AUS vs PAK: ಬಾಬರ್ ಆಝಮ್ ಇನ್, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಪಾಕಿಸ್ತಾನ ತಂಡ ಪ್ರಕಟ!
AUS vs PAK: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಮಾಜಿ ನಾಯಕ ಬಾಬರ್ ಆಝಮ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಮತ್ತೊಂದೆಡೆ, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಮೊಹಮ್ಮದ್ ರಿಝ್ವಾನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಶಾಹೀನ್ ಅಫ್ರಿದಿ ಈ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ.
ಪಾಕಿಸ್ತಾನ ಏಕದಿನ ತಂಡಕ್ಕೆ ಮರಳಿದ ಬಾಬರ್ ಆಝಮ್. -
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಪಾಕಿಸ್ತಾನದ 15 ಸದಸ್ಯರ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರಕಟಿಸಿದೆ. ತಂಡದ ನಾಯಕತ್ವವನ್ನು ಶಾಹೀನ್ ಅಫ್ರಿದಿಗೆ (Shaheen Afridi) ವಹಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಹಲವು ಸ್ಟಾರ್ ಆಟಗಾರರು ತಂಡಕ್ಕೆ ಮರಳಿದ್ದಾರೆ. ಬಾಬರ್ ಆಝಮ್, ಶದಾಬ್ ಖಾನ್, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡಿದ್ದ ಸುಫಿಯಾನ್ ಮುಕೀಮ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಪಾಕಿಸ್ತಾನ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅಹ್ಮದ್ ದಾನಿಯಾಲ್, ಅರಾಫತ್ ಮಿನ್ಹಾಸ್ ಮತ್ತು ರೋಹೈಲ್ ನಜೀರ್ ಅವರಿಗೆ ಏಕದಿನ ತಂಡದಲ್ಲಿ ಮೊದಲ ಅವಕಾಶ ನೀಡಲಾಗಿದೆ.
ಅನಾರೋಗ್ಯದ ಕಾರಣ ಉಸ್ಮಾನ್ ಖಾನ್ ಆಯ್ಕೆಗೆ ಲಭ್ಯವಿರಲಿಲ್ಲ ಪಿಸಿಬಿ ತಿಳಿಸಿದೆ. ಮುಹಮ್ಮದ್ ಘಾಜಿ ಘೋರಿ ಮತ್ತು ನಜೀರ್ ಅವರನ್ನು ಇಬ್ಬರು ಗೊತ್ತುಪಡಿಸಿದ ವಿಕೆಟ್ ಕೀಪರ್‌ಗಳಾಗಿ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಪಾಕಿಸ್ತಾನ ತಂಡ, ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ತರಬೇತಿ ಶಿಬಿರಕ್ಕಾಗಿ ಸೇರಲಿದೆ. ಸಂಪೂರ್ಣವಾಗಿ ಫಿಟ್ ಆಗದ ಕಾರಣ, ಫಖರ್ ಝಮಾನ್ ಮತ್ತು ಸೈಮ್ ಅಯೂಬ್ ಆಯ್ಕೆಗೆ ಲಭ್ಯವಿರಲಿಲ್ಲ ಮತ್ತು ಪ್ರಸ್ತುತ ಪಿಸಿಬಿಯ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ತಮ್ಮ ಪುನಶ್ಚೇತನ ಕಾರ್ಯದಲ್ಲಿದ್ದಾರೆ.
IPL 2026: ʻಎಂಎಸ್ ಧೋನಿ ಹೆಸರಿನಲ್ಲಿ ಫ್ಯಾನ್ಸ್‌ಗೆ ಮೋಸʼ-ಸಿಎಸ್‌ಕೆ ಎದುರು ಕೆ ಶ್ರೀಕಾಂತ್ ಆಕ್ರೋಶ!
