ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಮುಂಬೈ ಇಂಡಿಯನ್ಸ್‌ಗೆ ಎದುರಾಗಿರುವ ದೊಡ್ಡ ಚಾಲೆಂಜ್‌ ತಿಳಿಸಿದ ಮಹೇಲಾ ಜಯವರ್ದನೆ!

Mahela Jayawardene on Jasprit Bumrah's Absense: ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಅನುಪಸ್ಥಿತಿಯು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ ಎಂದು ಮುಂಬೈ ಕೋಚ್‌ ಮಹೇಲಾ ಜಯವರ್ದನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ ಕಾಡುತ್ತಿರುವ ಸವಾಲು ತಿಳಿಸಿದ ಜಯವರ್ದನೆ!

ಹಾರ್ದಿಕ್‌ ಪಾಂಡ್ಯ, ಮಹೇಲಾ ಜಯವರ್ದನೆ

Profile Ramesh Kote Mar 19, 2025 8:14 PM

ಮುಂಬೈ: ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಮಾರ್ಚ್‌ 22 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ (KKR) ತಂಡಗಳು ಕಾದಾಟ ನಡೆಸುವ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿ ಆರಂಭವಾಗಲಿದೆ. ಮಾರ್ಚ್‌ 23 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸಲಿವೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕ ಪಂದ್ಯಗಳಿಂದ ಅಲಭ್ಯರಾಗಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಅಲಭ್ಯತೆಯು ಮುಂಬೈ ತಂಡಕ್ಕೆ ದೊಡ್ಡ ಸವಾಲನ್ನು ತಂದಕೊಡಲಿದೆ ಎಂದು ಕೋಚ್‌ ಮಹೇಲಾ ಜಯವರ್ದನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ವೇಳೆ ಜಸ್‌ಪ್ರೀತ್‌ ಬುಮ್ರಾ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಸದ್ಯ ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಬುಮ್ರಾ ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕ ಕನಿಷ್ಠ ಮೂರು ಪಂದ್ಯಗಳಿಂದ ಬುಮ್ರಾ ಅಲಭ್ಯರಾಗಿದ್ದಾರೆ. ಟೂರ್ನಿಯ ಪೂರ್ವ ಸುದ್ದಿಗೋಷ್ಠಿ ನಡೆಸಿದ ಮುಂಬೈ ಇಂಡಿಯನ್ಸ್‌ ತಂಡದ ಹೆಡ್‌ ಕೋಚ್‌, ಜಸ್‌ಪ್ರೀತ್‌ ಬುಮ್ರಾ ಅಲಭ್ಯತೆ ಸೇರಿದಂತೆ ಹಲವು ಪ್ರಮುಖ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

IPL 2025: ಶ್ರೇಯಸ್‌ ಅಯ್ಯರ್‌ಗೆ 3ನೇ ಕ್ರಮಾಂಕ, ಪಂಜಾಬ್‌ ಕಿಂಗ್ಸ್‌ ಸಂಭಾವ್ಯ ಪ್ಲೇಯಿಂಗ್‌ XI

ಜಸ್‌ಪ್ರೀತ್‌ ಬುಮ್ರಾ ಅವರು ಸದ್ಯ ಎನ್‌ಸಿಎನಲ್ಲಿದ್ದಾರೆ. ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ ಹಾಗೂ ಅವರು ಫಿಟ್‌ನೆಸ್‌ ಹೇಗಿದೆ ಎಂದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಪ್ರಸ್ತುತ ಅವರ ಪಾಲಿನ ಸಂಗತಿಗಳು ಉತ್ತಮವಾಗಿ ಸಾಗುತ್ತಿವೆ. ದಿನದಿಂದ ದಿನಕ್ಕೆ ಅವರ ಪ್ರಕ್ರಿಯೆಗಳು ಸಾಗುತ್ತಿವೆ. ಅವರು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಅತಿ ಶೀಘ್ರದಲ್ಲಿಯೇ ಸೇರ್ಪಡೆಯಾಗಲಿದ್ದಾರೆಂಬ ಬಗ್ಗೆ ನನಗೆ ವಿಶ್ವಾಸವಿದೆ.

ಇಡೀ ವಿಶ್ವದಲ್ಲಿಯೇ ಜಸ್‌ಪ್ರೀತ್‌ ಬುಮ್ರಾ ಅತ್ಯುತ್ತಮ ಫಾಸ್ಟ್‌ ಬೌಲರ್‌ ಆಗಿದ್ದಾರೆ. ಅವರು ಇಲ್ಲದೆ ಆರಂಭಿಕ ಕೆಲ ಪಂದ್ಯಗಳನ್ನು ನಾವು ಆಡಲಿದ್ದೇವೆ. ಜಸ್‌ಪ್ರೀತ್‌ ಬುಮ್ರಾ ಇಲ್ಲದೆ ನಮ್ಮಲ್ಲಿ ಯಾರಾದರೂ ಒಬ್ಬರು ಬೌಲಿಂಗ್‌ನಲ್ಲಿ ಮಿಂಚಬಹುದು ಎಂಬ ವಿಶ್ವಾಸವನ್ನು ಮುಂಬೈ ಇಂಡಿಯನ್ಸ್‌ ಕೋಚ್‌ ಹೊಂದಿದ್ದಾರೆ.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವ ಕಳೆದುಕೊಂಡ ಬೆನ್ನಲ್ಲೆ ಕೆಎಲ್‌ ರಾಹುಲ್‌ಗೆ ಮತ್ತೊಂದು ಹಿನ್ನಡೆ!

"ಖಂಡಿತ, ಅವರು (ಜಸ್‌ಪ್ರೀತ್‌ ಬುಮ್ರಾ) ಇಲ್ಲದಿರುವುದು ಒಂದು ದೊಡ್ಡ ಸವಾಲು. ಅವರು ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಮತ್ತು ಅವರು ಹಲವು ವರ್ಷಗಳಿಂದ ನಮಗೆ ಅದ್ಭುತ ವೃತ್ತಿಪರ ಆಟಗಾರರಾಗಿದ್ದಾರೆ. ಆದರೆ ಅವರ ಅನುಪಸ್ಥಿತಿಯಲ್ಲಿ ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ. ಬೇರೆಯವರು ಸಹ ಮುಂದೆ ಬಂದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಒಂದು ಸದಾವಕಾಶ. ನಾನು ಅದನ್ನು ಈ ರೀತಿ ನೋಡುತ್ತೇನೆ. ಇದು ನಮಗೆ ಕೆಲವು ವಿಭಿನ್ನ ವಿಷಯಗಳನ್ನು ಪ್ರಯತ್ನಿಸುವ ಮತ್ತು ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡುವ ವಿಭಿನ್ನ ಅಂಶವನ್ನು ನೀಡುತ್ತದೆ. ಅಲ್ಲದೆ ಇದು ನಮಗೆ ಹೇಗೆ ವರ್ಕ್‌ಔಟ್‌ ಆಗುತ್ತದೆ ಆರಂಭದಲ್ಲಿಯೇ ನೋಡುವುದು ಒಳ್ಳೆಯದು," ಎಂದು ಜಯವರ್ಧನೆ ಹೇಳಿದ್ದಾರೆ.