ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಕಪಿಲ್‌ ದೇವ್‌ಗಿಂತ ಜಸ್‌ಪ್ರೀತ್‌ ಬುಮ್ರಾ ಉತ್ತಮ ಎಂದ ರವಿ ಶಾಸ್ತ್ರಿ!

ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಜಸ್‌ಪ್ರೀತ್‌ ಬುಮ್ರಾ ಅವರನ್ನು ಟೀಮ್‌ ಇಂಡಿಯಾ ಮಾಜಿ ಕೋಚ್‌ ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ. ಕಪಿಲ್‌ ದೇವ್‌ಗಿಂತಲೂ ಜಸ್‌ಪ್ರೀತ್‌ ಬುಮ್ರಾ ಶ್ರೇಷ್ಠ ವೇಗದ ಬೌಲರ್‌ ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.

ಕಪಿಲ್‌ ದೇವ್‌ಗಿಂತ ಜಸ್‌ಪ್ರೀತ್‌ ಬುಮ್ರಾ ಉತ್ತಮ ಎಂದ ರವಿ ಶಾಸ್ತ್ರಿ!

ಜಸ್‌ಪ್ರೀತ್‌ ಬುಮ್ರಾಗೆ ರವಿ ಶಾಸ್ತ್ರಿ ಮೆಚ್ಚುಗೆ.

Profile Ramesh Kote Jun 23, 2025 5:45 PM

ಲೀಡ್ಸ್‌: ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು (IND vs ENG) ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಮಾರಕ ಬೌಲಿಂಗ್‌ ದಾಳಿ ನಡೆಸಿದ್ದರು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು 465 ರನ್‌ಗಳಿಗೆ ಆಲ್‌ಔಟ್‌ ಮಾಡಲು ಭಾರತ ತಂಡಕ್ಕೆ ನೆರವು ನೀಡಿದ್ದರು. ಇದರ ಮೂಲಕ ಟೀಮ್‌ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ 6 ರನ್‌ ಮುನ್ನಡೆ ಪಡೆದಿತ್ತು. ಇದೀಗ ಭಾರತ ತಂಡದ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ (Ravi Shastri), ಜಸ್‌ಪ್ರೀತ್‌ ಬುಮ್ರಾ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಮಾಜಿ ನಾಯಕ ಕಪಿಲ್‌ ದೇವ್‌ಗಿಂತ ಜಸ್‌ಪ್ರೀತ್‌ ಬುಮ್ರಾ ಅತ್ಯುತ್ತಮ ವೇಗದ ಬೌಲರ್‌ ಎಂದು ಬಣ್ಣಿಸಿದ್ದಾರೆ.

ಸ್ಕೈ ಕ್ರಿಕೆಟ್‌ ಜೊತೆ ಮಾತನಾಡಿದ ರವಿ ಶಾಸ್ತ್ರಿ, ಜಸ್‌ಪ್ರೀತ್‌ ಬುಮ್ರಾ ಅವರು ಕಪಿಲ್‌ ದೇವ್‌ ಅವರಿಗಿಂತ ಭಾರತದ ಅತ್ಯಂತ ಶ್ರೇಷ್ಠ ವೇಗದ ಬೌಲರ್‌ ಎಂದು ಕರೆದಿದ್ದಾರೆ. ಬ್ಯಾಟ್ಸ್‌ಮನ್‌ ಅನ್ನು ಅತ್ಯುತ್ತಮವಾಗಿ ಅರಿತುಕೊಳ್ಳಬಲ್ಲ ಹಾಗೂ ಅವರಿಗೆ ರೂಪಿಸುವ ರಣತಂತ್ರವನ್ನು ನೋಡಿದರೆ ಜಸ್‌ಪ್ರೀತ್‌ ಬುಮ್ರಾ ವೆಸ್ಟ್‌ ಇಂಡೀಸ್‌ ದಿಗ್ಗಜ ಮಾಲ್ಕಮ್ ಮಾರ್ಷಲ್ ಅವರಿಗೆ ಹೋಲುತ್ತಾರೆ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs ENG: ಕೆಎಲ್‌ ರಾಹುಲ್‌ ಭಾರತದ ಅತ್ಯುತ್ತಮ ಟಸ್ಟ್‌ ಬ್ಯಾಟ್ಸ್‌ಮನ್‌ ಎಂದ ಚೇತೇಶ್ವರ್‌ ಪೂಜಾರ!

