ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಇನ್ನೂ ಒಂದೂ ಪಂದ್ಯ ಗೆಲ್ಲದ ಕೆಕೆಆರ್‌ ಪ್ಲೇಆಫ್ಸ್‌ನಿಂದ ಔಟ್‌? ಇದಕ್ಕೆ ಬಲವಾದ ಕಾರಣ!

KKR Playoffs Qualification Scenario: ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಸೋಲುಗಳನ್ನು ಅನುಭವಿಸಿದೆ. ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಸೋತಿದ್ದು, ಇನ್ನೊಂದು ಮಳೆಯಿಂದ ರದ್ದಾಗಿದೆ. ಕೆಕೆಆರ್‌ ತಂಡದ ಪ್ಲೇಆಫ್ಸ್‌ ಲೆಕ್ಕಾಚಾರವನನ್ನು ಇಲ್ಲಿ ವಿವರಿಸಲಾಗಿದೆ.

4 ಪಂದ್ಯಗಳನ್ನು ಸೋತಿರುವ ಕೆಕೆಆರ್‌ಗೆ ಪ್ಲೇಆಫ್ಸ್‌ಗೆ ಚಾನ್ಸ್‌ ಇದೆಯಾ?

ಕೆಕೆಆರ್‌ ತಂಡದ ಪ್ಲೇಆಫ್ಸ್‌ ಲೆಕ್ಕಾಚಾರ. -

Profile
Ramesh Kote Apr 15, 2026 6:08 PM

ಚೆನ್ನೈ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (IPL 2026) ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ (KKR) ತಂಡದ ಸೋಲಿನ ಸರಪಳಿ ಮುಂದುವರಿದಿದೆ. ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧವೂ ಕೆಕೆಆರ್‌ 32 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಸೋಲಿನ ಬಳಿಕ ಕೋಲ್ಕತಾ ತಂಡ ಆಡಿದ ಐದು ಪ೦ದ್ಯಗಳಿಂದ ಇನ್ನೂ ಒಂದೇ ಒಂದು ಗೆಲುವು ಕೂಡ ಸಾಧಿಸಿಲ್ಲ. ನಾಲ್ಕು ಪಂದ್ಯಗಳಲ್ಲಿ ಸೋತಿದ್ದರೆ, ಇನ್ನೊಂದು ಪಂದ್ಯ ಮಳೆಗೆ ಬಲಿಯಾಗಿತ್ತು ಹಾಗೂ ಕೆಕೆಆರ್‌ಗೆ ಒಂದು ಅಂಕ ಲಭಿಸಿತ್ತು. ಇದರ ಪರಿಣಾಮ ಕೆಕೆಆರ್ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಆರಂಭಿಕ ಐದು ಪಂದ್ಯಗಳು ಮುಗಿದ ಬಳಿಕ ಕೆಕೆಆರ್‌ ತಂಡ ಇನ್ನೂ ಗೆಲುವು ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಕೆಕೆಆರ್‌ ತಂಡದ ಮೇಲೆ ಹೆಚ್ಚಿನ ಒತ್ತಡವಿದೆ. ಅಜಿಂಕ್ಯ ರಹಾನೆ ನಾಯಕತ್ವದ ತಂಡ ಇನ್ನೂ ಗೆಲುವಿನ ಲಯವನ್ನು ಕಂಡುಕೊಂಡಿಲ್ಲ. ಇದು ಕೋಲ್ಕತಾ ತಂಡದಲ್ಲಿ ಗಂಭೀರ ವಿಷಯವಾಗಿದ್ದು, ರಹಾನೆ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಇದರ ಜೊತೆಗೆ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಕೆಕೆಆರ್‌ಗೆ ದೊಡ್ಡ ಸವಾಲು ಎದುರಾಗಿದೆ. ಐಪಿಎಲ್‌ ಇತಿಹಾಸದಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಆದರ್ಶವಾಗಿ 8 ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಬೇಕಾಗುತ್ತದೆ. 7 ಪಂದ್ಯಗಳನ್ನು ಗೆದ್ದರೂ ಅವಕಾಶ ಸಿಗಬಹುದು, ಆದರೆ ಇತರೆ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.

CSK vs KKR: ನಾಲ್ಕನೇ ಸೋಲಿನ ಬೇಸರದಲ್ಲಿದ್ದ ಅಜಿಂಕ್ಯ ರಹಾನೆಗೆ ಮತ್ತೊಂದು ಮರ್ಮಾಘಾತ!

ಕೆಕೆಆರ್‌ ಪ್ಲೇಆಫ್ಸ್‌ ಲೆಕ್ಕಾಚಾರ ಹೇಗಿದೆ?

