ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

S N Subbareddy: ಬಾಗೇಪಲ್ಲಿಯಲ್ಲಿ 23ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಕಂಕಣಭಾಗ್ಯಕ್ಕೆ ಒಲಿದ 135 ಜೋಡಿಗಳು

ಪಟ್ಟಣದ ಗಡಿದಂ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಎದುರು ಸುಮಾರು 10 ಸಾವಿರ ಮಂದಿ ಕುಳಿತುಕೊಳ್ಳುವಂತೆ ನಿರ್ಮಿಸಲಾಗಿದ್ದ ವಿಶಾಲ ವೇದಿಕೆಯಲ್ಲಿ ಸಾಮೂಹಿಕ ವಿವಾಹಗಳು ಮತ್ತು ಅದರ ಅಂಗವಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವವು ಶ್ರದ್ಧಾಭಕ್ತಿಯಿಂದ. ತಿರುಮಲ ತಿರುಪತಿ ದೇವಸ್ಥಾನದಿಂದ ಆಗಮಿಸಿದ್ದ ಆಗಮಿಕ ಮಂಡಳಿಯ ಅರ್ಚಕರು ನೆರವೇರಿಸಿದರು

ಬಾಗೇಪಲ್ಲಿಯಲ್ಲಿ 23ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಬಾಗೇಪಲ್ಲಿಯಲ್ಲಿ 23ನೇ ವರ್ಷದ ಉಚಿತ ಸಾಮೂಹಿಕ ವಿವಾಹ; 135 ಜೋಡಿಗಳು ಸಪ್ತಪದಿ ತುಳಿದ ಚಿತ್ರ, ಶ್ರೀನಿವಾಸ ಕಲ್ಯಾಣೋತ್ಸವ, ನವವಧುವರರಿಗೆ ನೀಡಿರುವ ಸೀಮೆ ಹಸುಗಳ ಚಿತ್ರ. -

Profile
Ashok Nayak Aug 26, 2026 11:24 PM

ಚಿಕ್ಕಬಳ್ಳಾಪುರ-ಬಾಗೇಪಲ್ಲಿ: ಎಸ್.ಎನ್.ಸುಬ್ಬಾರೆಡ್ಡಿ ಚಾರಿಟೇಬಲ್ ಟ್ರಸ್ಟ್, ಚಿನ್ನಕಾಯಲಪಲ್ಲಿ ವತಿಯಿಂದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA S N Subbareddy) ನೇತೃತ್ವದಲ್ಲಿ 23ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಬುಧವಾರ ಅದ್ಧೂರಿಯಾಗಿ ನಡೆಯಿತು.

ಪಟ್ಟಣದ ಗಡಿದಂ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಎದುರು ಸುಮಾರು 10 ಸಾವಿರ ಮಂದಿ ಕುಳಿತುಕೊಳ್ಳುವಂತೆ ನಿರ್ಮಿಸಲಾಗಿದ್ದ ವಿಶಾಲ ವೇದಿಕೆಯಲ್ಲಿ ಸಾಮೂಹಿಕ ವಿವಾಹಗಳು ಮತ್ತು ಅದರ ಅಂಗವಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವವು ಶ್ರದ್ಧಾಭಕ್ತಿಯಿಂದ. ತಿರುಮಲ ತಿರುಪತಿ ದೇವಸ್ಥಾನದಿಂದ ಆಗಮಿಸಿದ್ದ ಆಗಮಿಕ ಮಂಡಳಿಯ ಅರ್ಚಕರು ನೆರವೇರಿಸಿ ದರು. ಹೀಗಾಗಿ ಪಟ್ಟಣವನ್ನು ತಳಿರು-ತೋರಣ ಹಾಗೂ ಫ್ಲೆಕ್ಸ್ಗಳಿಂದ ಮಧುವಣ ಗಿತ್ತಿಯಂತೆ ಅಲಂಕರಿಸಲಾಗಿತು. ಶುಭ ಕಾರ್ಯಕ್ರಮದಲ್ಲಿ ನವವಧು-ವರರ ಬಂಧುಬಳಗ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.

ಇದನ್ನೂ ಓದಿ: Chikkaballapur News: ಯಾದವ ಸಮುದಾಯದ ಸಂಘಟನೆ, ಏಳಿಗೆಗೆ ಒಗ್ಗಟ್ಟು ಅಗತ್ಯ: ಡಿ.ಟಿ.ಶ್ರೀನಿವಾಸ್

ಬುಧವಾರ ನಡೆದ 23ನೇ ವರ್ಷದ ಕಾರ್ಯಕ್ರಮವು ತಿರುಮಲ ತಿರುಪತಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ  ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ 135 ಜೋಡಿಗಳು ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಟ್ಟರು. ಸಾವಿರಾರು ಮಂದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಗಳು ಗಣ್ಯರು ನವದಂಪತಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸುಬ್ಬಾರೆಡ್ಡಿ ಅವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಶಾಸಕರಾಗುವ ಮೊದಲಿನಿಂದಲೂ ಸಾಮೂಹಿಕ ವಿವಾಹದ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ.

