ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG ಟಿ20ಐ ಸರಣಿಯ ಭಾರತ ತಂಡದಿಂದ ಹಾರ್ದಿಕ್‌ ಪಾಂಡ್ಯಗೆ ಕೊಕ್‌ ನೀಡಲು ಕಾರಣವೇನು?

ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಾಯದ ಕಾರಣ ಅಫ್ಘಾನಿಸ್ತಾನ ವಿರುದ್ದದ ಟಿ20ಐ ಸರಣಿಯ ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಪಾಂಡ್ಯ ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ಕಾಲಿನಲ್ಲಿ ನೋವಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತ ಟಿ20 ತಂಡದಿಂದ ಹಾರ್ದಿಕ್‌ಗೆ ಕೊಕ್‌ ನೀಡಲು ಕಾರಣವೇನು?

ಭಾರತ ಟಿ20 ತಂಡದಲ್ಲಿ ಹಾರ್ದಿಕ್‌ಗೆ ಏಕೆ ಸ್ಥಾನವಿಲ್ಲ? -

Profile
Ramesh Kote Sep 1, 2026 8:39 PM

ನವದೆಹಲಿ: ಭಾರತ ತಂಡಕ್ಕೆ ಮರಳುವ ಹಾರ್ದಿಕ್ ಪಾಂಡ್ಯ ಅವರ ಕನಸು ಮತ್ತೊಮ್ಮೆ ಭಗ್ನವಾಗಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE)ನಲ್ಲಿ ಪುನಶ್ಚೇತನ ಪಡೆಯುತ್ತಿದ್ದ ವೇಳೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಕಾಲಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಪಾಂಡ್ಯ ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಸಮಸ್ಯೆಯಿಲ್ಲದೆ ಸಂಪೂರ್ಣ ತೀವ್ರತೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಆದರೆ ಇದೀಗ ಕಾಲಿನಲ್ಲಿ ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ತಾತ್ಕಾಲಿಕವಾಗಿ ಬೌಲಿಂಗ್ ನಿಲ್ಲಿಸುವಂತೆ ಸೂಚಿಸಲಾಗಿದೆ.

ಇದರ ಪರಿಣಾಮವಾಗಿ ಸೆಪ್ಟೆಂಬರ್ 13ರಂದು ನವದೆಹಲಿಯಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಿಂದ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದಾರೆ. ಹಾಗಾಗಿ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಹಾರ್ದಿಕ್‌ ಪಾಂಡ್ಯ ಅವರನ್ನು ಹೊರಗಿಟ್ಟು ಬಿಸಿಸಿಐ ಇದೀಗ, 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ.

IND vs AFG: ಹಾರ್ದಿಕ್‌ ಪಾಂಡ್ಯ ಔಟ್‌; ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡ ಪ್ರಕಟ!

ತಂಡದ ಆಯ್ಕೆಗೂ ಮುನ್ನ ಟೈಮ್ಸ್ ಆಫ್ ಇಂಡಿಯಾಗೆ ಮೂಲವೊಂದು ನೀಡಿದ ಮಾಹಿತಿ ಪ್ರಕಾರ, “ಹಾರ್ದಿಕ್ ಪಾಂಡ್ಯ ಯಾವುದೇ ಅಸ್ವಸ್ಥತೆ ಇಲ್ಲದೆ ಸಂಪೂರ್ಣ ತೀವ್ರತೆಯಲ್ಲಿ ಅಭ್ಯಾಸ ನಡೆಸುತ್ತಿದ್ದರು. ಆದರೆ ಕಾಲಿನಲ್ಲಿ ಕಾಣಿಸಿಕೊಂಡ ನೋವಿನಿಂದಾಗಿ ಬೌಲಿಂಗ್‌ಗೆ ವಿರಾಮ ನೀಡುವಂತೆ ಅವರಿಗೆ ಸೂಚಿಸಲಾಗಿದೆ. ಅವರು ಶೀಘ್ರದಲ್ಲೇ ಬೌಲಿಂಗ್ ಆರಂಭಿಸಲಿದ್ದಾರೆ. ಆದರೆ ಅಫ್ಘಾನಿಸ್ತಾನ ಸರಣಿ ತುಂಬಾ ಸಮೀಪದಲ್ಲಿರುವುದರಿಂದ ಅಗತ್ಯ ಫಿಟ್‌ನೆಸ್ ಮಟ್ಟ ತಲುಪುವುದು ಕಷ್ಟ. ಬ್ಯಾಟಿಂಗ್ ಮತ್ತು ಚಲನೆಯ ವಿಚಾರದಲ್ಲಿ ಯಾವುದೇ ದೊಡ್ಡ ಸಮಸ್ಯೆ ಕಂಡುಬಂದಿಲ್ಲ. ಆದರೆ ಅವರಿಗೆ ಸಂಪೂರ್ಣ ಫಿಟ್‌ನೆಸ್ ಕ್ಲಿಯರೆನ್ಸ್ ನೀಡುವ ಮೊದಲು ಸಿಒಇ ಅಧಿಕಾರಿಗಳು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಬೇಕಿದೆ,” ಎಂದು ತಿಳಿಸಿದೆ.



