RCB vs LSG: ಲಖನೌ ಪಂದ್ಯದ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ವಿರಾಟ್ ಕೊಹ್ಲಿ ಏಕಿಲ್ಲ? ಇಲ್ಲಿದೆ ಕಾರಣ!
Why Virat Kohli not in RCB's XI: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಕಾದಾಟ ನಡೆಸಿದ್ದವು. ಆದರೆ, ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ವಿರಾಟ್ ಕೊಹ್ಲಿಯ ಹೆಸರು ಕಾಣಿಸಲಿಲ್ಲ.
ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ವಿರಾಟ್ ಕೊಹ್ಲಿ ಇಲ್ಲ. -
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು (RCB vs LSG) ಕಾದಾಟ ನಡೆಸಿದ್ದವು. ಈ ಪಂದ್ಯದ ಟಾಸ್ ವೇಳೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರು ತಮ್ಮ ತಂಡದ ಪ್ಲೇಯಿಂಗ್ XI ಬಗ್ಗೆ ಮಾಹಿತಿ ನೀಡಿದರು ಹಾಗೂ ಒಂದು ಬದಲಾವಣೆ ಮಾಡಿಕೊಂಡಿರುವುದಾಗಿ ಹೇಳಿದರು. ಜೇಕಬ್ ಡಫಿ ಅವರಿಗೆ ವಿಶ್ರಾಂತಿ ನೀಡಿ, ಜಾಶ್ ಹೇಝಲ್‌ವುಡ್‌ಗೆ ಸ್ಥಾನ ನೀಡಲಾಗಿದೆ ಎಂದು ಹೇಳಿದರು. ಆದರೆ, ಆರ್‌ಸಿಬಿಯ ಪ್ಲೇಯಿಂಗ್ XI ನೋಡಿದಾಗ ವಿರಾಟ್ ಕೊಹ್ಲಿಯ (Virat Kohli) ಹೆಸರು ಇರಲಿಲ್ಲ.
ಟಾಸ್ ಗೆದ್ದ ಆರ್‌ಸಿಬಿ ಕಪ್ತಾನ ರಜತ್ ಪಾಟಿದಾರ್ ಬೌಲಿಂಗ್ ಆರಿಸಿಕೊಂಡರು ಹಾಗೂ ಈ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಅವರು ತುಟಿ ಬಿಚ್ಚಲಿಲ್ಲ. ಅಂದ ಹಾಗೆ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಫಿಟ್ ಇರುವ ರೀತಿ ಕಂಡಿರಲಿಲ್ಲ. ಅವರು ಆರ್‌ಸಿಬಿ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಆಡಿ ಅರ್ಧಶತಕವನ್ನು ಗಳಿಸಿದ್ದರು. ಆದರೆ, ಅವರು ಮುಂಬೈ ಚೇಸಿಂಗ್ ವೇಳೆ ಅವರು ಫೀಲ್ಡಿಂಗ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಲಖನೌ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ಮುಂದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆಯವಹುದು ಎಂಬ ಬಗ್ಗೆ ವರದಿಯಾಗಿತ್ತು.
RCB vs LSG: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಆದರೆ, ವಿರಾಟ್ ಕೊಹ್ಲಿ ಎಲ್‌ಎಸ್‌ಜಿ ಪಂದ್ಯದ ಹಿಂದಿನ ದಿನ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು. ಇದೀಗ ಅವರು ಪ್ಲೇಯಿಂಗ್ XIನಲ್ಲಿ ಇಲ್ಲದೇ ಇದ್ದರೂ ಅವರು, ಬಹುಶಃ ಆರ್‌ಸಿಬಿ ತಂಡದ ಚೇಸಿಂಗ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಫಿಲ್ ಸಾಲ್ಟ್ ಜೊತೆ ಇನಿಂಗ್ಸ್ ಆರಂಭಿಸಬಹುದು. ಇದು ಒಂದು ಆಯ್ಕೆಯಾಗಿದೆ.ಇನ್ನೊಂದು ಆಯ್ಕೆಯ ಪ್ರಕಾರ, ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ವಿಶ್ರಾಂತಿ ಪಡೆದರೆ, ವೆಂಕಟೇಶ್ ಅಯ್ಯರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್‌ಗೆ ಇಳಿಯಬಹುದು.
