ʻಪಂಜಾಬ್ ಪರ ಇನಿಂಗ್ಸ್ ಆರಂಭಿಸುತ್ತೇನೆʼ: ಪ್ರೀತಿ ಜಿಂಟಾಗೆ ಯುಜ್ವೇಂದ್ರ ಚಹಲ್ ಮನವಿ!
ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂಚ್ರ ಚಹಲ್ ಅವರು ಓನರ್ ಪ್ರೀತಿ ಝಿಂಟಾಗೆ ಮನವಿಯೊಂದನ್ನು ಮಾಡಿದ್ದಾರೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯವೊಂದಲ್ಲಿ ಇನಿಂಗ್ಸ್ ಆರಂಭಿಸುತ್ತೇನೆಂದು ಕೇಳಿದ್ದು, ಇದಕ್ಕೆ ಪ್ರೀತಿ ಝಿಂಡಾ ಹಾಸ್ಯಮಯ ಉತ್ತರ ನೀಡಿದ್ದಾರೆ.
ಪ್ರೀತಿ ಝಿಂಟಾಗೆ ಯುಜ್ವೇಂದ್ರ ಚಹಲ್ ಮನವಿ. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಇನಿಂಗ್ಸ್ ಆರಂಭಿಸುತ್ತೇನೆಂದು ಓನರ್ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ (Preity Zinta) ಬಳಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರೀತಿ ಝಿಂಟಾ ಅವರು ಪಂಜಾಬ್ ಕಿಂಗ್ಸ್ ಸ್ಪಿನ್ನರ್‌ಗೆ ಹಾಸ್ಯಮಯ ಉತ್ತರ ನೀಡಿದ್ದಾರೆ. ಎಕ್ಸ್ ಖಾತೆಯಲ್ಲಿ ಪ್ರೀತಿ ಝಿಂಟಾ ಅವರು ಅಭಿಮಾನಿಗಳ ಜೊತೆ ಸಂಭಾಷಣೆ ನಡೆಸಿದರು ಹಾಗೂ ಅಭಿಮಾನಿಗಳ ಪ್ರಶ್ನಗೆ ಅವರು ಉತ್ತರವನ್ನು ನೀಡಿದ್ದಾರೆ. ಈ ವೇಳೆ ಯುಜ್ವೇಂದ್ರ ಚಹಲ್ ಕೂಡ ಒಂದು ಪ್ರಶ್ನೆಯನ್ನು ತಮ್ಮ ತಂಡದ ಓನರ್ ಬಳಿ ಕೇಳಿದ್ದಾರೆ.
ಈ ಪ್ರಶ್ನೋತ್ತರ ಅವಧಿಯಲ್ಲಿ ಯುಜ್ವೇಂದ್ರ ಚಹಲ್ ಅವರು ಅಭಿಮಾನಿಯಂತೆ ಪ್ರಶ್ನೆಯನ್ನು ಕೇಳಿದರು. ಟೂರ್ನಿಯ ಕನಿಷ್ಠ ಒಂದು ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಲು ನನಗೆ ಅವಕಾಶ ಸಿಗುತ್ತಾ ಎಂದು ಅವರು ಪ್ರೀತಿ ಝಿಂಟಾಗೆ ಕೇಳಿದರು. "ಮೇಡಂ ಮುಂದಿನ ಪಂದ್ಯಗಳ ಪೈಕಿ ಒಂದರಲ್ಲಿ ನನಗೆ ಇನಿಂಗ್ಸ್ ಆರಂಭಿಸಲು ಅವಕಾಶ ಸಿಗಬಹುದಾ," ಎಂದು ಚಹಲ್ ಕೇಳಿದರು.
PBKS vs RR: ಅಜೇಯ ಪಂಜಾಬ್‌ಗೆ ಮೊದಲ ಸೋಲುಣಿಸುವ ತವಕದಲ್ಲಿ ರಾಜಸ್ಥಾನ್
ಪ್ರೀತಿ ಝಿಂಟಾ ಪ್ರತಿಕ್ರಿಯೆ ಹೇಗಿದೆ?
