ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೆಂಟರ್‌ ಹುದ್ದೆಯನ್ನು ತೊರೆದ ಕೆವಿನ್‌ ಪೀಟರ್ಸನ್‌!

Kevin Pietersen setps down as DC Mentor: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೆಂಟರ್‌ ಹುದ್ದೆಯನ್ನು ಕೆವಿನ್‌ ಪೀಟರ್ಸನ್‌ ತೊರೆದಿದ್ದಾರೆ. ಆ ಮೂಲಕ ಟೂರ್ನಿಗೂ ಮುನ್ನ ಡಿಸಿಗೆ ಭಾರಿ ಹಿನ್ನಡೆಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ನ ಮೆಂಟರ್‌ ಹುದ್ದೆ ತೊರೆದ ಕೆವಿನ್‌ ಪೀಟರ್ಸನ್‌!

ಡೆಲ್ಲಿ ಕ್ಯಾಪಿಟಲ್ಸ್‌ ತೊರೆದ ಕೆವಿನ್‌ ಪೀಟರ್ಸನ್‌. -

Profile
Ramesh Kote Mar 14, 2026 8:16 PM

ನವದೆಹಲಿ: ಇಂಗ್ಲೆಂಡ್‌ ದಿಗ್ಗಜ ಕೆವಿನ್‌ ಪೀಟರ್ಸನ್ (Kevin Pietersen) ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2026) ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ಮೆಂಟರ್ ಹುದ್ದೆಯನ್ನು ತೊರೆದಿದ್ದಾರೆ. ಹತ್ತೊಂಬತ್ತನೇ ಆವೃತ್ತಿಯ ಆರಂಭವಾಗುವುದಕ್ಕೂ ಕೆಲವೇ ದಿನಗಳ ಮುನ್ನ ಪೀಟರ್ಸನ್‌ ಅವರ ಡೆಲ್ಲಿ ತಂಡದೊಂದಗಿನ ತಮ್ಮ ಅಲ್ಪ ಪಯಣವನ್ನು ಮುಗಿಸಿದ್ದರೆ. 45ನೇ ವಯಸ್ಸಿನ ಪೀಟರ್ಸನ್, 2025ರ ಆವೃತ್ತಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೆಂಟರ್ ಆಗಿ ಸೇರಿಕೊಂಡಿದ್ದರು. ಈ ಹಿಂದೆ ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

ಮಾರ್ಚ್ 28 ರಂದು ಆರಂಭವಾಗಲಿರುವ 19ನೇ ಆವೃತ್ತಿಗೆ ಕೆಲವೇ ವಾರಗಳು ಬಾಕಿ ಇರುವ ಸಂದರ್ಭದಲ್ಲಿ ಅವರ ನಿರ್ಗಮನ ನಡೆದಿದೆ. ಈ ಹುದ್ದೆಗೆ ಅಗತ್ಯವಿರುವಷ್ಟು ಸಮಯವನ್ನು ತನ್ನಿಂದ ನೀಡಲು ಸಾಧ್ಯವಾಗುವುದಿಲ್ಲ ಎಂದು ಪೀಟರ್ಸನ್ ತಿಳಿಸಿದ್ದಾರೆ. ಆದರೆ ಟೂರ್ನಿಯ ಸಮಯದಲ್ಲಿ ಅವರು ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವುದಾಗಿ ಅಭಿಮಾನಿಗಳಿಗೆ ಖಚಿತಪಡಿಸಿದ್ದಾರೆ. ‌

IPL 2026: ಆರ್‌ಸಿಬಿ ತಂಡದ ಅಧಿಕೃತ ಜೆರ್ಸಿ ಖರೀದಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ..

ಕೆವಿನ್‌ ಪೀಟರ್ಸನ್‌ ಎಕ್ಸ್‌ ಖಾತೆಯ ಪೋಸ್ಟ್

"ಈ ಬಾರಿ ಐಪಿಎಲ್‌ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮೆಂಟರ್‌ ಆಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ತಂಡದಲ್ಲಿನ ತಮ್ಮ ಪಾತ್ರಕ್ಕೆ ಅಗತ್ಯವಿರುವ ಸಮಯ ತಮ್ಮ ಬಳಿ ಇಲ್ಲ. ಈ ಆವೃತ್ತಿಯ ನಿಮಿತ್ತಿ ಡೆಲ್ಲಿ ತಂಡದ ಪ್ರತಿಯೊಂದು ಸದಸ್ಯರಿಗೂ ಶುಭ ಹಾರೈಸುತ್ತೇನೆ. ಅಂದ ಹಾಗೆ ನಾನು ಕಾಮೆಂಟರಿ ಬಾಕ್ಸ್‌ನಲ್ಲಿ ನಿಮಗೆ ಕಾಣಿಸುತ್ತೇನೆ. ಇಡೀ ವಿಶ್ವದಲ್ಲಿಯೇ ಐಪಿಎಲ್‌ ಅತ್ಯುತ್ತಮ ಲೀಗ್‌ ಆಗಿದೆ. ಹಾಗಾಗಿ ನಿಮ್ಮೆಲ್ಲರನ್ನೂ ನೋಡಲು ನಾನು ಎದುರು ನೋಡುತ್ತಿದ್ದೇನೆ," ಎಂದು ಕೆವಿನ್‌ ಪೀಟರ್ಸನ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.