ಮೇ 23 ರಂದು ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ತಂಡದ ಆಗಮನ
ಆಸ್ಟ್ರೇಲಿಯಾ ತಂಡ ಮೇ 23 ರಂದು ಪಾಕಿಸ್ತಾನಕ್ಕೆ ಆಗಮಿಸಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಮೇ 30 ರಂದು ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಜೂನ್ 2 ರಂದು ನಿಗದಿಯಾಗಿದ್ದು, ಮೂರನೇ ಮತ್ತು ಅಂತಿಮ ಪಂದ್ಯ ಜೂನ್ 4 ರಂದು ಲಾಹೋರ್‌ನಲ್ಲಿ ನಡೆಯಲಿದೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿಯನ್ನು 2024 ರಲ್ಲಿ ಆಡಿಸಲಾಗಿತ್ತು. ಇದರಲ್ಲಿ ಪಾಕಿಸ್ತಾನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಆ ಮೂಲಕ 22 ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರ ಮೊದಲ ಸರಣಿ ಗೆಲುವು. ಆಸ್ಟ್ರೇಲಿಯಾ ಕೊನೆಯ ಬಾರಿ 2022ರಲ್ಲಿ ಪಾಕಿಸ್ತಾನ ಪ್ರವಾಸ ಮಾಡಿತು, ಈ ಸರಣಿಯನ್ನು ಪಾಕಿಸ್ತಾನ ಕೂಡ 2-1 ಅಂತರದಿಂದ ಗೆದ್ದುಕೊಂಡಿತು.
ಬಾಬರ್ ಆಝಮ್ ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆ ಸಮಯದಲ್ಲಿ ಅವರನ್ನು ಕೈಬಿಟ್ಟ ನಿರ್ಧಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು, ಏಕೆಂದರೆ 2025ರಲ್ಲಿ ಅವರು ಅದ್ಭುತ ಪ್ರದರ್ಶನವನ್ನು ತೋರಿದ್ದರು. ಪಾಕಿಸ್ತಾನದ ಮಾಜಿ ನಾಯಕ ಬಾಬರ್, 2025ರಲ್ಲಿ ಆಡಿದ 17 ಏಕದಿನ ಪಂದ್ಯಗಳಲ್ಲಿ 77.16ರ ಅಚ್ಚರಿಯ ಸರಾಸರಿಯಲ್ಲಿ 544 ರನ್‌ಗಳನ್ನು ಗಳಿಸಿದ್ದರು. ಆದರೂ, ಪಾಕಿಸ್ತಾನದ ಟಿ20 ವಿಶ್ವಕಪ್ ವೈಫಲ್ಯದ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
IPL 2026: 600ಕ್ಕೂ ಅಧಿಕ ರನ್ ಸಿಡಿಸಿರುವ ಶುಭಮನ್ ಗಿಲ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆರ್ ಅಶ್ವಿನ್!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಪಾಕಿಸ್ತಾನ ತಂಡ: ಶಾಹೀನ್ ಶಾ ಅಫ್ರಿದಿ (ನಾಯಕ), ಸಲ್ಮಾನ್ ಅಲಿ ಅಘಾ (ಉಪನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಅಹ್ಮದ್ ದನಿಯಾಲ್, ಅರಾಫತ್ ಮಿನ್ಹಾಸ್, ಬಾಬರ್ ಅಜಮ್, ಹಾರಿಸ್ ರೌಫ್, ಮಾಜ್ ಸದಾಕತ್, ಮುಹಮ್ಮದ್ ಗಾಜಿ ಘೋರಿ (ವಿಕೆಟ್ ಕೀಪರ್), ರೊಹೈಲ್ ಶಾಹಬ್ ನಜೀರ್ (ವಿಕೆಟ್ ಕೀಪರ್), ಎಫ್ ಶಾಹಬ್ ನಝೀರ್ ಖಾನ್, ಶಾಮಿಲ್ ಹುಸೇನ್ ಮತ್ತು ಸುಫಿಯಾನ್ ಮುಖೀಮ್.