ಇದರ ಪ್ರಕಾರ ಕೆಕೆಆರ್‌ ತಂಡ ನಾಕ್‌ಔಟ್‌ಗೆ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ 9 ಪಂದ್ಯಗಳಲ್ಲಿ ಕನಿಷ್ಠ 8ರಲ್ಲಿ ಗೆಲುವು ಪಡೆಯಬೇಕಾಗುತ್ತದೆ. ಹಾಗಾಗಿ ಇನ್ನೂ ಒಂದೂ ಪಂದ್ಯ ಗೆಲ್ಲದ ಕೋಲ್ಕತಾ ತಂಡದ ಪ್ಲೇಆಫ್ಸ್‌ಗೆ ತುಂಬಾ ಕಠಿಣವಾಗಿದೆ. ಅಜಿಂಕ್ಯ ರಹಾನೆ ನಾಯಕನಾಗಿ ಅವರು ಇನ್ನೂ ಎಡವುತ್ತಿದ್ದಾರೆ, ಪ್ರಮುಖ ಆಟಗಾರರು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.

ಕೋಲ್ಕತಾ ತಂಡದ ವೈಫಲ್ಯಕ್ಕೆ ಕಾರಣ

ಪ್ರಸ್ತುತ ಸನ್ನಿವೇಶದಲ್ಲಿ ಕೆಕೆಆರ್‌ ತಂಡ ತೃಪ್ತಿಕರವಾದ ಪ್ರದರ್ಶನವನ್ನು ಇನ್ನೂ ಹೊರ ತೋರಿಲ್ಲ. ತಂಡದ ಸಂಯೋಜನೆಯಲ್ಲಿ ಸಮಸ್ಯೆ, ಸ್ಥಿರತೆಯ ಕೊರತೆ ಹಾಗೂ ಗಾಯಗಳ ಸಮಸ್ಯೆಗಳು ಕೆಕೆಆರ್‌ ತಂಡಕ್ಕೆ ಸತತವಾಗಿ ಕಾಡುತ್ತಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ತಂಡ ಐದು ಪಂದ್ಯಗಳನ್ನು ಗೆದ್ದಿತ್ತು. ಆದರೆ, ಈ ಸೀಸನ್‌ನಲ್ಲಿ ಕನಿಷ್ಠ ಐದು ಪಂದ್ಯಗಳನ್ನು ಗೆಲ್ಲುವುದು ಅನುಮಾನ ಎಂದು ಇತ್ತೀಚಿನ ಕಳಪೆ ಪ್ರದರ್ಶನದಿಂದ ನಿರ್ಧರಿಸಬಹುದು. ಸದ್ಯ ಕೆಕೆಆರ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ʻನೀವು ಫಾರ್ಮ್‌ಗೆ ಮರಳಬೇಕೆಂದರೆ ನನ್ನ ಮಾತು ಕೇಳಿʼ: ಋತುರಾಜ್‌ ಗಾಯಕ್ವಾಡ್‌ಗೆ ಅಶ್ವಿನ್‌ ಎಚ್ಚರಿಕೆ!

ಎಷ್ಟು ಪಂದ್ಯಗಳನ್ನು ಗೆದ್ದರೆ ಪ್ಲೇಆಫ್ಸ್‌ಗೆ ಪ್ರವೇಶಿಸಬಹುದು?

8 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದರೆ (17-19 ಅಂಕಗಳು) ಪ್ಲೇಆಫ್ಸ್‌ ಸ್ಥಾನ ಖಚಿತವಾಗುತ್ತದೆ. ಆದರೆ, ಕೆಕೆಆರ್‌ ತಂಡ ಮುಂದಿನ ಪಂದ್ಯಗಳನ್ನು ತ್ವರಿತಗತಿಯಲ್ಲಿ ಗೆಲ್ಲಲಿದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ 7 ಪಂದ್ಯಗಳನ್ನು (15 ಅಂಕಗಳು) ಗೆದ್ದರೆ, ನಾಕ್‌ಔಟ್‌ ರೇಸ್‌ನಲ್ಲಿ ತಂಡ ಉಳಿಯಲಿದೆ ಆದರೆ, ಈ ತಂಡದ ಪ್ಲೇಅಫ್ಸ್‌ ಭವಿಷ್ಯ ರನ್‌ರೇಟ್‌ ಹಾಗೂ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಒಂದು ವೇಳೆ 6 ಪಂದ್ಯಗಳನ್ನು ಗೆದ್ದರೆ (12 ಅಂಕ+ ನೋ ರಿಸಲ್ಟ್‌=13 ಅಂಕಗಳು) ಇತರೆ ತಂಡಗಳ ಫಲಿತಾಂಶ ಕೆಕೆಆರ್‌ ಪರವಾಗಿ ಮೂಡಿಬರಬೇಕಾಗುತ್ತದೆ. ಆದರೆ, ಈ ಲೆಕ್ಕಾಚಾರದಲ್ಲಿ ಯಾವುದೇ ಗ್ಯಾರೆಂಟಿ ನೀಡಲು ಸಾಧ್ಯವಿಲ್ಲ.