕಿಸ್ತಾನ ಕ್ರಿಕೆಟಿಗನ ವಿವಾದಾತ್ಮಕ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

IPL 2026 Points Table: ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾದ ಆರ್‌ಸಿಬಿ, ಸೋತ ಡೆಲ್ಲಿ ಲೆಕ್ಕಾಚಾರ ಹೇಗಿದೆ?

ಇದರ ನಡುವೆ, ನವಾಝ್‌ ಭಾರತ ವಿರುದ್ಧದ ಒಂದೇ ಒಂದು ಪಂದ್ಯದಲ್ಲಿ ಪಾಕಿಸ್ತಾನ ಪರ ಆಡಿದ್ದು, ಅಲ್ಲಿ ಕೇವಲ ಐದು ರನ್‌ಗಳನ್ನು ಮಾತ್ರ ಗಳಿಸಿದ್ದರು. ಅವರು ಕೊನೆಯದಾಗಿ ಕಳೆದ ವರ್ಷದ ನವೆಂಬರ್‌ನಲ್ಲಿ ಪಾಕಿಸ್ತಾನ ಪರ ಆಡಿದ್ದು, ಇದೀಗ ಮತ್ತೆ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ.

ನವಾಜ್‌ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಿದ್ದು, 10 ಇನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳೊಂದಿಗೆ ಒಟ್ಟು 291 ರನ್‌ಗಳನ್ನು ಗಳಿಸಿದರು. ಉತ್ತಮ ಫಾರ್ಮ್ ಇದ್ದರೂ, ಗ್ಲಾಡಿಯೇಟರ್ಸ್ ತಂಡವು 10 ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ ಪ್ಲೇಆಫ್ ಹಂತಕ್ಕೆ ತಲುಪಲು ವಿಫಲವಾಯಿತು.