ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ಯಾಟಿಂಗ್‌ಗಾಗಿ ಕೊರಗಿದ್ದೇ ಈಗ ಕಂಟಕ? ಜಿತೇಶ್‌ ಶರ್ಮಾ ಟ್ರೋಲ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರಿ ಟ್ರೋಲ್‌ಗೆ ಒಳಪಟ್ಟಿದ್ದಾರೆ. ಐಪಿಎಲ್‌ 2025 ಟೂರ್ನಿಯಲ್ಲಿ ಆರ್‌ಸಿಬಿ ತನ್ನ ಚೊಚ್ಚಲ ಟ್ರೋಫಿ ಗೆದ್ದ ಸಂದರ್ಭದಲ್ಲಿ ತಂಡದ ಯಶಸ್ಸಿಗೆ ತಮ್ಮದೇ ಕೊಡುಗೆ ಸಲ್ಲಿಸಿ ಗಮನ ಸೆಳೆದಿದ್ದ ಜಿತೇಶ್‌, ಈಗ ತಮ್ಮದೇ ಅತಿಯಾದ ಮಾತಗಳಿಂದ ಫ್ಯಾನ್ಸ್‌ ಎದುರು ಬೆಪ್ಪಾಗಿದ್ದಾರೆ.

ಬ್ಯಾಟಿಂಗ್‌ಗಾಗಿ ಕೊರಗಿದ್ದೇ ಈಗ ಕಂಟಕ? ಜಿತೇಶ್‌ ಶರ್ಮಾ ಟ್ರೋಲ್!

ಆರ್‌ಸಿಬಿ ಆಟಗಾರ ಜಿತೇಶ್‌ ಶರ್ಮಾ -

Vijeth Kumar DN
Vijeth Kumar DN May 8, 2026 7:13 PM

ಐಪಿಎಲ್‌ 2026 ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಿಂದ ಟೀಕೆಗೆ ಗುರಿಯಾಗಿರುವ ಆರ್‌ಸಿಬಿ ಆಟಗಾರ ಜಿತೇಶ್‌ ಶರ್ಮಾ, ಈಗ ತಮ್ಮದೇ ಹಳೆಯ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮೊದಲ ಇಂಡಿಯನ್ ಪ್ರೀಮಿಯರ್‌ ಲೀಗ್‌ ಕಿರೀಟ ಗೆಲ್ಲುವ ಸಲುವಾಗಿ ಬರೋಬ್ಬರಿ 18 ವರ್ಷಗಳೇ ಕಾಯಬೇಕಾಯಿತು. ಐಪಿಎಲ್ 2025 ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಆರ್‌ಸಿಬಿ ಟ್ರೋಫಿ ಎತ್ತಿ ಹಿಡಿದಿತ್ತು.

ಈ ಐತಿಹಾಸಿಕ ಗೆಲುವಿನ ಮತ್ತಿನಲ್ಲಿ ಆರ್‌ಸಿಬಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾ ಆಡಿದ್ದ ಮಾತೊಂದು ಈಗ ಅವರನ್ನೇ ಕಾಡುತ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಅವರದ್ದೇ ಮಾತುಗಳನ್ನು ಬಳಸಿ ಜಿತೇಶ್‌ನ ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗಿದೆ.

RCB vs LSG ಪಂದ್ಯದ ಕೊನೆಯ ಓವರ್‌ ದಿಗ್ವೇಶ್‌ ಸಿಂಗ್‌ಗೆ ನೀಡಲು ಕಾರಣ ತಿಳಿಸಿದ ರಿಷಭ್‌ ಪಂತ್‌!

