ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದುಬೈ ವಿಮಾನ ನಿಲ್ದಾಣದ ಬಳಿ ಸ್ಫೋಟ: ಸಂಕಷ್ಟಕ್ಕೆ ಸಿಲುಕಿದ ಸಿಂಧು, ಮಹಿಳಾ ಕುಸ್ತಿಪಟುಗಳು

Iran conflict: ಮಂಗಳವಾರ ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಓಪನ್‌ಗಾಗಿ ಸಿಂಧು ಬರ್ಮಿಂಗ್ಹ್ಯಾಮ್‌ಗೆ ತೆರಳುತ್ತಿದ್ದರು. ದುಬೈನಿಂದ ಅವರು ಬರ್ಮಿಂಗ್ಹ್ಯಾಮ್‌ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಇರಾನ್‌ ದಾಳಿಯ ಕಾರಣ ವಿಶ್ವದ ಅತಿ ಬ್ಯುಸಿ ಏರ್‌ಪೋರ್ಟ್‌ ಎಂದೇ ಪ್ರಖ್ಯಾತಿ ಪಡೆದ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ನಿಲ್ಲಿಸಿದೆ.

ದುಬೈ ವಿಮಾನ ನಿಲ್ದಾಣದ ಬಳಿ ಸ್ಫೋಟ: ಸಂಕಷ್ಟಕ್ಕೆ ಸಿಲುಕಿದ ಸಿಂಧು

Sindhu is currently stuck in Dubai -

Abhilash BC
Abhilash BC Mar 1, 2026 12:12 PM

ದುಬೈ, ಮಾ.1: ಏರ್‌ಪೋರ್ಟ್‌ ಸೇರಿ ಯುಎಇಯ ಹಲವು ಸ್ಥಳಗನ್ನು ಗುರಿಯಾಗಿಸಿಕೊಂಡು ಶನಿವಾರ ಇರಾನ್ ದಾಳಿ ನಡೆಸಿದ ಪರಿಣಾಮ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಈ ದಿಢೀರ್‌ ಘೋಷಣೆ ಪರಿಣಾಮ ಸಾವಿರಾರು ಪ್ರಯಾಣಿಕರು ಏರ್ಪೋರ್ಟ್‌ಗಳಲ್ಲೇ ಸಿಲುಕಿದ್ದು, ಅತಂತ್ರರಾಗಿದ್ದಾರೆ. ಅವಳಿ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಕೂಡ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಜತೆಗೆ ಅಲ್ಲಿನ ಭಯಾನಕತೆಯನ್ನೂ ಎಕ್ಸ್‌ ಪೋಸ್ಟ್‌ ಮೂಲಕ ತೆರೆದಿಟ್ಟಿದ್ದಾರೆ.

"ಅಗ್ನಿಪರೀಕ್ಷೆ ಮುಂದುವರಿಯುತ್ತಲೇ ಇದೆ, ಮತ್ತು ಪರಿಸ್ಥಿತಿ ಗಂಟೆಗಟ್ಟಲೆ ಭಯಾನಕವಾಗುತ್ತಿದೆ. ಕೆಲವು ಗಂಟೆಗಳ ಹಿಂದೆ, ವಿಮಾನ ನಿಲ್ದಾಣದಲ್ಲಿ ನಾವು ಸಿಲುಕಿದ್ದ ಸ್ಥಳದ ಬಳಿ ಸ್ಫೋಟ ಸಂಭವಿಸಿದೆ. ನನ್ನ ಕೋಚ್ ಸ್ಫೋಟಗೊಂಡ ಸ್ಥಳದ ಹತ್ತಿರದ್ದಲ್ಲೇ ಇದರು. ಆ ಪ್ರದೇಶದಿಂದ ನಾವೆಲ್ಲರೂ ಬೇಗನೆ ಓಡಿಹೋಗಬೇಕಾಯಿತು. ಅದು ನಮಗೆಲ್ಲರಿಗೂ ಅತ್ಯಂತ ಉದ್ವಿಗ್ನ ಮತ್ತು ಭಯಾನಕ ಕ್ಷಣವಾಗಿತ್ತು" ಎಂದು ಸಿಂಧು ಬರೆದಿದ್ದಾರೆ.

"ನಾವೆಲ್ಲರೂ ಈಗ ಸುರಕ್ಷಿತರಾಗಿದ್ದೇವೆ ಮತ್ತು ಹೆಚ್ಚು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ದುಬೈ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ದುಬೈ ಅಧಿಕಾರಿಗಳ ಅವಿರತ ಪ್ರಯತ್ನಕ್ಕೆ ಧನ್ಯವಾದಗಳು. ನಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡಿದ ಅದ್ಭುತ ಬೆಂಬಲ ಮತ್ತು ನಿರಂತರ ಸಹಾಯಕ್ಕಾಗಿ ದುಬೈನಲ್ಲಿರುವ ಭಾರತೀಯ ಹೈಕಮಿಷನ್‌ಗೆ ವಿಶೇಷ ಧನ್ಯವಾದಗಳು. ಸದ್ಯಕ್ಕೆ, ನಾವು ಸ್ವಲ್ಪ ವಿಶ್ರಾಂತಿ ಪಡೆಯಲು ಮತ್ತು ವಿಷಯಗಳು ಇತ್ಯರ್ಥವಾಗುವವರೆಗೆ ಕಾಯುತ್ತಿರುವಾಗ ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು.



ಇಸ್ರೇಲ್‌ನ ಹಲವೆಡೆ ಸರಣಿ ದಾಳಿ ನಡೆಸಿರುವ ಇರಾನ್‌ ಸೇನೆ, ಇದರ ಜತೆಗೆ ಯುಎಇ, ಸೌದಿ ಅರೇಬಿಯಾ, ಕತಾರ್‌, ಜೋರ್ಡಾನ್‌, ಕುವೈತ್‌, ಬಹ್ರೈನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ಹಾರಿಸಿಬಿಟ್ಟಿದೆ.

ಮಂಗಳವಾರ ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಓಪನ್‌ಗಾಗಿ ಸಿಂಧು ಬರ್ಮಿಂಗ್ಹ್ಯಾಮ್‌ಗೆ ತೆರಳುತ್ತಿದ್ದರು. ದುಬೈನಿಂದ ಅವರು ಬರ್ಮಿಂಗ್ಹ್ಯಾಮ್‌ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಇರಾನ್‌ ದಾಳಿಯ ಕಾರಣ ವಿಶ್ವದ ಅತಿ ಬ್ಯುಸಿ ಏರ್‌ಪೋರ್ಟ್‌ ಎಂದೇ ಪ್ರಖ್ಯಾತಿ ಪಡೆದ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಹೀಗಾಗಿ ಸಿಂಧು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡರು.

ಟಿರಾನಾದಲ್ಲಿ ಸಿಲುಕಿಕೊಂಡ 16 ಮಹಿಳಾ ಕುಸ್ತಿಪಟುಗಳು

ದುಬೈ ಮೂಲಕ ಹಿಂದಿರುಗುವ ವಿಮಾನ ರದ್ದಾದ ಕಾರಣ ದೇಶದ ಮಹಿಳಾ ಕುಸ್ತಿಪಟುಗಳು ಅಲ್ಬೇನಿಯಾದ ಟಿರಾನಾದಲ್ಲಿ ಸಿಲುಕಿಕೊಂಡರು. ಫೆಬ್ರವರಿ 25 ರಂದು ನಡೆದಿದ್ದ ಫ್ರೀಸ್ಟೈಲ್ ಎರಡನೇ ರ‍್ಯಾಂಕಿಂಗ್ ಸರಣಿಯಲ್ಲಿ ಸ್ಪರ್ಧಿಸಲು 16 ಮಹಿಳಾ ಕುಸ್ತಿಪಟುಗಳು ತಮ್ಮ ಸಹಾಯಕ ಸಿಬ್ಬಂದಿಯೊಂದಿಗೆ ಅಲ್ಬೇನಿಯಾಗೆ ಆಗಮಿಸಿದ್ದರು.