ತಾನು ನಾಯಕನಾದ ಬಳಿಕ ರೋಹಿತ್-ಕೊಹ್ಲಿಯ ವರ್ತನೆ ಹೇಗಿದೆ ಎಂದು ತಿಳಿಸಿದ ಶುಭಮನ್ ಗಿಲ್!
ಭಾರತ ಏಕದಿನ ತಂಡದ ನಾಯಕನಾದ ಬಳಿಕ ಮಾಜಿ ನಾಯಕರಾದ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗಿನ ಭಾಂದವ್ಯ ಹೇಗಿದೆ ಎಂದು ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಅಕ್ಟೋಬರ್ 19 ರಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ಶುಭಮನ್ ಗಿಲ್ ಹೇಳಿಕೆ. -

ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ (IND vs AUS) ನಿಮಿತ್ತ ಭಾರತ ಒಡಿಐ ತಂಡಕ್ಕೆ ನೂತನ ನಾಯಕನಾದ ಬಳಿಕ ಮಾಜಿ ನಾಯಕರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರೊಂದಿಗಿನ ಸಂಬಂಧ ಹೇಗಿದೆ ಎಂದು ಶುಭಮನ್ ಗಿಲ್ (Shubman Gill) ಬಹಿರಂಗಪಡಿಸಿದ್ದಾರೆ. ನಾನು ನಾಯಕನಾದ ಬಳಿಕಯೂ ನಮ್ಮ ನಡುಎ ಅದೇ ರೀತಿಯ ಬಾಂಧವ್ಯ ಇದೆ ಎಂದು ಹೇಳಿದ್ದಾರೆ. ಅಕ್ಟೋಬರ್ 19 ರಂದು ಮೊದಲನೇ ಏಕದಿನ ಪಂದ್ಯ ಪರ್ತ್‌ನ ಅಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇದೇ ಮೊದಲ ಬಾರಿ ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಲಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಇದೇ ಮೊದಲ ಬಾರಿ ಕೊಹ್ಲಿ ಹಾಗೂ ರೋಹಿತ್ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಇಬ್ಬರೂ ಮಾಜಿ ನಾಯಕರ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ಗಿಲ್‌ಗೆ ಸವಾಲಾಗಿದೆ. ಏಕೆಂದರೆ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿದ ಅಪಾರ ಅನುಭವವನ್ನು ಹೊಂದಿದ್ದಾರೆ.
AUS vs IND 1st ODI: ಭಾರತ-ಆಸೀಸ್ ಮೊದಲ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
ನಾಯಕತ್ವದ ಬದಲಾವಣೆಯ ಬಳಿಕ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಜೊತೆಗಿನ ಸಂಬಂಧದ ಮೇಲೆ ಏನಾದರೂ ಪರಿಣಾಮ ಬೀರಲಿದೆಯಾ? ಎಂದು 26ರ ವಯಸ್ಸಿನ ಆಟಗಾರನಿಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್, ರೋಹಿತ್ ಮತ್ತು ವಿರಾಟ್ ಇಬ್ಬರೂ ತಮ್ಮ ಅನುಭವವನ್ನು ಹಂಚಿಕೊಳ್ಳಲು ಮತ್ತು ಮಾರ್ಗದರ್ಶನ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.
"ನಮ್ಮ ಬಗ್ಗೆ ಹೊರಗಡೆ ವಿಭಿನ್ನ ನಿರೂಪಣೆ ಇದೆ ಎಂದು ನಾನು ಭಾವಿಸುತ್ತೇನೆ, ಆದರೆ ನಮ್ಮ ನಡುವೆ ಯಾವುದೇ ಬದಲಾವಣೆಯಾಗಿಲ್ಲ. ಮೊದಲು ಹೇಗಿತ್ತು, ಅದೇ ರೀತಿ ಈಗಲೂ ಇದೆ. ಇದು ನನಗೆ ತುಂಬಾ ಸಹಾಯವಾಗಲಿದೆ. ಅವರ ತಮ್ಮ ಅನುಭವ, ಇಷ್ಟು ವರ್ಷಗಳ ಕಾಲ ಅವರು ಕಲಿತಿರುವ ಸಂಗತಿಗಳು, ನಾನು ಏನಾದರೂ ತಪ್ಪು ಮಾಡಿದರೂ ಅವರು ನನಗೆ ಹೇಳಿದ್ದಾರೆ ಹಾಗೂ ಮಾರ್ಗದರ್ಶನವನ್ನು ನೀಡಲಿದ್ದಾರೆ. ನನಗೆ ಏನಾದರೂ ಸಹಾಯ ಬೇಕಿದ್ದರೆ ಅವರ ಬಳಿ ನೇರವಾಗಿ ಕೇಳುತ್ತೇನೆ. ನನ್ನ ನಿರ್ಧಾರಗಳು ಅವರನ್ನು ಕೂಡ ಅವಲಂಬಿಸಿರುತ್ತದೆ," ಎಂದು ಶುಭಮನ್ ಗಿಲ್ ಮೊದಲನೇ ಏಕದಿನ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
IND vs AUS: ಆಸ್ಟ್ರೇಲಿಯಾ ಒಡಿಐ ಸರಣಿಯಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಶುಭಮನ್ ಗಿಲ್!
ಬಾಲ್ಯದಿಂದಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನನಗೆ ಸ್ಪೂರ್ತಿಯಾಗಿದ್ದಾರೆ. ಇವರನ್ನು ನೋಡಿಕೊಂಡು ಬೆಳೆದಿದ್ದೇನೆ. ಭಾರತ ಏಕದಿನ ತಂಡದ ನಾಯಕನಾಗಿ ಅವರ ಸ್ಥಾನವನ್ನು ತುಂಬುವುದು ಸುಲಭವಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ನಾಯಕರಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ.
"ನಾನು ಬಾಲ್ಯದಿಂದಲೂ ಈ ಆಟಗಾರರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಬಂದಿದ್ದೇನೆ. ಅವರು ಆಟದಲ್ಲಿ ತೋರಿದ ಹಸಿವು ಎಲ್ಲರಿಗೂ ಸ್ಪೂರ್ತಿಯಾಗಿದೆ. ಪಂದ್ಯದಲ್ಲಿ ಇಂಥಾ ದಿಗ್ಗಜರ ಉಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈ ಸರಣಿ ಸ್ಮರಣೀಯವಾಗಲಿದೆ ಏಕೆಂದರೆ ಈ ದಿಗ್ಗಜರಿಂದ ನಾನು ಸಾಕಷ್ಟು ಕಲಿಯಲು ಪ್ರಯತ್ನಿಸುತ್ತೇನೆ. ಒಂದು ವೇಳೆ ನನಗೆ ಏನಾದರೂ ಕಠಿಣ ಸಂದರ್ಭ ಎದುರಾದರೆ, ಯಾವುದೇ ಸಂಕೋಚವಿಲ್ಲದೆ ನಾನು ಹಿರಿಯ ಆಟಗಾರರ ಬಳಿ ಸಲಹೆ ಕೇಳುತ್ತೇನೆ," ಎಂದು ಗಿಲ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್.