🪙 𝐓𝐎𝐒𝐒 𝐍𝐄𝐖𝐒 📰 ⬇️
— Royal Challengers Bengaluru (@RCBTweets) April 15, 2026
The flip of the coin goes in Captain Patidar's favour and we'll be fielding first. ☄️💪
Change to our XI:
Hazlewood 🔁 Duffy. ❤️#PlayBold #ನಮ್ಮRCB #IPL2026 #RCBvLSG @nothingindia pic.twitter.com/Q6Wjt8GNUx
ಟಾಸ್ ವೇಳೆ ರಜತ್ ಪಾಟಿದಾರ್ ಹೇಳಿದ್ದೇನು?
“ನಾವು ಮೊದಲು ಬೌಲ್ ಮಾಡುತ್ತೇವೆ. ಇದು ಸ್ಪಷ್ಟ ನಿರ್ಧಾರ. ಪಿಚ್ ಚೆನ್ನಾಗಿದೆ ಎಂದು ಕಾಣುತ್ತಿದೆ. ಆದ್ದರಿಂದ ಮೊದಲು ಬೌಲ್ ಮಾಡಿ, ಮೊದಲ ಇನಿಂಗ್ಸ್‌ನಲ್ಲೇ ಲಾಭ ಪಡೆಯಲು ಮತ್ತು ಒತ್ತಡ ಏರಲು ಯತ್ನಿಸುತ್ತೇವೆ. ಪಿಚ್ ಬಗ್ಗೆ ಹೆಚ್ಚು ಏನೂ ಇಲ್ಲ. ಹಿಂದಿನ ಪಂದ್ಯದಲ್ಲಿ ಹೆಚ್ಚು ಹುಲ್ಲಿತ್ತು. ಆದರೆ ಈ ವಿಕೆಟ್‌ನಲ್ಲಿ ಹುಲ್ಲು ಇಲ್ಲದಿರುವುದರಿಂದ ಇದು ಒಳ್ಳೆಯ ಬ್ಯಾಟಿಂಗ್ ಟ್ರ್ಯಾಕ್ ಆಗಿರಬಹುದು. ತಂಡದ ಪರವಾಗಿ ಪ್ರತಿಯೊಬ್ಬರೂ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ವಿಭಿನ್ನ ಹಂತಗಳಲ್ಲಿ ಬಂದು ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅದೇ ನಮ್ಮ ತಂಡದ ಬಲ,” ಎಂದು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ತಿಳಿಸಿದ್ದಾರೆ.
ʻ14 ಎಸೆತಗಳಲ್ಲಿ 53 ರನ್‌ಗಳಿಸಿದ ಒಂದೇ ಗಂಟೆಯಲ್ಲಿ 400K ಫಾಲೋವರ್ಸ್ʼ: ರೊಮ್ಯಾರಿಯೊ ಶೆಫರ್ಡ್!
ಉಭಯ ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪ್ಲೇ ಫಿಲಿಪ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್‌ವುಡ್, ಸುಯಶ್ ಶರ್ಮಾ, ರಸಿಖ್ ದಾರ್ ಸಲಾಮ್
ಲಖನೌ ಸೂಪರ್ ಜಯಂಟ್ಸ್: ಏಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ವಿಕೆಟ್ ಕೀಪರ್, ನಾಯಕ), ನಿಕೋಲಸ್ ಪೂರನ್, ಆಯುಷ್ ಬದೋನಿ, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಆವೇಶ್ ಖಾನ್, ದಿಗ್ವೇಶ್ ಸಿಂಗ್ ರಾಠಿ, ಪ್ರಿನ್ಸ್ ಯಾದವ್