ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs SL: ಕೊಲಂಬೊ ಟೆಸ್ಟ್‌ ಡ್ರಾನಲ್ಲಿ ಅಂತ್ಯವಾದರೆ ಭಾರತ ತಂಡದ WTC ಫೈನಲ್‌ ಲೆಕ್ಕಾಚಾರ ಹೇಗಿರಲಿದೆ?

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಭಾರತ ತಂಡ ಪ್ರಾಬಲ್ಯ ಸಾಧಿಸಿದೆ. ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಮೇಲುಗೈ ಸಾಧಿಸಿದ್ದು, ಆತಿಥೇಯ ಶ್ರೀಲಂಕಾ ತಂಡದ ಮೇಲೆ ಒತ್ತಡ ಹೇರಿದೆ. ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 1-0 ಮುನ್ನಡೆ ಹೊಂದಿದ್ದು, ಎರಡನೇ ಟೆಸ್ಟ್‌ನಲ್ಲೂ ಗೆಲುವು ಸಾಧಿಸಿ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡುವ ಗುರಿಯಲ್ಲಿದೆ.

ಎರಡನೇ ಟೆಸ್ಟ್‌ ಡ್ರಾನಲ್ಲಿ ಅಂತ್ಯವಾದರೆ ಭಾರತದ WTC ಫೈನಲ್‌ ಹಾದಿ ಹೇಗೆ?

ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್‌ ಡ್ರಾನಲ್ಲಿ ಅಂತ್ಯವಾದರೆ ಭಾರತದ WTC Final ಹಾದಿ ಹೇಗಿರಲಿದೆ? -

Profile
Ramesh Kote Aug 26, 2026 11:15 PM

ಕೊಲಂಬೊ: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ (IND vs SL) ನಾಲ್ಕನೇ ದಿನ ಭಾರತ ತಂಡ ಮೇಲುಗೈ ಸಾಧಿಸಿದೆ. ಬುಧವಾರ ಮಳೆಯಿಂದಾಗಿ ದಿನದಾಟ ಸ್ಥಗಿತಗೊಂಡಾಗ ಶ್ರೀಲಂಕಾ 6 ವಿಕೆಟ್‌ಗಳನ್ನು ಕಳೆದುಕೊಂಡು 229 ರನ್‌ ಗಳಿಸಿತ್ತು. ಆತಿಥೇಯ ತಂಡ ಕೇವಲ 16 ರನ್‌ಗಳ ಮುನ್ನಡೆ ಪಡೆದಿದೆ. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾವನ್ನು 290 ರನ್‌ಗಳಿಗೆ ಆಲೌಟ್‌ ಮಾಡಿತ್ತು. ಶ್ರೀಲಂಕಾ ಪರ ಸೋನಲ್‌ ದಿನುಷಾ (Sonal Dinush) ಶತಕ ಸಿಡಿಸಿದರು. ಬಳಿಕ ಭಾರತ ತಂಡ, ಶ್ರೀಲಂಕಾ ಫಾಲೋಆನ್‌ ಹೇರಿತು. ಭಾರತದ ಬೌಲಿಂಗ್‌ನಲ್ಲಿ ಪ್ರಸಿಧ್‌ ಕೃಷ್ಣ ಮತ್ತು ಮಾನವ್‌ ಸುತಾರ್‌ ತಲಾ 3 ವಿಕೆಟ್‌ ಕಬಳಿಸಿದರು. ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಾರಾಂಶ್‌ ಜೈನ್‌ 2 ವಿಕೆಟ್‌ ಪಡೆದರು.

ಫಾಲೋಆನ್‌ ಬಳಿಕ ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ ಬ್ಯಾಟರ್‌ಗಳು ಪ್ರತಿರೋಧ ತೋರಿದರು. ಪಸಿಂದು ಸೂರ್ಯಬಂದಾರ 92 ರನ್‌ ಗಳಿಸಿ ಶತಕದಂಚಿನಲ್ಲಿ ಔಟಾದರೆ, ಕಮಿಂದು ಮೆಂಡಿಸ್‌ 55 ರನ್‌ ಗಳಿಸಿದರು. ಈ ಇಬ್ಬರ ಪ್ರಮುಖ ಜೊತೆಯಾಟದ ನೆರವಿನಿಂದ ಶ್ರೀಲಂಕಾ ಭಾರತಕ್ಕಿಂತ 16 ರನ್‌ಗಳ ಮುನ್ನಡೆ ಸಾಧಿಸಿತು. ಆದರೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ಆತಿಥೇಯ ತಂಡ 229/6ರಲ್ಲಿತ್ತು. ಭಾರತ ಈಗಲೂ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದು, ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಕ್ಲೀನ್‌ಸ್ವೀಪ್‌ ಮಾಡುವ ಅವಕಾಶ ಹೊಂದಿದೆ.

