ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: ಭಾರತದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ ಆಕಾಶ್‌ ಚೋಪ್ರಾ!

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಬಹುತೇಕ ಖಚಿತ ಎಂದು ಮಾಜಿ ಟೆಸ್ಟ್‌ ಆರಂಭಿಕ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಕಿಬ್ ನಬಿ ಬದಲಿಗೆ ಮೊಹಮ್ಮದ್ ಸಿರಾಜ್ ಅಥವಾ ಕುಲ್ದೀಪ್ ಯಾದವ್ ಆಡುವ ಸಾಧ್ಯತೆಯಿದ್ದು, ಬೌಲಿಂಗ್ ವಿಭಾಗದ ಸಮತೋಲನವೇ ಆಯ್ಕೆಯ ಪ್ರಮುಖ ಅಂಶವಾಗಿದೆ.

ಭಾರತ ತಂಡದಲ್ಲಿ ಒಂದು ಬದಲಾವಣೆ ಸೂಚಿಸಿದ ಆಕಾಶ ಚೋಪ್ರಾ!

ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ ಇದೆ ಎಂದ ಆಕಾಶ್‌ ಚೋಪ್ರಾ! -

Profile
Ramesh Kote Nov 6, 2026 12:38 PM

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ (IND vs NZ) ಗೆಲುವು ಸಾಧಿಸಿರುವ ಭಾರತ ತಂಡ ಇದೀಗ ನವೆಂಬರ್ 7ರಂದು ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದ ಆಡುವ ಬಳಗದಲ್ಲಿ ಯಾವ ಬದಲಾವಣೆಗಳಾಗಬಹುದು ಎಂಬ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ (Aaakash Chopra) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎರಡನೇ ಪಂದ್ಯಕ್ಕೂ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಲಭ್ಯವಿರುವುದಿಲ್ಲ. ಅವರು ಮೊದಲ ಏಕದಿನ ಪಂದ್ಯದಲ್ಲೂ ಆಡಿರಲಿಲ್ಲ. ಆದರೆ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವೇಗಿ ಮೊಹಮ್ಮದ್ ಸಿರಾಜ್ ಇದೀಗ ತಂಡಕ್ಕೆ ಲಭ್ಯವಾಗಿದ್ದಾರೆ. ಭಾರತ ಎ ತಂಡದ ಪರ ಆಡಿದ ಪಂದ್ಯಗಳನ್ನು ಮುಗಿಸಿ ತಡವಾಗಿ ಆಗಮಿಸಿದ್ದರಿಂದ ಮೊದಲ ಪಂದ್ಯಕ್ಕೆ ಅವರು ಲಭ್ಯವಿರಲಿಲ್ಲ ಎಂದು ಚೋಪ್ರಾ ತಿಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಆರು ಓವರ್‌ಗಳಲ್ಲಿ 33 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾಗಿದ್ದ ಆಕಿಬ್ ನಬಿ ಅವರನ್ನು ಎರಡನೇ ಪಂದ್ಯದಲ್ಲಿ ಕೈಬಿಡುವ ಸಾಧ್ಯತೆಯಿದೆ. ಅವರ ಬದಲಿಗೆ ಸಿರಾಜ್ ಅಥವಾ ಕುಲ್ದೀಪ್ ಯಾದವ್ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

IND vs NZ: ಎರಡನೇ ಒಡಿಐಗೂ ಮುನ್ನ ನ್ಯೂಜಿಲೆಂಡ್‌ಗೆ ಮತ್ತೊಂದು ಆಘಾತ, ಡೆವೋನ್‌ ಕಾನ್ವೆ ಔಟ್‌!

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಚೋಪ್ರಾ, "ನಿತೀಶ್ ಕುಮಾರ್ ರೆಡ್ಡಿ ಈ ಪಂದ್ಯಕ್ಕೆ ಲಭ್ಯವಿಲ್ಲ. ಆದರೆ ಅವರು ಕಳೆದ ಪಂದ್ಯದಲ್ಲೂ ಆಡಿರಲಿಲ್ಲ. ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿ ಅದೇ ಆಟಗಾರರು ಮುಂದುವರಿಯಬಹುದು. ಆದರೆ ತಂಡದಲ್ಲಿ ಒಂದು ಬದಲಾವಣೆಯಾಗುವುದು ಬಹುತೇಕ ಖಚಿತ. ಮೊಹಮ್ಮದ್ ಸಿರಾಜ್ ಈಗ ಲಭ್ಯವಿದ್ದಾರೆ. ಅವರು ಹಿಂದಿನ ಪಂದ್ಯಕ್ಕೆ ಲಭ್ಯವಿರಲಿಲ್ಲ ಎಂಬುದು ತಿಳಿದುಬಂದಿದೆ," ಎಂದು ಹೇಳಿದ್ದಾರೆ.‌

ಆಕಿಬ್ ನಬಿ ಬದಲಿಗೆ ಯಾರಿಗೆ ಸ್ಥಾನ?

