IND vs NZ: ಕೆಎಲ್ ರಾಹುಲ್ ಶತಕ ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ನ್ಯೂಜಿಲೆಂಡ್!
India vs New Zealand 2nd ODI Highlights: ಕೆಎಲ್ ರಾಹುಲ್ ಶತಕದ ಹೊರತಾಗಿಯೂ ಡ್ಯಾರಿಲ್ ಮಿಚೆಲ್ ಶತಕದ ಬಲದಿಂದ ನ್ಯೂಜಿಲೆಂಡ್‌ತಂಡ, ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಕಿವೀಸ್ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿದೆ.
ಭಾರತದ ವಿರುದ್ಧ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಜಯ. -
ರಾಜ್‌ಕೋಟ್: ಕೆಎಲ್ ರಾಹುಲ್ (KL Rahul) ಅವರ ಶತಕದ ಹೊರತಾಗಿಯೂ ಭಾರತ ತಂಡ, ಎರಡನೇ ಏಕದಿನ ಪಂದ್ಯದಲ್ಲಿ (IND vs NZ) ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಡ್ಯಾರಿಲ್ ಮಿಚೆಲ್ (Darly Mitchell) ಅವರ ಭರ್ಜರಿ ಶತಕದ ಬಲದಿಂದ ನ್ಯೂಜಿಲೆಂಡ್ ತಂಡ, ರಾಜ್‌ಕೋಟ್‌ನಲ್ಲಿ ಆತಿಥೇಯರಿಗೆ ತಿರುಗೇಟು ನೀಡಿತು. ಇದರೊಂದಿಗೆ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಏಕದಿನ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ. ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಜನವರಿ 18 ರಂದು ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡ ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ.
ಬುಧವಾರ ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 285 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ, ಆರಂಭಿಕ ಹಿನ್ನಡೆ ಅನುಭವಿಸಿದರೂ ಡ್ಯಾರಿಲ್ ಮಿಚೆಲ್ (131* ರನ್) ಶತಕ ಹಾಗೂ ವಿಲ್ ಯಂಗ್ (87) ಅವರ ಅರ್ಧಶತಕದ ಬಲದಿಂದ 47.3 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆ ಮೂಲಕ ಏಕದಿನ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಕಿವೀಸ್ ಪರ ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ ಡ್ಯಾರಿಲ್ ಮಿಚೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IND vs NZ: ಭಾರತ ತಂಡದಲ್ಲಿರುವ ರಾಹುಲ್ ದ್ರಾವಿಡ್ ಅನ್ನು ಹೆಸರಿಸಿದ ಸುನೀಲ್ ಗವಾಸ್ಕರ್!
ಭಾರತ ತಂಡ ನೀಡಿದ್ದ ಗುರಿ ಹಿಂಬಾಲಿಸಿದ್ದ ಕಿವೀಸ್, ಬಹುಬೇಗ ಡೆವೋನ್ ಕಾನ್ವೆ (16) ಹಾಗೂ ಹೆನ್ರಿ ನಿಕೋಲ್ಸ್ (10) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ಪ್ರವಾಸಿಗರು 46 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ಡ್ಯಾರಿಲ್ ಮಿಚೆಲ್ ಹಾಗೂ ವಿಲ್ ಯಂಗ್ 162 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ಪಂದ್ಯದ ದಿಕ್ಕನ್ನು ಬದಲಿಸಿದರು. ಈ ಜೋಡಿಯನ್ನು ಬೇರ್ಪಡಿಸಲು ಭಾರತದ ಬೌಲರ್‌ಗಳಿಂದ ಜಾಸ್ತಿ ಹೊತ್ತು ಸಾಧ್ಯವಾಗಲಿಲ್ಲ. ಭರ್ಜರಿ ಬ್ಯಾಟ್ ಮಾಡಿದ ಯಂಗ್, 98 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 87 ರನ್ ಗಳಿಸಿ ಶತಕದಂಚಿನಲ್ಲಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
New Zealand win the 2nd ODI in Rajkot and level the series 1⃣-1⃣
— BCCI (@BCCI) January 14, 2026
Scorecard ▶️ https://t.co/x1fEenI0xl#TeamIndia | #INDvNZ | @IDFCFIRSTBank pic.twitter.com/XZioDArcsG
ಡ್ಯಾರಿಲ್ ಮಿಚೆಲ್ ಶತಕ
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಡ್ಯಾರಿಲ್ ಮಿಚೆಲ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಕೊನೆಯವರೆಗೂ ಬ್ಯಾಟ್ ಮಾಡಿದ ಅವರು 117 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 131 ರನ್ ಗಳಿಸಿದರು. ಅಲ್ಲದೆ, ಗ್ಲೆನ್ ಫಿಲಿಪ್ಸ್ ಜೊತೆ 78 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಕಿವೀಸ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದರು. ಕೊನೆಯಲ್ಲಿ ಫಿಲಿಪ್ಸ್ ಕೂಡ ಅಜೇಯ 32 ರನ್ ಗಳಿಸಿದರು.
