ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ 6 ವಿಕೆಟ್‌ ಕಿತ್ತು ಮಿಂಚಿದ ಮೊಹಮ್ಮದ್‌ ಸಿರಾಜ್‌!

Mohammed Siraj took 6 Wickets: ಇಂಗ್ಲೆಂಡ್‌ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನ ಮಾರಕ ಬೌಲಿಂಗ್‌ ದಾಳಿ ನಡೆಸಿದ ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ 5 ವಿಕೆಟ್‌ ಸಾಧನೆ ಮಾಡಿದರು. ಒಟ್ಟು 19.3 ಓವರ್‌ ಬೌಲ್‌ ಮಾಡಿದ ಸಿರಾಜ್‌ 70 ರನ್‌ ನೀಡಿ 6 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು 407 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ನೆರವು ನೀಡಿದರು.

ಎಜ್‌ಬಾಸ್ಟನ್‌ನಲ್ಲಿ 6 ವಿಕೆಟ್‌ ಕಿತ್ತು ಮಿಂಚಿದ ಮೊಹಮ್ಮದ್‌ ಸಿರಾಜ್‌!

ಇಂಗ್ಲೆಂಡ್‌ನಲ್ಲಿ ಚೊಚ್ಚಲ 5 ವಿಕೆಟ್‌ ಸಾಧನೆ ಮಾಡಿದ ಮೊಹಮ್ಮದ್‌ ಸಿರಾಜ್‌.

Profile Ramesh Kote Jul 4, 2025 11:13 PM

ಬರ್ಮಿಂಗ್‌ಹ್ಯಾಮ್‌: ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಅನುಪಸ್ಥಿತಿಯಲ್ಲಿ ಭಾರತ ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj) ಇಂಗ್ಲೆಂಡ್‌ ವಿರುದ್ಧ ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿನ (IND vs ENG) ಸವಾಲನ್ನು ಮೆಟ್ಟಿ ನಿಂತಿದ್ದಾರೆ. ಹ್ಯಾರಿ ಬ್ರೂಕ್‌ ಹಾಗೂ ಜೇಮಿ ಸ್ಮಿತ್‌ ಅವರ ಅಬ್ಬರದ ಬ್ಯಾಟಿಂಗ್‌ ಹೊರತಾಗಿಯೂ ಮಾರಕ ಬೌಲಿಂಗ್‌ ದಾಳಿ ನಡೆಸಿದ ಸಿರಾಜ್‌ 6 ವಿಕೆಟ್‌ಗಳ ಸಾಧನೆ ಮಾಡಿದರು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 407 ರನ್‌ಗಳಿಗೆ ಆಲ್‌ಔಟ್‌ ಮಾಡಲು ಪ್ರವಾಸಿ ತಂಡಕ್ಕೆ ನೆರವು ನೀಡಿದರು. ಇದರೊಂದಿಗೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 180 ರನ್‌ಗಳ ಮುನ್ನಡೆಯನ್ನು ಪಡೆಯಿತು.

ಐದು ಪಂಂದ್ಯಗಳ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಜೊತೆ ಬೌಲ್‌ ಮಾಡಿದ್ದ ಸಿರಾಜ್‌ ಅವರಿಂದ ನಿರೀಕ್ಷಿತ ಬೌಲಿಂಗ್‌ ಪ್ರದರ್ಶನವನ್ನು ಬಂದಿರಲಿಲ್ಲ. ಆದರೆ, ಎರಡನೇ ಟೆಸ್ಟ್‌ನಲ್ಲಿ ಆಂಗ್ಲರ ನಾಡಿನಲ್ಲಿ ತಮ್ಮ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌ ಮಾಡಿದರು. ಅವರು ಎರಡನೇ ದಿನ ಕೊನೆಯ ಸೆಷನ್‌ನಲ್ಲಿ ಝ್ಯಾಕ್‌ ಕ್ರಾವ್ಲಿ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದ್ದರು. ಆದರೆ, ಮೂರನೇ ದಿನದ ಎರಡನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಜೋ ರೂಟ್‌ ಹಾಗೂ ನಾಯಕ ಬೆನ್‌ ಸ್ಟೋಕ್ಸ್‌ ಅವರನ್ನು ಔಟ್‌ ಮಾಡಿದ್ದರು. ಆ ಮೂಲಕ ಮೂರನೇ ದಿನ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು.

IND vs ENG: ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ವಿಕೆಟ್ ಕೀಪರ್ ಜೇಮಿ ಸ್ಮಿತ್!

ಸಿರಾಜ್‌ ಇಬ್ಬರು ಸ್ಟಾರ್‌ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ ಬಳಿಕ ಇಂಗ್ಲೆಂಡ್‌ ತಂಡ 84 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಆರನೇ ವಿಕೆಟ್‌ಗೆ ಜೊತೆಯಾದ ಹ್ಯಾರಿ ಬ್ರೂಕ್‌ (158 ರನ್‌) ಹಾಗೂ ಜೇಮಿ ಸ್ಮಿತ್‌ (184 ರನ್‌) ಅವರು 303ರನ್‌ಗಳ ದೊಡ್ಡ ಜೊತೆಯಾಟವನ್ನು ಆಡುವ ಮೂಲಕ ಇಂಗ್ಲೆಂಡ್‌ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು ಹಾಗೂ ಪ್ರವಾಸಿ ಬೌಲರ್‌ಗಳು ದೀರ್ಘಾವಧಿ ಕಾಡಿದ್ದರು.