IND vs SL: ಸಿಂಹಳೀಯರ ಎದುರು ಟೆಸ್ಟ್‌ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವ ಸನಿಹದಲ್ಲಿ ಭಾರತ!

ಭಾರತ ತಂಡದ WTC ಫೈನಲ್‌ ಹಾದಿ ಹೇಗಿದೆ?

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಅಂಕಪಟ್ಟಿಯಲ್ಲಿ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಲಿದೆ. ಪ್ರಸ್ತುತ ಭಾರತ 53.33 ಗೆಲುವಿನ ಸರಾಸರಿಯೊಂದಿಗೆ 5ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ದೊಡ್ಡ ಸೋಲು ಕಂಡಿರುವುದರಿಂದ, ಶ್ರೀಲಂಕಾ ವಿರುದ್ಧದ ಗೆಲುವು ಭಾರತಕ್ಕೆ 4ನೇ ಸ್ಥಾನಕ್ಕೇರಲು ನೆರವಾಗಲಿದೆ. ಆದರೆ ಎರಡನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೆ, ಭಾರತದ ಗೆಲುವಿನ ಸರಾಸರಿ 51.52ಕ್ಕೆ ಇಳಿಯಲಿದ್ದು, ತಂಡ 5ನೇ ಸ್ಥಾನದಲ್ಲೇ ಉಳಿಯಲಿದೆ.

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಬಳಿಕ ಭಾರತದ ಪ್ರಸಕ್ತ ಡಬ್ಲ್ಯುಟಿಸಿ ಋತುವಿನಲ್ಲಿ ಇನ್ನೂ 7 ಟೆಸ್ಟ್‌ ಪಂದ್ಯಗಳು ಬಾಕಿ ಉಳಿಯಲಿವೆ. ಇದುವರೆಗೂ ಆಡಿರುವ 10 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಈಗಾಗಲೇ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡಕ್ಕೆ ಇನ್ನುಳಿದ ಪ್ರತಿಯೊಂದು ಪಂದ್ಯವೂ ಬಹುತೇಕ ‘ನಾಕೌಟ್‌’ ಪಂದ್ಯದಂತಾಗಿದೆ.

IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್‌ ಜುರೆಲ್‌!

ಶ್ರೀಲಂಕಾ ಸರಣಿ ಮುಗಿದ ಬಳಿಕ ಭಾರತ ತಂಡ ಈ ವರ್ಷದ ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಭಾರತ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. WTC ಫೈನಲ್‌ ಅರ್ಹತೆಯ ದೃಷ್ಟಿಯಿಂದ ನ್ಯೂಜಿಲೆಂಡ್‌ ವಿರುದ್ಧದ ಈ ಎರಡು ಪಂದ್ಯಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿವೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಋತುವಿನ ಅಂತ್ಯದಲ್ಲಿ ಭಾರತ ತಂಡ ಮುಂದಿನ ವರ್ಷ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಲಿದೆ. ಈ ಸರಣಿ ಐಪಿಎಲ್‌ ಟೂರ್ನಿಗೂ ಮುನ್ನ ನಡೆಯಲಿದೆ. ಬಾಂಗ್ಲಾದೇಶ, ಡಾರ್ವಿನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ, WTC ಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ ಭಾರತ ತನ್ನ ಉಳಿದ ಪಂದ್ಯಗಳಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಗೆಲುವು ದಾಖಲಿಸಬೇಕಾಗಿದೆ.

ಭಾರತ ತಂಡ ಇನ್ನುಳಿದ ಎಂಟು ಟೆಸ್ಟ್‌ ಪಂದ್ಯಗಳಲ್ಲಿ ಏಳನ್ನು ಗೆದ್ದರೆ, ಒಟ್ಟು ಗೆಲುವಿನ ಸರಾಸರಿ 68.52ಕ್ಕೆ ತಲುಪಲಿದೆ. ಅದೇ ವೇಳೆ ಆರು ಗೆಲುವು ಮತ್ತು ಎರಡು ಸೋಲು ಕಂಡರೆ ಭಾರತದ PCT 62.96ಕ್ಕೆ ಇಳಿಯಲಿದೆ. ಹೀಗಾಗಿ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡಕ್ಕೆ WTC ಅಭಿಯಾನದ ಇನ್ನುಳಿದ ಹಂತದಲ್ಲಿ ತಪ್ಪುಗಳಿಗೆ ಅವಕಾಶ ಬಹಳ ಕಡಿಮೆ. ಫೈನಲ್‌ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಪ್ರತಿಯೊಂದು ಟೆಸ್ಟ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವುದು ಭಾರತದ ಮುಂದಿರುವ ಪ್ರಮುಖ ಸವಾಲಾಗಿದೆ.