"ಜಸ್‌ಪ್ರೀತ್‌ ಬುಮ್ರ ಭಾರತದ ಅತ್ಯಂತ ಶ್ರೇಷ್ಠ ವೇಗದ ಬೌಲರ್‌ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಾನು ಕಪಿಲ್‌ ದೇವ್‌ ಅವರ ಜೊತೆ ಆಡಿದ್ದೇನೆ, ಆದರೆ ಇವರು ಸ್ವಲ್ಪ ವಿಭಿನ್ನವಾಗಿದ್ದಾರೆ. ಇವರು ಯಾವುದೇ ಸ್ಥಳದಲ್ಲಿ, ಯಾವುದೇ ಸ್ವರೂಪದಲ್ಲಿ, ಯಾವುದೇ ಎದುರಾಳಿಯನ್ನು ತೆಗೆದುಕೊಳ್ಳಬಲ್ಲರು. ನಾನು ನೋಡಿದಂತೆ ಬ್ಯಾಟ್ಸ್‌ಮನ್‌ ಅನ್ನು ಅರಿತುಕೊಳ್ಳುವುದರಲ್ಲಿ ಹಾಗೂ ಬ್ಯಾಟ್ಸ್‌ಮನ್‌ಗೆ ರೂಪಿಸುವ ರಣತಂತ್ರದ ವಿಷಯದಲ್ಲಿ ಮಾಲ್ಕಮ್‌ ಮಾರ್ಷಲ್‌ ಅತ್ಯುತ್ತಮವಾಗಿದ್ದರು. ಅವರು (ಜಸ್‌ಪ್ರೀತ್‌ ಬುಮ್ರಾ) ಸ್ವಿಂಗ್‌ ಮಾಡುತ್ತಿದ್ದರೆ, ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗೂ ಆಡಲು ಕಷ್ಟವಾಗುತ್ತದೆ. ಪ್ರಪಂಚದ ಯಾವುದೇ ಬ್ಯಾಟ್ಸ್‌ಮನ್‌, ಅವರಿಗೆ ಕೌಂಟರ್‌ ನೀಡುವುದು ಕಷ್ಟ. ಅವರ ಬೌಲಿಂಗ್‌ ಆಕ್ಷನ್‌ ಮತ್ತು ಅವರು ನಿಧಾನವಾಗಿ ಚೆಂಡು ಬಿಡುಗಡೆ ಮಾಡುವ ವಿಧಾನ," ಎಂದು ರವಿ ಶಾಸ್ತ್ರಿ ಹೊಗಳಿಸಿದ್ದಾರೆ.

IND vs ENG: 128 ರನ್‌ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಕನ್ನಡಿಗ ಪ್ರಸಿಧ್‌ ಕೃಷ್ಣ!

ಹಲವು ದಾಖಲೆಗಳನ್ನು ಬರೆದ ಜಸ್‌ಪ್ರೀತ್‌ ಬುಮ್ರಾ

ಇಂಗ್ಲೆಂಡ್‌ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ಪರ ಎಲ್ಲರ ಗಮನ ಸೆಳೆದಿದ್ದು, ಜಸ್‌ಪ್ರೀತ್‌ ಬುಮ್ರಾ. ಈ ಇನಿಂಗ್ಸ್‌ನಲ್ಲಿ ಅವರು 83 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು 5 ವಿಕೆಟ್‌ ಸಾಧನೆ ಮಾಡಿದ ವೇಗದ ಬೌಲರ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ನಾಯಕ ಹಾಗೂ ವೇಗಿ ಪ್ಯಾಟ್‌ ಕಮಿನ್ಸ್‌ ಅವರ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ. ಕಮಿನ್ಸ್‌ 10 ಬಾರಿ 5 ವಿಕೆಟ್‌ ಕಿತ್ತಿದ್ದಾರೆ.

ಮೊದಲ ಏಷ್ಯಾ ಬೌಲರ್‌ ಜಸ್‌ಪ್ರೀತ್‌ ಬುಮ್ರಾ

ಜಸ್‌ಪ್ರೀತ್‌ ಬುಮ್ರಾ ಅವರು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಒಟ್ಟು 150 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಏಷ್ಯಾ ಬೌಲರ್‌ ಎಂಬ ದಾಖಲೆಯನ್ನು ಬುಮ್ರಾ ಬರೆದಿದ್ದಾರೆ. ಆ ಮೂಲಕ ಪಾಕಿಸ್ತಾನ ದಿಗ್ಗಜ ವಸೀಮ್‌ ಅಕ್ರಮ್‌ (146 ವಿಕೆಟ್‌) ಅವರ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ. ಸೇನಾ ದೇಶಗಳಲ್ಲಿ 150 ವಿಕೆಟ್‌ಗಳನ್ನು ಕಿತ್ತ ಮೊದಲ ಏಷ್ಯಾ ಬೌಲರ್‌ ಎಂಬ ದಾಖಲೆಯನ್ನು ಕೂಡ ಬುಮ್ರಾ ಬರೆದಿದ್ದಾರೆ. ಈ ನಾಲ್ಕು ರಾಷ್ಟ್ರಗಳಲ್ಲಿ10 ವಿಕೆಟ್‌ ಸಾಧನೆ ಮಾಡಿದ ಮೂರನೇ ಏಷ್ಯಾದ ಬೌಲರ್‌ ಎಂಬ ದಾಖಲೆ ಕೂಡ ಜಸ್‌ಪ್ರೀತ್‌ ಬುಮ್ರಾ ಹೆಸರಿನಲ್ಲಿದೆ.