ʻನನ್ನ ತಾತ ರೈತ, ಅಪ್ಪ ಸೈನಿಕʼ: ಶತಕದ ವಿಶೇಷ ಸಂಭ್ರಮಕ್ಕೆ ಕಾರಣ ತಿಳಿಸಿದ ಧ್ರುವ್ ಜುರೆಲ್!
Dhruv Jurel Century Celebration: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಭಾರತದ ವಿಕೆಟ್‌ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ವಿಶೇಷ ರೀತಿಯಲ್ಲಿ ಸಂಭ್ರಮಿಸಿದರು. ಶತಕ ಪೂರ್ಣಗೊಳಿಸಿದ ನಂತರ ಅವರು ತಮ್ಮ ಬೈಸೆಪ್ಸ್ ಮೇಲಿದ್ದ ಟ್ಯಾಟೂವನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಇದಕ್ಕೆ ಕಾರಣವೇನೆಂದು ಅವರು ಬಹಿರಂಗಪಡಿಸಿದ್ದಾರೆ.
ಶತಕ ಸಿಡಿಸಿ ಬೈಸೆಪ್ಸ್ ತೋರಿಸಿ ವಿಶೇಷವಾಗಿ ಸಂಭ್ರಮಿಸಲು ಕಾರಣ ತಿಳಿಸಿದ ಧ್ರುವ್ ಜುರೆಲ್. -
ಕೊಲಂಬೊ: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ (IND vs SL) ಎರಡನೇ ದಿನ ಶತಕ ಸಿಡಿಸಿದ ಬಳಿಕ ಭಾರತ ತಂಡದ ವಿಕೆಟ್ ಕೀಪರ್ ಧ್ರುವ್ ಜುರೆಲ್ (Dhruv Jurel) ಅವರು ತಮ್ಮ ಬೈಸೆಪ್ಸ್ ಮೇಲಿದ್ದ ʻಜೈ ಜವಾನ್, ಜೈ ಕಿಸಾನ್ʼ ಟ್ಯಾಟೊವನ್ನು ಪ್ರದರ್ಶಿಸಿ ಸಂಭ್ರಮಿಸಿದರು. 2024ರಲ್ಲಿ ತಮ್ಮ ಮೊದಲ ಟೆಸ್ಟ್ ಶತಕ ದಾಖಲಿಸಿದ್ದ ಜುರೆಲ್, ಈ ಬಾರಿ ಶತಕಕ್ಕಾಗಿ 13 ಎಸೆತಗಳ ಕಾಲ 99 ರನ್‌ಗಳಲ್ಲಿ ಸಿಲುಕಿಕೊಂಡಿದ್ದರು. ಆದರೆ 136ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಿಂಗಲ್ ಪಡೆದು ಶತಕ ಪೂರ್ಣಗೊಳಿಸಿದರು. ಬಳಿಕ ನಾನ್‌ಸ್ಟ್ರೈಕರ್ ತುದಿಗೆ ಓಡಿದ ಜುರೆಲ್, ತಮ್ಮ ಬೈಸೆಪ್ಸ್ ಮೇಲಿನ ಟ್ಯಾಟೂವನ್ನು ಪ್ರದರ್ಶಿಸುವ ಮೂಲಕ ವಿಶೇಷವಾಗಿ ಸಂಭ್ರಮಿಸಿದರು.
ಎರಡನೇ ದಿನದಾಟ ಮುಗಿದ ಬಳಿಕ ಜುರೆಲ್ ತಮ್ಮ ವಿಶೇಷ ಸಂಭ್ರಮದ ಹಿಂದಿನ ಕಾರಣವನ್ನು ವಿವರಿಸಿದರು. ‘ಜೈ ಜವಾನ್, ಜೈ ಕಿಸಾನ್’ ಟ್ಯಾಟೂ ಮೂಲಕ ದೇಶದ ಸೈನಿಕರು ಮತ್ತು ರೈತರಿಗೆ ಗೌರವ ಸಲ್ಲಿಸುವ ಉದ್ದೇಶ ಹೊಂದಿದ್ದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ಶತಕದ ಸಂಭ್ರಮದ ಜತೆಗೆ ತಮ್ಮ ಹಿನ್ನೆಲೆಯನ್ನೂ ಜುರೆಲ್ ಹೆಮ್ಮೆಯಿಂದ ಸ್ಮರಿಸಿದರು.
