ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻ14 ಎಸೆತಗಳಲ್ಲಿ 53 ರನ್‌ಗಳಿಸಿದ ಒಂದೇ ಗಂಟೆಯಲ್ಲಿ 400K ಫಾಲೋವರ್ಸ್‌ʼ: ರೊಮ್ಯಾರಿಯೊ ಶೆಫರ್ಡ್‌!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಆಲ್‌ರೌಂಡರ್‌ ರೊಮ್ಯಾರಿಯೊ ಶೆಫರ್ಡ್‌ ಅವರು ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಅವರು 2025ರ ಟೂರ್ನಿಯ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 14 ಎಸೆತಗಳಲ್ಲಿ 53 ರನ್‌ ಗಳಿಸಿ ಕೇವಲ ಒಂದು ಗಂಟೆ ಅಂತರದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷ ಮಂದಿ ಫಾಲೋವರ್ಸ್‌ ಲಭಿಸಿದ್ದರು ಎಂದು ಹೇಳಿದ್ದಾರೆ.

14 ಎಸೆತಗಳಲ್ಲಿ 53 ರನ್‌ಗಳಿಸಿದ ಬೆನ್ನಲ್ಲೆ 400K ಫಾಲೋವರ್ಸ್‌: ಶೆಫರ್ಡ್!

ರೊಮ್ಯಾರಿಯೊ ಶೆಫರ್ಡ್‌ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌. -

Profile
Ramesh Kote Apr 15, 2026 6:56 PM

ಬೆಂಗಳೂರು: ವೆಸ್ಟ್‌ ಇಂಡೀಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸ್ಟಾರ್‌ ಆಲ್‌ರೌಂಡರ್‌ ರೊಮ್ಯಾರಿಯೊ ಶೆಫರ್ಡ್‌ ( Romario Shepherd) ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗೆ ಸಂಬಂಧಿಸಿದ ಮಹತ್ವದ ಮಾಹಿತಯೊಂದನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಆರ್‌ಸಿಬಿ ತಂಡದ ಪರ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಆಡುತ್ತಿರುವ ಶೆಫರ್ಡ್‌, ನಿಯಮಿತವಾಗಿ ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಆಸೆರೆಯಾಗುತ್ತಿದ್ದಾರೆ.

2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ರೊಮ್ಯಾರಿಯೊ ಶೆಫರ್ಡ್‌ ಅವರನ್ನು ಆರ್‌ಸಿಬಿ 1.50 ಕೋಟಿ ರು. ಗಳಿಗೆ ಖರೀದಿಸಿತ್ತು. ಅದರಂತೆ ಕಳೆದ ಆವೃತ್ತಿಯಲ್ಲಿ ವಿಂಡೀಸ್‌ ದೈತ್ಯ ಆಲ್‌ರೌಂಡರ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಆರ್‌ಸಿಬಿ ತಂಡ 17 ವರ್ಷಗಳ ಬಳಿಕ ಚೊಚ್ಚಲ ಕಪ್‌ ಗೆಲುವಿನಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಇದರೊಂದಿಗೆ ಅವರು 2026ರ ಟೂರ್ನಿಯಲ್ಲಿಯೂ ಬೆಂಗಳೂರು ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು.

RCB vs LSG: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

ಒಂದೇ ಗಂಟೆಯ ಅಂತರದಲ್ಲಿ 4 ಲಕ್ಷ ಫಾಲೋವರ್ಸ್

ಅಂದ ಹಾಗೆ ಇತ್ತೀಚೆಗೆ ಆರ್‌ಸಿಬಿ ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದ ವಿಡಿಯೊದಲ್ಲಿ ರೊಮ್ಯಾರಿಯೊ ಶೆಫರ್ಡ್‌ ಹಲವು ಅಂಶಗಳನ್ನು ಹಂಚಿಕೊಂಡಿದ್ದರು. ಅವರು ಕಳೆದ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದಿದ್ದ ಪಂದ್ಯದಲ್ಲಿನ ತಮ್ಮ 14 ಎಸೆತಗಳಲ್ಲಿ 53 ರನ್‌ ಸಿಡಿಸಿದ ಇನಿಂಗ್ಸ್‌ ಅನ್ನು ಸ್ಮರಿಸಿಕೊಂಡಿದ್ದಾರೆ. ಈ ಪಂದ್ಯದ ಇನಿಂಗ್ಸ್‌ ಆದ ಕೇವಲ ಒಂದು ಗಂಟೆ ಅಂತರದಲ್ಲಿ ನನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 4 ಲಕ್ಷ ಫಾಲೋವರ್ಸ್‌ ಏರಿಕೆಯಾಗಿತ್ತು ಎಂದು ಅಂಶವನ್ನು ರಿವೀಲ್‌ ಮಾಡಿದ್ದಾರೆ.‌ ಇದೀಗ ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅವರ ಫಾಲೋವರ್ಸ್‌ ಸಂಖ್ಯೆ 984K ಗೆ ಏರಿಕೆಯಾಗಿದೆ.