ಕ್ರಿಕೆಟ್‌ನಲ್ಲಿ ಹಲವು ಮೂಢನಂಬಿಕೆಗಳಿವೆ. ಕೆಲವರು ಡಗೌಟ್‌ನಲ್ಲಿನ ಸ್ಥಾನ ಬದಲಾದರೂ ತಂಡದ ಅದೃಷ್ಟ ಬದಲಾಗುತ್ತದೆ ಎಂದು ನಂಬುತ್ತಾರೆ. ಅದೇ ರೀತಿ, ಬ್ಯಾಟಿಂಗ್‌ ಅವಕಾಶಕ್ಕಾಗಿ ಸಹ ಆಟಗಾರರ ವೈಫಲ್ಯವನ್ನು ಮನಸ್ಸಿನಲ್ಲಿ ಬಯಸಿದರೆ ತಂಡ ಗೆಲ್ಲೋದಿಲ್ಲ ಎಂಬ ಮಾತೂ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತದೆ. ಈ ವಿಚಾರ ಆರ್‌ಸಿಬಿ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾ ಅವರ ಕೇಸ್‌ನಲ್ಲೂ ನಿಜ ಎಂಬಂತ್ತಾಗಿದೆ.

ಐಪಿಎಲ್‌ 2026 ಟೂರ್ನಿಗೂ ಮುನ್ನ ಪಾಡ್‌ಕಾಸ್ಟ್‌ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಮಾತನಾಡಿದ್ದ ಜಿತೇಶ್‌ ಶರ್ಮಾ, ಆರ್‌ಸಿಬಿ ತಂಡದ ಟಾಪ್‌ ಆರ್ಡರ್‌ ಬ್ಯಾಟಿಂಗ್‌ ಎಷ್ಟು ಬಲಿಷ್ಠವಾಗಿದೆ ಎಂದು ಬಣ್ಣಿಸುವ ಭರದಲ್ಲಿ ಒಂದು ಮಾತನ್ನಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಅಂದರೆ 4ನೇ ಅಥವಾ 5ನೇ ವಿಕೆಟ್‌ ಪತನದ ಬಳಿಕ ತಮಗೆ ಬ್ಯಾಟಿಂಗ್‌ ಅವಕಾಶ ಸಿಗಲಿದ್ದು, ಇದಕ್ಕಾಗಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಆಗ ನಾನು ಬ್ಯಾಟ್‌ ಮಾಡಬಹುದು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದ ಸಂಗತಿಯನ್ನು ಬಾಯ್ಬಿಟ್ಟಿದ್ದರು.

RCB vs LSG: ಮಿಚೆಲ್‌ ಮಾರ್ಷ್‌ ಶತಕದ ಬಲದಿಂದ ಗೆದ್ದ ಲಖನೌ, ಆರ್‌ಸಿಬಿಗೆ ಸತತ ಎರಡನೇ ಸೋಲು!

ತಾವು ಆರ್‌ಸಿಬಿ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡಬೇಕು. ಮ್ಯಾಚ್‌ ವಿನ್ನರ್‌ ಎನಿಸಿಕೊಳ್ಳಬೇಕು ಎಂಬುದು ಜಿತೇಶ್‌ ಶರ್ಮಾ ಅವರ ಉದ್ದೇಶ. ಆದರೆ, ಅವಕಾಶಕ್ಕಾಗಿ ಈ ರೀತಿ ಕೊರಗಿದರೆ ತಂಡಕ್ಕೆ ಅದು ಒಳ್ಳೆಯದ್ದನ್ನು ತಂದುಕೊಡುವುದಿಲ್ಲ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಜಿತೇಶ್‌ ಅವರನ್ನು ಜಾಡಿಸಲಾಗಿದೆ.

ಇದಕ್ಕೆ ಪೂರಕವಾಗಿ ಪ್ರಸಕ್ತ ಟೂರ್ನಿಯಲ್ಲಿ ಜಿತೇಶ್‌ ಶರ್ಮಾ ಅವರ ಬ್ಯಾಟ್‌ನಿಂದ ರನ್‌ ಬಂದಿಲ್ಲ. ತಂಡ ಒಟ್ಟು 10 ಪಂದ್ಯಗಳನ್ನು ಆಡಿದ್ದು, 6 ಗೆಲುವು ಮತ್ತು 4 ಸೋಲಿನೊಂದಿಗೆ ಒಟ್ಟು 12 ಅಂಕಗಳನ್ನು ಕಲೆಹಾಕಿದೆ. ಪ್ಲೇ ಆಫ್ಸ್‌ ತಲುಪಲು ಉಳಿದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.