IND vs SL: ಮೈದಾನದಲ್ಲಿ ಕಿತ್ತಾಡಿಕೊಂಡಿದ್ದ ಯಶಸ್ವಿ ಜೈಸ್ವಾಲ್, ಅಸಿತ ಫೆರ್ನಾಂಡೊಗೆ ದಂಡ!
"ನನ್ನ ತಾತ ರೈತ ಹಾಗೂ ನನ್ನ ತಂದೆ ಸೈನಿಕ. ಇದು ನನ್ನ ಮೂಲ ಮತ್ತು ಇದನ್ನು ನಾನು ಎಂದಿಗೂ ಮರೆಯುವುದಿಲ್ಲ. ಹಾಗಾಗಿ ನನ್ನ ಸೆಲ್ಯೂಟ್ ನನ್ನ ಅಪ್ಪ ಮತ್ತು ತಾತನಿಗೆ ಸಲ್ಲುತ್ತದೆ," ಎಂದು ಹೇಳಿದ ಧ್ರುವ್ ಜುರೆಲ್, 1999ರ ಕಾರ್ಗಿಲ್ ಯುದ್ಧದಲ್ಲಿ ತಮ್ಮ ತಾತ ಹೋರಾಟ ಮಾಡಿದ್ದರು ಎಂಬುದನ್ನು ಕೂಡ ಸ್ಮರಿಸಿಕೊಂಡರು.
"जय जवान, जय किसान"
— BCCI (@BCCI) August 24, 2026
🗣️ My grandfather was a farmer and my father, a soldier.🫡
Dhruv Jurel reveals the reason behind the special celebration and the tattoo on his arm after reaching his 💯 👌#TeamIndia | #SLvIND | @dhruvjurel21 pic.twitter.com/pQlM1r84hN
ರಿಷಭ್ ಪಂತ್ ಈ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡಿದರೆ, ಧ್ರುವ್ ಜುರೆಲ್ ವಿಶೇಷ ಬ್ಯಾಟ್ಸ್‌ಮನ್ ಆಗಿ ಆಡಿದ್ದರು. ಗಾಲೆಯಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 68 ಎಸೆತಗಳಲ್ಲಿ 51 ರನ್‌ಗಳು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ, ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಜುರೆಲ್ ಬ್ಯಾಟಿಂಗ್‌ನಲ್ಲಿ ಯಾವುದೇ ತಪ್ಪು ಮಾಡಲಿಲ್ಲ.
A patient and classy hundred 💯
— BCCI (@BCCI) August 24, 2026
A magnificent Dhruv Jurel century in 📸📸#TeamIndia | #SLvIND pic.twitter.com/J1bgB86MIk
ಕೊಲಂಬೊ ಟೆಸ್ಟ್ ಪಂದ್ಯದ ಎರಡನೇ ದಿನ
ಭಾರತ ತಂಡ ಎರಡನೇ ದಿನ ಬೆಳಿಗ್ಗೆ 306 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು 400 ರನ್‌ಗಳನ್ನು ಕಲೆ ಹಾಕುವುದೂ ಕಷ್ಟ ಎಂಬ ಸನ್ನಿವೇಶಕ್ಕೆ ಸಿಲುಕಿತ್ತು. ಈ ವೇಳೆ ರಿಷಭ್ ಪಂತ್ ಜೊತೆಯಾದ ಧ್ರುವ್ ಜುರೆಲ್ 112 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಪಂತ್ 63 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಜುರೆಲ್ ದೀರ್ಘಾವಧಿ ಬ್ಯಾಟ್ ಮಾಡಿ ಅಜೇಯ 115 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳಿಗೆ 503 ರನ್ ಕಲೆ ಹಾಕಲು ನೆರವು ನೀಡಿದರು.