ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಮೊಹಮ್ಮದ್‌ ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್‌ ಮಾಡಿದ ಆರ್‌ ಅಶ್ವಿನ್‌!

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಅವರನ್ನು ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಶ್ಲಾಘಿಸಿದಾರೆ. ಸಿರಾಜ್‌ ಕೂಡ ಮ್ಯಾಚ್‌ ವಿನ್ನರ್‌ ಎಂದು ಗುರುತಿಸುವಲ್ಲಿ ವಿಫಲರಾಗಿದ್ದೇವೆಂದು ತಿಳಿಸಿದ್ದಾರೆ.

ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್‌ ಮಾಡಿದ ಅಶ್ವಿನ್‌!

ಮೊಹಮ್ಮದ್‌ ಸಿರಾಜ್‌ ಕೂಡ ಮ್ಯಾಚ್‌ ವಿನ್ನರ್‌ ಎಂದ ಆರ್‌ ಅಶ್ವಿನ್‌.

Profile Ramesh Kote Aug 5, 2025 4:43 PM

ನವದೆಹಲಿ: ಇಂಗ್ಲೆಂಡ್ದ್‌ ವಿರುದ್ಧದ ಐದನೇ ಹಾಗೂ ಟೆಸ್ಟ್‌ ಸರಣಿಯ( IND vs ENG) ಕೊನೆಯ ಪಂದ್ಯಕ್ಕೂ ಮುನ್ನ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj) ಅವರನ್ನು ಮ್ಯಾಚ್‌ ವಿನ್ನರ್‌ ಎಂದು ಗುರುತಿಸುವಲ್ಲಿ ಟೀಮ್‌ ಇಂಡಿಯಾ ವಿಫಲವಾಗಿದೆ ಎಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓವಲ್‌ ಟೆಸ್ಟ್‌ನಲ್ಲಿ ಭಾರತ ತಂಡದ ಗೆಲುವಿಗೆ ಮೊಹಮ್ಮದ್‌ ಸಿರಾಜ್‌ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು ಐದನೇ ದಿನ ಇಂಗ್ಲೆಂಡ್‌ಗೆ ಗೆಲ್ಲಲು 35 ರನ್‌ ಅಗತ್ಯವಿದಾಗ ಮೂರು ವಿಕೆಟ್‌ಗಳನ್ನು ಕಬಳಿಸಿ ಭಾರತ ತಂಡವನ್ನು ಗೆಲ್ಲಿಸಿದ್ದರು ಹಾಗೂ ಪಂದ್ಯ ಶ್ರೆಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಓವಲ್‌ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ಅವರು 9 ವಿಕೆಟ್‌ಗಳನ್ನು ಕಬಳಿಸಿದರು ಹಾಗೂ ಈ ಸರಣಿಯಲ್ಲಿ ಒಟ್ಟು 23 ವಿಕೆಟ್‌ಗಳನ್ನು ಕಿತ್ತರು. ಈ ಪಂದ್ಯದ ಬಳಿಕ ಭಾರತ ತಂಡದ ಮಾಜಿ ಸ್ಪಿನ್ನರ್‌ ಆರ್‌ ಅಶ್ವಿನ್‌ ಅವರು, ಮೊಹಮ್ಮದ್‌ ಸಿರಾಜ್‌ ಅವರನ್ನು ಮ್ಯಾಚ್‌ ವಿನ್ನರ್‌ ಎಂದು ಗುರುತಿಸುವ ಸಮಯ ಬಂದಾಗಿದೆ ಎಂದು ಹೇಳಿದ್ದಾರೆ.

IND vs ENG: ʻಒಂದು ವೇಳೆ ಬೆನ್‌ ಸ್ಟೋಕ್ಸ್‌ ಆಡಿದ್ರೆ ಇಂಗ್ಲೆಂಡ್‌ ಗೆಲ್ಲುತ್ತಿತ್ತುʼ-ಮೈಕಲ್‌ ವಾನ್‌!

