ENG vs IND: 'ಮುಂದಿನ ಪಂದ್ಯವನ್ನು ಗೆದ್ದು ನಂ 1 ಸ್ಥಾನಕ್ಕೇರುವುದು ನಮ್ಮ ಗುರಿ'-ಭಾರತಕ್ಕೆ ಹ್ಯಾರಿ ಬ್ರೂಕ್ ವಾರ್ನಿಂಗ್!
ಇಂಗ್ಲೆಂಡ್ ಹಾಗೂ ಭಾರತ ಹಾಗೂ ನಡುವಣ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯ ಜುಲೈ 11 ರಂದು ಸೌತಾಮ್ಟನ್‌ನಲ್ಲಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಮಾಜಿ ನಾಯಕ ಹ್ಯಾರಿ ಬ್ರೂಕ್ ಅವರು ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತವನ್ನು ಮಣಿಸಿ ನಂ. 1 ಸಾನಕ್ಕೇರುತ್ತೇವೆಂದ ಹ್ಯಾರಿ ಬ್ರೂಕ್. -
ಸೌತ್‌ಹ್ಯಾಂಪ್ಟನ್: ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಜುಲೈ 11 ರಂದು ನಡೆಯುವ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ (IND vs ENG) ಕಾದಾಟ ನಡೆಸಲು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸಜ್ಜಾಗುತ್ತಿವೆ. ಈಗಾಗಲೇ 4 ಪಂದ್ಯಗಳನ್ನು ಗೆದ್ದಕೊಂಡು ಟಿ20ಐ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿರುವ ಆಂಗ್ಲರು, ಇದಿಗ ಕೊನೆಯ ಪಂದ್ಯವನ್ನು ಗೆದ್ದು ಟಿ20ಐ ಶ್ರೇಯಾಂದಲ್ಲಿ ಅಗ್ರ ಸ್ಥಾನಕ್ಕೇರಲು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ (Harry Brook) ಎದುರು ನೋಡುತ್ತಿದ್ದಾರೆ.
ಬ್ರಿಸ್ಟಲ್‌ನಲ್ಲಿ ನಡೆದಿದ್ದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಇದೀಗ ಸೌತ್‌ಹ್ಯಾಂಪ್ಟನ್‌ನಲ್ಲಿ ನಡೆಯಲಿರುವ ಕೊನೆಯ ಪಂದ್ಯವನ್ನೂ ಗೆದ್ದರೆ, ಐಸಿಸಿ ಪುರುಷರ ಟಿ20ಐ ಶ್ರೇಯಾಂಕದಲ್ಲಿ ಭಾರತವನ್ನು ಹಿಂದಿಕ್ಕಿ ಇಂಗ್ಲೆಂಡ್ ಅಗ್ರ ಸ್ಥಾನಕ್ಕೆ ಲಗ್ಗೆ ಇಡಲಿದೆ.
"ಮುಂದಿನ ಪಂದ್ಯವನ್ನು ಗೆದ್ದರೆ ನಾವು ವಿಶ್ವದ ನಂ.1 ಟಿ20ಐ ತಂಡವಾಗುತ್ತೇವೆ ಎಂದು ನಮಗೆ ತಿಳಿಸಲಾಗಿದೆ. ಅದು ನಮ್ಮ ಪ್ರಮುಖ ಗುರಿಗಳಲ್ಲಿ ಒಂದಾಗಿದೆ," ಎಂದು ಬ್ರಿಸ್ಟಲ್ ಗೆಲುವಿನ ಬಳಿಕ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಹೇಳಿದ್ದಾರೆ.
IND vs ENG: ಸಂಜು ಇನ್, ಕಿಶನ್ ಔಟ್? ಭಾರತದ ಪ್ಲೇಯಿಂಗ್ XIನಲ್ಲಿ 3 ಬದಲಾವಣೆ ಸಾಧ್ಯತೆ!
"ಭಾರತ ಅತ್ಯಂತ ಬಲಿಷ್ಠ ತಂಡ. ಕಳೆದ ಕೆಲ ವರ್ಷಗಳಲ್ಲಿ ಅವರು ತೋರಿದ ಮಟ್ಟದ ಪ್ರದರ್ಶನವನ್ನು ಈ ಸರಣಿಯಲ್ಲಿ ನೀಡದಿರಬಹುದು. ಆದರೆ ನಾವು ನಮ್ಮ ಯೋಜನೆಗಳನ್ನು ಅತ್ಯುತ್ತಮವಾಗಿ ಕಾರ್ಯಗತಗೊಳಿಸಿರುವ ರೀತಿಯ ಬಗ್ಗೆ ತುಂಬಾ ಸಂತೋಷವಾಗಿದೆ," ಎಂದು ಅವರು ತಿಳಿಸಿದ್ದಾರೆ.