ಸರಳ ವಿವಾಹದಲ್ಲಿ ತನ್ನ ಮಗನ ವಿವಾಹವನ್ನೂ ಮಾಡುವ ಮೂಲಕ ಆಡಂಭರದ ಮದುವೆ ಬೇಡ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.ಇಂತಹ ಸಜ್ಜನರು ಏರ್ಪಡಿಸಿರುವ ಮಧುವೆ ಕಾರ್ಯಕ್ರಮದಲ್ಲಿ ಬಂದು ಹೊಸ ಜೀವನಕ್ಕೆ ಕಾಲಿಟ್ಟ ಎಲ್ಲ ನವವಧುವರರಿಗೆ ಶುಭ ಕೋರುತ್ತೇನೆ. ಇದೇ ವೇಳೆ ಟಿಟಿಡಿ ದೇವಾಲಯದ ಅರ್ಚಕ ವರ್ಗದಿಂದ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿಸಿ ರುವುದು ಸಂತೋಷ ತಂದಿದೆ ಎಂದರು.

IMG20260826113853_01_ok

ಭವಿಷ್ಯದಲ್ಲಿ ಬಾಗೇಪಲ್ಲಿ ಕರ್ನಾಟಕದ ಹೆಬ್ಬಾಗಿಲಾಗಿ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ಬರದ ನಾಡಿನ ನೀರಿನ ಸಮಸ್ಯೆ ನಿವಾರಣೆಯಾಗಲಿದ್ದು, ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಈ ಭಾಗಕ್ಕೆ ನೀರಿನ ಅಭಯ ದೊರೆಯಲಿದೆ. ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗದ ಕೊರತೆಯೂ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಟುಂಬದ ಸಹಕಾರ ದಿಂದ ಸುಬ್ಬಾರೆಡ್ಡಿ ಸಮಾಜ ಸೇವೆ ಮಾಡುತ್ತಿದ್ದು, ವಧುವರರಿಗೆ ಗೋವುಗಳನ್ನು ನೀಡಿ ಹೈನುಗಾರಿ ಕೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಆದಿ ಚುಂಚನಗಿರಿ ಶಾಖಾ ಮಠದ ಶ್ರೀಮಂಗಳನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಸುಬ್ಬಾರೆಡ್ಡಿ ಸರಳ ಸಜ್ಜನಿಕೆಯ ರಾಜಕಾರಣಿ. 23 ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ವಿವಾಹ ನಡೆಸುವ ಮೂಲಕ ಜನಸಾಮಾನ್ಯರ ಬದುಕು ಹಸನಾಗುವಂತೆ ಮಾಡಿದ್ದಾರೆ.

ಇಂತಹವರಿಗೆ ರಾಜಕೀಯ ಅಧಿಕಾರ ದೊರೆತರೆ ಇನ್ನಷ್ಟು ಹೆಚ್ಚಿನ ಜನಸೇವೆ ಮಾಡುತ್ತಾರೆ. ಕ್ಷೇತ್ರದ ಜನರ ಹಾಗೂ ಭೈರವೇಶ್ವರ ಸ್ವಾಮಿಯ ಆಶೀರ್ವಾದ ಅವರ ಮೇಲಿರಲಿ ಎಂದು ಶುಭ ಹಾರೈಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸುಬ್ಬಾರೆಡ್ಡಿ ಅವರು ಬಡವರಿಗೆ ಸರಳ ವಿವಾಹದ ಮೂಲಕ ಸಾಲದ ಹೊರೆಯನ್ನು ತಪ್ಪಿಸಿದ್ದಾರೆ. ಶಾಸಕರಾದಾಗಿನಿಂದ ಅವರನ್ನು ಬಲ್ಲೆ. ಸುಮಾರು 8 ಸಾವಿರ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ. ಶ್ರೀನಿವಾಸನ ಕೃಪಾಕಟಾಕ್ಷ ಅವರ ಕುಟುಂಬದ ಮೇಲಿರಲಿ ಎಂದು ಹಾರೈಸಿದರು.

ಹೆಚ್.ಎನ್. ವ್ಯಾಲಿ ಯೋಜನೆಯನ್ನು ಕ್ಷೇತ್ರಕ್ಕೆ ತಂದು ರೈತರ ಬದುಕಿಗೆ ಬೆಳಕು ನೀಡಿದ್ದಾರೆ. ಎತ್ತಿನಹೊಳೆ ಯೋಜನೆ ಸಮರೋಪಾದಿಯಲ್ಲಿ ಸಾಗುತ್ತಿದ್ದು, ಒಂದರಿಂದ ಒಂದೂವರೆ ವರ್ಷ ದೊಳಗೆ ಜಿಲ್ಲೆಗೆ ನೀರು ಬರುವ ನಿರೀಕ್ಷೆಯಿದೆ ಎಂದರು.

