IND-A vs SL-A:ಮತ್ತೊಮ್ಮೆ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದ ವೈಭವ್ ಸೂರ್ಯವಂಶಿ!
ಭಾರತ ಎ ತಂಡದ ತ್ರಿಕೋನ ಸರಣಿಯಲ್ಲಿ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಸಿಕ್ಕ ಉತ್ತಮ ಆರಂಭದಲ್ಲಿ ಮತ್ತೊಮ್ಮೆ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಅವರು 14 ಎಸೆತಗಳಲ್ಲಿ 21 ರನ್ ಗಳಿಸಿದ ಬಳಿಕ ವಿಕೆಟ್ ಒಪ್ಪಿಸಿದ್ದಾರೆ. ಆ ಮೂಲಕ ಸತತ ಮೂರನೇ ಪಂದ್ಯದಲ್ಲಿಯೂ ಅವರು ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ.
ಮತ್ತೊಮ್ಮೆ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ವಿಫಲರಾದ ವೈಭವ್ ಸೂರ್ಯವಂಶಿ. -
ದಂಬೂಲ: ಪ್ರಸ್ತುತ ಸಾಗುತ್ತಿರುವ ತ್ರಿಕೋನ ಎ ಏಕದಿನ ಸರಣಿಯಲ್ಲಿ ಭಾರತ ಎ ತಂಡದ ಉದಯೋನ್ಮುಖ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryavanhi) ಅವರ ವೈಫಲ್ಯ ಮುಂದುವರಿದೆ. ತನ್ನ ಮೂರನೇ ಪಂದ್ಯದಲ್ಲಿಯೂ ಭರ್ಜರಿ ಆರಂಭ ಪಡೆದಿದ್ದ ವೈಭವ್ ಸೂರ್ಯವಂಶಿ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಆ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಶೆ ಮೂಡಿಸಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿಯೂ 15ರ ವಯಸ್ಸಿನ ಎಡಗೈ ಬ್ಯಾಟ್ಸ್‌ಮನ್ ಉತ್ತಮ ಆರಂಭ ಪಡೆದಿದ್ದರು. ಆದರೂ ಅವರು ಒಂದೇ ಒಂದು ಅರ್ಧಶತಕವನ್ನು ಸಿಡಿಸಲು ಸಾಧ್ಯವಾಗಿಲ್ಲದಿರುವುದು ಭಾರಿ ಬೇಸರವನ್ನು ಮೂಡಿಸಿದೆ.
ಮೊದಲನೇ ಓವರ್‌ನಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ವೈಭವ್ ಸೂರ್ಯವಂಶಿ, ಎರಡನೇ ಓವರ್‌ನಲ್ಲಿ ಚಮಿಕಾ ಗಣಶೇಖರ ಎದುರು ಮೊದಲನೇ ಎಸೆತದಲ್ಲಿಯೇ ಬೌಂಡರಿ ಬಾರಿಸಿದರು. ನಂತರ ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು ಹಾಗೂ ಕೊನೆಯ ಎಸೆತದಲ್ಲಿ ಮಿಡ್ ವಿಕೆಟ್ ಮೇಲೆ ಬೌಂಡರಿಯನ್ನು ಬಾರಿಸಿದರು. ನಂತರ ನಾಲ್ಕನೇ ಓವರ್ ಮೊದಲನೇ ಎಸೆದಲ್ಲಿಯೇ ಬೌಂಡರಿಯನ್ನು ಬಾರಿಸಿದ ವೈಭವ್, ಬಳಿಕ ಐದನೇ ಎಸೆತೆದಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ಆ ಮೂಲಕ 14 ಎಸೆತಗಳಲ್ಲಿ 21 ರನ್ ಗಳಿಗೆ 2026ರ ಐಪಿಎಲ್ ಟೂರ್ನಿಯ ಆರೆಂಜ್ ಕ್ಯಾಪ್ ಆಟಗಾರ ಇನಿಂಗ್ಸ್ ಮುಕ್ತಾಯವಾಯಿತು.
ವೈಭವ್ ಸೂರ್ಯವಂಶಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಒತ್ತಡ: ಗ್ರೇಮ್ ಸ್ವಾನ್!
