ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: 100ನೇ ಟಿ20ಐ ಪಂದ್ಯವನ್ನಾಡಿದ ಅರ್ಷದೀಪ್‌ ಸಿಂಗ್‌ಗೆ ವಿಶೇಷ ಜೆರ್ಸಿ ನೀಡಿದ ಶ್ರೇಯಸ್‌ ಅಯ್ಯರ್‌!

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯ ಅರ್ಷದೀಪ್ ಸಿಂಗ್ ಅವರ ವೃತ್ತಿಜೀವನದಲ್ಲಿ ವಿಶೇಷವಾಗಿದೆ. 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಮೈಲುಗಲ್ಲು ತಲುಪಿದ ಭಾರತದ ಏಳನೇ ಆಟಗಾರರಾದರು. ಈ ಸಾಧನೆಗಾಗಿ ನಾಯಕ ಶ್ರೇಯಸ್ ಅಯ್ಯರ್, ತಂಡದ ಆಟಗಾರರು ಸಹಿ ಮಾಡಿದ ವಿಶೇಷ ಜೆರ್ಸಿ ನೀಡಿ ಗೌರವಿಸಿದರು.

ಅರ್ಷದೀಪ್‌ ಸಿಂಗ್‌ಗೆ ವಿಶೇಷ ಉಡುಗೊರೆ ನೀಡಿದ ಶ್ರೇಯಸ್‌ ಅಯ್ಯರ್‌!

ಅರ್ಷದೀಪ್‌ ಸಿಂಗ್‌ಗೆ ವಿಶೇಷ ಉಡುಗೊರೆ ನೀಡಿದ ಶ್ರೇಯಸ್‌ ಅಯ್ಯರ್‌. -

Profile
Ramesh Kote Oct 23, 2026 4:10 PM

ಕ್ರೈಸ್ಟ್‌ ಚರ್ಚ್‌: ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ (Arshdeep Singh) ತಮ್ಮ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನ 100ನೇ ಪಂದ್ಯವನ್ನಾಡಿದ ಹಿನ್ನೆಲೆಯಲ್ಲಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ವಿಶೇಷ ಜೆರ್ಸಿ ನೀಡಿ ಗೌರವಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ರೋಚಕ ಗೆಲುವು ದಾಖಲಿಸಿದ ಬಳಿಕ ಈ ಗೌರವ ಸಲ್ಲಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಅರ್ಷದೀಪ್ ಸಿಂಗ್ ಅವರ ವೃತ್ತಿಜೀವನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅವರು ಭಾರತ ಪರ 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಏಳನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮಹತ್ವದ ಸಾಧನೆಯನ್ನು ಗುರುತಿಸಿದ ನಾಯಕ ಶ್ರೇಯಸ್ ಅಯ್ಯರ್, ಪಂದ್ಯದ ಬಳಿಕ ಅರ್ಷದೀಪ್ ಅವರಿಗೆ ಸಹಿ ಮಾಡಿದ ಸ್ಮರಣಿಕೆಯ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಈ ಮೂಲಕ ತಂಡದ ಪ್ರಮುಖ ವೇಗದ ಬೌಲರ್‌ನ ಸಾಧನೆಯನ್ನು ಗೌರವಿಸಿದರು.

IND vs NZ: ಬೆಂಚ್‌ ಕಾಯುತ್ತಿರುವ ವೈಭವ್‌ ಸೂರ್ಯವಂಶಿಗೆ ದಿನೇಶ್‌ ಕಾರ್ತಿಕ್‌ ಸಂದೇಶ!

ದಾಖಲೆ ಚೇಸ್‌ನಲ್ಲಿ ಭಾರತಕ್ಕೆ ರೋಚಕ ಜಯ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್ ತಂಡ ಗ್ಲೆನ್ ಫಿಲಿಪ್ಸ್ ಅವರ ಅಜೇಯ 82 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 225 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ, ಸಂಜು ಸ್ಯಾಮ್ಸನ್ ಅವರ 67 ರನ್‌ಗಳು, ಶ್ರೇಯಸ್ ಅಯ್ಯರ್ ಅವರ 42 ರನ್‌ಗಳು ಹಾಗೂ ನಮನ್ ಧೀರ್ ಅವರ ಅಜೇಯ 42 ರನ್‌ಗಳ ನೆರವಿನಿಂದ 19.4 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಅರ್ಷದೀಪ್ ಸಿಂಗ್ ಅವರ 100ನೇ ಪಂದ್ಯಕ್ಕೆ ದೊರೆತ ಈ ಗೌರವವು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದ ಮತ್ತೊಂದು ಸ್ಮರಣೀಯ ಕ್ಷಣವಾಗಿದೆ.



