IND vs SA: ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡ ಪ್ರಕಟ!
South Africa Test Squad: ಭಾರತ ವಿರುದ್ದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಗಾಯದ ಕಾರಣ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದ ನಾಯಕ ತೆಂಬಾ ಬವೂಮ ಅವರು ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
ಭಾರತ ವಿರುದ್ದದ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ. -
ನವದೆಹಲಿ: ಭಾರತ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ (IND vs SA) 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡವನ್ನು (South Africa Test Squad) ಪ್ರಕಟಿಸಲಾಗಿದೆ. ಗಾಯದಿಂದ ಗುಣಮುಖರಾಗಿರುವ ನಾಯಕ ತೆಂಬಾ ಬವೂಮಾ ತಂಡಕ್ಕೆ ಮರಳಿದ್ದಾರೆ ಹಾಗೂ ಎಂದಿನಂತೆ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ. ಎಡಗಾಲಿನ ಗಾಯದ ಕಾರಣ ತೆಂಬಾ ಬವೂಮಾ (Temba Bavuma) ಅವರು ಪಾಕಿಸ್ತಾನ ವಿರುದ್ದದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದರು. ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಸ್ಪಿನ್ ಸ್ನೇಹಿ ಭಾರತದ ಕಂಡೀಷನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲು ಎದುರು ನೋಡುತ್ತಿದ್ದಾರೆ.
ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿದ ಬಹುತೇಕ ಅದೇ ಆಟಗಾರರನ್ನು ಭಾರತ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ. ಪಾಕ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ದಕ್ಷಿಣ ಆಫ್ರಿಕಾ ತಂಡ, ಎರಡನೇ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಕಮ್‌ಬ್ಯಾಕ್ ಮಾಡಿತ್ತು. ಇದರೊಂದಿಗೆ ಹರಿಣ ಪಡೆ ಟೆಸ್ಟ್ ಸರಣಿಯನ್ನು 1-1 ಅಂತರದಲ್ಲಿ ಡ್ರಾ ಸಾಧಿಸಿತ್ತು.
ಗಾಯದಿಂದ ಗುಣಮುಖರಾಗಿರುವ ತೆಂಬಾ ಬವೂಮಾ ಅವರು ಭಾರತ ಎ ವಿರುದ್ಧ ದಕ್ಷಿಣ ಆಫ್ರಿಕಾ ಎ ಪರ ಆಡುವ ಮೂಲಕ ಫಾರ್ಮ್ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ಈ ಪಂದ್ಯದ ಅಕ್ಟೋಬರ್ 30 ರಿಂದ 9ರವರೆಗೆ ನಡೆಯಲಿವೆ. ಈ ಪಂದ್ಯಗಳು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ನಡೆಯಲಿದೆ. ಈ ಅಭ್ಯಾಸದ ಪಂದ್ಯಗಳ ಮೂಲಕ ದಕ್ಷಿಣ ಆಫ್ರಿಕಾ ತಂಡದ ಆಟಗಾರರಿಗೆ ಇಲ್ಲಿನ ಕಂಡೀಷನ್ಸ್‌ಗೆ ಹೊಂದಿಕೊಳ್ಳಲು ನೆರವಾಗಲಿದೆ.
IND vs AUS: ಗಾಯಾಳು ಶ್ರೇಯಸ್ ಅಯ್ಯರ್ ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ಔಟ್! ವರದಿ
ಟೆಸ್ಟ್ ತಂಡದಲ್ಲಿ ಬೇಬಿ ಎಬಿಡಿ
ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಗಮನ ಸೆಳೆಯುತ್ತಿರುವ ಡೆವಾಲ್ಡ್ ಬ್ರೇವಿಸ್ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಆಡಿರುವ ಬ್ರೆವಿಸ್, ಭಾರತದ ಕಂಡೀಷನ್ಸ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹಿರಿಯ ಸ್ಪಿನ್ನರ್ ಸೈಮನ್ ಹಾರ್ನರ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. 2015ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಹಾರ್ನರ್, ಆಡಿದ್ದ ಎರಡು ಟೆಸ್ಟ್ ಪಂದ್ಯಗಳಿಂದ 10 ವಿಕೆಟ್‌ಗಳನ್ನು ಕಬಳಿಸಿದ್ದರು.
🚨 SQUAD ANNOUNCEMENT 🚨
— Proteas Men (@ProteasMenCSA) October 27, 2025
The South African Men’s selection panel has announced the 15-player squad for the two-match Test series against India from 14 - 26 November in the subcontinent.
Test captain Temba Bavuma returns to the side after missing the recent Pakistan Test series… pic.twitter.com/dOGTELaXUu
ಕಳೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಸೈಮನ್ ಹಾರ್ನರ್ ಆಡಿದ್ದ ಎರಡು ಪಂದ್ಯಗಳಿಂದ 14 ವಿಕೆಟ್‌ಗಳನ್ನು ಕಬಳಿಸಿದ್ದರು. ರಾವಲ್ಪಿಂಡಿ ಟೆಸ್ಟ್ ಪಂದ್ಯವೊಂದರಲ್ಲಿಯೇ ಅವರು 8 ವಿಕೆಟ್ ಕಿತ್ತಿದ್ದರು. ಭಾರತದಲ್ಲಿಯೂ ಕೂಡ ಸ್ಪಿನ್ ಕಂಡೀಷನ್ಸ್ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಮುಕ ಅಸ್ತ್ರವಾಗಲಿದ್ದಾರೆ.
IND vs AUS: ಜಸ್‌ಪ್ರೀತ್ ಬುಮ್ರಾ ಇನ್, ಮೊದಲ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ನ 14ರಂದು ಟೆಸ್ಟ್ ಸರಣಿ ಆರಂಭ
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯ ನವೆಂಬರ್ 14 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಾದ ಬಳಿಕ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 22 ರಂದು ಗುವಾಹಟಿಯ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಗುವಾಹಟಿ ಕ್ರೀಡಾಂಗಣದಲ್ಲಿ ಮೊಟ್ಟ ಮೊದಲ ಟೆಸ್ಟ್ ಪಂದ್ಯ ಇದಾಗಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವೂಮಾ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಟೋನಿ ಟಿ ಝಾರ್ಜಿ,ಝುಬೈರ್ ಹಂಝಾ, ಸೈಮನ್ ಹಾರ್ನರ್, ಮಾರ್ಕೊ ಯೆನ್ಸನ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಮ್, ವಿಯಾನ್ ಮುಲ್ಡರ್, ಸೆನುರನ್ ಮುತ್ತುಸ್ವಾಮಿ, ಕಗಿಸೊ ರಬಾಡ, ರಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಕೈಲ್ ವಾರೆನ್