ಫಿಲ್ ಸಾಲ್ಟ್ ಗೈರಲ್ಲಿ ಆರ್‌ಸಿಬಿಗೆ ಓಪನರ್ ಯಾರು? ಪರ್ಫೆಕ್ಟ್ ಪ್ಲೇಯರ್ ಕೊಟ್ಟ ಕ್ರಿಸ್ ಶ್ರೀಕಾಂತ್!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2026ರ ಆವೃತ್ತಿಯಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭದ ಹೊರತಾಗಿ ಈಗ ಸತತ ಸೋಲಿನ ಆಘಾತಕ್ಕೊಳಗಾಗಿದೆ. ಅದರಲ್ಲೂ ಸ್ಟಾರ್ ಓಪನರ್ ಫಿಲ್ ಸಾಲ್ಟ್ ಗಾಯಗೊಂಡ ಬಳಿಕ ಚಾಲೆಂಜರ್ಸ್‌ಗೆ ಸ್ಪೋಟಕ ಆರಂಭಗಳು ಸಿಗುತ್ತಿಲ್ಲ. ಹೀಗಾಗಿ ಓಪನರ್ ಬದಲಿಸುವಂತೆ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಸೂಚಿಸಿದ್ದಾರೆ.
ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ -
ಬೆಂಗಳೂರು: ಗಾಯದ ಸಮಸ್ಯೆಯಿಂದ ಸ್ಪೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಸೇವೆ ಲಭ್ಯವಾಗದೇ ಇರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ವಿಶೇಷವಾಗಿ ಪವರ್‌ಪ್ಲೇ ಅವಧಿಯಲ್ಲಿ ಆರ್‌ಸಿಬಿ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್, ಆರ್‌ಸಿಬಿ ತಂಡಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.
ಕೊಹ್ಲಿ-ಬೆಥೆಲ್ ಜೋಡಿ ವರ್ಕೌಟ್ ಆಗುತ್ತಿಲ್ಲ!
ಸದ್ಯ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಮತ್ತು ಜೇಕಬ್ ಬೆಥೆಲ್ ಅವರನ್ನು ಆರಂಭಿಕ ಜೋಡಿಯಾಗಿ ಬಳಸುತ್ತಿದೆ. ಆದರೆ, ಈ ಜೋಡಿ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ ಎಂದು ಕ್ರಿಸ್ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಫಿಲ್ ಸಾಲ್ಟ್‌ಗೆ ಬದಲಿ ಆಟಗಾರನಾಗಿ ಅವಕಾಶ ಪಡೆದಿರುವ ಬೆಥೆಲ್, ಮೂರು ಇನಿಂಗ್ಸ್‌ಗಳಲ್ಲಿ ಕೇವಲ 39 ರನ್‌ಗಳನ್ನಷ್ಟೇ ಗಳಿಸಿ ನಿರಾಸೆ ಮೂಡಿಸಿದ್ದಾರೆ.
RCB vs LSG ಪಂದ್ಯದ ಕೊನೆಯ ಓವರ್ ದಿಗ್ವೇಶ್ ಸಿಂಗ್‌ಗೆ ನೀಡಲು ಕಾರಣ ತಿಳಿಸಿದ ರಿಷಭ್ ಪಂತ್!
ದೇವದತ್ ಪಡಿಕ್ಕಲ್ ಓಪನಿಂಗ್‌ಗೆ ಬರಲಿ!
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕ್ರಿಸ್ ಶ್ರೀಕಾಂತ್, ದೇವದತ್ ಪಡಿಕ್ಕಲ್ ಅವರನ್ನು ವಿರಾಟ್ ಕೊಹ್ಲಿ ಜೊತೆ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಸಬೇಕು ಎಂದು ಸಲಹೆ ನೀಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಪಡಿಕ್ಕಲ್, ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಆಟವಾಡಿ ತಂಡಕ್ಕೆ ವೇಗದ ಆರಂಭ ನೀಡಬಲ್ಲರು ಎಂದು ಅವರು ಹೇಳಿದ್ದಾರೆ.
ಜೇಕಬ್ ಬೆಥೆಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿದರೆ, ಆರಂಭಿಕ ಬ್ಯಾಟಿಂಗ್‌ನ ಒತ್ತಡವಿಲ್ಲದೇ ಸ್ವತಂತ್ರವಾಗಿ ಬ್ಯಾಟ್ ಮಾಡಬಹುದು ಎಂಬುದು ಶ್ರೀಕಾಂತ್ ಅಭಿಪ್ರಾಯ.
ಫಿಲ್ ಸಾಲ್ಟ್‌ನ ಕೊರತೆ ಕಾಡುತ್ತಿದೆ
ಫಿಲ್ ಸಾಲ್ಟ್ ಪವರ್‌ಪ್ಲೇ ಅವಧಿಯಲ್ಲಿ ಎದುರಾಳಿ ಬೌಲರ್‌ಗಳನ್ನು ಸಂಪೂರ್ಣ ಒತ್ತಡಕ್ಕೆ ಸಿಲುಕಿಸುವ ಸಾಮರ್ಥ್ಯ ಹೊಂದಿದ್ದರು. ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಆರ್‌ಸಿಬಿಗೆ ಸ್ಫೋಟಕ ಆರಂಭ ಸಿಗುತ್ತಿತ್ತು. ಆದರೆ, ಈಗ ಆ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
RCB vs LSG: ʻವಿರಾಟ್ ಕೊಹ್ಲಿ ತಾವೇ ನೀಡಿದ ಔಷಧಿಗೆ ಬಲಿಯಾದರುʼ-ಮುರಳಿ ಕಾರ್ತಿಕ್!
ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಜೋಡಿ ನೀಡುವ ಆರಂಭವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಆರ್‌ಸಿಬಿಗೂ ಅಂತಹ ಆಕ್ರಮಣಕಾರಿ ಆರಂಭದ ಅಗತ್ಯವಿದೆ ಎಂದರು.
ಅದ್ಭುತ ಫಾರ್ಮ್‌ನಲ್ಲಿ ದೇವದತ್ ಪಡಿಕ್ಕಲ್
ಐಪಿಎಲ್ 2026 ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಆರ್‌ಸಿಬಿ ಪರ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿರುವ ಅವರು 40ಕ್ಕಿಂತ ಹೆಚ್ಚು ಸರಾಸರಿ ಹಾಗೂ ಸುಮಾರು 188 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
ಹೀಗಾಗಿ, ಫಿಲ್ ಸಾಲ್ಟ್ ಗೈರಾಗಿರುವ ಸಂದರ್ಭದಲ್ಲಿ ಪಡಿಕ್ಕಲ್ ಅವರನ್ನು ಓಪನರ್గా ಬಳಸುವುದು ಅತ್ಯುತ್ತಮ ಆಯ್ಕೆ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಪ್ಲೇಆಫ್ಸ್ ತಲುಪುವ ವಿಶ್ವಾಸ
ಆರ್‌ಸಿಬಿ ತಂಡದ ಸಮತೋಲನವನ್ನು ಮೆಚ್ಚಿರುವ ಶ್ರೀಕಾಂತ್, ಈ ಬಾರಿ ತಂಡ ಖಂಡಿತವಾಗಿಯೂ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಅಗ್ರ-2 ಸ್ಥಾನ ಪಡೆಯಬೇಕಾದರೆ ಮಹತ್ವದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ ಎಂದರು.