Dewald Brevis: ಭಾರತ ವಿರುದ್ದದ ಟೆಸ್ಟ್ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ!
Dewald Brevis Injury: ಗಾಯದಿಂದ ಬಳಲುತ್ತಿರುವ ದಕ್ಷಿನ ಆಫ್ರಿಕಾ ತಂಡದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರು ಪಾಕಿಸ್ತಾನ ವಿರುದ್ಧದ ಮುಂಬರುವ ಏಕದಿನ ಸರಣಿಯಿಂದ ಹೊರ ಬಿದ್ದಿದ್ದಾರೆ. ಆ ಮೂಲಕ ಭಾರತ ವಿರುದ್ದದ ಟೆಸ್ಟ್ ಸರಣಿಗೂ ಅವರು ಲಭ್ಯರಾಗುವ ಬಗ್ಗೆ ಖಚಿತವಿಲ್ಲ. ಹಾಗಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಇದೆ.
ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಡೆವಾಲ್ಡ್ ಬ್ರೆವಿಸ್ ಔಟ್. -
ನವದೆಹಲಿ: ಗಾಯದಿಂದ ಗುಣಮುಖರಾಗುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಉದಯೋನ್ಮುಖ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ (Dewald Brevis) ಅವರು ಪಾಕಿಸ್ತಾನ ವಿರುದ್ದ ಮುಂಬರುವ ಏಕದಿನ ಸರಣಿಯಿಂದ (PAK vs SA) ಹೊರ ನಡೆದಿದ್ದಾರೆಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಖಚಿತಪಡಿಸಿದೆ. ಅವರು ಕೆಳ ದರ್ಜೆಯ ಭುಜದ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ ಲಾಹೋರ್‌ನಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದ ವೇಳೆ ಅವರು ಗಾಯಕ್ಕೆ ತುತ್ತಾಗಿದ್ದರು. ಈ ವೇಳೆ ಮೈದಾನವನ್ನು ತೊರೆದಿದ್ದರು ಹಾಗೂ ಅವರು ಸಂಪೂರ್ಣವಾಗಿ ಗುಣಮುಖರಾಗಲು ನಿರ್ದಿಷ್ಟ ಅವಧಿಯ ಅಗತ್ಯವಿದೆ ಎಂದು ವೈದ್ಯಕೀಯ ತಂಡ ತಿಳಿಸಿದೆ. ಹಾಗಾಗಿ ಅವರು ಭಾರತ ವಿರುದ್ಧ ಟೆಸ್ಟ್ ಸರಣಿಗೂ (IND sv SA) ಅವರು ಲಭ್ಯರಾಗುವ ಬಗ್ಗೆ ಮಾಹಿತಿ ಇಲ್ಲ.
ದಕ್ಷಿಣ ಆಫ್ರಿಕಾ ತಂಡದ ವೈದ್ಯಕೀಯ ಸಿಬ್ಬಂದಿ ಡೆವಾಲ್ಡ್ ಬ್ರೆವಿಸ್ ಅವರು ಬಹುಬೇಗ ಗುಣಮುಖರಾಗಬೇಕೆಂದು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ನವೆಂಬರ್ 4 ರಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅವರು ಸಂಪೂರ್ಣ ಗುಣಮುಖರಾಗಬೇಕೆಂಬುದು ಇವರ ಮೊದಲ ಪ್ರಾಶಸ್ತ್ಯವಾಗಿದೆ. ಇಲ್ಲಿ ಅವರು ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲಿದ್ದಾರೆ. ಇದು ಟೆಸ್ಟ್ ಸರಣಿ ಆಗಿರುವ ಕಾರಣ ದೈಹಿಕವಾಗಿ ಸದೃಡವಾಗಿರುವುದು ಇಲ್ಲಿ ತುಂಬಾ ಮುಖ್ಯವಾಗಿದೆ. ಡೆವಾಲ್ಡ್ ಸಂಪೂರ್ಣ ಫಿಟ್ ಆದರೆ, ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಲಿದೆ.
AUS vs IND: ಆಸ್ಟ್ರೇಲಿಯಾಗೆ ಆಘಾತ, ಕೊನೆಯ ಎರಡು ಟಿ20ಐ ಪಂದ್ಯಗಳಿಂದ ಟ್ರಾವಿಸ್ ಹೆಡ್ ಔಟ್!
ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಡೆವಾಲ್ಡ್ ಬ್ರೆವಿಸ್ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಸದ್ಯದಲ್ಲಿಯೇ ಕ್ರಿಕೆಟ್ ದಕ್ಷಿಣ ಆಫ್ರಿಕಾ ಆಯ್ಕೆ ಮಾಡಲಿದೆ. ಮೊದಲನೇ ಏಕದಿನ ಪಂದ್ಯದ ನಿಮಿತ್ತ ಸದ್ಯ ಆಯ್ಕೆದಾರರ ಫಾರ್ಮ್,ಫಿಟ್‌ನಸ್ ಅನ್ನು ನೋಡಿಕೊಂಡು ಟೀಮ್ ಮ್ಯಾನೇಜ್‌ಮೆಂಟ್ ಸದ್ಯ ತಂಡದಲ್ಲಿರುವ ಆಟಗಾರರನ್ನು ಬಳಸಿಕೊಂಡು ಅತ್ಯುತ್ತಮ ಪ್ಲೇಯಿಂಗ್ xi ಕಟ್ಟಲು ಪ್ರಯತ್ನಿಸುತ್ತಿದೆ. ಆದರೆ, ಡೆವಾಲ್ಡ್ ಬ್ರೆವಿಸ್ ಅವರು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಮೂರೂ ಸ್ವರೂಪದ ಬ್ಯಾಟ್ಸ್‌ಮನ್ ಆಗಿದ್ದಾರೆ. ಹಾಗಾಗಿ ಅವರು ಅನುಪಸ್ಥಿತಿ ಪಾಕಿಸ್ತಾನದಲ್ಲಿ ಕಾಡಲಿದೆ.
SQUAD UPDATE 🚨
— Proteas Men (@ProteasMenCSA) November 4, 2025
FAISALABAD: Momentum Multiply Titans batter Dewald Brevis has been ruled out of the three-match One-Day International series against Pakistan due to a low-grade shoulder muscle strain.
He sustained the shoulder injury during the third T20 International at the… pic.twitter.com/iuhnEyg3QA
ಡೆವಾಲ್ಡ್ ಬ್ರೆವಿಸ್ ಅವರ ಕ್ರಿಯಾತ್ಮಕ ಸ್ಟ್ರೋಕ್‌ಪ್ಲೇ ಮತ್ತು ನಿರ್ಭೀತ ವಿಧಾನವು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಅಲ್ಲದೆ ಅವರನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿವಿಲಿಯರ್ಸ್ ಜೊತೆ ಹೋಲಿಕೆ ಮಾಡಲಾಗಿದೆ. ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಬಲವಾದ ಪ್ರದರ್ಶನವನ್ನು ತೋರಿದ್ದರು. ಈ ಟೂರ್ನಿಯಲ್ಲಿ ಅವರು ಗಾಯಾಳು ಆಟಗಾರನ ಬದಲು ಸ್ಥಾನ ಪಡದಿದ್ದರು ಹಾಗೂ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರು.
Women's ODI rankings: ಅಗ್ರಸ್ಥಾನ ಕಳೆದುಕೊಂಡ ಸ್ಮೃತಿ ಮಂಧಾನ; ಲಾರಾ ವೊಲ್ವಾರ್ಡ್ ನಂ.1 ಬ್ಯಾಟರ್
ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೊದಲನೇ ಏಕದಿನ ಪಂದ್ಯ ನವೆಂಬರ್ 4 ರಂದು ಫೈಸ್ಲಾಬಾದ್‌ನ ಇಕ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಎರಡನೇ ಏಕದಿನ ಪಂದ್ಯ ಇದೇ ಅಂಗಣದಲ್ಲಿ ನವೆಂಬರ್ 6 ರಂದು ನಡೆಯಲಿದೆ. ನಂತರ ಮೂರನೇ ಹಾಗೂ ಒಡಿಐ ಸರಣಿಯ ಕೊನೆಯ ಪಂದ್ಯ ನವೆಂಬರ್ 8 ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯ ಬಳಿಕ ದಕ್ಷಿಣ ಆಫ್ರಿಕಾ ಆಟಗಾರರು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಇಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಕಾದಾಟ ನೆಡಸಲಿವೆ.