IND vs NZ: ಟಿ20ಐ ಸರಣಿಯ ಕೊನೆಯ 2 ಪಂದ್ಯಗಳ ನ್ಯೂಜಿಲೆಂಡ್ ತಂಡಕ್ಕೆ ಇಬ್ಬರು ಸ್ಟಾರ್ ಆಟಗಾರರ ಎಂಟ್ರಿ!
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ಸತತ ಮೂರು ಪಂದ್ಯಗಳಲ್ಲಿ ಸೋತ ನಂತರ ಕಿವೀಸ್ ತಂಡ ಸರಣಿಯನ್ನು ಕಳೆದುಕೊಂಡಿದೆ. ಆದರೂ ಪ್ರವಾಸಿ ತಂಡ ತನ್ನ ಆಟಗಾರರ ಗುಂಪಿನಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿದೆ.
ನ್ಯೂಜಿಲೆಂಡ್ ತಂಡಕ್ಕೆ ಸೇರಿಸ ಜಿಮ್ಮಿ ನೀಶನ್, ಲಾಕಿ ಫರ್ಗ್ಯೂಸನ್. -
ನವದೆಹಲಿ: ಐಸಿಸಿ 2026ರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಗೂ ಮುನ್ನ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು (IND vs NZ) ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ಭಾರತ ಈಗಾಗಲೇ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಹಾಗಾಗಿ ಕೊನೆಯ ಎರಡು ಪಂದ್ಯಗಳ ಫಲಿತಾಂಶ ಭಾರತ ತಂಡದ ಸರಣಿ ಜಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾಲ್ಕನೇ ಪಂದ್ಯ ಜನವರಿ 28 ರಂದು ವಿಶಾಖಪಟ್ಟಣದ ಎಸಿಎ ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಕಿವೀಸ್, ತನ್ನ ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಿದೆ.
ನ್ಯೂಜಿಲೆಂಡ್ ವೇಗದ ಬೌಲರ್ ಕ್ರಿಶ್ಚಿಯನ್ ಕ್ಲಾರ್ಕ್ ಮತ್ತು ಬ್ಯಾಟ್ಸ್‌ಮನ್ ಟಿಮ್ ರಾಬಿನ್ಸನ್ ಅವರನ್ನು ತನ್ನ ತಂಡದಿಂದ ಬಿಡುಗಡೆ ಮಾಡಿದೆ. ಈ ಇಬ್ಬರು ಆಟಗಾರರ ಬದಲಿಗೆ, ನ್ಯೂಜಿಲೆಂಡ್ ಅನುಭವಿ ಆಲ್‌ರೌಂಡರ್ ಜಿಮ್ಮಿ ನೀಶಮ್ ಮತ್ತು ವೇಗದ ಬೌಲರ್ ಲಾಕಿ ಫರ್ಗ್ಯೂಸನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಆರಂಭಿಕ ಆಟಗಾರ ಫಿನ್ ಆಲೆನ್ ಕೂಡ ಗುರುವಾರ (ಜನವರಿ 29) ತಂಡವನ್ನು ಸೇರಿಕೊಳ್ಳಲಿದ್ದಾರೆ. ಶನಿವಾರ ತಿರುವನಂತಪುರದಲ್ಲಿ ನಡೆಯಲಿರುವ ಸರಣಿಯ ಐದನೇ ಟಿ20 ಐಗೆ ಅವರು ಲಭ್ಯರಿರುತ್ತಾರೆ. ಈ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ, ತನ್ನ ಅಧಿಕೃತ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.
IND vs NZ 4th T20I: ಭಾರತ ತಂಡದ ಪ್ಲೇಯಿಂಗ್ XIನಲ್ಲಿ 3 ಬದಲಾವಣೆ ಸಾಧ್ಯತೆ!
ಜಿಮ್ಮಿ ನೀಶಮ್, ಲಾಕಿ ಫರ್ಗ್ಯೂಸನ್ ಅಂಕಿಅಂಶ
35ರ ವಯಸ್ಸಿನ ಜೇಮ್ಸ್ ನೀಶಮ್ ನ್ಯೂಜಿಲೆಂಡ್ ಪರ 12 ಟೆಸ್ಟ್, 76 ಏಕದಿನ ಮತ್ತು 93 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ನೀಶಮ್ 709 ರನ್ ಗಳಿಸಿದ್ದಾರೆ ಮತ್ತು 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ ನೀಶಮ್ 1,495 ರನ್ ಗಳಿಸಿದ್ದಾರೆ ಮತ್ತು 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20 ಪಂದ್ಯಗಳಲ್ಲಿ, ಕಿವೀಸ್ ಆಲ್‌ರೌಂಡರ್ 149.6 ಸ್ಟ್ರೈಕ್ ರೇಟ್‌ನಲ್ಲಿ 1,010 ರನ್ ಗಳಿಸಿದ್ದಾರೆ ಮತ್ತು 56 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮತ್ತೊಂದೆಡೆ, 34ರ ವಯಸ್ಸಿನ ಲಾಕಿ ಫರ್ಗ್ಯೂಸನ್ ಒಟ್ಟು 65 ಏಕದಿನ ಪಂದ್ಯಗಳು, 43 ಟಿ20ಐಗಳು ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 99 ಮತ್ತು ಟಿ20ಐಗಳಲ್ಲಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಟೆಸ್ಟ್‌ನಲ್ಲಿ ವಿಕೆಟ್ ಪಡೆದಿಲ್ಲ.
Kristian Clarke and Tim Robinson have been released from the BLACKCAPS T20 squad in India with Jimmy Neesham, Lockie Ferguson and Tim Seifert now in camp.
— BLACKCAPS (@BLACKCAPS) January 26, 2026
Finn Allen will be the final squad member to join the side on Thursday in Trivandrum.#INDvNZ pic.twitter.com/PARjD3EsHf
ನಾಲ್ಕನೇ ಮತ್ತು ಐದನೇ ಟಿ20 ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ಡೆವೋನ್ ಕಾನ್ವೇ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್‌ವೆಲ್, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್, ಇಶ್ ಸೋಧಿ, ಜಾಕೋಬ್ ಡಫಿ ಮತ್ತು ಜಾಕ್ವೆಲಿನ್ ಫೌಲ್ಕ್ಸ್, ಫಿನ್ ಆಲೆನ್ (ಐದನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ).