ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕೆಎಲ್‌ ರಾಹುಲ್‌ಗೆ ದೊಡ್ಡ ಜವಾಬ್ದಾರಿ!

ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ದೊಡ್ಡ ಜವಾಬ್ದಾರಿ ನೀಡಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸುತ್ತಿದೆ. ಇವರಿಗೆ ಆರಂಭಿಕ ಸ್ಥಾನ ಹಾಗೂ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ.

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕೆಎಲ್‌ ರಾಹುಲ್‌ಗೆ ದೊಡ್ಡ ಜವಾಬ್ದಾರಿ!

ಕೆಎಲ್‌ ರಾಹುಲ್‌ಗೆ ಓಪನಿಂಗ್‌ ನೀಡಲು ಡೆಲ್ಲಿ ಕ್ಯಾಪಿಟಲ್ಸ್‌ ಸಜ್ಜು. -

Profile
Ramesh Kote Mar 17, 2026 9:33 PM

ನವದೆಹಲಿ: ಭಾರತ ಟಿ20ಐ ತಂಡಕ್ಕೆ ಮರುಪ್ರವೇಶಿಸುವ ಉದ್ದೇಶದೊಂದಿಗೆ ಕೆಎಲ್‌ ರಾಹುಲ್‌ (KL Rahul) ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಪರ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. 2025ರ ಮೆಗಾ ಹರಾಜಿನಲ್ಲಿ 14 ಕೋಟಿ ರು. ಗಳಿಗೆ ಡೆಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದ ಕೆಎಲ್‌ ರಾಹುಲ್, ಈ ಬಾರಿ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಕಳೆದ ಸೀಸನ್‌ನಲ್ಲಿ ಅವರು ಡಿಸಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 13 ಪಂದ್ಯಗಳಲ್ಲಿ 539 ರನ್‌ಗಳನ್ನು ಸಿಡಿಸಿದ್ದರು. ಆ ಸೀಸನ್‌ನಲ್ಲಿ ಬಹುತೇಕ ಪಂದ್ಯಗಳಲ್ಲಿ ಮಧ್ಯಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ರಾಹುಲ್, ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರು. ಕೆಲ ಪಂದ್ಯಗಳಲ್ಲಿ ಓಪನರ್ ಆಗಿಯೂ ಆಡಿದ್ದರೂ, ಹೊಸ ಚೆಂಡನ್ನು ಹೆಚ್ಚು ಬಾರಿ ಎದುರಿಸಲಿಲ್ಲ. ಇದೀಗ 2026ರ ಐಪಿಎಲ್‌ ಟೂರ್ನಿಯಲ್ಲಿ ಕನ್ನಡಿಗನ ಬ್ಯಾಟಿಂಗ್ ಪಾತ್ರದಲ್ಲಿ ಬದಲಾವಣೆ ಕಾಣುವ ನಿರೀಕ್ಷೆ ಇದೆ.

ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ಕೆಎಲ್‌ ರಾಹುಲ್‌ ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್‌ ಪರ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅವರು ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಡಲಿದ್ದು, ಗ್ಲೌವ್ಸ್ ಕೂಡ ಧರಿಸಲಿದ್ದಾರೆ. ರಾಹುಲ್ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪಿಂಗ್ ಮಾಡುತ್ತಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುತ್ತಾರೆ. ಟಿ20ಐ ತಂಡಕ್ಕೆ ಮರಳುವ ಉದ್ದೇಶ ಹೊಂದಿರುವ ರಾಹುಲ್‌, ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.

IPL 2026: ಆರ್‌ಸಿಬಿಯ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನೇ ಮುಂದುವರಿಯಬೇಕೆಂದ ಅಭಿನವ್‌ ಮುಕುಂದ್‌!

ಕೆಎಲ್‌ ರಾಹುಲ್‌ ಭಾರತ ತಂಡದ ಪರ ತಮ್ಮ ಕೊನೆಯ ಟಿ20ಐ ಪಂದ್ಯವನ್ನು 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದರು. ಆ ಟೂರ್ನಿಯಲ್ಲಿ ಅವರು ರೋಹಿತ್‌ ಶರ್ಮಾ ಅವರಿಗೆ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಭಾರತ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು. ಇದಾದ ಬಳಿಕ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ 2024ರಲ್ಲಿ ಟಿ20ಐಗೆ ಮರಳಿದರೂ, ರಾಹುಲ್ ಅವರನ್ನು ಮತ್ತೆ ತಂಡಕ್ಕೆ ಬಂದಿರಲಿಲ್ಲ. ಆದರೆ ಅವರು ಇನ್ನೂ ಟೆಸ್ಟ್ ಮತ್ತು ಒಡಿಐ ತಂಡಗಳ ನಿಯಮಿತ ಸದಸ್ಯರಾಗಿದ್ದಾರೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೆಂಟರ್‌ ಹುದ್ದೆಯನ್ನು ತೊರೆದ ಕೆವಿನ್‌ ಪೀಟರ್ಸನ್‌!

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತಮ್ಮ 2026ರ ಐಪಿಎಲ್‌ ಅಭಿಯಾನವನ್ನು ಏಪ್ರಿಲ್ 1 ರಂದು ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಆರಂಭಿಸಲಿದೆ. ಏಪ್ರಿಲ್ 4 ರಂದು ತವರು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿದೆ. ನಂತರ ಏಪ್ರಿಲ್ 8 ರಂದು ಗುಜರಾತ್‌ ಟೈಟನ್ಸ್‌ ತಂಡಕ್ಕೆ ಆತಿಥ್ಯ ನೀಡಲಿದೆ. ಬಳಿಕ ಏಪ್ರಿಲ್ 11 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಲು ಚೆನ್ನೈಗೆ ಡೆಲ್ಲಿ ಆಟಗಾರರು ಪ್ರಯಾಣಿಲಿಸಲಿದ್ದಾರೆ. ಅಕ್ಷರ್‌ ಪಟೇಲ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಈ ಋಉತುವಿನಲ್ಲಿಯೂ ಮುನ್ನಡೆಸಲಿದ್ದಾರೆ. ಇವರ ನಾಯಕತ್ವದಲ್ಲಿ ಡೆಲ್ಲಿ 2025ರ ಟೂರ್ನಿಯಲ್ಲಿ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿತು, ಆದರೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿರಲಿಲ್ಲ.