"ಭಾರತವನ್ನು 4-0 ಅಂತರದಲ್ಲಿ ಸೋಲಿಸುವುದು ಅತ್ಯಂತ ವಿಶೇಷ ಸರಣಿ ಗೆಲುವಾಗಲಿದೆ. ಅದಕ್ಕಿಂತಲೂ ದೊಡ್ಡ ಸಾಧನೆ ಎಂದರೆ ವಿಶ್ವದ ನಂ.1 ಟಿ20 ತಂಡವಾಗುವುದು. ಅದೇ ನಮ್ಮ ಪ್ರಮುಖ ಗುರಿಯಾಗಿದೆ. ಕೊನೆಯ ಪಂದ್ಯದಲ್ಲೂ ಮೈದಾನಕ್ಕಿಳಿದು ಮತ್ತೊಮ್ಮೆ ಭಾರತವನ್ನು ದೊಡ್ಡ ಅಂತರದಿಂದ ಮಣಿಸಲು ನಾವು ಪ್ರಯತ್ನಿಸುತ್ತೇವೆ," ಎಂದು ಹ್ಯಾರಿ ಬ್ರೂಕ್ ಹೇಳಿದ್ದಾರೆ.
ಈ ಸರಣಿಯಲ್ಲಿ ವಿವಿಧ ಮೈದಾನಗಳ ಪರಿಸ್ಥಿತಿಗಳಿಗೆ ತ್ವರಿತವಾಗಿ ಹೊಂದಿಕೊಂಡಿರುವ ಸಾಮರ್ಥ್ಯವೇ ಇಂಗ್ಲೆಂಡ್ ಯಶಸ್ಸಿನ ಪ್ರಮುಖ ಕಾರಣ ಎಂದು ಬ್ರೂಕ್ ಅಭಿಪ್ರಾಯಪಟ್ಟಿದ್ದಾರೆ. ಇದೇ ಅಂಶ ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ವಿರುದ್ಧ ನಿರ್ಣಾಯಕ ವ್ಯತ್ಯಾಸವನ್ನು ಸೃಷ್ಟಿಸಿದೆ ಎಂದರು.
IND vs ENG ಟಿ20ಐ ಸರಣಿಯಲ್ಲಿ ಭಾರತ ಮಾಡುತ್ತಿರುವ ದೊಡ್ಡ ತಪ್ಪನ್ನು ರಿವೀಲ್ ಮಾಡಿದ ಸಬಾ ಕರಿಮ್!
"ಈಗ ನಾವು ಸೌತ್‌ಹ್ಯಾಂಪ್ಟನ್‌ಗೆ ತೆರಳಲಿದ್ದೇವೆ. ಅಲ್ಲಿ ಮೈದಾನದ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಬೇಗ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕು. ಈ ಸರಣಿಯುದ್ದಕ್ಕೂ ನಾವು ಅದನ್ನು ಅತ್ಯುತ್ತಮವಾಗಿ ಮಾಡಿದ್ದೇವೆ," ಎಂದು ಆಂಗ್ಲರ ನಾಯಕ ಬ್ರೂಕ್ ಹೇಳಿದ್ದಾರೆ.
ಒಂದೇ ದಿನ ಇಂಗ್ಲೆಂಡ್ vs ನಾರ್ವೆ ನಡುವೆ ಕ್ವಾರ್ಟರ್‌ಫೈನಲ್
ಸೌತ್‌ಹ್ಯಾಂಪ್ಟನ್‌ನಲ್ಲಿ ನಡೆಯಲಿರುವ ಅಂತಿಮ ಟಿ20 ಪಂದ್ಯ ನಡೆಯುವ ದಿನವೇ, ಫಿಫಾ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ನಾರ್ವೆ ವಿರುದ್ಧ ಸೆಣಸಲಿದೆ. ಹೀಗಾಗಿ ಕ್ರಿಕೆಟ್ ತಂಡದ ಆಟಗಾರರ ಗಮನವೂ ಫುಟ್‌ಬಾಲ್ ಪಂದ್ಯದ ಮೇಲಿರಲಿದೆ ಎಂದು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಹೇಳಿದ್ದಾರೆ.
"ನಾವು ವಿಶ್ವದ ನಂ.1 ಟಿ20 ತಂಡವಾಗುವುದು ಮತ್ತು ಇಂಗ್ಲೆಂಡ್ ಫುಟ್‌ಬಾಲ್ ತಂಡ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವುದು ಒಂದೇ ದಿನ ನಡೆದರೆ ಅದಕ್ಕಿಂತ ಸಂತೋಷದ ಸಂಗತಿ ಮತ್ತೊಂದಿಲ್ಲ. ನಾವು ಖಂಡಿತವಾಗಿಯೂ ಫುಟ್‌ಬಾಲ್ ಪಂದ್ಯದ ಮೇಲೆ ನಿಗಾ ಇಡುತ್ತೇವೆ ಮತ್ತು ಅದನ್ನು ವೀಕ್ಷಿಸುತ್ತೇವೆ," ಎಂದು ಬಲಗೈ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ.