ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs LSG: ಹೈಸ್ಕೋರಿಂಗ್ ಪಂದ್ಯದ ಗೆಲುವಿನ ಶ್ರೇಯ ಈ ಇಬ್ಬರಿಗೆ ಸಲ್ಲಬೇಕೆಂದ ಅಗರ್ವಾಲ್!

2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಎರಡರೊಳಗೆ ಸ್ಥಾನ ಪಡೆಯಲು ನಿರ್ಣಾಯಕವಾಗಿದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಯಾಂಕ್‌ ಅಗರ್ವಾಲ್‌ ಹಲವು ಅಂಶಗಳ ಬಗ್ಗೆ ವಿವರಿಸಿದ್ದಾರೆ.

ಪಂದ್ಯದ ಗೆಲುವಿನ ಶ್ರೇಯ ಈ ಇಬ್ಬರಿಗೆ ಸಲ್ಲಬೇಕೆಂದ ಅಗರ್ವಾಲ್!

ಮಾಯಂಕ್‌ ಅಗರ್ವಾಲ್‌ ಸುದ್ದಿಗೋಷ್ಠಿ.

Profile Ramesh Kote May 28, 2025 7:46 PM

ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ( Virat Kohli) ಹಾಗೂ ಫಿಲ್ ಸಾಲ್ಟ್ (Phil Salt) ಪವರ್‌ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಶರವೇಗದಲ್ಲಿ ರನ್ ಗಳಿಸಿದ್ದರಿಂದ ಗೆಲುವು ಸಾಧಿಸಲು ನೆರವಾಯಿತು ಎಂದು ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಸಿಡಿಲಬ್ಬರದ 41* ರನ್ ಸಿಡಿಸುವ ಮೂಲಕ ಮಯಾಂಕ್ ಅಗರ್ವಾಲ್‌ ತಮ್ಮ ತವರು ತಂಡ ಅಗ್ರ ಎರಡರಲ್ಲಿ ಅಲಂಕರಿಸಲು ನೆರವು ನೀಡಿದರು. ಈ ಪಂದ್ಯದಲ್ಲಿ 6 ವಿಕೆಟ್‌ ರೋಚಕ ಗೆಲುವು ಪಡೆಯುವ ಮೂಲಕ ಆರ್‌ಸಿಬಿ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.

ಮಂಗಳವಾತ ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಕೊನೆಯ ಲೀಗ್‌ ಪಂದ್ಯದಲ್ಲಿ ಆತಿಥೇಯ ಲಖನೌ ಸೂಪರ್ ಜಯಂಟ್ಸ್‌ ನೀಡಿದ್ದ 228 ರನ್ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಪವರ್‌ಪ್ಲೇನಲ್ಲಿ 61 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ನಂತರ 5ನೇ ವಿಕೆಟ್‌ಗೆ ನಾಯಕ ಜಿತೇಶ್ ಶರ್ಮಾ (83* ರನ್) ಅವರೊಂದಿಗೆ ಜೊತೆಗೂಡಿದ ಮಯಾಂಕ್ ಅಗರ್ವಾಲ್ (41* ರನ್) ಮುರಿಯಲಾಗದ 107 ರನ್ ಜೊತೆಯಾಟವಾಡಿ ತಂಡಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟರು.

RCB vs PBKS: ಮೊದಲನೇ ಕ್ವಾಲಿಫೈಯರ್‌ಗೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

ಆರಂಭಿಕರ ಜೊತೆಯಾಟ ಸ್ಫೂರ್ತಿ ನೀಡಿತ್ತು: ಅಗರ್ವಾಲ್

ಪಂದ್ಯ ಮುಗಿದ ನಂತರ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ , ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಸ್ಫೋಟಕ ಆಟದಿಂದ ನಮ್ಮಲ್ಲಿ ನಿರ್ಭೀತಿಯಿಂದ ಆಡುವ ಧೈರ್ಯ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ.

"ಪವರ್‌ಪ್ಲೇನಲ್ಲಿ ಆರ್‌ಸಿಬಿ ಆರಂಭಿಕ ಆಟಗಾರರ ಕೆಚ್ಚೆದೆಯ ಆಟ ಡಗೌಟ್‌ನಲ್ಲಿದ್ದ ಇತರ ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸಿತು. ಪಂದ್ಯದಲ್ಲಿ ಹೈಸ್ಕೋರಿಂಗ್ ಚೇಸ್ ಮಾಡುವ ವೇಳೆ ಉತ್ತಮ ಆರಂಭ ಪಡೆಯುವುದು ನಿರ್ಣಾಯಕ ಪಾತ್ರ ವಹಿಸುತ್ತದೆ," ಎಂದು ಮಯಾಂಕ್ ಅಗರ್ವಾಲ್ ಹೇಳಿದ್ದಾರೆ.

ಕೊಹ್ಲಿ-ಸಾಲ್ಟ್ ಅಬ್ಬರ

"ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲೂ ದೊಡ್ಡ ಮೊತ್ತ ಹಿಂಬಾಲಿಸಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಇವರಿಬ್ಬರೂ ಈ ರೀತಿಯ ಪಾತ್ರವನ್ನು ಈ ಪಂದ್ಯದಲ್ಲಿ ಮಾತ್ರ ನಿರ್ವಹಿಸಿಲ್ಲ ಬದಲಿಗೆ ಉಳಿದ ಪಂದ್ಯಗಳಲ್ಲೂ ಉತ್ತಮ ಆರಂಭ ನೀಡಿದ್ದಾರೆ. ಆದ್ದರಿಂದ ನಾವು ಶಾಂತರಾಗಿದ್ದೇವೆ. ಅಲ್ಲದೆ ಪಂದ್ಯವನ್ನು ಯಾವ ರೀತಿ ಗೆಲ್ಲಬಹುದು ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೆವು. ಅದಕ್ಕೆ ತಕ್ಕಂತೆ ಜಿತೇಶ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡವನ್ನು ಗೆಲ್ಲಿಸಿಕೊಟ್ಟರು," ಎಂದು ಕನ್ನಡಿಗ ಶ್ಲಾಘಿಸಿದ್ದಾರೆ.

IPL 2025: ಗೆಲುವಿನೊಂದಿಗೆ ನೂತನ ದಾಖಲೆ ಬರೆದ ಆರ್‌ಸಿಬಿ

ಕ್ವಾಲಿಫೈಯರ್-1 ರಲ್ಲಿ ಪಂಜಾಬ್‌ ಎದುರಾಳಿ

ಲಖನೌ ಸೂಪರ್ ಜಯಂಟ್ಸ್‌ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದ ರಜತ್ ಪಾಟಿದಾರ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಟೂರ್ನಿಯ ಅಂಕಪಟ್ಟಿಯಲ್ಲಿ 19 ಅಂಕ ಪಡೆದು ಎರಡನೇ ಸ್ಥಾನ ಅಲಂಕರಿಸಿತು. ಗುರುವಾರ (ಮೇ 29) ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿರುವ ಶ್ರೇಯಸ್ ಅಯ್ಯರ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆರ್‌ಸಿಬಿ ಕಾದಾಟ ನಡೆಸಲಿದೆ. ಈ ಪಂದ್ಯವನ್ನು ಗೆದ್ದು ಫೈನಲ್‌ಗೆ ಪ್ರವೇಶಿಸಲು ಆರ್‌ಸಿಬಿ ಎದುರು ನೋಡುತ್ತಿದೆ.