RCB vs GT: ʻಈ ಸಲಾನು ಕಪ್ ನಮ್ದೇʼ-ಗುಜರಾತ್ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್ ಗರಿ!
RCB vs GT IPL 2026 Final Highlights: ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿ ಹಾಗೂ ವಿರಾಟ್ ಕೊಹ್ಲಿಯ ಹೋರಾಟದ ಅರ್ಧಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು 5 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಎರಡನೇ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಸತತ ಎರಡನೇ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ಆರ್‌ಸಿಬಿ. -
ಅಹಮದಾಬಾದ್: ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿಯ (Virat Kohli) ಹೋರಾಟದ ಅರ್ಧಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ (RCB vs GT) ಗುಜರಾತ್ ಟೈಟನ್ಸ್ ಎದುರು 5 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇನ್ನು ಬೌಲಿಂಗ್‌ನಲ್ಲಿ ಕಠಿಣ ಹೋರಾಟ ನೀಡಿ ತವರು ಅಂಗಣದಲ್ಲಿ 2022ರ ಬಳಿಕ ಎರಡನೇ ಪ್ರಶಸ್ತಿ ಗೆಲ್ಲುವ ಶುಭಮನ್ ಗಿಲ್ ನಾಯಕತ್ವದ ಜಿಟಿ ಕನಸು ಭಗ್ನವಾಯಿತು.
ಭಾನುವಾರ (ಮೇ 31) ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಜಿಟಿ ನೀಡಿದ್ದ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ವಿರಾಟ್ ಕೊಹ್ಲಿಯ ( 75* ರನ್) ಅವರ ಅಜೇಯ ಅರ್ಧಶತಕದ ಬಲದಿಂದ 18 ಓವರ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು 161 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಆರ್‌ಸಿಬಿ ಗೆಲುವು ಪಡೆಯುತ್ತಿದ್ದಂತೆ ಡಗ್‌ಔಟ್‌ನಲ್ಲಿದ್ದ ಆಟಗಾರರು ಮೈದಾನಕ್ಕೆ ಓಡಿ ಬಂದು ವಿರಾಟ್ ಕೊಹ್ಲಿ ಅವರ ಜತೆಗೆ ಭರ್ಜರಿಯಾಗಿ ಸಂಭ್ರಮಿಸಿದರು. ಅಲ್ಲದೆ, ಗ್ಯಾಲರಿಯಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದ ಸಾವಿರಾರು ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.
IPL 2026: ಪವರ್‌ಪ್ಲೇನಲ್ಲಿ 35 ವಿಕೆಟ್ ಕಿತ್ತು ಮುಂಬೈ ಇಂಡಿಯನ್ಸ್ ದಾಖಲೆ ಮುರಿದ ಆರ್‌ಸಿಬಿ!
ವಿರಾಟ್ ಕೊಹ್ಲಿ ಜೊತೆ ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್, ಕೇವಲ 16 ಎಸೆತಗಳಲ್ಲಿ 32 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಟೂರ್ನಿಯುದ್ದಕ್ಕೂ ಭರ್ಜರಿ ಫಾರ್ಮ್‌ನಲ್ಲಿದ್ದ ದೇವದತ್ ಪಡಿಕ್ಕಲ್, ಕೇವಲ ಒಂದು ರನ್ ಗಳಿಸಿ ಕಗಿಸೊ ರಬಾಡಗೆ ಔಟ್ ಆದರು. 15 ರನ್ ಗಳಿಸಿದ ಬಳಿಕ ನಾಯಕ ರಜತ್ ಪಾಟಿದಾರ್ ಹಾಗೂ ಕೃಣಾಲ್ ಪಾಂಡ್ಯ ಅವರನ್ನು 9ನೇ ಓವರ್‌ನಲ್ಲಿ ರಶೀದ್ ಖಾನ್ ಔಟ್ ಮಾಡಿ ಜಿಟಿ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ಟಿಮ್ ಡೇವಿಡ್ 24 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.
