IPL 2026: ಸುನೀಲ್ ಗವಾಸ್ಕರ್, ಸಂಜಯ್ ಬಾಂಗರ್ ಪಾದ ಸ್ಪರ್ಶಿಸಿದ ವೈಭವ್ ಸೂರ್ಯವಂಶಿ! ವಿಡಿಯೊ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆರಂಭಿಕ ವೈಭವ್ ಸೂರ್ಯವಂಶಿ ಭರ್ಜರಿ 97 ರನ್‌ಗಳನ್ನು ಸಿಡಿಸಿದರು. ಪಂದ್ಯಕ್ಕೂ ಮುನ್ನ ಸೂರ್ಯವಂಶಿ ಅವರು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಅವರ ಬಳಿ ಆಶೀರ್ವಾದ ಪಡೆದಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುನೀಲ್ ಗವಾಸ್ಕರ್ ಪಾದ ಸ್ಪರ್ಶಿಸಿದ ವೈಭವ್ ಸೂರ್ಯವಂಶಿ. -
ಚಂಡೀಗಢ: ರಾಜಸ್ಥಾನ್ ರಾಯಲ್ಸ್ ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಆರ್‌ಆರ್ ಪರ ವೈಭವ್ ಸೂರ್ಯವಂಶಿ (Vaibhav Sooryavanshi) ಬ್ಯಾಟಿಂಗ್‌ನಲ್ಲಿ ಮಿಂಚಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅವರು ಕೇವಲ 29 ಎಸೆತಗಳಲ್ಲಿ ಸ್ಫೋಟಕ 97 ರನ್‌ಗಳನ್ನು ಬಾರಿಸಿ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಆಕ್ರಮಣಕಾರಿ ಇನಿಂಗ್ಸ್‌ಗಳಲ್ಲಿ ಒಂದನ್ನು ಆಡಿದರು. ಅವರ ಅದ್ಭುತ ಪ್ರದರ್ಶನಕ್ಕಾಗಿ ‘ಪ್ಲೇಯರ್ ಆಫ್ ದ ಮ್ಯಾಚ್’ ಪ್ರಶಸ್ತಿಯೂ ಲಭಿಸಿತು.
ಇದೀಗ ವೈಭವ್ ಸೂರ್ಯವಂಶಿಗೆ ಸಂಬಂಧಿಸಿದ ವಿಡಿಯೊವೊಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲಿಮಿನೇಟ್ ಪಂದ್ಯದ ಆರಂಭಕ್ಕೂ ಮುನ್ನ ಅಭ್ಯಾಸ ಅವಧಿಯಲ್ಲಿ ಫುಟ್ಬಾಲ್ ಆಡುತ್ತಿದ್ದ ವೈಭವ್ ಸೂರ್ಯವಂಶಿ ಸ್ಟಾರ್ ಸ್ಪೋರ್ಟ್ಸ್ ಪ್ರೀ-ಮ್ಯಾಚ್ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಅವರ ಬಳಿ ತೆರಳಿ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದರು. ಬಳಿಕ ಅವರು ಮಾಜಿ ಕ್ರಿಕೆಟಿಗ ಸಂಜಯ್ ಬಾಂಗರ್ ಅವರ ಪಾದಸ್ಪರ್ಶವನ್ನೂ ಮಾಡಿದರು. ಈ ವಿಡಿಯೊ ನೋಡಿದ ಅಭಿಮಾನಿಗಳು ವೈಭವ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
IPL 2026: ʻನ್ಯೂ ಸಿಕ್ಸ್ ಮಷಿನ್ʼ-ವೈಭವ್ ಸೂರ್ಯವಂಶಿಗೆ ಹೊಸ ಹೆಸರು ನಾಮಕರಣ ಮಾಡಿದ ಕ್ರಿಸ್ ಗೇಲ್!
15ರ ವಯಸ್ಸಿನ ಆರ್‌ಆರ್ ಆರಂಭಿಕ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 12 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ಅವರು, ಏಕೈಕ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರ 2012ರ ಐಪಿಎಲ್ ಟೂರ್ನಿಯ ದಾಖಲೆಯನ್ನು ಮುರಿದಿದ್ದಾರೆ. ಗೇಲ್ ಅವರು ಆ ಆವೃತ್ತಿಯಲ್ಲಿ ಒಟ್ಟು 59 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಆ ದಾಖಲೆಯನ್ನು ಹಿಂದಿಕ್ಕಿದೆ.
SRH vs RR: 97 ರನ್ ಚಚ್ಚಿದ ವೈಭವ್ ಸೂರ್ಯವಂಶಿಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ವೈಭವ್ ಸೂರ್ಯವಂಶಿ ಅವರು 97 ರನ್‌ಗಳಲ್ಲಿದ್ದಾಗ ಪ್ರಫುಲ್ ಹಿಂಗೆ ಎಸೆತದಲ್ಲಿ ಅಪ್ಪರ್ ಕಟ್ ಶಾಟ್ ಆಡಿದರು. ಆದರೆ ಥರ್ಡ್ ಮ್ಯಾನ್ ಜಾಗದಲ್ಲಿ ಅದ್ಭುತ ಕ್ಯಾಚ್ ಪಡೆದ ಸ್ಮರಣ್ ರವಿಚಂದ್ರನ್, ವೈಭವ್ ಸೂರ್ಯವಂಶಿ ಅವರ ಕನಸನ್ನು ಭಗ್ನಗೊಳಿಸಿದರು. ಪರಿಣಾಮವಾಗಿ, ಸೂರ್ಯವಂಶಿ ತಮ್ಮ ಶತಕವನ್ನು ಕೇವಲ 29 ಎಸೆಗಳಲ್ಲಿ ಪೂರ್ಣಗೊಳಿಸುವ ಅವಕಾಶ ಕಳೆದುಕೊಂಡರು.
15-year-old Vaibhav Sooryavanshi showing respect by touching the feet of Sunil Gavaskar and Sanjay Bangar was wholesome enough… but Jatin Sapru quickly moving away when Vaibhav came towards him made the moment even more hilarious. 🤣❤️#SRHvsRR #VaibhavSooryavanshi pic.twitter.com/CtdwqieQDh
— Faruk (@uf2151593) May 27, 2026
ಆ ಶಾಟ್ ಸಿಕ್ಸರ್ ಆಗಿದ್ದರೆ, ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಆಟಗಾರರಾಗುತ್ತಿದ್ದರು. ಆ ಮೂಲಕ ಕ್ರಿಸ್ ಗೇಲ್ ಅವರ ವೇಗದ ಶತಕದ ದಾಖಲೆಯನ್ನು ಮುರಿಯುತ್ತಿದ್ದರು. 2012ರ ಐಪಿಎಲ್ ಟೂರ್ನಿಯಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ 30 ಎಸೆತಗಳಲ್ಲಿ ಶತಕದ ದಾಖಲಿಸಿದ್ದರು.