ಮೊಹಮ್ಮದ್ ಸಿರಾಜ್ ತಂಡಕ್ಕೆ ಮರಳಿದರೆ ಭಾರತ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ಇದು ತಂಡದ ಬೌಲಿಂಗ್ ಸಮತೋಲನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅನ್ಶುಲ್‌ ಕಾಂಬೋಜ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ, ಕುಲ್ದೀಪ್ ಯಾದವ್ ಅವರನ್ನು ಒಂಬತ್ತನೇ ಕ್ರಮಾಂಕದಲ್ಲಿ ಆಡಿಸುವ ಅವಕಾಶವಿದೆ ಎಂದು ಚೋಪ್ರಾ ಹೇಳಿದ್ದಾರೆ. ಆದರೆ ಗುರ್ನೂರ್‌ ಬ್ರಾರ್ ಉತ್ತಮ ಪ್ರದರ್ಶನ ನೀಡಿರುವುದರಿಂದ ಅವರನ್ನು ತಂಡದಿಂದ ಕೈಬಿಡುವುದು ಸುಲಭವಲ್ಲ ಎಂದಿದ್ದಾರೆ.

IND vs NZ 1st ODI: ವಿರಾಟ್‌ ಕೊಹ್ಲಿ ಆರ್ಭಟದಿಂದ ಭಾರತಕ್ಕೆ ಸುಲಭ ತುತ್ತಾದ ನ್ಯೂಜಿಲೆಂಡ್‌!

"ಸಿರಾಜ್ ಭಾರತ ಎ ತಂಡದ ಪಂದ್ಯ ಮುಗಿಸಿ ಬಂದಿದ್ದರಿಂದ ಮೊದಲ ಪಂದ್ಯಕ್ಕೆ ಲಭ್ಯವಿರಲಿಲ್ಲ. ಇದೀಗ ಅವರು ಲಭ್ಯವಿದ್ದರೆ ಒಂದು ಅಥವಾ ಎರಡು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಆಕಿಬ್ ನಬಿ ಹೊರಗುಳಿದು ಸಿರಾಜ್ ತಂಡಕ್ಕೆ ಬರಬಹುದು," ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಭಾರತದ ಮುಂದಿರುವ ಆಯ್ಕೆಗಳೇನು?

ಸಿರಾಜ್ ಬದಲಿಗೆ ಕುಲ್ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮತ್ತೊಂದು ಆಯ್ಕೆಯನ್ನೂ ಚೋಪ್ರಾ ಮುಂದಿಟ್ಟಿದ್ದಾರೆ. ಒಂದು ವೇಳೆ ಕುಲ್ದೀಪ್ ತಂಡಕ್ಕೆ ಬಂದರೆ ಭಾರತದ ಬೌಲಿಂಗ್ ಸಂಯೋಜನೆ ಬದಲಾಗಲಿದೆ.

"ನಾಲ್ವರು ವೇಗದ ಬೌಲರ್‌ಗಳೊಂದಿಗೆ ಆಡಲು ಭಾರತ ಬಯಸುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ. ಅನ್ಶುಲ್ ಕಾಂಬೋಜ್ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು. ಹೀಗಾಗಿ ಕುಲ್ದೀಪ್ ಯಾದವ್ ಅವರನ್ನು ಒಂಬತ್ತನೇ ಕ್ರಮಾಂಕದಲ್ಲಿ ಆಡಿಸಬಹುದೇ ಎಂಬುದನ್ನು ತಂಡ ನಿರ್ಧರಿಸಬೇಕು. ಆದರೆ ಗುರ್ನೂರ್ ಬ್ರಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರನ್ನು ಹೊರಗಿಡುವುದು ಹೇಗೆ?" ಎಂದು ಚೋಪ್ರಾ ಪ್ರಶ್ನಿಸಿದ್ದಾರೆ.

"ಆಕಿಬ್ ನಬಿ ಬದಲಿಗೆ ಸಿರಾಜ್ ಬರುವ ಬದಲು ಕುಲ್ದೀಪ್ ಯಾದವ್ ಕೂಡ ತಂಡಕ್ಕೆ ಬರಬಹುದು. ಇದು ಕೂಡ ಸಾಧ್ಯತೆಯಿದೆ. ಒಂದು ಬದಲಾವಣೆ ಬಹುತೇಕ ಖಚಿತವಾಗಿದೆ. ಆಕಿಬ್ ಹೊರಗುಳಿಯಲಿದ್ದು, ಅವರ ಸ್ಥಾನಕ್ಕೆ ಸಿರಾಜ್ ಅಥವಾ ಕುಲ್ದೀಪ್ ಯಾದವ್ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ತಂಡ ನಿರ್ಧರಿಸಬೇಕಿದೆ‌," ಎಂದು ಅವರು ಹೇಳಿದ್ದಾರೆ.