"ಮೊಹಮ್ಮದ್‌ ಸಿರಾಜ್‌ ಅವರನ್ನು ಗುರತಿಸುವಲ್ಲಿ ನಾವು ವಿಫಲರಾಗಿದ್ದೇವೆ. ಇದೀಗ ಅವರನ್ನು ಮ್ಯಾಚ್‌ ವಿನ್ನರ್‌ ಎಂದು ಗುರುತಿಸುವ ಸಮಯ ಬಂದಾಗಿದೆ. ಅವರು ಮತ್ತೊಮ್ಮೆ ಭಾರತ ತಂಡದ ಗೆಲುವಿಗೆ ಕೈ ಜೋಡಿಸಿದ್ದಾರೆ; ಅವರು ಇದಕ್ಕೆ ಬಲವಾದ ಕಾರಣವನ್ನು ನೀಡಿದ್ದಾರೆ. ಅವರ ಸಂಭ್ರಮವನ್ನು ನೀವು ಒಮ್ಮೆ ನೋಡಬಹುದು. ʻಇದು ಕೇವಲ ಟ್ರೇಲರ್‌ ಅಲ್ಲ ಅಲ್ಲʼ ಎಂಬುದನ್ನು ಅವರು ಹೇಳುವಂತಿದೆ. ಇದು ಮುಖ್ಯ ಚಿತ್ರಣ ಎಂದು ಅವರು ಹೇಳಿದ್ದಾರೆ. ದಯವಿಟ್ಟು ನನ್ನನ್ನು ಮ್ಯಾಚ್‌ ವಿನ್ನರ್‌ ಎಂದು ಪರಿಗಣಿಸಿ ಎಂದು ಆಗ್ರಹಿಸಿದ್ದಾರೆ. ಚಾಂಪಿಯನ್‌ ಬೌಲರ್‌ ಎಂದರೆ ಹೇಗೆ ಎಂಬುದನ್ನು ಅವರು ನಮಗೆ ಮನದಟ್ಟು ಮಾಡಿದ್ದಾರೆ. ಅವರ ಬೌಲಿಂಗ್ ಶೈಲಿ, ತಂತ್ರ ಮತ್ತು ಉತ್ತಮ ಕೆಲಸದ ನೀತಿಯು ಅವರಿಗೆ ಸರಣಿಯ ಐದು ಟೆಸ್ಟ್‌ಗಳಲ್ಲೂ ಆಡಲು ಅವಕಾಶ ನೀಡುತ್ತದೆ, ಎಂದು ಆರ್‌ ಅಶ್ವಿನ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಮೊಹಮ್ಮದ್‌ ಸಿರಾಜ್‌ಗೂ 30 ದಾಟಿದೆ. ಈ ಕಾರಣದಿಂದ ಅವರ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಕಡೆಗೂ ಟೀಮ್‌ ಮ್ಯಾನೇಜ್‌ಮೆಂಟ್‌ ಗಮನ ಕೊಡಬೇಕು. ಆ ಮೂಲಕ ಅವರನ್ನು ಸಂಪೂರ್ಣ ಫಿಟ್‌ ಆಗಿ ಇರುವಂತೆ ಉಳಿಸಿಕೊಳ್ಳಬೇಕೆಂದು ಅಶ್ವಿನ್‌ ಸಲಹೆಯನ್ನು ನೀಡಿದ್ದಾರೆ.

IND vs ENG: ʻನನಗೋಸ್ಕರ ಅಲ್ಲ, ದೇಶಕ್ಕೋಸ್ಕರ ಬೌಲ್‌ ಮಾಡುತ್ತೇನೆʼ: ಮೊಹಮ್ಮದ್‌ ಸಿರಾಜ್‌!

"ಅವರಿಗೂ ಕೂಡ ವಯಸ್ಸಾಗುತ್ತಿದೆ. ಸಮಂಜಯ ಪಂದ್ಯಗಳಿಂದ ಮೊಹಮ್ಮದ್‌ ಸಿರಾಜ್‌ ಅವರಿಗೂ ಟೀಮ್‌ ಮ್ಯಾನೇಜ್‌ಮೆಂಟ್‌ ವಿಶ್ರಾಂತಿ ನೀಡುವುದು ತುಂಬಾ ಮುಖ್ಯ. ಅವರು ನಂ 1 ಟೆಸ್ಟ್‌ ಬೌಲರ್‌ ಆಗಬಹುದು ಹಾಗೂ ಅವರು ನಿಮಗೆ ನೇರವಾಗಿ ಆಡುವ ಟೆಸ್ಟ್‌ ಬೌಲರ್‌ ಆಗಲಿದ್ದಾರೆ. ಆಕಾಶ ದೀಪ್‌ ಇದ್ದಾರೆ, ಪ್ರಸಿಧ್‌ ಕೃಷ್ಣ ಇದ್ದಾರೆ, ಅರ್ಷದೀಪ್‌ ಸಿಂಗ್‌ ಇದ್ದಾರೆ. ಮೊಹಮ್ಮದ್‌ ಸಿರಾಜ್‌ ಅವರ ಅನುಭವದಲ್ಲಿ ಈ ಬೌಲರ್‌ಗಳನ್ನು ಬೆಳೆಸಬಹುದು," ಎಂದು ಆರ್‌ ಅಶ್ವಿನ್‌ ಸಲಹೆ ನೀಡಿದ್ದಾರೆ.