Finishing off in style 🥳
— IndianPremierLeague (@IPL) May 31, 2026
And it's none other than King Kohli 😎👑
Scorecard ▶️ https://t.co/Yz6K3q6w0X#TATAIPL | #Final | #TheFinalLeap | #RCBvGT pic.twitter.com/FZNGQ26gBs
ವಿರಾಟ್ ಕೊಹ್ಲಿ ನಿರ್ಣಾಯಕ ಅರ್ಧಶತಕ
ಓಪನರ್ ಆಗಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ, ಜಿಟಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 42 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 75 ರನ್ ಸಿಡಿಸಿ ಆರ್‌ಸಿಬಿಯನ್ನು ಗೆಲ್ಲಿಸಿದರು. ಅದರಲ್ಲಿಯೂ ವಿಶೇಷವಾಗಿ ಕೊಹ್ಲಿ 18ನೇ ಓವರ್‌ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಆರ್‌ಸಿಬಿಗೆ ಎರಡನೇ ಐಪಿಎಲ್ ಕಿರೀಟವನ್ನು ಖಚಿತಪಡಿಸಿದರು.
𝘾.𝙃.𝘼.𝙈.𝙋.𝙄.𝙊.𝙉.𝙎 🏆🏆@RCBTweets have done it again ❤️#TATAIPL | #Final | #TheFinalLeap | #RCBvGT pic.twitter.com/ww2zB98Xb8
— IndianPremierLeague (@IPL) May 31, 2026
ಗುಜರಾತ್‌ಗೆ ಆರಂಭಿಕ ಆಘಾತ
ಇದಕ್ಕೂ ಮುನ್ನ ಟಾಸ್ ಗೆದ್ದು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ನಿರ್ಧಾರಕ್ಕೆ ಬೌಲರ್‌ಗಳು ಸಾಥ್ ನೀಡಿದರು. ಈ ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿದ್ದ ಶುಭಮನ್ ಗಿಲ್ (10) ಹಾಗೂ ಸಾಯಿ ಸುದರ್ಶನ್ ಅವರನ್ನು ಪವರ್‌ಪ್ಲೇನಲ್ಲಿಯೇ ಕ್ರಮವಾಗಿ ಜಾಶ್ ಹೇಝಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಔಟ್ ಮಾಡಿ ಆರ್‌ಸಿಬಿಗೆ ಉತ್ತಮ ಆರಂಭ ತಂದುಕೊಟ್ಟಿದ್ದರು. ಈ ಇಬ್ಬರೂ ಬೇಗ ಔಟ್ ಆದ ಪರಿಣಾಮ ಜಿಟಿ ಪವರ್‌ಪ್ಲೇನಲ್ಲಿ 45 ರನ್‌ಗಳಿಗೆ ಶಕ್ತವಾಯಿತು.
Cometh the hour, cometh the King! 🫡
— IndianPremierLeague (@IPL) May 31, 2026
25-ball 5️⃣0️⃣ in on the grandest stage 👏👏
Updates ▶️ https://t.co/Yz6K3q6w0X#TATAIPL | #Final | #TheFinalLeap | #RCBvGT pic.twitter.com/jsEIZuTDC2
ಮೂರನೇ ವಿಕೆಟ್‌ಗೆ ಜೊತೆಯಾದ ನಿಶಾಂತ್ ಸಿಂಧು ಹಾಗೂ ಜೋಸ್ ಬಟ್ಲರ್ ಮಧ್ಯಮ ಓವರ್‌ಗಳಲ್ಲಿ 29 ರನ್ ಜೊತೆಯಾಟವನ್ನು ಆಡಿ ಜಿಟಿಗೆ ಭರವಸೆ ಮೂಡಿಸಿದ್ದರು. ಆದರೆ, 20 ರನ್ ಗಳಿಸಿ ಆಡುತ್ತಿದ್ದ ಸಿಂಧು ಅವರನ್ನು ರಸಿಖ್ ಔಟ್ ಮಾಡಿದರು. ನಂತರ 19 ರನ್ ಗಳಿಸಿ ಆಡುತ್ತಿದ್ದ ಜೋಸ್ ಬಟ್ಲರ್, ಕೃಣಾಲ್ ಪಾಂಡ್ಯಗೆ ದೊಡ್ಡ ಹೊಡೆತವನ್ನು ಆಡಲು ಮುಂದಾಗಿ ಸ್ಟಂಪ್ ಔಟ್ ಆದರು.