ಟೂರ್ನಿಯಲ್ಲಿ ಕಮ್‌ಬ್ಯಾಕ್‌ ಮಾಡಲು ಡೆಲ್ಲಿ ಕಣ್ಣು

ಡೆಲ್ಲಿ ಕ್ಯಾಪಿಟಲ್ಸ್‌ 2025ರ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನವನ್ನು ತೋರಿತ್ತು. ಲೀಗ್ ಹಂತದಲ್ಲಿ ಐದನೇ ಸ್ಥಾನದಲ್ಲಿ ಮುಗಿಸಿದ್ದ ಡೆಲ್ಲಿ, ಪ್ಲೇಆಫ್ಸ್‌ ಅವಕಾಶವನ್ನು ಕೂದಲೆಳೆಯ ಅಂತರದಿಂದ ಕಳೆದುಕೊಂಡಿತ್ತು. ನಾಯಕ ಅಕ್ಷರ್‌ ಪಟೇಲ್‌ ನೇತೃತ್ವದಲ್ಲಿ ಡೆಲ್ಲಿ ಏಳು ಪಂದ್ಯಗಳನ್ನು ಗೆದ್ದು, ಆರು ಸೋಲು ಅನುಭವಿಸಿತ್ತು. ಇದರಲ್ಲಿ ಒಂದು ಪಂದ್ಯ ಮಳೆಯ ಕಾರಣದಿಂದ ರದ್ದು ಆಗಿತ್ತು, ಒಟ್ಟು 15 ಅಂಕಗಳೊಂದಿಗೆ ಡಿಸಿ ಲೀಗ್ ಹಂತವನ್ನು ಮುಗಿಸಿತ್ತು.

ಬ್ಯಾಟಿಂಗ್ ವಿಭಾಗದಲ್ಲಿ ಕೆಎಲ್‌ ರಾಹುಲ್‌ 539 ರನ್ ಗಳಿಸಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದರು. ಬೌಲಿಂಗ್‌ನಲ್ಲಿ ಕುಲ್ದೀಪ್‌ ಯಾದವ್‌ 15 ವಿಕೆಟ್ ಪಡೆದಿದ್ದರು. ಕೆಲ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ, ಮಹತ್ವದ ಕ್ಷಣಗಳಲ್ಲಿ ಸ್ಥಿರತೆ ಕೊರತೆಯಿಂದ ಡೆಲ್ಲಿ ತಂಡಕ್ಕೆ ಕೆಲ ಸಮಸ್ಯೆಗಳು ಎದುರಾಗಿದ್ದವು.

IPL 2026: ಕ್ರಿಸ್‌ ಗೇಲ್‌-ಡು ಪ್ಲೆಸಿಸ್‌ ಓಪನರ್ಸ್‌! ಆರ್‌ಸಿಬಿಯ ಸಾರ್ವಕಾಲಿಕ ಪ್ಲೇಯಿಂಗ್‌ XI ಕಟ್ಟಿದ ದಿನೇಶ್‌ ಕಾರ್ತಿಕ್‌!

2026ರ ಐಪಿಎಲ್‌ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮೂಲ ತಂಡದ ಆಟಗಾರರನ್ನು ಉಳಿಸಿಕೊಳ್ಳುವ ತಂತ್ರ ಅನುಸರಿಸಿತು. ಅಕ್ಷರ್‌ ಪಟೇಕಲ್‌, ಕೆಎಲ್‌ ರಾಹುಲ್‌, ಕುಲ್ದೀಪ್‌ ಯಾದವ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಡೆವಿಡ್‌ ಮಿಲ್ಲರ್‌, ಬೆನ್‌ ಡಕೆಟ್‌, ಪಥುಮ್‌ ನಿಸಾಂಕ, ಲುಂಗಿ ಎನ್ಗಿಡಿ ಹಾಗೂ ಕೈಲ್‌ ಜೇಮಿಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.