14 ಬಾಲ್‌ಗಳಲ್ಲಿ 53 ರನ್‌ ಚಚ್ಚಿದ್ದ ಶೆಫರ್ಡ್‌

2025ರ ಮೇ 7 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್‌ ಟೂರ್ನಿಯ 52ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಆರ್‌ಸಿಬಿ, ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 213 ರನ್‌ಗಳನ್ನು ಕಲೆ ಹಾಕಿತ್ತು. ಈ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದಿದ್ದ ಶೆಫರ್ಡ್‌, 19ನೇ ಓವರ್‌ನಲ್ಲಿ ಖಲೀಲ್‌ ಅಹ್ಮದ್‌ಗೆ 3 ಸಿಕ್ಸರ್‌ ಹಾಗೂ 2 ಬೌಂಡರಿಗಳೊಂದಿಗೆ ಬರೊಬ್ಬರಿ 33 ರನ್‌ ಸಿಡಿಸಿದ್ದರು.

IPL 2026: ಇನ್ನೂ ಒಂದೂ ಪಂದ್ಯ ಗೆಲ್ಲದ ಕೆಕೆಆರ್‌ ಪ್ಲೇಆಫ್ಸ್‌ನಿಂದ ಔಟ್‌? ಇದಕ್ಕೆ ಬಲವಾದ ಕಾರಣ!

ನಂತರ 20ನೇ ಓವರ್‌ನಲ್ಲಿ ಮತೀಶ ಪತಿರಣ ಎದುರು ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್‌ ಬಾರಿಸಿದ್ದರು. ಆ ಮೂಲಕ ಕೇವಲ 14 ಎಸೆತಗಳಲ್ಲಿ 53 ರನ್‌ ಸಿಡಿಸಿ ದಾಖಲೆ ಬರೆದಿದ್ದರು. ಅಂತಿಮವಾಗಿ ಈ ಪಂದ್ಯದಲ್ಲಿ ಆರ್‌ಸಿಬಿ ಕೇವಲ ಎರಡು ರನ್‌ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಅವರು ಮ್ಯಾನ್‌ ಆಫ್‌ ದಿ ಮ್ಯಾಚ್‌ ಗೆದ್ದಿದ್ದರು.

RCB vs MI: ʻಆಮೆಗತಿಯ ಬ್ಯಾಟಿಂಗ್‌ʼ-ವಿರಾಟ್‌ ಕೊಹ್ಲಿಯ ಆಟದ ಬಗ್ಗೆ ಆಕಾಶ್‌ ಚೋಪ್ರಾ ಅಪಸ್ವರ!

ಲಾರೆನ್‌ ಬೆಲ್‌ 2.2 ಮಿಲಿಯನ್‌ ಫಾಲೋವರ್ಸ್‌

ಇನ್ನು 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡದ ವೇಗದ ಬೌಲರ್‌ ಲಾರೆನ್‌ ಬೆಲ್‌ ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿಯೂ ಗಣನೀಯ ಏರಿಕೆಯಾಗಿತ್ತು. ಮುಂಬೈ ಇಂಡಿಯನ್ಸ್‌ ವಿರುದ್ಧದ ಟೂರ್ನಿಯ ಮೊದಲ ಪಂದ್ಯದ ಮೊಟ್ಟ ಮೊದಲ ಓವರ್‌ ಅನ್ನು ಲಾರೆನ್‌ ಬೆಲ್‌ ಮೇಡಿನ್‌ ಹಾಕಿದ್ದರು. ಇದರ ಫಲವಾಗಿ ಅವರು, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಂದೇ ರಾತ್ರಿ ಒಂದು ಮಿಲಿಯನ್‌ ಫಾಲೋವರ್ಸ್‌ ಅನ್ನ ಪಡೆದಿದ್ದರು. ಪ್ರಸ್ತುತ ಅವರು 2.2 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.