ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan Squad: ಬಾಬರ್‌ ಆಝಮ್‌ ಔಟ್‌, ಏಷ್ಯಾ ಕಪ್‌ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ!

Pakistan Squad for Asia Cup 2025: ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಬಾಬರ್‌ ಆಝಮ್‌, ಮೊಹಮ್ಮದ್‌ ರಿಝ್ವಾನ್‌ ಅವರಂಥ ಹಿರಿಯ ಆಟಗಾರರನ್ನು ಕೈ ಬಿಡಲಾಗಿದ್ದು, ಸಲ್ಮಾನ್‌ ಅಘಾ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿದೆ.

ಏಷ್ಯಾ ಕಪ್‌ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ!

ಏಷ್ಯಾ ಕಪ್‌ ಟೂರ್ನಿಯ ಪಾಕಿಸ್ತಾನ ತಂಡದಲ್ಲಿ ಬಾಬರ್‌ ಆಝಮ್‌ಗೆ ಸ್ಥಾನವಿಲ್ಲ.

Profile Ramesh Kote Aug 17, 2025 8:00 PM

ನವದೆಹಲಿ: ಬಹುನಿರೀಕ್ಷಿತ 2025 ರ ಏಷ್ಯಾ ಕಪ್ (Asia Cup 2025) ಟೂರ್ನಿಗೆ ಪಾಕಿಸ್ತಾನ ತಂಡವನ್ನು (Pakistan Squad) ಪ್ರಕಟಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತಂಡದಲ್ಲಿ ಹೊಸ ಆಟಗಾರರಿಗೆ ಮಣೆ ಹಾಕಿದೆ. ಈ ಬಾರಿ ಬಾಬರ್ ಆಝಮ್ (Babar Azam) ಮತ್ತು ಮೊಹಮ್ಮದ್ ರಿಝ್ವಾನ್ ಅವರಂತಹ ಆಟಗಾರರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದೆ. ಬಾಬರ್ ಆಝಮ್‌ ಮತ್ತು ಮೊಹಮ್ಮದ್‌ ರಿಝ್ವಾನ್ ಅವರಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಪಾಕ್‌ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ಮೂಡಿಸಿದ್ದಾರೆ. ಈ ಇಬ್ಬರು ಸ್ಟಾರ್‌ ಆಟಗಾರರ ಜೊತೆಗೆ ಪಾಕಿಸ್ತಾನ ತಂಡದಲ್ಲಿ ಇನ್ನೂ ಇಬ್ಬರು ಆಟಗಾರರನ್ನು ಕೈ ಬಿಡಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಕೆಲವು ದೊಡ್ಡ ಬದಲಾವಣೆಗಳಾಗಿವೆ. ನಸೀಮ್ ಶಾ ಮತ್ತು ಶದಾಬ್ ಖಾನ್ ಅವರಂತಹ ಪ್ರಮುಖ ಆಟಗಾರರನ್ನು ಟಿ20ಐ ತಂಡದಿಂದ ಕೈಬಿಡಲಾಗಿದೆ. 2024ರ ನವೆಂಬರ್‌ನಿಂದ ನಸೀಮ್ ಶಾ ಒಂದೇ ಒಂದು ಟಿ20ಐ ಪಂದ್ಯವನ್ನು ಆಡಿಲ್ಲ. ಶದಾಬ್ ಖಾನ್ ಬಾಂಗ್ಲಾದೇಶ ವಿರುದ್ಧದ ತವರು ಟಿ20ಐ ಸರಣಿಯಲ್ಲಿ ಆಡಿದ್ದರು, ಆದರೆ ಇದೀಗ ಅವರು ಗಾಯಗೊಂಡಿದ್ದು, ಭುಜದ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಅವರಿಗೆ ಸೂಚಿಸಲಾಗಿದೆ.

Asia Cup: ಶುಭಮನ್‌ ಗಿಲ್‌ರನ್ನು ಹಿಂದಿಕ್ಕಬಲ್ಲ ಕಿಲಾಡಿ ಆಟಗಾರನನ್ನು ಆರಿಸಿದ ಆಕಾಶ್‌ ಚೋಪ್ರಾ!

ನಸೀಮ್ ಶಾ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಅದಕ್ಕಾಗಿಯೇ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಶದಾಬ್ ಖಾನ್ ದೀರ್ಘಕಾಲದ ಭುಜದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದರಿಂದಾಗಿ ಅವರು ತಂಡದಲ್ಲಿ ಆಡಲು ಸಾಧ್ಯವಾಗುವುದಿಲ್ಲ.



ಬಾಬರ್-ರಿಝ್ವಾನ್‌ ಔಟ್

ಬಾಬರ್ ಆಝಮ್‌ ಮತ್ತು ಮೊಹಮ್ಮದ್ ರಿಝ್ವಾನ್ ಇದೀಗ ಟಿ20ಐ ತಂಡದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಒಂದು ಕಾಲದಲ್ಲಿ ಈ ಇಬ್ಬರು ಆಟಗಾರರು ಪಾಕಿಸ್ತಾನದ ಟಿ20ಐ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿದ್ದರು ಹಾಗೂ ಹಲವು ಬಾರಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ತೋರಿದ್ದರು. ಬಾಬರ್‌ ಆಝಮ್‌ ಅವರು ಮೂರು ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಇದೀಗ ಈ ಸ್ವರೂಪದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಇಬ್ಬರು ಆಟಗಾರರ ಮೇಲೆ ವಿಶ್ವಾಸವನ್ನು ಕಳೆದುಕೊಂಡಿದೆ.

Asia Cup 2025: ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿದ ಸೂರ್ಯಕುಮಾರ್‌ ಯಾದವ್‌!

ಪಾಕಿಸ್ತಾನ ಕ್ರಿಕೆಟ್ ತಂಡದ ತಂಡ

ಸಲ್ಮಾನ್ ಅಲಿ ಅಘಾ (ನಾಯಕ), ಫಖಾರ್ ಝಮಾನ್, ಹಸನ್ ನವಾಜ್, ಸಾಹಿಬ್‌ಝಾದಾ ಫರ್ಹಾನ್, ಸ್ಯಾಮ್ ಆಯುಬ್, ಖುಷ್ದಿಲ್‌ ಶಾ, ಹುಸೇನ್ ತಲಾತ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಹಸನ್ ಅಲಿ, ಮೊಹಮ್ಮದ್ ನವಾಜ್, ಮೊಹಮ್ಮದ್ ವಸಿಮ್ ಜೂನಿಯರ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ ಮತ್ತು ಸೂಫಿಯಾನ್ ಮುಕೀಮ್