ಅಂದ ಹಾಗೆ ಪ್ರಸ್ತುತ ನಡೆಯುತ್ತಿರುವ ಮೂರು ರಾಷ್ಟ್ರಗಳ ತ್ರಿಕೋನ ಸರಣಿಯಲ್ಲಿ ಸೂರ್ಯವಂಶಿ ಅವರಿಂದ ಇನ್ನು ದೊಡ್ಡ ಇನಿಂಗ್ಸ್ ಮೂಡಿ ಬಂದಿಲ್ಲ. ಅವರು ಆಡಿದ ಮೂರು ಪಂದ್ಯಗಳಿಂದ ಕ್ರಮವಾಗಿ 14, 44 ಮತ್ತು 21 ರನ್‌ಗಳನ್ನು ಗಳಿಸಿದ್ದಾರೆ. ಈ ಮೂರೂ ಇನಿಂಗ್ಸ್‌ಗಳಲ್ಲಿ ಅವರು ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರೂ ತಮ್ಮ ಭಯ ಮುಕ್ತ ಬ್ಯಾಟಿಂಗ್‌ನಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ.
Into the slot. Vaibhav Sooryavanshi sends it Into the stands. 😮💨💥
— Sony LIV (@SonyLIV) June 15, 2026
Watch #TalentTVCup LIVE on #SonyLIV & #SonySportsNetwork 📺 pic.twitter.com/5gCjn5rgyq
2026ರ ಜೂನ್ 9ರಂದು ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಪರ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮೊಹಮದ್ ಶಿರಾಜ್ ಮತ್ತು ಚಮಿಕಾ ಕರುಣಾರತ್ನೆ ಅವರ ಬೌಲಿಂಗ್‌ನಲ್ಲಿ ಮೂರು ಬೌಂಡರಿಗಳನ್ನು ಸಿಡಿಸಿ ಗಮನ ಸೆಳೆದರು. ಆದರೆ ಅವರ ಇನಿಂಗ್ಸ್ ಕೇವಲ 12 ಎಸೆತಗಳಲ್ಲೇ ಅಂತ್ಯವಾಯಿತು.
ಪಿಚ್ ಮಧ್ಯೆ ಓಡಿದ ವಿಪ್ರಜ್ ನಿಗಮ್; ಎದುರಾಳಿ ತಂಡಕ್ಕೆ 10 ರನ್ ಬೋನಸ್
ಇನ್‌ಸೈಡ್ ಶಾಟ್ ಆಡುವ ಪ್ರಯತ್ನದಲ್ಲಿ ವಿಫಲರಾದರು. ಪರಿಣಾಮವಾಗಿ, ಶ್ರೀಲಂಕಾ ಎ ತಂಡದ ನಾಯಕ ಸಹಾನ್ ಅರಚ್ಚಿಗೆ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಸೂರ್ಯವಂಶಿಯ ಇನಿಂಗ್ಸ್‌ಗೆ ತೆರೆ ಎಳೆದರು. ಇದಾದ ಬಳಿಕ ಜೂನ್ 11ರಂದು ಅಫ್ಘಾನಿಸ್ತಾನ ಎ ವಿರುದ್ಧದ ಎರಡನೇ ಪಂದ್ಯದಲ್ಲಿ ಸೂರ್ಯವಂಶಿ ತಮ್ಮ ಪ್ರತಿಭೆಯ ಝಲಕ್ ತೋರಿಸಿದರು. ಕೇವಲ 22 ಎಸೆತಗಳಲ್ಲಿ 44 ರನ್‌ಗಳ ಸಿಡಿಲಬ್ಬರದ ಇನಿಂಗ್ಸ್ ಆಡಿದ ಅವರು, 200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದರು.
ಒಂಬತ್ತು ಬೌಂಡರಿಗಳನ್ನು ಬಾರಿಸಿದ ಸೂರ್ಯವಂಶಿ ಅರ್ಧಶತಕದತ್ತ ದಾಪುಗಾಲಿಡುತ್ತಿದ್ದಂತೆ ಕಂಡುಬಂದರು. ಆದರೆ ಅಬ್ದುಲ್ಲಾ ಅಹ್ಮದ್ಜಾಯ್ ಅವರ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಇಶಾಕ್ ರಹೀಮಿ ಅವರಿಗೆ ಕ್ಯಾಚ್ ನೀಡಿ ಔಟಾದರು. ಆದರೂ ಅವರ ಆಕ್ರಮಣಕಾರಿ ಬ್ಯಾಟಿಂಗ್ ಭವಿಷ್ಯದ ಭರವಸೆಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.