ಆಂಗ್ಲರ ನಾಡಿನಲ್ಲಿ ಚೊಚ್ಚಲ 5 ವಿಕೆಟ್‌ ಸಾಧನೆ

ಎರಡನೇ ಹೊಸ ಚೆಂಡು ತೆಗೆದುಕೊಂಡ ಬಳಿಕ ಭಾರತ ತಂಡಕ್ಕೆ ವಿಕೆಟ್‌ ಲಭಿಸಿತು. ದೀರ್ಘಾವಧಿ ಬ್ಯಾಟ್‌ ಮಾಡಿದ್ದ ಹ್ಯಾರಿ ಬ್ರೂಕ್‌ ಅವರನ್ನು ಆಕಾಶ್‌ ದೀಪ್‌ ಕ್ಲೀನ್‌ ಬೌಲ್ಡ್‌ ಮಾಡಿದರು. ನಂತರ ಚೆಂಡು ಕೈಗೆತ್ತಿಕೊಂಡ ಸಿರಾಜ್‌, ಬ್ರೈಡೆನ್‌ ಕಾರ್ಸ್‌, ಜಾಶ್‌ ಟಾಂಗ್‌ ಹಾಗೂ ಶೋಯೆಬ್‌ ಬಶೀರ್‌ ಅವರನ್ನು ಪೆವಿಲಿಯನ್‌ ಹಾದಿಯನ್ನು ತೋರಿಸಿದರು. ಜಾಶ್‌ ಟಾಂಗ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಮೊಹಮ್ಮದ್‌ ಸಿರಾಜ್‌ ಆಂಗ್ಲರ ನಾಡಿನಲ್ಲಿ ಚೊಚ್ಚಲ 5 ವಿಕೆಟ್‌ ಸಾಧನೆ ಮಾಡಿದರು. ಈ ವೇಳೆ ಅವರು ಕುಣಿದು ಕುಪ್ಪಳಿಸಿದರು ಹಾಗೂ ನಾಯಕ ಶುಭಮನ್‌ ಗಿಲ್‌ ಕೂಡ ವೇಗಿಯನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

IND vs ENG: ಏಕೈಕ ಓವರ್‌ಗೆ 23 ರನ್‌ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಪ್ರಸಿಧ್‌ ಕೃಷ್ಣ!

ಇಂಗ್ಲೆಂಡ್‌ನಲ್ಲಿ ಸಿರಾಜ್‌ಗೆ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌

ಮೊಹಮ್ಮದ್‌ ಸಿರಾಜ್‌ ಲೀಡ್ಸ್‌ ಟೆಸ್ಟ್‌ನಲ್ಲಿ ತಮ್ಮ ಬೌಲಿಂಗ್‌ ಲೈನ್‌ ಅಂಡ್‌ ಲೆನ್ತ್‌ನಲ್ಲಿ ಸ್ವಲ್ಪ ಎಡವಿದ್ದರು. ಆದರೆ, ಬರ್ಮಿಂಗ್‌ಹ್ಯಾಮ್‌ನಲ್ಲಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡರು ಹಾಗೂ ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ತಂಡದ ವೇಗದ ಬೌಲಿಂಗ್‌ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸಿದರು. ಇವರು ಬೌಲ್‌ ಮಾಡಿದ 19.3 ಓವರ್‌ಗಳಿಗೆ 70 ರನ್‌ ನೀಡಿ 6 ವಿಕೆಟ್‌ಗಳ ಸಾಧನೆಯನ್ನು ಮಾಡಿದರು. ಇಂಗ್ಲೆಂಡ್‌ ನೆಲದಲ್ಲಿ ಇವರ ಪಾಲಿಗೆ ಶ್ರೇಷ್ಠ ಟೆಸ್ಟ್‌ ಬೌಲಿಂಗ್‌ ಸ್ಪೆಲ್‌ ಇದಾಗಿದೆ.



ದಾಖಲೆ ವಿಕೆಟ್‌ ಜೇಮಿ ಸ್ಮಿತ್‌

ಅಜೇಯ 184 ರನ್‌ಗಳ ಇನಿಂಗ್ಸ್‌ ಅನ್ನು ಆಡಿದ ಜೇಮಿ ಸ್ಮಿತ್‌ ಇಂಗ್ಲೆಂಡ್‌ ಪರ ಅತಿ ಹೆಚ್ಚು ವೈಯಕ್ತಿಕ ಗರಿಷ್ಠ ಗಳಿಸಿದ ವಿಕೆಟ್‌ ಕೀಪರ್‌ ಎನಿಸಿಕೊಂಡರು. ಅಲ್ಲದೆ ಇಂಗ್ಲೆಂಡ್‌ ಪರ ಏಳನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂ ಸಾಧನೆಗೆ ಅವರು ಭಾಜನರಾದರು ಹಾಗೂ 1897 ರಲ್ಲಿ ಇದೇ ಕ್ರಮಾಂಕದಲ್ಲಿ 175 ರನ್‌ ಗಳಿಸಿದ್ದ ಕೆಎಸ್‌ ರಂಜಿತ್‌ಸಿನ್ಹಜೀ ದಾಖಲೆಯನ್ನು ಮುರಿದಿದ್ದಾರೆ.