IND vs SL: ಶ್ರೀಲಂಕಾ 284ಕ್ಕೆ ಆಲ್‌ಔಟ್, ಭಾರತ ತಂಡಕ್ಕೆ ದೊಡ್ಡ ಮುನ್ನಡೆ!
IND vs SL 1st test day 3 Highlights: ಸೋನಲ್ ದಿನುಶಾ ಅವರ ಶತಕದ ಹೊರತಾಗಿಯೂ ಮಾನವ್ ಸುತಾರ್ ಅವರ ಬೌಲಿಂಗ್ ನೆರವಿನಿಂದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದ ಮೂರನೇ ದಿನವೂ ಶ್ರೀಲಂಕಾ ಎದುರು ಮೃಲುಗೈ ಸಾಧಿಸಿದೆ. ಸಿಂಹಳೀಯರು ಪ್ರಥಮ ಇನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲ್‌ಔಟ್ ಆಗಿದ್ದು, 178 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ.
ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲನೇ ಟೆಸ್ಟ್ ಪಂದ್ಯ. -
ಗಾಲೆ: ಸೋನಲ್ ದಿನುಷಾ (Sonal Dinusha) ಅವರ ಶತಕದ ಹೊರತಾಗಿಯೂ ಮಾನವ್ ಸುತಾರ್ ಹಾಗೂ ರವೀಂದ್ರ ಜಡೇಜಾ ಅವರ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದ (IND vs SL) ಮೂರನೇ ದಿನವೂ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಪಡೆದಿರುವ ಟೀಮ್ ಇಂಡಿಯಾ ಪಂದ್ಯದ ಮೇಲೆ ತನ್ನ ಹಿಡಿತವನ್ನು ಸಾಧಿಸಿದೆ. ಮಳೆಯ ಹೊರತಾಗಿಯೂ ಸಾಗುತ್ತಿರುವ ಗಾಲೆ ಟೆಸ್ಟ್ ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿಯಿದ್ದು, ಪ್ರವಾಸಿ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲು ಹೆಚ್ಚಿನ ಅವಕಾಶವಿದೆ.
ಸೋಮವಾರ ಬೆಳಿಗ್ಗೆ 9 ವಿಕೆಟ್‌ಗಳ ನಷ್ಟಕ್ಕೆ 460 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ, ಮೂರನೇ ದಿನ ಕೇವಲ ಎರಡು ರನ್ ಗಳಿಸಿದ ಬಳಿಕ ಇನ್ನೊಂದು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಟೀಮ್ ಇಂಡಿಯಾ 462 ರನ್‌ಗಳಿಗೆ ಆಲ್‌ಔಟ್ ಆಯಿತು. ಶ್ರೀಲಂಕಾ ತಂಡದ ಪರ ಪ್ರಭತ್ ಜಯಸೂರ್ಯ ಅವರು 4 ವಿಕೆಟ್‌ಗಳನ್ನು ಪಡೆದರೆ, ಕೇಶಾರ ನುವಂತ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದರು.
ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ
ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. ನಿಶಾನ್ ಫೆರ್ನಾಂಡೊ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ 27 ರನ್‌ಗಳಿಗೆ 2 ವಿಕೆಟ್‌ಗಳನ್ನು ಹಾಗೂ 59 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು. ನಂತರ 90 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಅನುಭವಿಸಿದೆ.
ಸೋನಲ್-ನಿರೋಶನ್ ಜುಗಲ್‌ಬಂದಿ
ಐದು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ವೇಳೆ ಜೊತೆಯಾದ ಸೋನಲ್ ದಿನುಶಾ ಹಾಗೂ ನಿರೋಶನ್ ಡಿಕ್ವೆಲ್ಲಾ ಅವರು 146 ರನ್‌ಗಳ ಜೊತೆಯಾಟವನ್ನು ಆಡಿ ಅಪಾಯದಿಂದ ತಮ್ಮ ತಂಡವನ್ನು ಪಾರು ಮಾಡಿದರು. ಅದ್ಭುತವಾಗಿ ಬ್ಯಾಟ್ ಮಾಡಿದ ನಿರೋಶನ್ ಡಿಕ್ವೆಲ್ಲಾ ಅವರು ಅದ್ಭುತವಾಗಿ ಬ್ಯಾಟ್ ಮಾಡಿದರು. ಅವರು 115 ಎಸೆತಗಳಲ್ಲಿ 80 ರನ್ ಗಳಿಸಿ ಶತದಂಚಿನಲ್ಲಿ ಆಡುತ್ತಿದ್ದರು. ಆದರೆ, ಅವರು ಪ್ರಸಿಧ್ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿದರು.
ಸೋನಲ್ ದಿನುಷಾ ಭರ್ಜರಿ ಶತಕ
ಸೊಗಸಾಗಿ ಬ್ಯಾಟ್ ಮಾಡಿದ ಸೋನಲ್ ದಿನುಷಾ ಅವರು ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