ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ 5th T20I: ಭಾರತದ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ವಿವರ!

IND vs NZ 5th T20I: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಣ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯ ನವೆಂಬರ್‌ 1 ರಂದು ಹ್ಯಾಮಿಲ್ಟನ್‌ನ ಸೆಡಾನ್‌ ಪಾರ್ಕ್‌ ಕ್ರೀಡಾಣಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಂಬಂಧ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಭಾರತ vs ಕಿವೀಸ್ 5ನೇ ಪಂದ್ಯಕ್ಕೆ ಸಂಭಾವ್ಯ XI, ಪಿಚ್‌ ರಿಪೋರ್ಟ್‌!

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಐದನೇ ಟಿ20ಐ ಪಂದ್ಯ. -

Profile
Ramesh Kote Oct 31, 2026 4:39 PM

ಹ್ಯಾಮಿಲ್ಟನ್‌: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ (IND vs NZ) ಅಂತಿಮ ಪಂದ್ಯ ಭಾನುವಾರ (ನವೆಂಬರ್ 1) ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ನಡೆಯಲಿದೆ. ಈಗಾಗಲೇ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿರುವ ಭಾರತ ತಂಡ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಹೀಗಾಗಿ ಐದನೇ ಪಂದ್ಯದಲ್ಲಿ ಕೆಲವು ಆಟಗಾರರಿಗೆ ಅವಕಾಶ ನೀಡುವ ಮೂಲಕ ತಂಡದ ಸಂಯೋಜನೆಯನ್ನು ಪರೀಕ್ಷಿಸಲು ಭಾರತ ತಂಡಕ್ಕೆ ಉತ್ತಮ ಅವಕಾಶವಿದೆ.

ಭಾರತ ತಂಡ ಮೊದಲ ಮೂರು ಟಿ20ಐ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತ್ತು. ಆದರೆ ಶುಕ್ರವಾರ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನ ನೀಡಿತು. ಗ್ಲೆನ್ ಫಿಲಿಪ್ಸ್ ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 259 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ ಜೇಕಬ್ ಡಫಿ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿ 9 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಡಫಿ ನಾಲ್ಕು ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಸರಣಿಯಲ್ಲಿ ಕೊನೆಯ ಪಂದ್ಯ ಹೊರತುಪಡಿಸಿ ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಮಾಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ಐದನೇ ಪಂದ್ಯದಲ್ಲಿ ಕೆಲವು ಆಟಗಾರರನ್ನು ಕಣಕ್ಕಿಳಿಸುವ ಮೂಲಕ ತಂಡಕ್ಕೆ ಹೊಸ ಆಯ್ಕೆಗಳನ್ನು ಪರೀಕ್ಷಿಸಬಹುದು.

IND vs NZ: ಐದನೇ ಟಿ20ಐಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸೂಚಿಸಿದ ಅಜಿಂಕ್ಯ ರಹಾನೆ!

ಕುಲ್ದೀಪ್, ವರುಣ್ ಚಕ್ರವರ್ತಿಗೆ ಅವಕಾಶ ಸಿಗುತ್ತಾ?

ಭಾರತದ ಪ್ರಮುಖ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಈ ಸರಣಿಯಲ್ಲಿ ಈವರೆಗೆ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಐದನೇ ಟಿ20 ಪಂದ್ಯದಲ್ಲಿ ಕನಿಷ್ಠ ಒಬ್ಬ ಸ್ಪಿನ್ನರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ.

ಇನ್ನು ಮೊದಲನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಗಾಯಗೊಂಡಿದ್ದರಿಂದ ವೈಭವ್ ಸೂರ್ಯವಂಶಿ ಅವರಿಗೆ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ದೊರೆತಿತ್ತು. ಆದರೆ ನಾಲ್ಕನೇ ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕಾರಣ ವೈಭವ್ ಅವರನ್ನು ಕೈಬಿಡಲಾಗಿತ್ತು.

ಇದೀಗ ಐದನೇ ಪಂದ್ಯದಲ್ಲಿ 15ರ ವಯಸ್ಸಿನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಶಿವಂ ದುಬೆ ಅವರಿಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ನೀಡಬಹುದು.

IND vs NZ: ವೈಭವ್‌ಗೆ ಚಾನ್ಸ್‌? ಐದನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ 5 ಬದಲಾವಣೆ ಸಾಧ್ಯತೆ!

ನ್ಯೂಜಿಲೆಂಡ್ ಬ್ಯಾಟಿಂಗ್ ಬಲ ಗ್ಲೆನ್ ಫಿಲಿಪ್ಸ್

ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಗ್ಲೆನ್ ಫಿಲಿಪ್ಸ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನಾಲ್ಕು ಪಂದ್ಯಗಳಿಂದ ಎರಡು ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿರುವ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ನಾಲ್ಕನೇ ಟಿ20 ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 107 ರನ್ ಸಿಡಿಸಿ ಭಾರತದ ಬೌಲರ್‌ಗಳನ್ನು ಕಾಡಿದ್ದರು. ಅಂತಿಮ ಪಂದ್ಯದಲ್ಲೂ ಬ್ಲ್ಯಾಕ್ ಕ್ಯಾಪ್ಸ್ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಅವರೇ ಪ್ರಮುಖ ಆಟಗಾರರಾಗಿರಲಿದ್ದಾರೆ.

