ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ದೊಡ್ಡ ಅಪ್‌ಡೇಟ್‌ ಕೊಟ್ಟ ಆರ್‌ಸಿಬಿ ಕೋಚ್‌!

IPL 2026: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಿರಾಟ್‌ ಕೊಹ್ಲಿ ತಮ್ಮ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ ಎಂದು ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್‌ ಹೇಳಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಐಪಿಎಲ್ ಆರಂಭಿಕ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ಕೊಹ್ಲಿ ಇನ್ನೂ ಅಪಾರ ಉತ್ಸಾಹ ಮತ್ತು ಹಸಿವು ಹೊಂದಿದ್ದು, ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಂಡಿ ಫ್ಲವರ್‌!

ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ಆಂಡಿ ಫ್ಲವರ್‌ ಹೇಳಿಕೆ. -

Profile
Ramesh Kote Mar 27, 2026 8:42 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಅವರು ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದಾರೆಂದು ಹೆಡ್‌ ಕೋಚ್‌ ಆಂಡಿ ಫ್ಲವರ್‌ (Andy Flower) ತಿಳಿಸಿದ್ದಾರೆ. ಮಾರ್ಚ್‌ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಿಕ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

“ವಿರಾಟ್‌ ಕೊಹ್ಲಿ ಮಾನಸಿಕವಾಗಿ ಬಹಳ ಉತ್ತಮ ಸ್ಥಿತಿಯಲ್ಲಿ ಇದ್ದಾರೆ. ಅವರು ತಮ್ಮ ಮೇಲೆ ತುಂಬಾ ನಂಬಿಕೆ ಹೊಂದಿದ್ದಾರೆ, ಆದರೆ ಇನ್ನೂ ರನ್‌ ಗಳಿಸುವ ಅಪಾರ ಹಸಿವು ಹೊಂದಿದ್ದಾರೆ. ತರಬೇತಿಯಲ್ಲಿ ಅವರು ಬ್ಯಾಟ್‌ನಿಂದ ಚೆಂಡು ಹೊಡೆಯುವ ರೀತಿಯನ್ನು ನೋಡಿದರೆ, ಅವರು ತಮ್ಮ ಶ್ರೇಷ್ಠ ಮಟ್ಟದಲ್ಲಿದ್ದಾರೆ ಎಂದು ಕಾಣಿಸುತ್ತದೆ,” ಎಂದು ಆಂಡಿ ಫ್ಲವರ್‌ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

IPL 2026: ಎಸ್‌ಆರ್‌ಎಚ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತ, ನುವಾನ್‌ ತುಷಾರ್‌ ಔಟ್‌?

ಆರ್‌ಸಿಬಿ ತಂಡ ಹಾಲಿ ಚಾಂಪಿಯನ್‌ ಆಗಿ ಈ ಬಾರಿ ಕಣಕ್ಕೆ ಇಳಿಯುತ್ತಿದೆ. 18 ವರ್ಷಗಳ ದೀರ್ಘ ನಿರೀಕ್ಷೆಯ ನಂತರ ಬೆಂಗಳೂರು ತಂಡ ಕಳೆದ ವರ್ಷ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ಆರ್‌ಸಿಬಿ ಈ ಸೀಸನ್ ಅನ್ನು ಭರ್ಜರಿಯಾಗಿ ಆರಂಭಿಸಲು ಎದುರು ನೋಡುತ್ತಿದೆ. ಕಳೆದ ವರ್ಷ ಜೂನ್‌ ತಿಂಗಳಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ನಡೆದಿದ್ದ ಕಾಲ್ತುಳಿತ ಘಟನೆಯ ನಂತರ ಈ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರ್ಬಂಧ ಹೇರಲಾಗಿತ್ತು. ಏಕೆಂದರೆ ಆರ್‌ಸಿಬಿ ಟ್ರೋಫಿ ಸಂಭ್ರಮಾಚರಣೆಯ ವೇಳೆ ನಡೆದ ಆ ದುರ್ಘಟನೆಯಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದರು.

