IPL 2026: ʻವಿರಾಟ್ ಕೊಹ್ಲಿಯನ್ನು ಹೆಚ್ಚು ಅವಲಂಬಿಸಬೇಡಿʼ-ಆರ್‌ಸಿಬಿಗೆ ಸಂಜಯ್ ಮಾಂಜ್ರೇಕರ್ ವಾರ್ನಿಂಗ್!
IPL 2026 Playoffs: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಎಚ್ಚರಿಕೆ ನೀಡಿದ್ದಾರೆ. ಕೇವಲ ವಿರಾಟ್ ಕೊಹ್ಲಿಯನ್ನು ಮಾತ್ರ ತಂಡ ಅವಲಂಬಿಸಬಾರದು ಎಂದು ಸಲಹೆ ನೀಡಿದ್ದಾರೆ.
ಆರ್‌ಸಿಬಿಗೆ ವಾರ್ನಿಂಗ್ ಕೊಟ್ಟ ಸಂಜಯ್ ಮಾಂಜ್ರೇಕರ್. -
ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸತತ ಎರಡನೇ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ (Sanjay Manjrekar) ಎಚ್ಚರಿಕೆಯನ್ನು ನೀಡಿದ್ದಾರೆ. ಇದೀಗ ಮೇ 26 ರಂದು ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ, ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶ ಮಾಡಲಿದೆ. ಆರ್‌ಸಿಬಿ ತಂಡ ಕೇವಲ ವಿರಾಟ್ ಕೊಹ್ಲಿಯನ್ನು ಮಾತ್ರ ಅವಲಂಬಿಸಬಾರದು ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಪರ ಈ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, 14 ಪಂದ್ಯಗಳಲ್ಲಿ 50.63ರ ಸರಾಸರಿಯಲ್ಲಿ 557 ರನ್‌ಗಳನ್ನು ಕಲೆಹಾಕಿದ್ದಾರೆ. ಜೊತೆಗೆ ಗುಜರಾತ್ ಟೈಟನ್ಸ್ ವಿರುದ್ಧವೂ ಅವರಿಗೆ ಅತ್ಯುತ್ತಮ ದಾಖಲೆ ಇದ್ದು, ಎಂಟು ಪಂದ್ಯಗಳಲ್ಲಿ 76.66ರ ಸರಾಸರಿಯಲ್ಲಿ 460 ರನ್‌ಗಳನ್ನು ಗಳಿಸಿದ್ದಾರೆ. ಇದರ ನಡುವೆ ಸಂಜಯ್ ಮಾಂಜ್ರೇಕರ್ ಪ್ಲೇಆಫ್ಸ್ ಪಂದ್ಯಗಳಲ್ಲಿ ಕೊಹ್ಲಿ ಅತಿಯಾದ ಹೊಣೆಗಾರಿಕೆಯನ್ನು ತಮ್ಮ ಮೇಲೆಯೇ ತೆಗೆದುಕೊಳ್ಳಲು ಯತ್ನಿಸಿದರೆ, ಅದು ಆರ್‌ಸಿಬಿಯನ್ನು ಅಪಾಯಕಾರಿ ಪರಿಸ್ಥಿತಿಗೆ ತಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ʻಇದು ನನ್ನ ನಿರ್ಧಾರವಲ್ಲʼ:IPL 2026 ಟೂರ್ನಿಯಿಂದ ಹೊರಗುಳಿಯಲು ಅಸಲಿ ಕಾರಣ ತೆರೆದಿಟ್ಟ ಯಶ್ ದಯಾಳ್!
ಆರ್‌ಸಿಬಿ ತಂಡದ ಆಕ್ರಮಣಾತ್ಮಕ ಮತ್ತು ಸಮತೋಲಿತ ಆಟದ ವಿಧಾನವನ್ನು ಮುಂದುವರಿಸಬೇಕು ಎಂದು ಸಂಜಯ್ ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
"ಆರ್‌ಸಿಬಿ ತಂಡದ ಪ್ರವೃತ್ತಿ ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕು. ವಿರಾಟ್ ಕೊಹ್ಲಿ ತಂಡಕ್ಕೆ ಕೀ ಆಟಗಾರ, ಆದರೆ ಎಲ್ಲವೂ ಅವರನ್ನೇ ಅವಲಂಬಿಸಿಲ್ಲ, ಈ ಕಾರಣದಿಂದಲೇ ಆರ್‌ಸಿಬಿ ತಂಡ ಟೂರ್ನಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ," ಎಂದು ಸ್ಪೋರ್ಟ್ಸ್‌ಸ್ಟಾರ್ ಪಾಡ್‌ಕಾಸ್ಟ್‌ಗೆ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.
RCB vs GT: ಫಿಲ್ ಸಾಲ್ಟ್ or ವೆಂಕಟೇಶ್ ಅಯ್ಯರ್? ಮೊದಲನೇ ಕ್ವಾಲಿಫೈಯರ್‌ಗೂ ಮುನ್ನ ಆರ್‌ಸಿಬಿಗೆ ಟೆನ್ಷನ್!
“ವಿರಾಟ್ ಕೊಹ್ಲಿ ಅವರು ಇದೇ ರೀತಿಯ ಆಟದ ಶೈಲಿಯನ್ನು ಮುಂದುವರಿಸುವುದು ಅತ್ಯಂತ ಮುಖ್ಯ. ಏಕೆಂದರೆ ಅಂತಿಮ ಹಂತಗಳಲ್ಲಿ ಅವರು ಅತಿಯಾದ ಹೊಣೆಗಾರಿಕೆಯನ್ನು ತಮ್ಮ ಮೇಲೆಯೇ ತೆಗೆದುಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಅವರು ಹಾಗೆ ಮಾಡಿದರೆ, ಅದು ಆರ್‌ಸಿಬಿ ತಂಡಕ್ಕೆ ಅಪಾಯಕಾರಿ ಪರಿಸ್ಥಿತಿ ಆಗಬಹುದು. ಆದ್ದರಿಂದ ತಂಡವು ತಮ್ಮ ಈಗಿನ ಟೆಂಪ್ಲೇಟ್‌ನನ್ನೇ ಮುಂದುವರಿಸಬೇಕು ಎಂದು ನಾನು ಭಾವಿಸುತ್ತೇನೆ,” ಎಂದು ಕ್ರಿಕೆಟ್ ನಿರೂಪಕ ಸಲಹೆ ನೀಡಿದ್ದಾರೆ.
ಐಪಿಎಲ್‌ನ ಅತ್ಯಂತ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರೂ ವಿರಾಟ್ ಕೊಹ್ಲಿ ಪ್ಲೇಆಫ್ಸ್ ಹಂತಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಾಬಲ್ಯ ತೋರಲು ಕಷ್ಟಪಟ್ಟಿದ್ದಾರೆ. 17 ಇನಿಂಗ್ಸ್‌ಗಳಲ್ಲಿ ಅವರು 26.4ರ ಸರಾಸರಿ ಮತ್ತು 121.1ರ ಸ್ಟ್ರೈಕ್ ರೇಟ್‌ನೊಂದಿಗೆ 396 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೇವಲ ಎರಡು ಅರ್ಧಶತಕಗಳನ್ನು ದಾಖಲಿಸಿದ್ದು, ಅವರ ಗರಿಷ್ಠ ಸ್ಕೋರ್ 70* ಆಗಿದೆ.