ಗಿಲ್ ಬದಲಿಗೆ ಈ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಬೇಕೆಂದು ಬಯಸಿದ್ದ ಬ್ರೆಂಡನ್ ಮೆಕಲಮ್!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ಅಂತರದಲ್ಲಿ ಸಮಬಲವಾಯಿತು. 5 ಪಂದ್ಯಗಳಿಂದ 754 ರನ್‌ಗಳನ್ನು ಗಳಿಸಿದ್ದ ಶುಭಮನ್ ಗಿಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಆದರೆ, ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್‌ಗೆ ಮೊಹಮ್ಮದ್ ಸಿರಾಜ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಬೇಕೆಂದು ಬಯಸಿದ್ದರು ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

ಬ್ರೆಂಡನ್ ಮೆಕಲಮ್-ಮೊಹಮ್ಮದ್ ಸಿರಾಜ್

ನವದೆಹಲಿ: ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ಸೋಮವಾರ ಮುಗಿದಿದ್ದ ಐದನೇ ಹಾಗೂ ಟೆಸ್ಟ್ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ ಭಾರತ ತಂಡ 6 ರನ್‌ಗಳನ್ನು ರೋಚಕ ಗೆಲುವು ಸಾಧಿಸಿತ್ತು. ಆ ಮೂಲಕ ಟೆಸ್ಟ್ ಸರಣಿ ಉಭಯ ತಂಡಗಳು 2-2 ಸಮಬಲ ಸಾಧಿಸಿವೆ. ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶುಭಮನ್ ಗಿಲ್‌ಗೆ (Shubman Gill) ಭಾರತದ ಪರ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ (Brendon McCullum) ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಶುಭಮನ್ ಗಿಲ್ ಅವರ ಬದಲು ಮೊಹಮ್ಮದ್ ಸಿರಾಜ್‌ಗೆ (Mohammed Siraj) ನೀಡಬೇಕೆಂದು ಬಯಸಿದ್ದರು ಎಂದು ಭಾರತದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರಿವೀಲ್ ಮಾಡಿದ್ದಾರೆ.
ಕ್ರಿಕ್‌ಬಝ್ ಸಂಭಾಷಣೆಯಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಈ ಪಂದ್ಯ ನಾಲ್ಕನೇ ದಿನ ಮುಗಿದಿದ್ದರೆ ಶುಭಮನ್ ಗಿಲ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಬೇಕೆಂದು ಬ್ರೆಂಡನ್ ಮೆಕಲಮ್ ಬಯಸಿದ್ದರು ಹಾಗೂ ಈ ಬಗ್ಗೆ ಪಂದ್ಯದ ನಿರೂಪಕ ಮೈಕಲ್ ಅಥರ್ಟನ್ ಅವರ ಬಳಿಯೂ ಮಾತನಾಡಿದ್ದರು. ಆದರೆ, ಹವಮಾನ ಸರಿ ಇಲ್ಲದ ಕಾರಣ ಪಂದ್ಯವನ್ನು ಐದನೇ ದಿನಕ್ಕೆ ಮುಂದೂಡಲಾಗಿತ್ತು.
IND vs ENG: ಮೊಹಮ್ಮದ್ ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್ ಮಾಡಿದ ಆರ್ ಅಶ್ವಿನ್!
"ನಾಲ್ಕನೇ ದಿನವೇ ಪಂದ್ಯ ಮುಗಿದಿದ್ದರೆ, ಶುಭಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುತ್ತಿದ್ದರು. ಶುಭಮನ್ ಗಿಲ್ ಅವರ ಹಸರನ್ನು ಬ್ರೆಂಡನ್ ಮೆಕಲಮ್ ಹೇಳಿದ್ದರು. ಮೈಕಲ ಅಥರ್ಟನ್ ಅವರು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಇದನ್ನೇ ಹೇಳುತ್ತಿದ್ದರು. ಅವರು ಅದಕ್ಕೆ ತಕ್ಕಂತೆ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡಿದ್ದರು. ಎಲ್ಲವೂ ಶುಭಮನ್ ಗಿಲ್‌ಗೆ ಪೂರಕವಾಗಿದ್ದವು," ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಆದರೆ, ಐದನೇ ದಿನ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ಬ್ರೆಂಡಬ್ ಮೆಕಲಮ್ ಅವರ ಮನಸನ್ನು ಬದಲಿಸಿತು. ಶುಭಮನ್ ಗಿಲ್ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ನೀಡಬೇಕೆಂದು ಹೇಳಿದ್ದರು. ಆದರೆ, ಶುಭಮನ್ ಗಿಲ್‌ಗೆ ಮೊದಲೇ ನಿರ್ಧರಿಸಿದ್ದರಿಂದ ಇದು ಸಾಧ್ಯವಾಗಿಲ್ಲ.
"ಮೊಹಮ್ಮದ್ ಸಿರಾಜ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕೆಂದು ಬ್ಯಾಝ್ ಮೆಕಲಮ್ ಅವರು ಅರ್ಧ ಗಂಟೆಯಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದರು. ಪಂದ್ಯದ ಬಳಿಕ ಅವರು ಇದೇ ಮಾತನ್ನು ಸ್ಕೈ ಸ್ಪೋರ್ಟ್ಸ್ ಜೊತೆ ಹೇಳಿಕೊಂಡಿದ್ದರು. ಸಿರಾಜ್ ಅವರ ಬೌಲಿಂಗ್ ಅನ್ನು ತಾನು ಎಷ್ಟೊಂದು ಆನಂದಿಸಿದ್ದೇನೆ ಎಂಬುದನ್ನು ತಿಳಿಸಿದ್ದರು,"ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಮೊಹಮ್ಮದ್ ಸಿರಾಜ್ ಪಾಲಿಗೆ ಇದು ಅದ್ಭುತ ಸರಣಿಯಾಗಿದೆ. ಅವರು ಈ ಸರಣಿಯಲ್ಲಿ 23 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಗ್ರ ಬೌಲರ್ ಎನಿಸಿಕೊಂಡರು. ಅವರು ಒಟ್ಟು 185.3 ಓವರ್‌ಗಳನ್ನು ಬೌಲ್ ಮಾಡಿದ್ದರು. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ ಬೌಲರ್ ಆಗಿದ್ದಾರೆ. ಇನ್ನು ಐದನೇ ಟೆಸ್ಟ್‌ನಲ್ಲಿ 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.