ಇನ್ನೊಬ್ಬ ಪ್ರಮುಖ ಬ್ಯಾಟರ್ ಡ್ಯಾರಿಲ್ ಮಿಚೆಲ್ ಕೂಡ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಟಿಮ್ ಸೀಫರ್ಟ್ ಬದಲಿಗೆ ಡೆವೊನ್ ಕಾನ್ವೇ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ನಾಲ್ಕು ಇನಿಂಗ್ಸ್‌ಗಳಿಂದ ಕೇವಲ 36 ರನ್ ಗಳಿಸಿರುವ ಸೀಫರ್ಟ್ ಬದಲಿಗೆ ಕಾನ್ವೇ ಕಣಕ್ಕಿಳಿಯಬಹುದು. ಇನ್ನು ನಾಲ್ಕನೇ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಜೇಕಬ್ ಡಫಿ, ಅಂತಿಮ ಪಂದ್ಯದಲ್ಲೂ ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ನೆರವಾಗುವ ವಿಶ್ವಾಸದಲ್ಲಿದ್ದಾರೆ.

ಪಂದ್ಯದ ವಿವರ

ಐದನೇ ಟಿ20ಐ ಪಂದ್ಯ

ಭಾರತ vs ನ್ಯೂಜಿಲೆಂಡ್‌

ದಿನಾಂಕ: ನವೆಂಬರ್‌ 1, 2026

ಸಮಯ: ಮಧ್ಯಾಹ್ನ 12: 30ಕ್ಕೆ (ಭಾರತೀಯ ಕಾಲಮಾನ)

ಸ್ಥಳ: ಸೆಡಾನ್‌ ಪಾರ್ಕ್‌, ಹ್ಯಾಮಿಲ್ಟನ್‌

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಸೋನಿಲಿವ್‌

ಸೆಡಾನ್‌ ಪಾರ್ಕ್‌ ಪಿಚ್‌ ರಿಪೋರ್ಟ್‌

ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್ ಮೈದಾನದಲ್ಲಿ ಬೌಂಡರಿಗಳು ಚಿಕ್ಕದಾಗಿದ್ದು, ಇಲ್ಲಿನ ಪಿಚ್ ಸಾಮಾನ್ಯವಾಗಿ ಸಮತಟ್ಟಾಗಿರುತ್ತದೆ. ಹೀಗಾಗಿ ಬ್ಯಾಟರ್‌ಗಳು ರನ್‌ಗಳ ಮಳೆ ಸುರಿಸುವ ನಿರೀಕ್ಷೆಯಿದೆ. ಬೌಲರ್‌ಗಳಿಗೆ ಇಲ್ಲಿ ಹೆಚ್ಚಿನ ಸವಾಲು ಎದುರಾಗಲಿದ್ದು, ನಿಖರವಾಗಿ ಬೌಲ್‌ ಮಾಡುವುದು ಅತ್ಯಂತ ಮುಖ್ಯವಾಗಲಿದೆ. ಹೊಸ ಚೆಂಡಿನಲ್ಲಿ ವೇಗದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದಾರೆ. ಆರಂಭಿಕ ಓವರ್‌ಗಳಲ್ಲಿ ಗಾಳಿಯಲ್ಲಿ ಹಾಗೂ ಪಿಚ್‌ನಿಂದ ಚೆಂಡಿಗೆ ಸ್ವಲ್ಪ ಚಲನೆ (ಸ್ವಿಂಗ್ ಮತ್ತು ಸೀಮ್) ದೊರೆಯುವ ಸಾಧ್ಯತೆಯಿದೆ. ಹೀಗಾಗಿ ಆರಂಭದಲ್ಲಿ ವಿಕೆಟ್ ಪಡೆಯುವುದು ಬೌಲರ್‌ಗಳಿಗೆ ಪ್ರಮುಖ ಅವಕಾಶವಾಗಿರಲಿದೆ.

IND vs NZ: ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸನತ್‌ ಜಯಸೂರ್ಯ!

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 35

ನ್ಯೂಜಿಲೆಂಡ್‌ ಗೆಲುವು: 18

ಭಾರತದ ಗೆಲುವು: 14

ಫಲಿತಾಮಶವಿಲ್ಲ: 03

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌ (ನಾಯಕ), ತಿಲಕ್‌ ವರ್ಮಾ, ನಿತೀಶ್‌ ಕುಮಾರ್‌ ರೆಡ್ಡಿ/ಶಿವಂ ದುಬೇ, ನಮನ್‌ ಧೀರ್‌, ಅಕ್ಷರ್‌ ಪಟೇಲ್‌, ಪ್ರಿನ್ಸ್‌ ಯಾದವ್‌, ಅರ್ಷದೀಪ್‌ ಸಿಂಗ್‌, ಮಯಾಂಕ್‌ ಯಾದವ್‌

ನ್ಯೂಜಿಲೆಂಡ್:‌ ಫಿನ್‌ ಆಲೆನ್‌, ಟಿಮ್‌ ಸೈಫರ್ಟ್‌/ಡೆವೋನ್‌ ಕಾನ್ವೇ (ವಿಕೆಟ್‌ ಕೀಪರ್‌), ಡ್ಯಾರಿಲ್‌ ಮಿಚೆಲ್‌, ಗ್ಲೆನ್‌ ಮಿಚೆಲ್‌, ಗ್ಲೆನ್‌ ಫಿಲಿಪ್ಸ್‌, ಬೆವೋನ್‌ ಜೇಕಬ್ಸ್‌, ಮೈಕಲ್‌ ಬ್ರೇಸ್‌ವೆಲ್‌, ಮಿಚೆಲ್‌ ಸ್ಯಾಂಟ್ನರ್‌ (ನಾಯಕ), ನೇಥನ್‌ ಸ್ಮಿತ್‌, ಆಡಂ ಮಿಲ್ನೆ, ಮ್ಯಾಥ್ಯೂ ಫಿಷರ್‌, ಜೇಕಬ್‌ ಡಫಿ