ಪಿಚ್‌ ಕಂಡೀಷನ್‌ ಬಗ್ಗೆ ಆರ್‌ಸಿಬಿ ಕೋಚ್‌ ಹೇಳಿಕೆ

ಬೆಂಗಳೂರಿನ ಪಿಚ್ ಪರಿಸ್ಥಿತಿಗಳ ಕುರಿತು ಮಾತನಾಡಿದ ಹೆಡ್ ಕೋಚ್‌, ಈ ಬಾರಿ ಸೀಸನ್ ಆರಂಭದಲ್ಲಿ ಎದುರಿಸಿದ ಸಮಸ್ಯೆಗಳನ್ನು ಪುನರಾವರ್ತಿಸಬಾರದು ಎಂಬುದು ಆರ್‌ಸಿಬಿ ತಂಡದ ಉದ್ದೇಶ ಎಂದು ಹೇಳಿದರು.‌ 2025ರಲ್ಲಿ ಈ ಮೈದಾನದ ಸ್ಟಿಕ್ಕಿ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿ ಪರಿಣಮಿಸಿತ್ತು ಮತ್ತು ಚಿನ್ನಸ್ವಾಮಿ ಮೈದಾನದ ಪಂದ್ಯಗಳು ಸಾಮಾನ್ಯವಾಗಿ ಹೆಚ್ಚಿನ ರನ್‌ಗಳ ಪಂದ್ಯಗಳಾಗಿರಲಿಲ್ಲ ಎಂದು ಅವರು ನೆನಪಿಸಿಕೊಂಡರು. ಈ ಬಾರಿ ಸೀಸನ್ ಆರಂಭದಲ್ಲೇ ಪಿಚ್ ಮತ್ತು ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಆಟವಾಡುವುದಾಗಿ ಅವರು ಹೇಳಿದ್ದಾರೆ.

IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿಗೆ ಆಗಮಿಸಿದ ಜಾಶ್‌ ಹೇಝಲ್‌ವುಡ್‌!

“ಕಳೆದ ವರ್ಷ ನಾವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಮೂರು ಪಂದ್ಯಗಳನ್ನು ಸೋತಿದ್ದೇವೆ ಮತ್ತು ಆ ಅನುಭವಗಳಿಂದ ನಾವು ಪಾಠ ಕಲಿತಿದ್ದೇವೆ. ಈ ಬಾರಿ ಪರಿಸ್ಥಿತಿಗಳು ಸ್ವಲ್ಪ ಭಿನ್ನವಾಗಿರಬಹುದು, ಆದ್ದರಿಂದ ಅವುಗಳನ್ನು ನಾವು ಸಮೀಕ್ಷೆ ಮಾಡಬೇಕು. ಆದರೆ ತವರು ಅಂಗಣದಲ್ಲಿ ಎದುರಾಳಿಗಳಿಗಿಂತ ಪರಿಸ್ಥಿತಿಗಳ ಸೂಕ್ಷ್ಮತೆಗಳನ್ನು ನಾವು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ನಾವು ಇಲ್ಲಿ ಅಭ್ಯಾಸ ಮಾಡುತ್ತಿದ್ದೇವೆ ಮತ್ತು ಈ ಅಂಶಗಳ ಬಗ್ಗೆ ಹೆಚ್ಚು ಚರ್ಚೆ ಮಾಡಿದ್ದೇವೆ, ಆದ್ದರಿಂದ ನಮ್ಮ ತವರು ಮೈದಾನದಲ್ಲಿ ಎದುರಾಳಿಗಳಿಗಿಂತ ನಾವು ಸ್ವಲ್ಪ ಮುನ್ನಡೆಯಲ್ಲಿರುತ್ತೇವೆ ಎಂದು ನಂಬಿದ್ದೇನೆ,” ಎಂದು ಆಂಡಿ ಫ್ಲವರ್‌ ತಿಳಿಸಿದ್ದಾರೆ.