ಮಾರ್ಚ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ

ಹಾರ್ದಿಕ್ ಪಾಂಡ್ಯ ಮೇ 24ರಂದು ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ ಟೂರ್ನಿಯಲ್ಲಿ ಆಡಿದ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನೂ ಆಡಿಲ್ಲ. ಭಾರತ ತಂಡದ ಪರ ಅವರ ಕೊನೆಯ ಪಂದ್ಯ ಮಾರ್ಚ್ 8ರಂದು ನಡೆದ ಟಿ20 ವಿಶ್ವಕಪ್ ಫೈನಲ್ ಆಗಿತ್ತು.

ಆ ಬಳಿಕ 32ರ ವಯಸ್ಸಿನ ಪಾಂಡ್ಯ ಅಫ್ಘಾನಿಸ್ತಾನ ವಿರುದ್ಧದ ಭಾರತದ ತವರಿನ ವೈಟ್-ಬಾಲ್ ಪಂದ್ಯಗಳ ಜತೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳನ್ನೂ ತಪ್ಪಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಗಾಯದ ಸಮಸ್ಯೆ ಎದುರಾಗಿರುವುದರಿಂದ ಅವರ ಅಂತಾರಾಷ್ಟ್ರೀಯ ಕಂಬ್ಯಾಕ್ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಬೌಲಿಂಗ್ ಫಿಟ್‌ನೆಸ್‌ ಮೇಲೆ ಗಮನ

ಸದ್ಯ ಹಾರ್ದಿಕ್ ಪಾಂಡ್ಯ ಅವರ ಪ್ರಮುಖ ಸಮಸ್ಯೆ ಬೌಲಿಂಗ್‌ಗೆ ಸಂಪೂರ್ಣವಾಗಿ ಸಿದ್ಧರಾಗುವುದು. ಬ್ಯಾಟಿಂಗ್ ಅಥವಾ ಓಡಾಟದಲ್ಲಿ ಯಾವುದೇ ಗಮನಾರ್ಹ ಸಮಸ್ಯೆ ಇಲ್ಲದಿದ್ದರೂ, ರಾಷ್ಟ್ರೀಯ ತಂಡಕ್ಕೆ ಮರಳಲು ಸಿಒಇಯಿಂದ ಸಂಪೂರ್ಣ ಫಿಟ್‌ನೆಸ್ ಕ್ಲಿಯರೆನ್ಸ್ ಪಡೆಯುವುದು ಅಗತ್ಯವಾಗಿದೆ.

IND vs AFG: ಭಾರತ ಟಿ20 ತಂಡದಲ್ಲಿ ಮೇಜರ್‌ ಸರ್ಜರಿ, 7 ಮಂದಿಗೆ ಕೊಕ್‌! ಕಂಪ್ಲಿಟ್‌ ಲಿಸ್ಟ್‌ ಇಲ್ಲಿದೆ...

ಹಾರ್ದಿಕ್ ಸ್ಥಾನಕ್ಕೆ ನಿತೀಶ್ ಕುಮಾರ್ ರೆಡ್ಡಿ

ಹಾರ್ದಿಕ್ ಪಾಂಡ್ಯ ಹೊರಗುಳಿದಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ರೆಡ್ಡಿ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಪಿಚ್ ಮತ್ತು ಪರಿಸ್ಥಿತಿಗಳು ವೇಗದ ಬೌಲಿಂಗ್ ಆಲ್‌ರೌಂಡರ್‌ಗೆ ಅನುಕೂಲಕರವಾಗಿದ್ದರೆ, ನಿತೀಶ್ ರೆಡ್ಡಿ ಅವರನ್ನು ಎಂಟನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯಿದೆ. ಇಲ್ಲದಿದ್ದರೆ, ತಂಡದ ಮ್ಯಾನೇಜ್‌ಮೆಂಟ್ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಬಹುದು. ಆದರೆ ವಾಷಿಂಗ್ಟನ್ ಅವರ ಲಭ್ಯತೆ ಕೂಡ ಫಿಟ್‌ನೆಸ್‌ಗೆ ಒಳಪಟ್ಟಿದೆ.

ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್‌ಪ್ರೀತ್ ಬುಮ್ರಾ* (ಫಿಟ್‌ನೆಸ್‌ ಅವಲಂಬನೆ), ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ* (ಫಿಟ್‌ನೆಸ್‌ ಅವಲಂಬನೆ)