ಕೊನೆಯಲ್ಲಿ ಪ್ರೀತಿ ಝಿಂಟಾ ಅವರ ಪ್ರತಿಕ್ರಿಯೆಯೇ ಹೆಚ್ಚು ಗಮನ ಸೆಳೆಯಿತು. ಲೆಗ್ ಸ್ಪಿನ್ನರ್‌ಗೆ ಪಿಬಿಕೆಎಸ್ ತಂಡದ ಓನರ್ ತಿಳಿಸಿದಂತೆ, ಒಮ್ಮೆ ಐಪಿಎಲ್ ಟೂರ್ನಿಯು ಮುಗಿದ ನಂತರ ನೀವು ಒಂದು ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದರೂ ಪ್ರಭ್‌ಸಿಮ್ರನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
For sure Yuzi ❤️ Anything for you. IPL Khatam hone do, uske baad whichever match you like 😂I’m sure Prabh & Priyansh won’t mind then 🤩😂 #Ting
— Preity G Zinta (@realpreityzinta) April 27, 2026
"ಖಚಿತವಾಗಿಯೂ ಯುಝಿ. ನಿಮಗಾಗಿ ಏನು ಬೇಕಾದರೂ ಮಾಡುತ್ತೇವೆ. ಒಮ್ಮೆ ಐಪಿಎಲ್ ಟೂರ್ನಿ ಮುಗಿದ ಬಳಿಕ ನೀವು ಇನಿಂಗ್ಸ್ ಆರಂಭಿಸಬಹುದು. ಇದಕ್ಕೆ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ವಿರೋಧವಿಲ್ಲ ಎಂದು ಭಾವಿಸುತೇನೆ," ಎಂದು ಪ್ರೀತಿ ಝಿಂಟಾ ತಿಳಿಸಿದ್ದಾರೆ.
2026ರ ಟೂರ್ನಿಯಲ್ಲಿ ಪ್ರಭ್‌ಸಿಮ್ರನ್-ಪ್ರಿಯಾಂಶ್ ಮಿಂಚು
ಈ ಸೀಸನ್‌ನಲ್ಲಿ ಪ್ರಭ್‌ಸಿಮ್ರನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಇಬ್ಬರೂ ಪಿಬಿಕೆಎಸ್ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2025ರ ಐಪಿಎಲ್ ಟೂರ್ನಿಯಲ್ಲಿ ಅವರು ತೋರಿಸಿದ್ದ ಲಯವನ್ನೇ ಈ ಬಾರಿಯೂ ಮುಂದುವರಿಸಿದ್ದಾರೆ. ಏಳು ಪಂದ್ಯಗಳಲ್ಲಿ ಪ್ರಭ್‌ಸಿಮ್ರನ್ 192.61 ಸ್ಟ್ರೈಕ್‌ರೇಟ್ ಮತ್ತು 57.4ರ ಸರಾಸರಿಯಲ್ಲಿ ಒಟ್ಟು 287 ರನ್‌ಗಳನ್ನು ಗಳಿಸಿದ್ದಾರೆ.
ʻಮೊಹ್ಸಿನ್ ಖಾನ್ ಭಾರತದ ಪರ ಶೀಘ್ರದಲ್ಲಿಯೇ ಆಡಲಿದ್ದಾರೆʼ: ಜಸ್ಟಿನ್ ಲ್ಯಾಂಗರ್ ಭವಿಷ್ಯ ನಿಜವಾಗುತ್ತಾ?
ಇನ್ನೊಂದೆಡೆ, ಪ್ರಿಯಾಂಶ್ ಆರ್ಯ ಆರು ಪಂದ್ಯಗಳಲ್ಲಿ 249.01ರ ಸ್ಟ್ರೈಕ್‌ರೇಟ್ ಮತ್ತು 42.33ರ ಸರಾಸರಿಯಲ್ಲಿ 254 ರನ್‌ಗಳನ್ನು ಬಾರಿಸಿದ್ದಾರೆ. ಏಪ್ರಿಲ್ 25ರಂದು ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದಿದ್ದ ದಾಖಲೆ ಚೇಸ್ ವೇಳೆ, ಇವರಿಬ್ಬರೂ ಕೇವಲ 41 ಎಸೆತಗಳಲ್ಲಿ 126 ರನ್‌ಗಳ ಜೊತೆಯಾಟವಾಡಿ, ಐತಿಹಾಸಿಕ ಗೆಲುವಿಗೆ ನೆರವು ನೀಡಿದ್ದರು.