200 ಕೋಟಿ ವೆಚ್ಚದ ಗಂಟಲು ಮಲ್ಲಮ್ಮ ಡ್ಯಾಂ ನಿರ್ಮಾಣದ ಮೂಲಕ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹಸನಾಗಿಸಲು ಯೋಜನೆ ತಂದಿರುವುದು ಶ್ಲಾಘನೀಯ. ಅಧಿಕಾರ ಇರಲಿ, ಇಲ್ಲದಿ ರಲಿ ಜನಸೇವೆಯನ್ನು ಮರೆತಿಲ್ಲ ಎಂದು ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಕುಟುಂಬದ ದೃಢ ಸಂಕಲ್ಪ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿ ಯಾಗಿದೆ. ಎಲ್ಲರೂ ಆಗಮಿಸಿ ಆಶೀರ್ವದಿಸಿರುವುದು ಸಂತೋಷ ತಂದಿದೆ. ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತೇನೆ ಎಂದರು.

ವಧುವರರಿಗೆ ಉಚಿತವಾಗಿ ನೀಡಿರುವ ಗೋವುಗಳನ್ನು ಯಾರೂ  ಕೂಡ ಮಾರಾಟ ಮಾಡಬಾರದು ಎಂದು ಮನವಿ ಮಾಡಿದ ಅವರು, ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಅವರ ತವರು ಮನೆಯಿಂದ ತಂದಿದ್ದ ಹಸುವಿನ ಹಾಲು ಕುಡಿದು ಬೆಳೆದಿದ್ದೇವೆ. ಆ ಮೂಲಕ ನಮ್ಮ ಕುಟುಂಬವೂ ಬೆಳೆದಿದೆ. ಅದೇ ರೀತಿ ನವದಂಪತಿಗಳಿಗೆ ನೀಡಿರುವ ಹಸುಗಳು ಅವರ ಬದುಕಿಗೆ ಆಸರೆಯಾಗಲಿ, ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ನನ್ನ ಕುಟುಂಬದ ದೃಢ ಸಂಕಲ್ಪ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಶ್ರಮ ದಿಂದ ಈ ಕಾರ್ಯಕ್ರಮವು ಇಷ್ಟೊಂದು ಯಶಸ್ವಿಯಾಗಿ ನಡೆಯುವಂತಾಗಿದೆ. ಇಂತಹ ಆದರ್ಶದ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಆಶೀರ್ವದಿಸಿರುವುದು ಸಂತೋಷ ತಂದಿದೆ. ಜಿಲ್ಲೆಯಲ್ಲಿ ಬರ ಆವರಿಸಿರುವ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದ ರೈತರಿಗೆ ಶೀಘ್ರವೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತೇನೆ ಘೋಷಣೆ ಮಾಡಿದರು.

ವಧುವರರಿಗೆ ನೀಡಿರುವ ಗೋವುಗಳನ್ನು ಯಾರೂ ಮಾರಾಟ ಮಾಡಬಾರದು ಎಂದು ಮನವಿ ಮಾಡಿದ ಅವರು, ತಮ್ಮ ತಾಯಿ ಮನೆಯಿಂದ ನೀಡಿದ್ದ ಹಸುವಿನಿಂದ ತಮ್ಮ ಮನೆ ಬೆಳಗಿದೆ. ಅದೇ ರೀತಿ ನವದಂಪತಿಗಳಿಗೆ ನೀಡಿರುವ ಹಸುಗಳು ಅವರ ಬದುಕಿಗೆ ಆಸರೆಯಾಗಲಿ ಎಂದು ಹೇಳಿದರು.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ 15000ಕ್ಕೂ ಹೆಚ್ಚು ಮಂದಿಗೆ ಶಾಸಕರು ತಿರುಪತಿ ಯಿಂದ ತರಿಸಿದ್ದ ತಿಮ್ಮಪ್ಪನ ಲಾಡು ವಿತರಿಸಿದರಲ್ಲದೆ ಭರ್ಜರಿ ಊಟ ಹಾಕಿಸಿ ಸಂತೋಷ ಪಟ್ಟರು.

ಕಾರ್ಯಕ್ರಮದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ(MLA S N Narayanaswamy), ಮಾಜಿ ಸಚಿವ ಎನ್.ಹೆಚ್. ಶಿವಶಂಕರ ರೆಡ್ಡಿ(N H Shivashankar Reddy), ಮಾಜಿ ಶಾಸಕ ಸಂಪಗಿ(Sampangi), ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಸಹಕಾರಿ ಧುರೀಣ ನಾಗರಾಜ್, ಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಜಿಲ್ಲಾಧಿಕಾರಿ ಜಿ. ಪ್ರಭು, ಉಪ ವಿಭಾಗಾಧಿಕಾರಿ ಅಶ್ವಿನ್, ರಾಜೀವ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.