ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇವನೆಂತಾ ಪಾಪಿ; ಸಾಕು ನಾಯಿಯನ್ನು ಬೈಕ್‌ ಹಿಂದೆ ಎಳೆದೊಯ್ದ ಮಾಲೀಕ, ವಿಡಿಯೋ ನೋಡಿ

Viral Video: ಸರಪಳಿ ಕಟ್ಟಿ ಬೈಕ್ ನ ಹಿಂದೆ ಎಳೆದೊಯ್ಯುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಕೆಲವೊಮ್ಮೆ ಜನರ ಕಠೋರ ಮನಸ್ಥಿತಿ ಹೇಗೆ ಕೌರ್ಯ ಎಸಗುತ್ತವೆ ಎನ್ನುವುದಕ್ಕೆ ಇದೇ ದೃಶ್ಯ ಸಾಕ್ಷಿ ಯಾಗಿದೆ. ಪಶ್ಚಿಮ ಬಂಗಾಳದ ಕಲ್ಯಾಣಿ ಎಕ್ಸ್‌ಪ್ರೆಸ್‌ವೇನಲ್ಲಿ ಈ ಘಟನೆ ನಡೆದಿದೆ. ಸದ್ಯ ವ್ಯಕ್ತಿಯ ಈ ವರ್ತನೆ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಪಳಿ ಕಟ್ಟಿ ಬೈಕ್ ನ ಹಿಂದೆ ನಾಯಿಯನ್ನು ಎಳೆದೊಯ್ದ ಮಾಲೀಕ

ನಾಯಿಯನ್ನು ಬೈಕ್ ನ ಹಿಂದೆ ಎಳೆದೊಯ್ದ ಮಾಲೀಕ -

Profile
Pushpa Kumari Mar 15, 2026 12:06 PM

ಪಶ್ಚಿಮ ಬಂಗಾಳ,ಮಾ.15: ಇತ್ತೀಚೆಗೆ ಪ್ರಾಣಿ ಹಿಂಸೆಯ ಅನೇಕ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ನಾಯಿಗೆ ಸರಪಳಿ ಕಟ್ಟಿ ಬೈಕ್ ನ ಹಿಂದೆ ಎಳೆದೊಯ್ಯುತ್ತಿರುವ ದೃಶ್ಯ ವೊಂದು ಕಂಡು ಬಂದಿದೆ. ಕೆಲವೊಮ್ಮೆ ಜನರ ಕಠೋರ ಮನಸ್ಥಿತಿ ಹೇಗೆ ಕೌರ್ಯ ಎಸಗುತ್ತವೆ ಎನ್ನುವುದಕ್ಕೆ ಇದೇ ದೃಶ್ಯ ಸಾಕ್ಷಿ ಯಾಗಿದೆ. ಪಶ್ಚಿಮ ಬಂಗಾಳದ ಕಲ್ಯಾಣಿ ಎಕ್ಸ್‌ಪ್ರೆಸ್‌ವೇನಲ್ಲಿ ಈ ಘಟನೆ ನಡೆದಿದೆ. ಸದ್ಯ ವ್ಯಕ್ತಿಯ ಈ ವರ್ತನೆ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಕ ಪ್ರಾಣಿಗಳ ರಕ್ಷಣೆ ಹೊರತಾಗಿ ಅವುಗಳಿಗೆ ಹಿಂಸೆ ನೀಡುತ್ತಿರುವ ಪ್ರಕರಣಗಳೇ ಜಾಸ್ತಿ ಯಾಗುತ್ತಿವೆ. ಒಬ್ಬ ವ್ಯಕ್ತಿ ದ್ವಿಚಕ್ರ ವಾಹನವನ್ನು ಓಡಿಸುತ್ತಿರುವುದು ಕಂಡು ಬಂದಿದ್ದು ಅವನ ಹಿಂದೆ ಒಬ್ಬ ಮಹಿಳೆ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದಾರೆ. ಆದರೆ, ವೀಕ್ಷಕರನ್ನು ಗಾಬರಿ ಗೊಳಿಸಿದ್ದು, ಬೈಕ್ ಹಿಂಬದಿಯಲ್ಲಿ ನಾಯಿ ಬೈಕ್ ನ ವೇಗಕ್ಕೆ ತಕ್ಕಂತೆ ಓಡುತ್ತಿರುವುದು. ನಾಯಿಗೆ ಸರಪಳಿ ಕಟ್ಟಲಾಗಿದ್ದು ಬೈಕ್ ಸವಾರ ಅದನ್ನು ಹಿಡಿದಿಟ್ಟು ಕೊಂಡು ಪ್ರಯಾಣ ಮಾಡುತ್ತಿದ್ದಾನೆ. ಇದರಿಂದ ನಾಯಿ ಅದೇ ವೇಗಕ್ಕೆ ಉಸಿರುಗಟ್ಟಿ ಓಡುತ್ತಿದೆ.

ವಿಡಿಯೋ ನೋಡಿ:



ನಾಯಿಯೂ ಬೈಕ್ ನ ಹಿಂದೆ ಓಡಲು ಕಷ್ಟಪಡುತ್ತಿರುವಂತೆ ತೋರುತ್ತಿದೆ, ಇದರ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಹಲವು ಜನರು ಗಂಭೀರ ಕಳವಳ ವ್ಯಕ್ತ ಪಡಿಸಿದ್ದಾರೆ. ಬೈಕು ಚಲಿಸುವಾಗ ನಾಯಿಯ ಕುತ್ತಿಗೆಗೆ ಸರಪಳಿ ಕಟ್ಟಿರುವುದರಿಂದ ಎಡವಿ ಬಿದ್ದರೆ ಗಂಭೀರ ಗಾಯವಾಗಬಹುದು. ಅದೇ ರೀತಿ ಈ ನಾಯಿ ಗರ್ಭಿಣಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

Viral Video: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್‌ ಟ್ರೀಟ್‌ಮೆಂಟ್‌; ವೈರಲ್‌ ಆಗ್ತಿದೆ ವಿಡಿಯೋ

ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಕೂಡಲೇ, ಪ್ರಾಣಿ ಪ್ರಿಯರು ಕಿಡಿಕಾರಿದ್ದಾರೆ. ಬಳಕೆದಾರ ರೊಬ್ಬರು ಸಾಕು ಪ್ರಾಣಿಯನ್ನು ಸರಿಸಮಾನವಾಗಿ ನೋಡಿಕೊಳ್ಳುವವರು ಮಾತ್ರ ಸಾಕಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು ಈ ವ್ಯಕ್ತಿಯನ್ನು ಸರಪಳಿ ಕಟ್ಟಿ ಹೀಗೆ ಎಳೆ ದೊಯ್ಯಬೇಕು ಆಗ ನೋವು ಅರಿಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ವಿಶೇಷವಾಗಿ ಭಾರತದಲ್ಲಿ, ಸಾಕುಪ್ರಾಣಿಗಳನ್ನು ಸಾಕಲು ಬಿಡಬಾರದು ಎಂದು ಪ್ರಾಣಿ ಹಿಂಸೆಯ ಕೆಲವು ಘಟನೆಗಳನ್ನು ಶೇರ್ ಮಾಡಿಕೊಂಡಿದ್ದಾರೆ.