ಅರ್ಷದೀಪ್‌ ಸಿಂಗ್‌ಗೆ ಶ್ಲಾಘಿಸಿದ ಶ್ರೇಯಸ್‌ ಅಯ್ಯರ್‌

ಶುಕ್ರವಾರ ಬಿಸಿಸಿಐ ಟಿವಿ (BCCI.tv) ಹಾಗೂ ಬಿಸಿಸಿಐನ ಅಧಿಕೃತ ಎಕ್ಸ್‌ (X) ಖಾತೆಯಲ್ಲಿ ಪ್ರಕಟವಾದ ವಿಡಿಯೊದಲ್ಲಿ ಶ್ರೇಯಸ್ ಅಯ್ಯರ್, 27 ವರ್ಷದ ಬೌಲರ್ ಅರ್ಷದೀಪ್ ಸಿಂಗ್ ಅವರ ಕಠಿಣ ಪರಿಶ್ರಮ ಮತ್ತು ವೃತ್ತಿಪರ ಬದ್ಧತೆಯನ್ನು ಶ್ಲಾಘಿಸಿದರು. ಬಳಿಕ ಪ್ರವಾಸದಲ್ಲಿರುವ ಭಾರತ ತಂಡದ ಎಲ್ಲಾ ಆಟಗಾರರು ಸಹಿ ಮಾಡಿದ ವಿಶೇಷ ವಿನ್ಯಾಸದ ಭಾರತೀಯ ಜೆರ್ಸಿಯನ್ನು ಅವರಿಗೆ ಉಡುಗೊರೆಯಾಗಿ ನೀಡಿದರು.

“ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನ ವಿಶೇಷ ಬೌಲರ್ ಅರ್ಷದೀಪ್ ಸಿಂಗ್‌ಗೆ ವಿಶೇಷ ಜೆರ್ಸಿ. ನಿಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಹಾಗೂ ಮೈದಾನದಲ್ಲಿ ಪ್ರದರ್ಶಿಸಿರುವ ಅದ್ಭುತ ಪ್ರತಿಭೆಯ ಫಲವೇ ಈ ಜೆರ್ಸಿ. ನಿಮ್ಮ 100ನೇ ಪಂದ್ಯ ಗೆಲುವಿನೊಂದಿಗೆ ಅಂತ್ಯಗೊಂಡಿದೆ ಎಂಬುದು ನಮಗೆ ಸಂತೋಷದ ವಿಚಾರ,” ಎಂದು ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ವಿಡಿಯೊದಲ್ಲಿ ಗುಣಗಾನ ಮಾಡಿದ್ದಾರೆ.

ದಾಖಲೆಯ ಮೊತ್ತವನ್ನು ಚೇಸ್‌ ಮಾಡಿ ಹ್ಯಾಗ್ಲಿ ಓವಲ್‌ನಲ್ಲಿ ಇತಿಹಾಸ ಬರೆದ ಭಾರತ ತಂಡ!

ಭಾರತದ ಪರ 100ನೇ ಟಿ20ಐ ಪಂದ್ಯವಾಡಿದ ಏಳನೇ ಆಟಗಾರ

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯುವ ಮೂಲಕ ಅರ್ಷದೀಪ್ ಸಿಂಗ್, 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತದ ಏಳನೇ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆ ಮಾಡಿದ ಇತರ ಭಾರತೀಯ ಆಟಗಾರರೆಂದರೆ ರೋಹಿತ್ ಶರ್ಮಾ (159 ಪಂದ್ಯಗಳು), ಹಾರ್ದಿಕ್ ಪಾಂಡ್ಯ (138), ವಿರಾಟ್ ಕೊಹ್ಲಿ (125), ಸೂರ್ಯಕುಮಾರ್ ಯಾದವ್ (113), ಅಕ್ಷರ್ ಪಟೇಲ್ (113) ಮತ್ತು ಜಸ್‌ಪ್ರೀತ್ ಬುಮ್ರಾ.