ಇನ್ನು 8 ಪಂದ್ಯಗಳಲ್ಲಿ ಬ್ಯಾಟ್‌ ಮಾಡುವ ಅವಕಾಶ ಪಡೆದಿದ್ದ ಜಿತೇಶ್‌, ಮ್ಯಾಚ್‌ ಗೆದ್ದುಕೊಡುವುದಿರಲಿ, ಪರಿಣಾಮಕಾರಿ ಇನಿಂಗ್ಸ್‌ ಆಡಲು ಕೂಡ ವಿಫಲರಾಗಿದ್ದಾರೆ. ಜಿತೇಶ್‌ ಈ ಬಾರಿ ಕ್ರಮವಾಗಿ 0 (1), 5 (9), 10, 23(9), 14 (20), 10 (6), 1, 1 (3) ರನ್‌ಗಳನ್ನು ಮಾತ್ರವೇ ಗಳಿಸಿ ಟೀಕಾಕಾರ ಬಾಯಿಗೆ ಆಹಾರವಾಗಿದ್ದಾರೆ.

RCB vs LSG: 49 ಎಸೆತಗಳಲ್ಲಿ ಶತಕ ಸಿಡಿಸಿ ಕೆಎಲ್‌ ರಾಹುಲ್‌ ದಾಖಲೆ ಮುರಿದ ಮಿಚೆಲ್‌ ಮಾರ್ಷ್‌!

ಚುರುಕಿನ ವಿಕೆಟ್‌ ಕೀಪಿಂಗ್‌ ಜೊತೆಗೆ 360 ಶೈಲಿಯ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಜಿತೇಶ್‌ ಶರ್ಮಾ, ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ 'ಮ್ಯಾಚ್‌ ವಿನ್ನಿಂಗ್' ಇನಿಂಗ್ಸ್‌ ಆಡುವ ದೊಡ್ಡ ಅವಕಾಶ ಪಡೆದಿದ್ದರಾದರೂ 3 ಎಸೆತಗಳಲ್ಲಿ ಕೇವಲ 1 ರನ್‌ಗೆ ಔಟಾಗಿ ಭಾರಿ ನಿರಾಶೆ ಮೂಡಿಸಿದರು.

ಇದರ ಬೆನ್ನಲ್ಲೇ ಅವರದ್ದೇ ಮಾತುಗಳನ್ನು ಮುಂದಿಟ್ಟು ನೆಟ್ಟಿಗರು ಲೇವಡಿ ಮಾಡಿದ್ದಾರೆ. ಐಪಿಎಲ್‌ 2025 ಟೂರ್ನಿಯಲ್ಲಿ ಇದೇ ಎಲ್‌ಎಸ್‌ಜಿ ಎದುರು 227 ರನ್‌ ಚೇಸ್‌ ಮಾಡುವಾಗ ಜಿತೇಶ್‌ ಸ್ಪೋಟಕ ಅರ್ಧಶತಕ (89*) ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಆದರೆ, ಈ ಬಾರಿ ಅಂಥದ್ದೇ ಆಟವಾಡಲು ಸಂಪೂರ್ಣ ವಿಫಲರಾದರು.

ಅಂದಹಾಗೆ ನೀವು ಆಡಿದ್ದ ಟೀಮ್‌ನಲ್ಲೂ ಈ ರೀತಿ ಕೊರಗುವ ಆಟಗಾರ ಯಾರಾದ್ರು ಇದ್ರ? ಕಾಮೆಂಟ್‌ ಮೂಲಕ ತಿಳಿಸಿ. ನಿಮ್ಮ ಅನುಭವ ಹಂಚಿಕೊಳ್ಳಿ.