Innings Break!
— BCCI (@BCCI) January 14, 2026
A magnificent knock of 112* by @klrahul propels #TeamIndia to a total of 284/7.
Scorecard - https://t.co/wQyViXYO1y #TeamIndia #INDvNZ #2ndODI @IDFCfirstbank pic.twitter.com/3HtQrzTU39
284 ರನ್ ಕಲೆ ಹಾಕಿದ್ದ ಭಾರತ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಕೆಎಲ್ ರಾಹುಲ್ ಶತಕ ಹಾಗೂ ಶುಭಮನ್ ಗಿಲ್ ಅವರ ಅರ್ಧಶತಕಗಳ ಬಲದಿಂದ, ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಲೆಹಾಕಿತ್ತು. ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ ಹಾಗೂ ಗಿಲ್ ಮೊದಲನೇ ವಿಕೆಟ್‌ಗೆ 70 ರನ್‌ಗಳನ್ನು ಕಲೆ ಹಾಕಿ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. 24 ರನ್‌ಗಳನ್ನು ಕಲೆ ಹಾಕಿ ಉತ್ತಮ ಆರಂಭ ಪಡೆದರೂ ಕ್ರಿಸ್ಟಿಯನ್ ಕ್ಲಾರ್ಕ್ ಅವರ ಬೌಲಿಂಗ್‌ನಲ್ಲಿ ಔಟ್ ಆದರು.
💯
— BCCI (@BCCI) January 14, 2026
A KaLm and gritty century by @klrahul here in Rajkot off just 87 deliveries.
His 8th in ODIs 👏👏#TeamIndia #INDvNZ #2ndODI @IDFCfirstbank pic.twitter.com/DLBwZWBItx
ಎಂಟನೇ ಶತಕ ಬಾರಿಸಿದ ಕೆಎಲ್ ರಾಹುಲ್
ಕಳೆದ ಪಂದ್ಯದಲ್ಲಿ 93 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 23 ರನ್ ಗಳಿಗೆ ಸೀಮಿತರಾದರು. ಶ್ರೇಯಸ್ ಅಯ್ಯರ್ ಕೂಡ ನಿರಾಶೆ ಮೂಡಿಸಿದರು. ನಂತರ ಐದನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ 92 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 112 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ವೃತ್ತಿ ಜೀವನದ 8ನೇ ಶತಕವನ್ನು ಬಾರಿಸಿದರು. ರವೀಂದ್ರ ಜಡೇಜಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರು ಕ್ರಮವಾಗಿ 27 ರನ್ ಹಾಗೂ 20 ರನ್ ಕಲೆ ಹಾಕಿದರು. ಇದಕ್ಕೂ ಮುನ್ನ ಗಿಲ್, 53 ಎಸೆತಗಳಲ್ಲಿ 56 ರನ್ ಗಳಿಸಿದ್ದರು.