Viral Video: ರಸ್ತೆಗೆ ಮದ್ಯದ ಬಾಟಲ್ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ
ಸಾರ್ವಜನಿಕ ಸ್ಥಳದಲ್ಲಿ ವಹಿಸಬೇಕಾದ ಜವಾಬ್ದಾರಿ ಹಾಗೂ ವರ್ತಿಸಬೇಕಾದ ರೀತಿಯನ್ನು ನಾವಿಂದು ಮರೆತಿದ್ದೇವೆ. ಅದರಲ್ಲೂ ಭಾರತೀಯರ ನಡವಳಿಕೆ ಬಗ್ಗೆ ಇತ್ತೀಚಿನ ದಿನದಲ್ಲಿ ದೂರು ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ವ್ಯಕ್ತಿಯೊಬ್ಬನ ಬೇಜವ್ದಾರಿಯ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಮಧ್ಯವಯಸ್ಕನೊಬ್ಬ ರಸ್ತೆಗೆ ಗಾಜಿನ ಮದ್ಯದ ಬಾಟಲ್ ಎಸೆದಿದ್ದಾನೆ. ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.
ರಸ್ತೆಗೆ ಬಾಟಲ್ ಎಸೆದ ವ್ಯಕ್ತಿ -
ಮುಂಬೈ, ಜು. 21: ನಾಗರಿಕ ಪ್ರಜ್ಞೆಯ ಕೊರತೆ ಇತ್ತೀಚಿನ ದಿನದಲ್ಲಿ ಅತಿಯಾಗಿ ಚರ್ಚಿಸಲ್ಪಡುವ ಹಾಟ್ ಟಾಪಿಕ್. ಬೇರೊಬ್ಬರ ತಪ್ಪುಗಳನ್ನು ಕೈ ಮಾಡಿ ತೋರಿದುವ ನಾವು ನಮ್ಮ ತಪ್ಪುಗಳನ್ನು ಸರಿಪಡಿಸುವಲ್ಲಿ ಎಡವುತ್ತಿದ್ದೇವೆ. ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎನ್ನುವುದನ್ನು ಬಹುತೇಕರು ಮರೆತಿದ್ದಾರೆ. ಅದರಲ್ಲೂ ಭಾರತೀಯರ ನಡವಳಿಕೆ ಬಗ್ಗೆ ಇತ್ತೀಚಿನ ದಿನದಲ್ಲಿ ದೂರುಗಳು ಕೇಳಿಬರುತ್ತಲೇ ಇವೆ. ಇದಕ್ಕೆ ಪೂರಕ ಎಂಬಂತೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬನ ಬೇಜವ್ದಾರಿಯ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ವ್ಯಕ್ತಿಯೊಬ್ಬ ರಸ್ತೆಗೆ ಗಾಜಿನ ಮದ್ಯದ ಬಾಟಲಿಯನ್ನು ಎಸೆದಿದ್ದಾನೆ. ಈ ಘಟನೆಯ (Viral Video) ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಇತ್ತೀಚೆಗೆ ನಡೆದ ಈ ಘಟನೆಯು ಜನರು ಎಷ್ಟರ ಮಟ್ಟಿಗೆ ನಾಗರಿಕ ಪ್ರಜ್ಞೆ ಮರೆತಿದ್ದಾರೆ ಎಂಬುದನ್ನು ಸಾರಿ ಹೇಳಿದೆ. ವಿಡಿಯೊದಲ್ಲಿ ಮಧ್ಯವಯಸ್ಕನೊಬ್ಬ ಸೇತುವೆಯಲ್ಲಿ ನಿಂತು ರಸ್ತೆಗೆ ಗಾಜಿನ ಮದ್ಯದ ಬಾಟಲಿಯನ್ನು ಎಸೆದಿದ್ದಾನೆ. ಆದರೆ ಈ ಕ್ಷಣ ರಸ್ತೆಯಲ್ಲಿ ಕಾರೊಂದು ವೇಗವಾಗಿ ಚಲಿಸಿದ್ದು ಅದರ ಚಾವಣಿಗೆ ಬಿದ್ದಿದೆ. ಆ ಮೂಲಕ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ವಿಡಿಯೊ ನೋಡಿ:
ಈ ಘಟನೆ ಮಹಾರಾಷ್ಟ್ರದ ಲೋನಾವಾಲ ಬಳಿ ನಡೆದಿದೆ. ವಿಡಿಯೊದಲ್ಲಿ ಆ ವ್ಯಕ್ತಿ ತನ್ನ ಕಾರಿನಿಂದ ಗಾಜಿನ ಬಾಟಲಿಯನ್ನು ಹೊರತೆಗೆದು ಸೇತುವೆಯಿಂದ ಎಸೆದಿದ್ದಾನೆ. ಆತ ಪಾದಾಚಾರಿಗಳು ಇದ್ದಾರೆಯೇ ಅಥವಾ ವಾಹನಗಳು ಸಂಚರಿಸುತ್ತಿವೆತೆ? ಎಂದು ಪರಿಶೀಲಿಸದೆ ಬಾಟಲಿ ಎಸೆದಿದ್ದಾನೆ. ಅದು ಕೆಳಗಿನ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದರ ಚಾವಣಿಗೆ ಬಿದ್ದಿದೆ.
ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಬಾಲಕಿ
ಸೇತುವೆಯ ಒಂದು ಬದಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಗಾಜಿನ ಬಾಟಲಿಯು ಕಾರಿನ ಮೇಲೆ ಬಿದ್ದಿದೆ ಎಂದು ಹೇಳಿದಾಗ ಆತ, ರಸ್ತೆ ಖಾಲಿಯಾಗಿದೆ ಎಂದು ಭಾವಿಸಿದ್ದೆ ಎಂದು ಸಮರ್ಥಿಸಿಕೊಂಡಿದ್ದಾನೆ. ಆದರೆ ಅದೃಷ್ಟವಶಾತ್ ಯಾವುದೇ ಸಮಸ್ಯೆ ಎದುರಾಗಿಲ್ಲ. "ದಯವಿಟ್ಟು ಇಂತಹ ಅಜಾಗರೂಕ ಕೃತ್ಯಗಳನ್ನು ಮಾಡಬೇಡಿ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.
ಅನೇಕರು ಆ ವ್ಯಕ್ತಿಯ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದು, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಬ್ರುಬ "ದುರದೃಷ್ಟವಶಾತ್ ಎಂದರೆ ಇಂತಹ ನಡವಳಿಕೆ ಸಮರ್ಥಿಸಿಕೊಳ್ಳುವ ಜನರಿದ್ದಾರೆ. ಸಾರ್ವಜನಿಕ ರಸ್ತೆಗಳು ಇವರ ಸ್ವಂತ ಆಸ್ತಿಯೇ?" ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರ, ʼʼಭಾರತೀಯರಿಗೆ ನಿಜವಾಗಿಯೂ ನಾಗರಿಕ ಪ್ರಜ್ಞೆ ಕೊರತೆ ಇದೆ" ಎಂದಿದ್ದಾರೆ.