ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PAK vs WI: 4 ವಿಕೆಟ್‌ ಕಿತ್ತು ಮೊಹಮ್ಮದ್‌ ಶಮಿಯ ವಿಶ್ವ ದಾಖಲೆ ಮುರಿದ ಶಾಹೀನ್‌ ಅಫ್ರಿದಿ!

ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕಿಸ್ತಾನ ತಂಡದ ಹಿರಿಯ ವೇಗಿ ಶಾಹೀನ್‌ ಶಾಹೀನ್‌ ಶಾ ಅಫ್ರಿದಿ, ಭಾರತದ ವೇಗಿ ಮೊಹಮ್ಮದ್‌ ಶಮಿ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 5 ವಿಕೆಟ್‌ ಗೆಲುವು ದಾಖಲಿಸಿದೆ.

ಮೊಹಮ್ಮದ್‌ ಶಮಿಯ ವಿಶ್ವ ದಾಖಲೆ ಮುರಿದ ಶಾಹೀನ್‌ ಅಫ್ರಿದಿ!

ಮೊಹಮ್ಮದ್‌ ಶಮಿ ಅವರ ವಿಶ್ವ ದಾಖಲೆ ಮುರಿದ ಶಾಹೀನ್‌ ಶಾ ಅಫ್ರಿದಿ.

Profile Ramesh Kote Aug 9, 2025 10:06 PM

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ದ ಮೊದಲನೇ ಏಕದಿನ ಪಂದ್ಯದಲ್ಲಿ(PAK vs EWI) ಪಾಕಿಸ್ತಾನ ತಂಡದ ವೇಗಿ ಶಾಹೀನ್‌ ಶಾ ಅಫ್ರಿದಿ (Shaheen Afridi) 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ (Mohammed Shami) ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಶಾಹೀನ್‌ ಅಫ್ರಿದಿ ಅವರ ಮಾರಕ ಬೌಲಿಂಗ್‌ ಸಹಾಯದಿಂದ ಪಾಕಿಸ್ತಾನ ತಂಡ, ಮೊದಲನೇ ಒಡಿಐ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಐದು ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.

ಟ್ರಿನಿಡಾಡ್‌ನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ವೆಸ್ಟ್‌ ಇಂಡೀಸ್‌ ತಂಡ, 49 ಓವರ್‌ಗಳಿಗೆ 280 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ಪಾಕಿಸ್ತಾನ ತಂಡಕ್ಕೆ 281 ರನ್‌ಗಳ ಗುರಿಯನ್ನು ನೀಡಿತ್ತು. ಪಾಕಿಸ್ತಾನ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಶಾಹೀನ್‌ ಶಾ ಅಫ್ರಿದಿ, 8 ಓವರ್‌ಗಳಿಗೆ 51 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು.

2025ರ ಏಷ್ಯಾ ಕಪ್‌ ಟೂರ್ನಿಗೆ ಅಫಘಾನಿಸ್ತಾನ ಪ್ರಾಥಮಿಕ ತಂಡ ಪ್ರಕಟ!

ಈ ಗುರಿಯನ್ನು ಹಿಂಬಾಲಿಸಿದ್ದ ಪಾಕಿಸ್ತಾನ ತಂಡದ ಹಾದಿ ಸುಲಭವಾಗಿರಲಿಲ್ಲ. ಹಸನ್‌ ನವಾಝ್‌ ಹಾಗೂ ಮೊಹಮ್ಮದ್‌ ರಿಝ್ವಾನ್‌ ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ 48.5 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 284 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಪಾಕಿಸ್ತಾನ 5 ವಿಕೆಟ್‌ ಗೆಲುವು ಪಡೆಯಿತು.

ತಮ್ಮ ಬೌಲಿಂಗ್‌ ಪ್ರದರ್ಶನದಿಂದ ಶಾಹೀನ್‌ ಶಾ ಅಫ್ರಿದಿ ಅವರು ಭಾರತದ ಮೊಹಮ್ಮದ್‌ ಶಮಿ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಐಸಿಸಿ ಪೂರ್ಣ ಪ್ರಮಾಣದ ತಂಡಗಳ ಪೈಕಿ ಅತ್ಯುತ್ತಮ ಸ್ಟ್ರೈಕ್‌ ರೇಟ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎಂಬ ದಾಖಲೆಯನ್ನು ಶಾಹೀನ್‌ ಶಾ ಅಫ್ರಿದಿ ಬರೆದಿದ್ದಾರೆ. ಮೊಹಮ್ಮದ್‌ ಶಮಿ ಆಡಿದ 108 ಏಕದಿನ ಪಂದ್ಯಗಳಲ್ಲಿ 25.85ರ ಸ್ಟ್ರೈಕ್‌ ರೇಟ್‌ನಲ್ಲಿ 206 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಾಹೀನ್‌ ಅಫ್ರಿದಿ 65 ಪಂದ್ಯಗಳಿಂದ 25.46ರ ಸ್ಟ್ರೈಕ್‌ ರೇಟ್‌ನಲ್ಲಿ 131 ವಿಕೆಟ್‌ಗಳನ್ನು ಕಬಳಿಸಿದ್ದಾರೆ.‌



ಒಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚುಸ್ಟ್ರೈಕ್‌ ರೇಟ್‌ನಲ್ಲಿ 100ಕ್ಕಿಂತ ಹೆಚ್ಚು ವಿಕೆಟ್‌ ಕಿತ್ತವರು

ಶಾಹೀನ್ ಅಫ್ರಿದಿ 131 ವಿಕೆಟ್‌, 25.45ರ ಸ್ಟ್ರೈಕ್‌ ರೇಟ್‌

ಮೊಹಮ್ಮದ್ ಶಮಿ 206 25.85ರ ಸ್ಟ್ರೈಕ್‌ ರೇಟ್‌

ಮಿಚೆಲ್ ಸ್ಟಾರ್ಕ್ 244 26.68ರ ಸ್ಟ್ರೈಕ್‌ ರೇಟ್‌

ಅಜಂತಾ ಮೆಂಡಿಸ್ 152 27.32ರ ಸ್ಟ್ರೈಕ್‌ ರೇಟ್‌

ವಾನಿಂದು ಹಸರಂಗ 108 28.37ರ ಸ್ಟ್ರೈಕ್‌ ರೇಟ್‌