ಕೆಳ ಮಧ್ಯಮ ಕ್ರಮಾಂಕಕ್ಕೆ ಶಾಕ್ ನೀಡಿದ ರಸಿಖ್
ಅರ್ಷದ್ ಖಾನ್ 6 ಎಸೆತಗಳಲ್ಲಿ 15 ರನ್ ಸಿಡಿಸಿ ಆಕ್ರಮಣಕಾರಿ ಆಟವನ್ನು ಆಡುತ್ತಿದ್ದಾಗ ಜಾಶ್ ಹೇಝಲ್‌ವುಡ್ ಅವರನ್ನು ಬುದ್ದಿವಂತಿಕೆಯಿಂದ ಔಟ್ ಮಾಡಿದರು. ರಾಹುಲ್ ತೆವಾಟಿಯಾ, ಜೇಸನ್ ಹೋಲ್ಟರ್ ಹಾಗೂ ರಶೀದ್ ಖಾನ್ ಅವರು ಕೆಳ ಮಧ್ಯಮ ಕ್ರಮಾಂಕದಲ್ಲಿ ವಿಫಲರಾದರು. ಈ ಮೂವರು ತಲಾ 7 ರನ್‌ಗೆ ಸೀಮಿತರಾದರು. ತೆವಾಟಿಯಾ ಮತ್ತು ರಶೀದ್ ಖಾನ್ ಅವನ್ನು ರಸಿಖ್ ಔಟ್ ಮಾಡಿ ಕೆಳ ಮಧ್ಯಮ ಕ್ರಮಾಂಕಕ್ಕೆ ಶಾಕ್ ನೀಡಿದರು. ಒಟ್ಟು 4 ಓವರ್‌ಗಳ ಸ್ಪೆಲ್‌ನಲ್ಲಿ ರಸಿಕ್ ಸಲಾಂ, ಕೇವಲ 27 ರನ್ ನೀಡಿ 3 ವಿಕೆಟ್ ಕಿತ್ತರು.
Innings Break!
— IndianPremierLeague (@IPL) May 31, 2026
Washington Sundar fights back but an all-round effort from #RCB restricts #GT to 1️⃣5️⃣5️⃣
Scorecard ▶️ https://t.co/Yz6K3q6w0X#TATAIPL | #Final | #TheFinalLeap | #RCBvGT pic.twitter.com/1nMfBYvg1D
ಜಿಟಿಗೆ ವಾಷಿಂಗ್ಟನ್ ಅರ್ಧಶತಕದ ಆಸರೆ
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಕೊನೆಯವರೆಗೂ ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಿದ ವಾಷಿಂಗ್ಟನ್ ಸುಂದರ್, 37 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅಜೇಯ 50 ರನ್‌ಗಳನ್ನು ಗಳಿಸಿದರು. ಆ ಮೂಲಕ ಜಿಟಿ ಮೊತ್ತವನ್ನು 150ರ ಗಡಿ ದಾಟಿಸಲು ನೆರವು ನೀಡಿದರು. ಅಂತಿಮವಾಗಿ ಗುಜರಾತ್ ಟೈಟನ್ಸ್ ತಂಡ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳಿಗೆ ಸೀಮಿತವಾಯಿತು.
ರಸಿಖ್ ಜೊತೆಗೆ ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಭುವನೇಶ್ವರ್ 29 ರನ್ ನೀಡಿ ಎರಡು ವಿಕೆಟ್ ಕಿತ್ತರೆ, ಜಾಶ್ ಹೇಝಲ್‌ವುಡ್ 37 ರನ್ ಕೊಟ್ಟರೂ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.
Coming up clutch ✅
— IndianPremierLeague (@IPL) May 31, 2026
Washington Sundar with a fighting FIFTY 💪
Updates ▶️ https://t.co/Yz6K3q6w0X#TATAIPL | #Final | #TheFinalLeap | #RCBvGT pic.twitter.com/dwEHzKRMMO
ಸ್ಕೋರ್ ವಿವರ
ಗುಜರಾತ್ ಟೈಟನ್ಸ್: 20 ಓವರ್‌ಗಳಿಗೆ 155-8 (ವಾಷಿಂಗ್ಟನ್ ಸುಂದರ್ 50* ರನ್, ನಿಶಾಂತ್ ಸಿಂಧು 20; ರಸೀಕ್ ದಾರ್ ಸಲಾಮ್ 27 ಕ್ಕೆ 3, ಭುವನೇಶ್ವರ್ ಕುಮಾರ್ 29ಕ್ಕೆ 2, ಜಾಶ್ ಹೇಝಲ್‌ವುಡ್ 37 ಕ್ಕೆ 2)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 18 ಓವರ್‌ಗಳಿಗೆ 161-5 (ವಿರಾಟ್ ಕೊಹ್ಲಿ 75*ರನ್, ವೆಂಕಟೇಶ್ ಅಯ್ಯರ್ 32; ರಶೀದ್ ಖಾನ್ 25 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ವಿರಾಟ್ ಕೊಹ್ಲಿ